ಒಂದು ಸಣ್ಣ ಊರು ಆದರೂ ಸಹ ಅ ಊರಲ್ಲಿ ನೆಡೆಯುವಂತಹ ಒಂದು ಕಾರ್ಯಕ್ರಮವನ್ನು ನಾನು ಅಲ್ಲಿಗೆ ಹೋಗಬೇಕು, ಅ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಬೇಕು , ನಾನು ಪ್ರತಿಯೊಬ್ಬರ ಜೊತೆ ಒಡನಾಟವನ್ನು ಇಟ್ಟುಕೊಳ್ಳಬೇಕು ಅನ್ನುವಂತಹ ಆಶಯವನ್ನು ಇಟ್ಟುಕೊಂಡು ದೂರದ ಬೆಂಗಳೂರಿನಿಂದ ನಮ್ಮ ಊರಾದ ಪಂಜಿಕಲ್ಲು ಊರಿಗೆ,ನಮ್ಮ ಬಸದಿಗೆ ಆಗಮಿಸಿರುವರು ಕೆ.ಪಿ.ಸಿ.ಸಿ ಅಧ್ಯಕ್ಷರಾದ ಶ್ರೀ ಡಿ.ಕೆ. ಶಿವಕುಮಾರ್ ಅವರು,ಅವರಿಗೆ ಪಂಜಿಕಲ್ಲು ಜಿರ್ಣೊದ್ಧಾರ ಸಮಿತಿಯ ಪರವಾಗಿ ಈಗ ಗೌರವವನ್ನು ಸಲ್ಲಿಕೆ ಮಾಡ್ಬೆಕು ಅಂತ ನಿಮ್ಮೇಲ್ಲರ ಜೊರಾದ ಚಪ್ಪಳೆಯೊಂದಿಗೆ ವಿನಂತಿಸಿಕೊಳ್ಳುತ್ತಿದ್ದೆನೇ, ಜಿರ್ಣೊದ್ಧಾರ ಸಮಿತಿಯ ಅಧ್ಯಕ್ಷರು,ಹಾಗು ಕಾರ್ಯದರ್ಶಿಯವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಕೇಳಿಕೊಳ್ಳುತ್ತೇನೆ.
ನಮ್ಮ ಕರೆಗೆ ಒಗೊಟ್ಟು ಇಲ್ಲಿವರೆಗು ಬಂದಿದ್ದಾರೆ,ನಮ್ಮ ಬಸದಿಯಾನ್ನು ನೋಡಿದ್ದಾರೆ,ಬಸದಿಯ ಜಿರ್ಣೊದ್ಧಾರ ಕಾರ್ಯವನ್ನು ನೋಡಿ ಮೆಚ್ಚಿಕೊಂಡಿದ್ದಾರೆ,ಇಂತಹ ಊರಿಗೆ ಬಂದು ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಸ್ಪೂರ್ತಿಯಾಗಿದ್ದಾರೆ,ಅವರಿಗೆ ಈಗ ಈ ವೇದಿಕೆ.
ನಮಸ್ಕಾರ ಪರಮಪೂಜ್ಯ ಭರತ ಭೂಷಣ ಸೃಷ್ಠಿ ಡಾ|| ಚಾರುಕೀರ್ತಿ ಭಟ್ಟಚಾರ್ಯ ಪಂಡಿತಾಚಾರ್ಯಾರ ಮಹಾಸ್ವಾಮಿಗಳಿಗೆ, ಮುಡಬಿದರೆ ಜೈನ ಮಠದ ಸ್ವಾಮೀಜಿಗಳಿಗೆ ಅವರ ಪಾದಗಳಿಗೆ ನನ್ನ ನಮಸ್ಕಾರ ತಿಳಿಸಿ,ಡಾ|| ಸುರೇಂದ್ರ ಅವರು ವೇದಿಕೆಯಲ್ಲಿ ಇರಬಹುದು ನಾನು ಧರ್ಮಸ್ಥಳ ಕ್ಷೇತ್ರದ,ಹಾಗು ಶ್ರೀ ಕ್ಷೇತ್ರದ ಗೌರಾಧ್ಯಕ್ಷರು ,ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ನೆನೆಸಿಕೊಳ್ಳುತ್ತ ಹಾಗು ಇಡೀ ಜೈನ ಧರ್ಮಕ್ಕೆ ಮುತ್ತು ರತ್ನಗಳಂತೆ, ಶ್ರೇಷ್ಠ ಧರ್ಮದ ಗುರುಗಳವರು, ಅವರು ಇವತ್ತು ಇಲ್ಲ ಅವರ ಸೋದರರು ಇವತ್ತಿನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದಾರೆ,ಮುಖ್ಯವಾಗಿ ಕಾರ್ಯಕ್ರಮಕ್ಕೆ ಬರಲು ಕಾರಣೀಕರಾದ ರಮನಾತ್ಯನವರು ಬರಲೇಬೇಕೆಂದು ಹೇಳಿದರು ಅದರಂತೆ ಬಂದಿರುವೆ,ಇಂತಹ ದೊಡ್ಡ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಲ್ಲರಿಗೂ ನನ್ನ ನಮಸ್ಕಾರಗಳನ್ನು ಅರ್ಪಿಸುತ್ತಿದ್ದೇನೆ.
ಧರ್ಮಯಾವುದಾದರು ತತ್ವವೂಂದೆ, ನಾಮ ನೂರಾದರು ದೈವವೊಂದೆ, ಪೂಜೆಯಾವುದಾರು ಭಕ್ತಿಯೊಂದೆ, ಕರ್ಮಯಾವುದಾದರು ನಿಷ್ಠೆಯೊಂದೆ, ದೇವನೊಬ್ಬ ನಾಮ ಹಲವು, ನನಗೆ ಒಂದು ನಂಬಿಕೆ, ಯಾರು ಸಹ ಕೇಳಿ ನಾನು ಇದೇ ಧರ್ಮದಲ್ಲಿ ಜನಿಸಬೇಕು ಎಂದು ಹುಟ್ಟುವುದಿಲ್ಲ, ಅದು ದೈವ ಪ್ರೇರಪಣೆಯಾಗಿರುತ್ತದೆ,ಇಂದು ನನಗೆ ಬಹಳ ಸಂತೋಷವಾಗಿದೆ,ಸಂದರ ಬಸದಿಯನ್ನು ನೋಡಿ,ಈ ಕಾರ್ಯಕ್ಕೆ ದುಡಿದವರ ನೋಡಿ, ಮುಖ್ಯವಾಗಿ ವಿಶೇಷವಾಗಿ ಮಾನಸ ಸ್ಥಂಭ, ಕೆತ್ತೆನೆ ಕೆಲಸ ಮಾಡಿರುವ ಎಲ್ಲರಿಗೂ ಭಗವಂತ ಇನ್ನೂ ಹೆಚ್ಚಿನ ಶಕ್ತಿಕೊಡಲಿ ಹೆಚ್ಚು ಕಾರ್ಯಗಳು ನೆಡೆಯಲಿ ಎಂದು ಬೇಡಿಕೊಳ್ಳುತ್ತೇನೆ.
ಒಂದು ಪವಿತ್ರವಾದ ಸ್ಥಳಕ್ಕೆ ನಾವೆಲ್ಲರು ಬಂದಿದ್ದೇವೆ,ಸುಮಾರು 600 ವರ್ಷಗಳ ಇತಿಹಾಸವಿರುವ ಈ ಬಸದಿ ಇದರ ಜಿರ್ಣೊದ್ಧಾರ ಕಾರ್ಯ ಗಮನಾರ್ಹ ವಿಷಯವಾಗಿದೆ, ದಕ್ಷಿಣ ಕನ್ನಡ ಜಿಲ್ಲೆ ಎಲ್ಲಾ ಧರ್ಮದವರಿಗೂ ಪೂರಕವಾದ ಸ್ಥಳವಾಗಿದೆ, ದೈವದ ಮುಂದೆ ಎಲ್ಲರು ಸಮಾನರು,ಪ್ರೀತಿ,ನಂಬಿಕೆ,ವಿಶ್ವಾಸವೂಂದೆ ಕೊನೆಗೆ ಉಳಿಯುತ್ತದೆ. ನಮ್ಮ ಸಂಸ್ಕ್ರತಿಯನ್ನು ಕಾಪಾಡುವಲ್ಲಿ ಎಲ್ಲರು ಯಶಸ್ವಿಯಾಗಿದ್ದೀರಿ ಎಂದು ಹೇಳುತ್ತೇನೆ,ಮಾನವ ಧರ್ಮ ಶ್ರೇಷ್ಠವಾದುದ್ದು ಎಂದು ಹೇಳುತ್ತ, ನನ್ನ ಮಾತನ್ನು ಮುಗಿಸುತ್ತಿದ್ದೇನೆ.














