ವೀಕ್ಷಕರೆ ಜೈನ ಯುವಕ ಯುವತಿಯರಿಗೆ ಇಲ್ಲಿದೆ ಸುವರ್ಣ ಅವಕಾಶ ಜೈನ ಸಮಾಜದ ಯುವಕರಿಗೆ ರಾಜಕೀಯ ಕ್ಷೇತ್ರದ ಅವಕಾಶಗಳು ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಅವರುಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಆಡಳಿತ ಸೇವೆಗಳ ಮೂಲಕ ದೇಶಸೇವೆಯಲ್ಲಿ ತೊಡಗಿಸಿ ಕೊಳ್ಳಬೇಕಾಗಿರುವುದು ತೀರ ಅನಿವಾರ್ಯವಾಗಿದೆ. ಈ ಸದುದ್ದೇಶದೊಂದಿಗೆ ಮೂಡುಬಿದ್ರೆಯ ಎಕ್ಸಲೆಂಟ್ ವಿಧ್ಯಾಸಂಸ್ಥೆಯ ಪ್ರಾಯೋಜಕತ್ವದಲ್ಲಿ ಸೆಪ್ಟೆಂಬರ್ 6, 7 ರಂದು 2 ದಿನಗಳ ಕಾಲ ರಾಜ್ಯಮಟ್ಟದ ಜೈನ ಯುವ ಸಮ್ಮೇಳನ 2024 ನಡೆಸಲು ಉದ್ದೇಶಿಸಲಾಗಿದೆ.
ಸಮ್ಮೇಳನದಲ್ಲಿ ಐ ಎ ಎಸ್, ಐ ಪಿ ಎಸ್, ಕೆ ಎ ಎಸ್ ಮೊದಲಾದ ನಾಗರೀಕ ಸೇವಾ ಸ್ಪರ್ದೆಗಳ ಪರೀಕ್ಷೇಗಳು ಹಾಗೂ ಉದ್ಯಮ, ಸ್ವದ್ಯೋಗ ಕೃಷಿ ಕ್ರೀಡೆ ಕಾನೂನು ಮಾಧ್ಯಮ ಮೊದಲಾದ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯಲಿಚ್ಚಿಸುವ ಸುಮಾರು 400 ರಿಂದ 500 ಜೈನ ಯುವಕ ಯುವತಿಯರನ್ನು ಆಹ್ವಾನಿಸಿ ಅವರಿಗೆ ತರಬೇತಿ ಮಾಹಿತಿ ಮಾರ್ಗ ದರ್ಶನಗಳನ್ನ ನೀಡಲಾಗುವುದು. ಪೂಜ್ಯ ಡಾ|| ಡಿ ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಲಿರುವ ಈ ಕಾರ್ಯಕ್ರಮದಲ್ಲಿ ಸಮ್ಮೇಳನದ ತಾರಾ ಪ್ರೇರಕರುಗಳಾಗಿ ನ್ಯಾಯಾಂಗ ವಿಭಾಗದಲ್ಲಿ ನ್ಯಾಯದೀಶರುಗಳು ನ್ಯಾಯವಾದಿಗಳು ನಾಗರಿಕ ಸೇವೆಗಳ ಮಾಹಿತಿಗಾಗಿ ಐ ಎ ಎಸ್, ಐ ಪಿ ಎಸ್, ಅಧಿಕಾರಿಗಳು ಮಾಧ್ಯಮ ವಿಭಾಗದಲ್ಲಿ ವಿವಿಧ ಚಾನಲ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ. ಶಿಕ್ಷಣ ಕ್ರೀಡೆ ಉದ್ಯಮ ಮಾಹಿತಿಗಾಗಿ ಅನೇಕ ಶಿಕ್ಷಣ ತಜ್ಞರುಗಳು ನಿಮಗಾಗಿ ತಮ್ಮ ಅಮೂಲ್ಯ ಸಮಯ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಡಾ|| ಡಿ ವೀರೇಂದ್ರ ಹೆಗ್ಗಡೆ ದಂಪತಿಗಳು ಹಾಗೂ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್ ಮತ್ತು ಕಾರ್ಯದರ್ಶಿಗಳಾದ ಶ್ರೀಮತಿ ರಶ್ಮಿತಾ ಜೈನ್ ರವರ ನೇತೃತ್ವದಲ್ಲಿ ಕಾರ್ಯಕ್ರಮ ಜ್ವಾಲಮಾಲ ನ್ಯೂಸ್ ನಲ್ಲಿ ಪ್ರಸ್ತುತಗೊಳಲಿದ್ದೆ. ಬನ್ನಿ ನಾವು ಯುವ ಮನಸ್ಸುಗಳೆಲ ಒಟ್ಟಿಗೆ ಸೇರೋಣ್ಣ ಭದ್ರ ಭವಿಷ್ಯರೂಪಿಸಿಕೊಳ್ಳೊಣ್ಣ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














