ಅತಿಶಯ ಕ್ಷೇತ್ರ ಶ್ರೀ 1008 ಆದಿನಾಥ ಬಸದಿ ಇದು ತುಂಬಾ ಹಳೆಯ ಬಸದಿಯಾಗಿದ್ದು , ಇತ್ತೀಚೆಗೆ 2016 ರಲ್ಲಿ ಜೀರ್ಣೋದ್ದಾರಗೊಂಡಿದೆ. ಭಕ್ತಾಂಬರ ಸ್ತೋತ್ರವನ್ನು ಅರ್ಥಗತ್ಭಿತವಾಗಿ ಕೆತ್ತಿಸಿ ಇಲ್ಲಿ ಇರಿಸಿರುವುದು ಇಲ್ಲಿನ ವಿಶೇಷತೆಯಾಗಿದೆ. ಕಾರ್ಕಳವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಸುಧೀರ್ಘ ಕಾಲ ರಾಜ್ಯವನ್ನಾಳಿದ ಬಯಲುರಸರು ಜೈನ ಧರ್ಮಕ್ಕೆ ನೀಡಿದ ಕೊಡುಗೆಯಾಗಿದೆ. ಇರ್ವತ್ತೂರಿಗೂ ಭೈರವರಸರಿಗೂ ನಿಕಟ ಸಂಬಂಧವಿತ್ತು ಎಂದು ಹೇಳಲಾಗುತ್ತದೆ. ಇರ್ವತ್ತೂರು 1008 ಶ್ರೀ ಆದಿನಾಥೇಶ್ವರ ಸ್ವಾಮಿ ಬಸದಿಯ ನಿರ್ಮಾಣದ ಕುರಿತಂತೆ ನಿಖರವಾದ ಮಾಹಿತಿಗಳು ದೊರೆತಿಲ್ಲ ವಾದರೂ ಇತಹಾಸ ತಜ್ನರ ಅಭಿಪ್ರಾಯದಂತೆ ಬಯಲು ವರಸರ ಕಾಲದಲ್ಲಿ ಸ್ಥಾಪನೆಯಾಗಿದೆ ಯೆಂದು ಹೇಳಲಾಗಿದೆ. ಬಸದಿಯಲ್ಲಿ 1008 ಭಗವಾನ್ ಆದಿನಾಯಕ ಸ್ವಾಮಿ ಮೂಲ ನಾಯಕ ಗೋಮುಖ ಯಕ್ಷಿ ಮತ್ತು ಚಕ್ರೇಶ್ವರಿ ಅಮ್ಮನವರ ವಿಗ್ರಹಗಳಿವೆ. ಗರ್ಭಗುಡಿಯ ಹೊರಭಾಗದಲ್ಲಿ ಮೂಲತಃ ಮಾತೆ ಶ್ರೀ ಪದ್ಮಾವತಿ ಅಮ್ಮನವರ ವಿಗ್ರಹ ಉತ್ತರಾಭಿಮುಖವಾಗಿದ್ದು 2010ರ ಏಪ್ರಿಲ್ ತಿಂಗಳಿನ ಜೀರ್ಣೋದ್ದಾರೆ ಸಂದರ್ಭದಲ್ಲಿ ಪೂರ್ಔಭಿಮುಖವಾಗಿ ಎಡಭಾಗದಲ್ಲಿ ಪ್ರತಿಷ್ಠಾಪಿಸಲಾಗಿದೆ. ಬಲಭಾಗದಲ್ಲಿ ಬ್ರಹ್ಮೇಶ್ಯ ದೇವರನ್ನು ಪ್ರತಿಷ್ಠಾಪಿಸಲಾಗಿದ್ದಿ ಗರ್ಭಗುಡಿಯ ಪ್ರವೇಶ ಧ್ವಾರದಲ್ಲಿ ಪೂರ್ವಾಭಿಮುಖವಾಗಿ ಗಂಧಕುಟಿ ಚತುರ್ಮುಖ ತೀರ್ಥಂಕರರ ವಿಗ್ರಹಗಳಿವೆ.
ಮೇಗಿನ ನೆಲೆಯಲ್ಲಿ 1008 ಭಗವಾನ್ ಚಂದ್ರನಾಥ ತೀರ್ಥಂಕರರ ಆರಾಧ್ಯ ಮೂರ್ತಿ ಹಾಗೂ ಮಹಾಮಾತೆ ಜ್ವಾಲಾಮಾಲಿನಿ ದೇವಿಯನ್ನು ಇಲ್ಲಿ ಆರಾಧಿಸಲಾಗುತ್ತಿದೆ. ಹಿಂದೆ ಕೊರಂಜಿ ಮನೆತನದವರು ಜೈನ ಧರ್ಮದ ಜೀರ್ಣೋದ್ದಾರ ಸಂಘದ ಸ್ಥಾಪಕ ಸದಸ್ಯರಾಗಿದ್ದರು. ಜೈನ ಮತ ಸ್ಥಾಪನ ಸಮಿತಿಯ ಮೂವರು ಸದಸ್ಯರ ಪೈಕಿ ಇರ್ವತ್ತೂರು ಕೊಳಕೆ ಮನೆತನದ ಸ್ವರ್ಗೀಯ ನಾಗರಾಜ ಕಡಂಬೂರು ಓರ್ವ ಸದಸ್ಯರಾಗಿದ್ದರು ಎಂಬುದು ಸದಸ್ಯ ರೆಲ್ಲರ ಅಭಿಪ್ರಾಯವಾಗಿತ್ತು.














