ರಾವ್ ಸಾಹೇಬ್ ಪಾಟೀಲ್ ಬೋರ್ಗಾವ್

ಶ್ರೀಯುತರಾದ ಶ್ರೀ ರಾವ್ ಸಾಹೇಬ್ ಅಣ್ಣ ಸಾಹೇಬ್ ಪಾಟೀಲ್ ರವರನ್ನು ನಮ್ಮ ಈ ಸಂಚಿಕೆಯಲ್ಲಿ ಸಂದರ್ಶಿಸಿದ್ದೇವೆ. ಅದಕ್ಕೂ ಮೊದಲು ಅವರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನಿಮಗೆ ಒದಗಿಸುತ್ತಿದ್ದೇವೆ. ಬನ್ನಿ ಅವರ ಬಗ್ಗೆ ತಿಳಿದುಕೊಳ್ಳೋಣ.

ಇಂದು ರಾಜ್ಯದೆಲ್ಲೆಡೆ ಹೆಮ್ಮರವಾಗಿ ಬೆಳೆದು ಧಾರ್ಮಿಕ ಶೈಕ್ಷಣಿಕ ಸಾಮಾಜಿಕ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ದಕ್ಷಿಣ ಭಾರತದ ಜೈನ ಸಭಾಧ್ಯಕ್ಷರು ಶ್ರೀ ರಾವ್ ಸಾಹೇಬ್ ಪಾಟೀಲ್ ರವರು. 1944 ರಲ್ಲಿ ಅವರ ಜನನ. ತಂದೆ ಕೀರ್ತಿ ಶೇಷ ಅಣ್ಣಾ ಸಾಹೇಬ್ ಮತ್ತು ತಾಯಿ ಸುಮತಿ ಅಣ್ಣಾ ಸಾಹೇಬ್ ರವರು. ಶ್ರೀಮತಿ ಮೀನಾಕ್ಷಿ ಅವರೊಂದಿಗೆ ವಿವಾಹವಾಗಿ  ಇಬ್ಬರು ಸುಪುತ್ರರು ಹಾಗೂ ಒಬ್ಬ ಸುಪುತ್ರಿ ಹಾಗೂ ಮೊಮ್ಮಕ್ಕಳನ್ನು ಒಳಗೊಂಡ  ತುಂಬು ಕುಟುಂಬ. ಬಡವರ್ಗದ ಜನರ  ಸ್ವಾವಲಂಭನೆಗಾಗಿ 1990 ರಲ್ಲಿ ಶ್ರೀ ಅರಿಹಂತ್ ಕ್ರೆಡಿಟ್ ಸೌಹಾರ್ಧ ಲಿಮಿಟೆಡ್ ಎಂದು ಗೋರ್ ಗಾವ್ ನಲ್ಲಿ ಸ್ಥಾಪಿಸಿ, ಈಗ ಕರ್ನಾಟಕ ರಾಜ್ಯಾದ್ಯಂತ 32 ಶಾಖೆಗಳನ್ನು ಹೊಂದಿದೆ.

ಇಷ್ಟೇ ಅಲ್ಲದೇ ಊರಿನ ಸುತ್ತಮುತ್ತಲಿನ  ಜನತೆಗಾಗಿ ಇವರಿಂದ ಸ್ಥಾಪಿತವಾದ ಸಂಸ್ಥೆಗಳು ಒಂದಾ ಎರಡಾ ಪ್ರತಿಯೊಂದನ್ನು ನಿಮಗೆ ತಿಳಿಸುತ್ತೇವೆ.

ತಾಲ್ಲೂಕಿನ ಮಕ್ಕಳಿಗಾಗಿ ಶ್ರೀ ಅರಿಹಂತ್ ಮರಾಠಿ ಮಾಧ್ಯಮ , ಪ್ರಾಥಮಿಕ ಮತ್ತು ಪ್ರೌಢಶಾಲೆ.

ಶ್ರೀ ಆರ್. ಎ ಪಾಟೀಲ ಪಬ್ಲಿಕ್ ಸ್ಕೂಲ್, ಬೋರಗಾಂವ.

ರೈತರ ಅನುಕೂಲಕ್ಕಾಗಿ  ಶ್ರೀ ಹರಿಹಂತ್ ಹಾಲು ಉತ್ಪಾದಕರ ಸಂಘ .

ಶ್ರೀ ಹರಿಹಂತ್ ಗಾರ್ಮೆಂಟ್ಸ್.

ಮಕ್ಕಳಿಗೆ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಶ್ರೀ ಅರಹಂತ ಜನರಲ್ ಸ್ಟೋರ್ಸ್ ನಲ್ಲಿ ಸ್ಟೇಷನರಿ ವಸ್ತುಗಳು ಎಂ.ಆರ್ ಪಿ ದರದಲ್ಲಿ ವಿದ್ಯಾರ್ಥಿಗಳ ಉಪಯುಕ್ತ ಸಾಮಾಗ್ರಿಗಳ ವಿತರಣೆ.

ಕುಡಿಯುವ ನೀರಿಗಾಗಿ ಶುದ್ಧ ಕುಡಿಯುವ ನೀರಿನ ಘಟಕ.

ನ್ಯಾಯಬೆಲೆ ಅಂಗಡಿ.

ಹೀಗೆ ಹಲವಾರು ರೀತಿಯಲ್ಲಿ ಜನರಿಗೆ ಸಹಕಾರವನ್ನು ನೀಡುತ್ತಾ ಬಂದು ಸಹಕಾರ ರತ್ನ ಎನಿಸಿಕೊಂಡು ಇಲ್ಲಿನ ಜನತೆಯ ನೆಚ್ಚಿನ ದಾದಾ ಆಗಿದ್ದಾರೆ. ಸಕ್ಕರೆ ಕಾರ್ಖಾನೆ ಹಾಗೂ ನೂಲು ಕಾರ್ಖಾನೆಗಳ ಮೂಲಕ ಉದ್ಯೋಗ ಸೃಷ್ಠಿಸಿ ಸುತ್ತಲಿನ ಜನತೆಗೆ ಭದ್ರತೆ ಒದಗಿಸಿದ ಧೀಮಂತ ವ್ಯಕ್ತಿ. ನಮ್ಮ ಜೀವನದಲ್ಲಿ ಏನಾದರೂ ಒಳ್ಳೆಯದಾಗಿದ್ದರೆ ಅದು ದಾದಾರವರಿಂದ  ಎಂದು ಹೇಳಿಕೊಳ್ಳಲು ಯಾವ ಸಂಕೋಚವು ಇಲ್ಲ ಎನ್ನುತ್ತಾರೆ ಅಲ್ಲಿನ  ಜನತೆ . ಇಂತಹ ಮಹಾನ್ ವ್ಯಕ್ತಿ ದಾದಾ ಅವರನ್ನು ಸಂದರ್ಶಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ.

ಅವರನ್ನು ಸಂದರ್ಶಿಸಿದಾಗ ಅವರು ಬಾಲ್ಯದಿಂದ ಬೆಳೆದು ಬಂದ ರೀತಿ ಹಾಗೂ ಅವರ ವಿದ್ಯಾಭ್ಯಾಸ ಹಾಗೂ ಅವರು ಬೆಳೆದು ಬಂದ ರೀತಿ ವ್ಯವಹಾರ ರಾಜಕೀಯ ಹೀಗೆ ಪ್ರತಿಯೊಂದು ಸಾಧನೆಯ ಬಗ್ಗೆ ನನಗೆ ಸ್ಪೂರ್ತಿಯೆಂದರೆ ನಮ್ಮ ತಂದೆಯವರು ಎಂದು ತಿಳಿಸಿದರು. ನಂತರ ರಾಜಕೀಯಕ್ಕೆ ಬಂದರೆ ಶ್ರೀ ರಾಮಕೃಷ್ಣ ಹೆಗ್ಗಡೆಯವರು ಹಾಗೂ ನಮ್ಮ ಸಮಾಜದ ಮಹಾಸ್ವಾಮಿಜಿಗಳವರಾದ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಜಿಗಳು ಈ ಇಬ್ಬರು ನನ್ನ ಜೀವನದ ಗಾಢ್ ಫಾದರ್ ಗಳಾಗಿದ್ದಾರೆ. ಆದರೂ ನನಗೆ ಮೊದಲ ಸ್ಪೂರ್ತಿ ನನ್ನ ತಂದೆಯವರೆಂದು ತುಂಬಾ ಹೆಮ್ಮೆಯಿಂದ ಹೇಳಿಕೊಂಡರು.

ಅವರ ಶ್ರೀಮತಿಯವರನ್ನು ನಾವು ಸಂದರ್ಶಿಸಿದಾಗ ಅವರು ತಮ್ಮ ಪತಿಯವರ ಬಗ್ಗೆ ತುಂಬಾ ಮೆಚ್ಚುಗೆಯ ಮಾತುಗಳನ್ನಾಡಿದರು.