ಜ್ವಲಮಾಲಾ ನ್ಯೂಸ್

ಜೈ ಜಿನೇಂದ್ರ ವೀಕ್ಷಕರೆ, ರಾಜ್ಯದೇಲ್ಲೆಡೆ ಈಗಾಗಲೆ ಹಲವು ವಿಭಾಗಗಳಲ್ಲಿ ಜಿನ ಭಜನಾ ಸ್ಪರ್ಧೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು ಮುಂದಿನ ವಿಭಾಗ  ಧಾರವಾಡ ವಿಭಾಗವಾಗಿದ್ದು ಬೆಳಗಾವಿಯಲ್ಲಿ ಜರುಗಲಿದೆ. ದಿನಾಂಕ 10-12-2022 ರಂದು ಬೆಳಗಾವಿಯ ಶ್ರೀ ಧರ್ಮನಾಥ ಭವನದಲ್ಲಿ ಬೆಳಗ್ಗೆ 9:15 ಕ್ಕೆ ದೀಪ ಪ್ರಜ್ವಲನೆ ಮೂಲಕ ಕಾರ್ಯ ಕ್ರಮ ಶುಭಾರಂಭಗೊಂಡು 9:30 ಕ್ಕೆ ಹಿರಿಯರ ಭಜನಾ ಸ್ಪರ್ಧೆ ಹಾಗೂ ಮಧ್ಯಾಹ್ನ 2 ರಿಂದ ಕಿರಿಯರ ವಿಭಾಗದ ಜಿನ ಭಜನಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಡಿ ಸುರೇಂದ್ರ ಕುಮಾರ್ ಅವರು, ಗೌರವ ಅತಿಥಿಗಳಾಗಿ ಶ್ರೀ ಡಾ|| ನಿರಂಜನ್ ಕುಮಾರ್, ಶ್ರೀಮತಿ ಪದ್ಮಲತಾ ನಿರಂಜನ್ ಕುಮಾರ್ ರವರ ಮಾರ್ಗದರ್ಶನದೊಂದಿಗೆ, ವಿಶೇಷ ಅಹ್ವಾನಿತರಾಗಿ ಶ್ರೀ ರಾವ್ ಸಾಹೇಬ ಪಾಟೀಲ್ ಹಾಗೂ ಶ್ರೀ ದೀಪಕ್ ಧಡೋತಿ ಅವರೊಡನೆ ಅನೇಕ ಗಣ್ಯಾತಿ ಗಣ್ಯರ ಉಪಸ್ಥಿತಿಯಲ್ಲಿ ನೆರವೇರಲಿದೆ. ಕಾರ್ಯಕ್ರಮವು ನಿಮ್ಮ ಜ್ವಾಲಮಾಲ ಯೂಟ್ಯೂಬ್ ಚಾನಲ್ ನಲ್ಲಿ ನೇರ ಪ್ರಸಾರಗೊಳಲ್ಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಹಾಗೂ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

          ಜ್ವಾಲಮಾಲ ಡಾಟ್ ನ್ಯೂಸ್