ಜೈ ಜಿನೇಂದ್ರ ವೀಕ್ಷಕರೇ ಈ ಬಾರಿ ಗುರುಪೂರ್ಣಿಮೆಯ ನಾವು ಮಹಾರಾಷ್ಟ್ರದ ಕೊಲ್ಲಾಪುರ ಜೈನ ಮಠದಲ್ಲಿದ್ದೇವೆ. ಅಲ್ಲಿನ ಜೈನ ಸಮಾಜ ಬಾಂಧವರು ಮಳೆಯ ತೀವ್ರತೆ ಹೆಚ್ಚಿದರೂ ಕೂಡ ಲೆಕ್ಕಿಸದೆ ಅಂದು ಮಠಕ್ಕೆ ಆಗಮಿಸಿ ಪರಮಪೂಜ್ಯ ಜಗದ್ಗುರು ಜಗದ್ಭೂಷಣ ಲಕ್ಷ್ಮೀಸೇನಾ ಭಟ್ಟಾರಕ ಮಹಾಸ್ವಾಮಿಜಿಗಳವರಿಗೆ ಪಾದಪೂಜೆ ಆರತಿ ಮಾಡುವುದರ ಮೂಲಕ ಗುರುಪೂರ್ಣಿಮೆ ಶಿವಕಾಮನೆಗಳನ್ನು ಸಲ್ಲಿಸಿದ ದೃಶ್ಯಾವಳಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.
ನಂತರ ಪರಮಪೂಜ್ಯ ಜಗದ್ಗುರು ಜಗದ್ಭೂಷಣ ಸ್ವಸ್ತಶ್ರೀ ಲಕ್ಷ್ಮೀಸೇನ ಭಟ್ಟಾರಕ ಮಹಾಸ್ವಾಮೀಜಿಗಳವರು ಮಾತನಾಡಿದರು. ಈ ದಿನದ ವಿಶೇಷತೆ ಬಗ್ಗೆ ತಿಳಿಸಿದರು. ಈ ದಿನ ಗುರುಪೂರ್ಣಿಮೆಯ ದಿನವಾಗಿದ್ದು ಪ್ರತಿಯೊಬ್ಬರು ಹೇಳುವಂತೆ ಗುರುವಿಗೆ ಪರಬ್ರಹ್ಮನ ಸ್ವರೂಪದ ಸ್ಥಾನವನ್ನು ಕೊಟ್ಟಿದ್ದಾರೆ. ಆದ್ದರಿಂದ ಪ್ರತಿಯೊಬ್ಬರ ಜೀವನದಲ್ಲಿ ಒಬ್ಬ ಗುರುಗಳು ಇದ್ದೇ ಇರುತ್ತಾರೆ, ಏಕೆಂದರೆ ಗುರು ಇಲ್ಲವೆಂದರೆ ಅವರ ಜೀವನವು ಶುರುವಾಗುವುದಿಲ್ಲ ಅದರ ಸಲುವಾಗಿ ಪ್ರತಿಯೊಬ್ಬರ ಜೀವನದಲ್ಲೂ ಸಹ ಗುರುಗಳು ಇರಲೇ ಬೇಕು. ನಮಗೆ ಸರಿ ತಪ್ಪುಗಳ ಮಾರ್ಗದರ್ಶನವನ್ನು ಕೊಡುವುದು ಗುರುಗಳಿಂದಲೇ ಮಾತ್ರ ಸಾಧ್ಯ ಎಂದು ತಿಳಿಸಿ ಈ ಗುರುಪೂರ್ಣಿಮೆ ಕಾರ್ಯಕ್ರಮವನ್ನು ಪ್ರತಿ ವರ್ಷವೂ ಇದೇ ರೀತಿ ಆಚರಿಸಿಕೊಂಡು ಬರಬೇಕು ಹಾಗೂ ನಮ್ಮ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಬರಬೇಕೆಂಬ ಮಾತನ್ನು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.














