ಜೈ ಜಿನೇಂದ್ರ ವೀಕ್ಷಕರೆ, ಶ್ರೀ ಕ್ಷೇತ್ರ ಗೊಮ್ಮಟಗಿರಿ ಮೈಸೂರು ಪ್ರಾಂತ್ಯದಲ್ಲಿರುವ ಐತಿಹಾಸಿಕ ಕ್ಷೇತ್ರ. ಬಿಳಿಕೆರೆ ಹೋಬಳಿ ಹುಣಸೂರು ತಾಲ್ಲೂಕು ಬೆಟ್ಟದೂರು ಗ್ರಾಮ ಇಲ್ಲಿ ವಿರಾಜಮಾನರಾಗಿದ್ದಾರೆ ಕಪ್ಪು ಶಿಲೆಯಲ್ಲಿ ಮನಮೋಹಕ ಮುಗುಳ್ನಗೆ ಹೊತ್ತು ನಿಂತ ಭಗವಾನ್ ಬಾಹುಬಲಿ. ಈ ಕಾರಣಕ್ಕಾಗಿಯೇ ಈ ಗ್ರಾಮಕ್ಕೆ ಗೊಮ್ಮಟಗಿರಿ ಎನ್ನುವ ಹೆಸರು.
ಪ್ರತಿ ವರ್ಷ ಈ ಸುಂದರ ಪರಿಸರದಲ್ಲಿ ಬೆಟ್ಟದ ಮೇಲೆ ನಡೆಯುತ್ತ ಬಂದಿರುವ ಮಹಾಮಸ್ತಕಾಭಿಷೇಕಕ್ಕೆ ಈ ಬಾರಿ 73ನೇ ಸಂವತ್ಸರ. ದಿನಾಂಕ 21-11-2022ನೇ ಭಾನುವಾರದಂದು ಶ್ರೀ ಕ್ಷೇತ್ರ ಹೊಂಬುಜ ಜೈನ ಮಠದ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ|| ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ಶ್ರೀ ಗೊಮ್ಮಟ ಗಿರಿ ಸೇವಾ ಸಮಿತಿ ಅಧ್ಯಕ್ಷರಾದ ಡಾ|| ಎಂ ವಿ ಶಾಂತಕುಮಾರ್ ಇವರ ಅಧ್ಯಕ್ಷತೆಯಲ್ಲಿ ವೈಭವಯುತವಾಗಿ ಸಂಪನ್ನಗೊಂಡಿತು. ಮೈಸೂರು ಪ್ರಾಂತ್ಯದ ಸುತ್ತ ಮುತ್ತಲಿನ ಜೈನ ಸಮಾಜ ಅಧ್ಯಕ್ಷರು ಪದಾಧಿಕಾರಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ನೆರವೇರಿಸಿದರು. ಈ ಸುಂದರ ದೃಶ್ಯಾವಳಿಗಳನ್ನು ನೋಡಲು ಕಣ್ಣೆರಡು ಸಾಲದು.
ನಂತರ ಶ್ರೀ ಕ್ಷೇತ್ರ ಹೊಂಬುಜ ಜೈನ ಮಠದ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ|| ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಯವರು 73ನೇ ಸಂವತ್ಸರದ ಶ್ರೀ ಕ್ಷೇತ್ರ ಗೊಮ್ಮಟಗಿರಿ ಕಪ್ಪು ಶಿಲೆಯಲ್ಲಿ ವಿರಾಜಮಾನರಾಗಿರುವ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕವನ್ನು ಕುರಿತು ಮಾತನಾಡಿದರು. ಶ್ರೀ ಕ್ಷೇತ್ರದಲ್ಲಿ ಇದಂತಹ ನೀರಿನ ಸಮಸ್ಯೆಯನ್ನು ಕುರಿತು ಮಾತನಾಡಿ ಈ ಸಮಸ್ಯೆ ಬಗೆಹರಿದ ರೀತಿಯನ್ನು ವಿವರಿಸಿದರು. ಮತ್ತು ಆರ್ಥಿಕ ಸಮಸ್ಯೆಯನ್ನು ಕುರಿತು ವಿವರಿಸಿ ಈ ಕ್ಷೇತ್ರದ ಬೆಳವಣಿಗೆಗಾಗಿ ಹಾಕಿಕೊಂಡಿರುವ ಯೋಜನೆಯನ್ನು ತಿಳಿಸಿದರು. 75ನೇ ಸಂವತ್ಸರದ ಶ್ರೀ ಕ್ಷೇತ್ರ ಗೊಮ್ಮಟಗಿರಿ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕವನ್ನು ಬಹಳ ವಿಜೃಂಭಣೆಯಿಂದ ಮಾಡಲು ವ್ಯವಸ್ಥಿತ ರೀತಿಯಲ್ಲಿ ಯೋಜನೆ ಮಾಡಲಾಗುವುದು ಹಾಗೂ ಇಲ್ಲಿ ಚಾತುರ್ಮಾಸವನ್ನು ಮಾಡಲು ಅನುಕೂಲಕರವಾಗಿದೆ ಎಂದು ಹೇಳಿದರು, ಪ್ರವಾಸಿಗರಿಗೆ ಉತ್ತಮ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುತ್ತದೆ ಎಂದರು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














