ಪುಣ್ಯಸಾಗರಮುನಿ ಮಹಾರಾಜ್ ಜನ್ಮದಿನ

ಹುಬ್ಬಳ್ಳಿಯ ಉತ್ತರ ಕರ್ನಾಟಕ ಜೈನಮಹಾಸಂಘ ಹಾಗೂ ನವನಗರ ಅಲ್ಪಸಂಖ್ಯಾತ ಜೈನ ಸೇವಾ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಪರಮಪೂಜ್ಯ ಮುನಿಶ್ರೀ 108 ಪುಣ್ಯಸಾಗರ ಮುನಿಮಹಾರಾಜರ 57 ನೆಯ ಜನ್ಮಜಯಂತಿ ಕಾರ್ಯಕ್ರಮದ ಅಂಗವಾಗಿ ಜೈನ ಯುವಕ ಯುವತಿಯರ ಮಹಾಸಮಾವೇಶ ಮತ್ತು ಪ್ರತಿಭಾಪುರಸ್ಕಾರ ಸಮಾರಂಭ ದಿನಾಂಕ6/5/2024ರಂದು ನವನಗರದ ಭಗವಾನ್ ಶ್ರೀ 1008 ಮುನಿಸೂರತ ತೀರ್ಥಂಕರರ ಜಿನಮಂದಿರ ಮಾನಸ್ಥಂಭ ಚತುರ್ಮುಖ ಜಿನಬಿಂಬ ಪ್ರತಿಷ್ಠಾ ಮಹೋತ್ಸವ ಪಂಚಕಲ್ಯಾಣ ಸಭಾವೇದಿಕೆಯಲ್ಲಿ ಪರಮಪೂಜ್ಯ ಶ್ರೀ 108 ಪರಮಸಾಗರ ಮುನಿಮಹಾರಾಜರ ಪಾವನ ಸಾನಿಧ್ಯದಲ್ಲಿ ನಡೆಯಿತು. ಸ್ವಾದಿ ದಿಗಂಬರ ಜೈನ ಮಠದ ಪರಮಪೂಜ್ಯ ಸ್ವಸ್ತಿ ಶ್ರೀ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮಿಜಿಯವರು ದಿವ್ಯ  ಸಾನಿಧ್ಯ ವಹಿಸಿದ್ದರು. ಹಾಗೂ ಪರಮಪೂಜ್ಯ ಸ್ವಸ್ತಿಶ್ರೀ ಬಾಲ ಬ್ರಹ್ಮಚಾರಿ ಶ್ರೀ ಸೋಮದೇವ ಬಯ್ಯಾಜಿ ಕೂಡ ಸಾನಿಧ್ಯ ವಹಿಸಿದ್ದರು.ಕಾರ್ಯಕ್ರಮದ ಉದ್ಘಾಟನೆಯನ್ನು ಹುಬ್ಬಳ್ಳಿಯ ಸಂಜೀವಿನಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಶ್ರೀ ಡಾ|| ಅಭಿಷೇಕ್ ಪಾಟೀಲ್ ರವರು ನೆರವೇರಿಸಿಕೊಟ್ಟರು. ಪುಣ್ಯಶ್ರೀ ಪ್ರಶಸ್ತಿಯನ್ನು ಕೂಡ ಈ ಸಂದರ್ಭದಲ್ಲಿ ನೀಡಿ ಗೌರವಸಲಾಗಿ ಪುರಸ್ಕಾರದ ಕೈಪಿಡಿಯನ್ನು ಧಾರವಾಡದ ಡಾ|| ಅಜಿತ್ ಪ್ರಸಾದ್ ರವರು ಬಿಡುಗಡೆಗೊಳಿಸಿದರು. ಹಾಗೂ ಮುಖ್ಯ ಅತಿಥಿಗಳಾಗಿ ಮತ್ತು ಪುಣ್ಯಶ್ರೀ ಪ್ರಶಸ್ತಿ ಪುರಸ್ಕೃತರಾಗಿ ಚಲನಚಿತ್ರ ಹಿನ್ನೆಲೆ ಗಾಯಕರಾದ ಶ್ರೀ ಪ್ರಜ್ವಲ್ ಗೋವನಕೊಪ್ಪ ಹಾಗೂ ಜ್ವಾಲಾಮಾಲಾ ನ್ಯೂಸ್ ಹಾಗೂ ಚಂದನ ವಾಹಿನಿ ಜ್ವಾಲಾಮಾಲಾ ಧರ್ಮಯಾತ್ರೆ ಕಾರ್ಯಕ್ರಮದ ನಿರ್ದೇಶಕರಾದ ಶ್ರೀಮತಿ ವೈಶಾಲಿ ಚಂದ್ರಪ್ರಭು ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುಬ್ಬಳ್ಳಿ ಬಿ.ಎ ಪಾಟೀಲ್ ರವರು ವಹಿಸಿದ್ದರು. ಕಾರ್ಯಕ್ರಮವು ಬಹಳ ಅಚ್ಚುಕಟ್ಟಾಗಿ ನೆರವೇರಿದ್ದಲ್ಲದೇ ಜೈನ ಶ್ರಾವಕ ಶ್ರಾವಕಿಯವರು ಭಾಗವಹಿಸಿದ್ದರು. ಅಲ್ಲಿ ನೆರೆದಿದ್ದ ಗಣ್ಯರುಗಳು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಮಾತನಾಡಿ ಹಂಚಿಕೊಂಡರು. ಹಾಗೂ ಎಲ್ಲರಿಗೂ ಗೌರವ ಸಮರ್ಪಣೆಯನ್ನು ಮಾಡಿದರು.