ಜೈ ಜಿನೇಂದ್ರ ವೀಕ್ಷಕರೆ, ಈಗಾಗಲೆ ಮನೆ ಮಾತಾಗಿರುವ ಜಿನ ಭಜನಾ ಸ್ಪರ್ಧೆ ಬೃಹತ್ ಕಾರ್ಯಕ್ರಮದ ರುವಾರಿಗಳಾದ ಶ್ರೀಮತಿ ಧರ್ಮಸ್ಥಳ ಅನಿತಾ ಸುರೇಂದ್ರ ಕುಮಾರ್ ರವರ ಪರಿಕಲ್ಪನೆಯಲ್ಲಿ ಮತ್ತೊಂದು ಧರ್ಮ ಪ್ರಭಾವನ ಕಾರ್ಯ ಬಸದಿಗೆ ಬನ್ನಿ ಜಿನ ಸಂಸ್ಕಾರವನ್ನು ಉಳಿಸಿ ಕಾರ್ಯಕ್ರಮ ಈಗಾಗಲೇ ಶುರುವಾಗಿದ್ದು ಬೆಂಗಳೂರಿನಲ್ಲಿ ಹಾಸನದಲ್ಲಿ ಯಶಸ್ವಿಯಾಗಿ ಇದೀಗ ಮೈಸೂರಿನಲ್ಲಿ ಕೂಡ ಕಾರ್ಯಕ್ರಮದ ಉದ್ಘಾಟನೆಯಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ವಿದೂಶಿ ಶ್ರೀಮತಿ ಸೌಮ್ಯ ಶ್ರೀಧರ್ ಹಾಗೂ ಶ್ರೀಮತಿ ಡಾ|| ಕುಸುಮ ಪ್ರಕಾಶ್ ರವರು ಕಾರ್ಯಕ್ರಮ ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಕ ಶ್ರಾವಕಿಯರು ಭಾಗವಹಿಸಿ ಕಾರ್ಯಕ್ರಮ ಅದ್ಬುತ ಯಶಸ್ಸನ್ನು ಪಡೆಯಿತು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














