ಎಲ್ಲರೀಗೂ ನಮಸ್ಕಾರ, ವೇದಿಕೆ ಮೇಲೆ ಹಿರಿಯರು ಆಚಾರ್ಯರು ಸಂತರು ಸೇರಿದ್ದಾರೆ ಅವರಿಗೂ ಹಾಗೂ ಇಲ್ಲಿ ಸೇರಿರುವಂತಹ ಎಲ್ಲರೀಗೂ ಈ ನಿಮ್ಮ ಪ್ರೀತಿಯ ರಮೇಶ್ ನಮಸ್ಕಾರಗಳು. ನಮ್ಮ ಕಥೆಗಳಲ್ಲಿ ಇಂದ್ರನಿಗೆ ಸಹಸ್ರ ನಯನ ಎಂದು ಹೆಸರಿದೆ, ಸಹಸ್ರ ಎಂದರೆ ಸಾವಿರ. ಹಾಗೇ ನಮಗು ಕೂಡ ಇಂತಹ ಸಮಾರಂಭವನ್ನು ನೋಡಲು ಸಾವಿರ ಕಣ್ಣು ಬೇಕು. ನನಗೆ ಆಚಾರ್ಯ ಗುಣಧರ ನಂದಿ ಮಹಾರಾಜ್ ರವರು ಕರೆಮಾಡಿ ಹೇಳಿದಾಗ ಅವರು ಒಂದು ಪಟ್ಟಿಯನ್ನು ಕಳಿಸಿದ್ದರು ಇಲ್ಲಿ ನಡೆಯುತ್ತಿರುವ ಎಜುಕೇಷನ್ ಗೆ ಸಂಬಂಧಪಟ್ಟ ಕಾಲೇಜುಗಳು ಬಗ್ಗೆ ನಮ್ಮ ಆಚಾರ್ಯರ ಕೊಡುಗೆ ಈ ಶೈಕ್ಷಣಿಕ ಕ್ಷೇತ್ರಕ್ಕೆ ಆಪಾರವಾದದ್ದು. ಇಂತಹ ಅದ್ಬುತವಾದಂತಹ ಕೆಲಸವನ್ನು ಮಾಡುತ್ತಿರುವ ಆಚಾರ್ಯ ಶ್ರೀ ಗುಣಧರ ನಂದಿ ಮಹಾರಾಜ್ ರವರು ಹಾಗೂ ಧರ್ಮಸೇನಾ ಭಟ್ಟಾರಕ ಸ್ವಾಮೀಜಿಯವರಿಗೆ ವಿಶೇಷವಾದ ಅಭಿನಂದನೆಗಳು. ಇಲ್ಲಿಗೆ ಬಂದಾಗ ಸುಮೇರು ಪರ್ವತವನ್ನು ನೋಡಿದಾಗ 400 ಅಡಿಗೆ ಪುನರ್ ಪ್ರತಿಷ್ಠಾಪಿಸಿರುವ ಪರ್ವತದ ಹಾಗೂ ಇಲ್ಲಿ ಇರುವ ಪಾರ್ಶ್ವನಾಥ ತೀರ್ಥಂಕರರ ಮೂರ್ತಿ ಬಗ್ಗೆ ಅವರ ಅನುಭವವನ್ನು ವಿವರಿಸಿದರು. ಮತ್ತು ಅವರು ಹೇಳಿರುವಂತಹ ಸಂದೇಶಗಳಿವೆ. ಜೈನ ಧರ್ಮದಲ್ಲಿರುವಂತಹ ಒಂದು ಅಹಿಂಸೆ, ಎರಡನೇಯದು ಅನೇಕಾಂತವಾದ, ಮೂರನೇಯದು ಅಪರಿಗ್ರಹ ಇಂತಹ ಜೈನ ಧರ್ಮದ ತತ್ವ ಗಳಾದ ಈ ಮೂರು ವಿಷಯಗಳು ಬಹಳ ಸಹಾಯವಾಗುತ್ತದೆ. ಇಂತಹ ಒಂದು ಅದ್ಬುತವಾದಂತಹ ಕಾರ್ಯಕ್ರಮದಲ್ಲಿ ಇಂತಹ ಸುಂದರವಾದಂತಹ ಸಭೆಯಲ್ಲಿ ನನ್ನನ್ನು ಮಾತನಾಡಲು ಕರೆದಂತಹ ಆಚಾರ್ಯರಿಗೆ ವಿಶೇಷವಾದ ಧನ್ಯವಾದಗಳು ನಿಮ್ಮನೇಲ್ಲ ಬೇಟಿಯಾಗಿದ್ದಕ್ಕೆ ಖುಷಿಯಾಯಿತು ಮತ್ತೊಮ್ಮೆ ಎಲ್ಲರಿಗೂ ನಮಸ್ಕಾರಗಳು ನಮ್ಮ ನಾಡಿಗೆ ನಮ್ಮ ರಾಜ್ಯಕ್ಕೆ ನಮ್ಮ ರಾಷ್ಟ್ರಕ್ಕೆ ಜೈನ ಧರ್ಮ ಕೊಟ್ಟಂತಹ ಕೊಡುಗೆಗೆ ಸಾಧಕರಿಗೆ ನನ್ನ ನಮನಗಳು.
ರಾಮೇಶ್ ಅರ್ವಿಧ್ ಹುಬ್ಬಳ್ಳಿ ಪಂಚಕಲ್ಯಾಣ 2025














