ಈ ವಾರದ ಧರ್ಮ ಚಿಂತನ ಮಂಥನ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಸ್ವಾಗತ: ಈ ಕಾರ್ಯಕ್ರಮವನ್ನು ಎಲ್ಲಾ ಜೈನ ಬಾಂಧವರ ಸಹಕಾರ ಹಾಗು ಸ್ವಾಮೀಜಿಗಳ ಆಶೀರ್ವಾದದೊಂದಿಗೆ ನಮ್ಮ ಜ್ವಾಲಾಮಾಲಾ ನ್ಯೂಸ್ ನಲ್ಲಿ ಪ್ರಸಾರ ಮಾಡುತ್ತಿದ್ದೇವೆ. ಈ ಸಂಚಿಕೆಯ ವಿಷಯ : ಸೊಲ್ಲಾಪುರದಲ್ಲಿ ಜೈನ ವೈಭವ ಈ ವಿಷಯವಾಗಿ ನಮ್ಮೊಡನೆ ಮುಖ್ಯವಾಗಿ ಅತಿಥಿಗಳಾಗಿ ಆಗಮಿಸುತ್ತಿರುವವರು ಶ್ರೀಮತಿ ಸುಜಾತ ಶಾಸ್ತ್ರಿ ಯವರು ಅವರನ್ನು ಈ ಸಂಚಿಕೆಗೆ ಗೌರವ ಪೂರ್ವಕವಾಗಿ ಬರಮಾಡಿಕೊಳ್ಳುತ್ತಿದ್ದೇನೆ.
ಈ ಕಾರ್ಯಕ್ರಮವನ್ನು ಪ್ರಾರ್ಥನೆಯೊಂದಿಗೆ ಆರಂಭಿಸೋಣ ಪ್ರಾರ್ಥನೆ ಮಾಡುವವರು ಧೀರಜ್ ಜೈನ್ ರವರು . ಪ್ರಾರ್ಥನೆ ಮಾಡಿದ ಇವರಿಗೆ ನಮ್ಮ ಚಾನೆಲ್ ನ ಪರವಾಗಿ ವಂದನೆಗಳು,ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀಮತಿ ಸುಜಾತ ಶಾಸ್ತ್ರಿಯವರನ್ನು ಗೌರವಪೂರ್ವಕವಾಗಿ ಸ್ವಾಗತಿಸುತ್ತಿದ್ದೇವೆ. ಹಾಗೆಯೇ ಈ ಜ್ವಾಲಾಮಾಲಾ ನ್ಯೂಸ್ ಚಾನೆಲ್ ನ ಸಂಸ್ಥಾಪಕರು ಹಾಗೂ ಭಾರತೀಯ ಜೈನ್ ಮಿಲನ್ ವಲಯ 108 ರ ಎಲ್ಲಾ ಸಂಸ್ಥಾಪಕರುಗಳಿಗೂ ಸ್ವಾಗತವನ್ನು ಕೋರುತ್ತಿದ್ದೇವೆ. ಈ ವಿಶೇಷ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಸಲಹೆ ಸೂಚನೆಗಳನ್ನು ನೀಡಲಿರುವ ಹಾಗೂ ಮಾರ್ಗದರ್ಶನವನ್ನು ಮಾಡುತ್ತಿರುವಂತಹ ವಿದೂಷಿ ತೇಜಸ್ವಿನಿ ಅವರನ್ನು ಸಹ ಸ್ವಾಗತಿಸುತ್ತಿದ್ದೇವೆ. ಈ ಕಾರ್ಯಕ್ರಮದ ಕೊನೆಯಲ್ಲಿ ಶಾಂತಿ ಮಂತ್ರವನ್ನು ಪಠನವನ್ನು ಮಾಡುವ ಶ್ರೀಮತಿ ಹೀರಾ ಅವರನ್ನು ಕೂಡ ಹೃತ್ಪೂರ್ವಕವಾಗಿ ಸ್ವಾಗತಿಸುತ್ತಿದ್ದೇನೆ. ಹಾಗೂ ಇಂದಿನ ಕಾರ್ಯಕ್ರಮಕ್ಕೆ ಭಾರತೀಯ ಜೈನ್ ಮಿಲನ್ ನ ರಾಷ್ಟ್ರೀಯ ಅಧ್ಯಕ್ಷರಾದಂತಹ ಪ್ರಸನ್ನ ಕುಮಾರ್ ರವರೂ ಸಹ ಾಗಮಿಸಿದ್ದಾರೆ. ಅವರಿಗೂ ನಾವು ಸ್ವಾಗತಿಸುತ್ತಿದ್ದೇವೆ. ಶ್ರೀಮತಿ ಸುಜಾತ ಶಾಸ್ತ್ರಿ ಯವರು ಕೇಳಿದ ಪ್ರಶ್ನೆಗಳಿಗೆ ತುಂಬಾ ಅಚ್ಚು ಕಟ್ಟಾಗಿ ಸವಿಸ್ತಾರವಾಗಿ ತಿಳಿಸಿ ಹೇಳಿದರು. ಈ ಕಾರ್ಯಕ್ರಮವನ್ನು ನಡೆಸಿಕೊಟ್ಟ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತಿದ್ದೇವೆ. ಕಾರ್ಯಕ್ರಮವು ಶಾಂತಿಮಂತ್ರದೊಂದಿಗೆ ಮುಕ್ತಾಯ ಗೊಂಡಿತು.














