ದಾವಣಗೆರೆಯ ಕ್ಷೇತ್ರ ಪರಿಚಯ ಯಾತ್ರೆಯ ಸಂದರ್ಭದಲ್ಲಿ ದಿನಾಂಕ 18.07.2024ರಂದು ಅಲ್ಲಿನ ಭಗವಾನ್ ಶ್ರೀ 1008 ಕಲ್ಪದ್ರುಮ ಆದಿನಾಥ ಜಿನಮಂದಿರ ಶ್ರೀ ಮಹಾವೀರ ಸಂಘ, ಸಮಸ್ತ ಜೈನ ಸಮಾಜ ಮತ್ತು ಮಹಿಳಾ ಸಮಾಜಗಳು ಸೇರಿ ಅಷ್ಟೇ ಅಲ್ಲದೆ ಮಹಾರಾಷ್ಟ್ರ ಯಾತ್ರೆಯಿಂದ ಹಿಂತಿರುಗುವಾಗ ದಿನಾಂಕ 22.07.2024 ರಂದು ಕೂಡ ದಾವಣಗೆರೆ ಶ್ರೀ 1008 ಪಾರ್ಶ್ವನಾಥ ಜಿನಮಂದಿರ ಸಮಾಜ ಬಾಂಧವರು, ಎರಡು ಜಿನ ಮಂದಿರಗಳಿಂದ ಅತ್ಯಂತ ಆತ್ಮೀಯವಾಗಿ ಗೌರವ ಸತ್ಕಾರವನ್ನು ನೆರವೇರಿಸಿದರು. ನಾನು ನಮ್ರತೆಯಿಂದ ಗಮನಿಸಿದಂತೆ ಎಲ್ಲೆಡೆ ನಿಮ್ಮದೇ ಜ್ವಾಲಮಾಲಾ ಚಾನೆಲ್ ವತಿಯಿಂದ ನಡೆಯುತ್ತಿರುವ ಕೆಲಸವನ್ನು ಗುರುತಿಸಿ ಪ್ರತಿಯೊಬ್ಬರು ಮನಪೂರ್ವಕವಾಗಿ ಪ್ರೀತಿಯಿಂದ ಸತ್ಕರಿಸಿ ನನ್ನನ್ನು ಮನೆ ಮಗಳಂತೆ ಕಾಣುತ್ತಿರುವ ನಿಮ್ಮಗಳ ಪ್ರೀತಿ ಅಭಿಮಾನಕ್ಕೆ ಚಿರಋಣಿ ಹಾಗೂ ಹೃದಯಪೂರ್ವಕವಾಗಿ ವಂದನೆಗಳನ್ನು ಸಲ್ಲಿಸುತ್ತಿದ್ದೇನೆ ನಿಮ್ಮ ಈ ಪ್ರೀತಿ ಸಹಕಾರ ನಿಮ್ಮ ಚಾನೆಲ್ ಮೇಲೆ ಸದಾ ಇರಲಿ














