ವೀಕ್ಷಕ ಬಂಧುಗಳೇ ಕಳೆದ ಸಂಚಿಕೆಯಲ್ಲಿ ವರೂರು ನವಗ್ರಹ ತೀರ್ಥದಲ್ಲಿ 405 ಅಡಿ ಎತ್ತರದ ಸುಮೇರು ಪರ್ವತ ಜಿನ ಬಿಂಬ ಪ್ರತಿಷ್ಠಾಪನ ಮಹೋತ್ಸವದ ಪಂಚಕಲ್ಯಾಣ ವಿಧಾನವನ್ನು ನೋಡುತ್ತಿದ್ದೀರಿ ಮುಂದುವರೆದ ಭಾಗದಲ್ಲಿ ಪಂಚಕಲ್ಯಾಣ ದಿನದ ಕೊನೆಯ ಕಲ್ಯಾಣ ಹಾಗು ಮುಂದೆ ನೆಡೆದ ಬೃಹತ್ ಮಸ್ತಕಾಭಿಷೇಕದ ಸುಂದರ ದೃಶ್ಯಾವಳಿಗಳನ್ನು ಈ ಸಂಚಿಕೆಯಲ್ಲಿ ತಂದಿದ್ದೇವೆ.ಆರವ್ಯ ದಿನದಂದು ಮೋಕ್ಷ ಕಲ್ಯಾಣ ಮಹೋತ್ಸವ ನೆಡೆದು ಹಲವು ಮುನಿಮಹಾರಾಜರು ಪಟ್ಟಾಚಾರ್ಯರಿಂದ ಮಂಗಳ ಪ್ರವಚನ ಇನ್ನೋಂದೆಡೆ ವಿಶ್ವಶಾಂತಿಗಾಗಿ ಸ್ವಾಮೀಜಿಯವರಿಂದ ಪೂಜೆನೆಡೆಯಿತು ಮೋಕ್ಷಕಲ್ಯಾಣ ಹಾಗು ಆರತಿ ಬೆಳಗುವುದರ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಸಂಸದರಾದ ಜಗದೀಶ್ ಶೆಟ್ಟರ್ ರವರು ನಾಂದಿ ಹಾಡಿದರು ಈ ಸಂಧರ್ಭದಲ್ಲಿ ಕರ್ನಾಟಕ ಜೈನ್ ಅಸೋಸಿಯೇಷನ್ಸ್ ವತಿಯಿಂದ ನೂತನ ಅಧ್ಯಕ್ಷರಾದ ಶ್ರೀ ಎಸ್ ಜೀತೇಂದ್ರ ಕುಮಾರ್ ರವರು ಕಾರ್ಯಕ್ರಮಕ್ಕೆ ಭಾಗವಹಿಸಿದರು ಅಷ್ಟೇ ಅಲ್ಲದೇ ಈ 3 ದಿನಗಳ ಕಾರ್ಯಕ್ರಮಗಳಲ್ಲಿ ಭಾರತೀಯ ಜೈನ್ ಮಿಲನ್ ನ ರಾಷ್ಟ್ರೀಯ ಕಾರ್ಯಧ್ಯಕ್ಷರಾದ ಪೂಜ್ಯ ಧರ್ಮಾಧಿಕಾರಿಗಳಾದ ಡಾಕ್ಟರ್ ವೀರೇಂದ್ರ ಹೆಗಡೆಯವರ ಸಹೋದರಾದ ಶ್ರೀ ಡಿ ಸುರೇಂದ್ರ ಕುಮಾರ್ ರವರು ಹಾಗು ಶ್ರೀಮತಿ ಅನಿತ ಸುರೇಂದ್ರ ಕುಮಾರ್ ರವರು ಕಾರ್ಯಕ್ರಮಕ್ಕೆ ಭಾಗವಹಿಸಿ ಮೆರಗನ್ನು ನೀಡಿದರು ಹಾಗು ಅನೇಕ ಗಣ್ಯಾಧಿ ಗಣ್ಯರು ಈ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಲು ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತಿ ಮೆರೆದರು ದಿನಾಂಕ 22-01-2025ರಂದು ಮಹಾಮಸ್ತಕಾಭಿಷೇಕಕ್ಕೆ ಸಚಿವ ಹೆಚ್,ಕೆ ಪಾಟೀಲ್ ರವರು ವಿದ್ಯುಕ್ತವಾಗೊ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದ್ದರು ಅಲ್ಲದೇ ಅವರು ಕ್ಷೇತ್ರಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ 2 ಕೋಟಿ ಹಣ ಕೊಡುವುದಾಗಿ ಘೋಷಿಸಿದರು ಅಂದಿನ ಕಾರ್ಯಕ್ರಮಕ್ಕೆ ಪಂಜಾಬ್ ರಾಜ್ಯಪಾಲರಾದ ಗುಲಾಬ್ ಚಂದ್ ಕಠಾರಿ ಆಗಮಿಸಿ 405 ಅಡಿ ಎತ್ತರದ ಸುಮೇರು ಪರ್ವತದಲ್ಲಿ ಕಳಸ ಪ್ರತಿಷ್ಟಾಪನೆ ಮಾಡಲಾಯಿತು ಹಾಗು ಪ್ರಥಮ ದಿನದ ಮಹಾಮಸ್ತಕಾಭಿಷೇಕಕ್ಕೆ ಕೂಡ ಚಾಲನೆ ದೊರೆಯಿತು ನೆರೆದಿದ್ದ ಜನ ಸಮೂಹ ಈ ಎಲ್ಲಾ ಸುಂದರ ಕ್ಷಣಗಳನ್ನು ಕಣ್ತುಂಬಿ ಕೊಂಡರು ನಂತರದ ದಿನಗಳಲ್ಲಿ ಸರ್ವಧರ್ಮ ಸಮ್ಮೇಳನ ವಿವಿಧ ಆರಾಧನೆಗಳು ಗಣ್ಯರುಗಳ ಉಪಸ್ಥಿತಿ ಇವೆಲ್ಲವುಗಳ ನಡುವೆ ಬೃಹತ್ ವೈಭವಯುತ ಮಹಾಮಸ್ತಕಾಭಿಷೇಕ 25ನೇ ತಾರೀಖಿನಂದು ನೆಡೆದು 15 ಸಾವಿರ ಲೀಟರ್ ಗಳಷ್ಟು ಹಾಲಿನ ಮೂಲಕ ಕ್ಷೀರಾಭಿಷೇಕವನ್ನು ನೆರವೇರಿಸಲಾಯಿತು ಮಹೋತ್ಸವದಲ್ಲಿ ಸಮಸ್ತ ಭಟ್ಟಾರಕರು ಪಾಲ್ಗೋಂಡಿದ್ದು ಯಶಸ್ಸಿಗೆ ಕಾರಣರಾದರು ಮಹಾಮಸ್ತಕಾಭಿಷೇಕ ಹಾಗು ಮಹೋತ್ಸವದ ಕೊನೆಯ ದಿನದಂದು ಗಣರಾಜ್ಯೋತ್ಸವದ ಅಂಗವಾಗಿ ತ್ರಿವರ್ಣ ಅಭಿಷೇಕ ಹಾಗು ರಾಷ್ಟ್ರಸಂತ ಗುಣದರನಂದಿ ಮುನಿಮಹಾರಾಜರ ಮತ್ತು ಆಚಾರ್ಯ ಶ್ರೀ ಕುಂತ ಶ್ರೀ ಮಹಾರಾಜರ ದಿವ್ಯಸಾನಿಧ್ಯದಲ್ಲಿ 405 ಅಡಿ ಎತ್ತರದ ಸುಮೇರು ಪರ್ವತದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ರಾಷ್ಟ್ರಭಕ್ತಿ ಮೆರೆಯಲಾಯಿತು ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು ಸಚಿವ ಸಂತೋಷ್ ಲಾಯಡ್ ರವರು ಜ್ಯೋತಿ ಬೆಳಗಿ ನವಗ್ರಹ ಮೂರ್ತಿಯ ಎದುರು ಬರೋಬರಿ 990 ಹೋಮಕುಂಡಗಳ ಮೂಲಕ ಲೋಕ ಕಲ್ಯಾಣಕ್ಕಾಗಿ ಮಹಾಯಜ್ಙವನ್ನು ನೆರೆವೇರಿಸಲಾಯಿತು ಈ ಮೂಲಕ ಮಹೋತ್ಸವಕ್ಕೆ ಅಮೋಘ ಮುಕ್ತಾಯ ದೊರೆಯಿತು.














