ಪಾದ ಪೂಜೆ ಕನಕಗಿರಿ

 

ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಪ್ರತಿಷ್ಠಾಪನಾ ಪಾದ ಪೂಜೆ ದಿನಾಂಕ 02-02-2025 ರಂದು ನೆರವೇರಿತು.

ಜೈ ಜಿನೇಂದ್ರ ವೀಕ್ಷಕರೆ, ಶ್ರೀಕ್ಷೇತ್ರ ಕನಕ ಗಿರಿ ಜೈನ ಮಠದ ಬೆಟ್ಟದ ಮೇಲಿನ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಪ್ರತಿಷ್ಠಾಪನಾ ಪಾದ ಪೂಜೆ ಕಾರ್ಯಕ್ರಮವು ಮಾಗ ಶುದ್ದ ಪಂಚಮಿಯ ಶುಭಸಂದರ್ಭದಲ್ಲಿ ಶ್ರೀ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಭೂವನ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ಹಾಗೂ ಹೊಂಬುಜ ಜೈನ ಮಠದ ಪರಮ ಪೂಜ್ಯ ಸ್ವಸ್ತಿ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಗಳವರ ದಿವ್ಯ ಉಪಸ್ಥಿತಿಯಲ್ಲಿ ವಿಶೇಷ ಪಂಚಾಮೃತ ಮಹಾಭಿಷೇಕ ಪೂಜೆ ನಡೆಯಿತು. ಮನೋಹರ ದೃಶ್ಯಾವಳಿಗಳನ್ನು ಸಂಕ್ಷಿಪ್ತವಾಗಿ ಸಂಕಲಿಸಿ ಇಲ್ಲಿ ಪ್ರಸ್ತುತಪಡಿಸಲಾಗಿದೆ, ವೀಕ್ಷಿಸಿ ಪೂಣ್ಯ ಭಾಗಿಗಳಾಗಿ.

ಕಾರ್ಯಕ್ರಮದ ಅಂತಿಮದಲ್ಲಿ ಶ್ರೀ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಭೂವನ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ಹಾಗೂ ಹೊಂಬುಜ ಜೈನ ಮಠದ ಪರಮ ಪೂಜ್ಯ ಸ್ವಸ್ತಿ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಗಳವರ ನಡೆದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಪ್ರತಿಷ್ಠಾಪನಾ ಪಾದ ಪೂಜೆ ಕಾರ್ಯಕ್ರಮವನ್ನು ಕುರಿತು ಮಾತನಾಡಿದರು.