ವರದ ಜೈನ ಸೂದಿಗಳು

ಜೈ ಜಿನೇಂದ್ರ, ವೀಕ್ಷಕರೆ, ರಾಜ್ಯದೆಲ್ಲೆಡೆಯ ಜೈನ ಸುದ್ದಿಗಳು ಸಂಚಯ ವಾರದ ಜೈನ ಸುದ್ದಿಗಳಿಗೆ ಸ್ವಾಗತಿಸುತ್ತಿದ್ದೇನೆ.

ಮುಖ್ಯಾಂಶಗಳು.

ಮೈಸೂರಿನ ದಿಗಂಬರ ಜೈನ ಸಮಾಜದ ಆಡಳಿತ ಮಂಡಳಿ ಆಯ್ಕೆ.

ರಾಜ್ಯದೆಲ್ಲೆಡೆ ಭಗವಾನ್ ಶ್ರೀ ಮಹಾವೀರ ಸ್ವಾಮಿಗೆ ನಿರ್ವಾಣ ಲಾಡು ಸಮರ್ಪಣೆ.

ಭಾರತೀಯ ಜೈನ್ ಮಿಲನ್ ವಲಯ 8ರ 19ನೇ ವಲಯ ಸಮ್ಮೇಳನ.

ಬೆಂಗಳೂರಿನ ಕರ್ನಾಟಕ ಜೈನ ಭವನದಲ್ಲಿ ನಡೆದ ಆದರ್ಶ ಜೈನ ಮಹಿಳಾ ರತ್ನ ಪ್ರಶಸ್ತಿ ಪ್ರಧಾನ.

ಕೊಳಕ್ಕೆ ಇರ್ವತ್ತೂರು ಶ್ರೀ ನಾಗಬ್ರಹ್ಮ ಸ್ಥಾನಕ್ಕೆ ಸಚಿವರಾದ ಸುನೀಲ್ ಕುಮಾರ್ ಭೇಟಿ.

ಪಂಡಿತರತ್ನ ಎ ಶಾಂತಿರಾಜ ಶಾಸ್ತ್ರಿ ಟ್ಟಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ.

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಾಜ್ಯದ್ಯಂತ ಕೋಟಿ ಕಂಠ ಗಾಯನ.

ಸುದ್ದಿಗಳ ವಿವರ.

ಮೈಸೂರಿನ ದಿಗಂಬರ ಜೈನ ಸಮಾಜದ ಆಡಳಿತ ಮಂಡಳಿ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅವಿರೋಧವಾಗಿ ಆಯ್ಕೆಯಾದವರ ವಿವರ ಇಲ್ಲಿದೆ.

ನ್ಯೂ ಸೈಯಾಜಿ ರಾವ್ ರಸ್ತೆಯಲ್ಲಿರುವ ಶ್ರೀ ದಿಗಂಬರ ಜೈನ ಸಮಾಜದ ಆಡಳಿತ ಮಂಡಳಿಗೆ ಮತ್ತು ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಸ್ ಡಿ ಮಹೇಶ್ ಪ್ರಸಾದ್ ಅಧ್ಯಕ್ಷರಾಗಿ, ವಿ ಭರತ್ ರಾಜ್ ಉಪಾಧ್ಯಕ್ಷರಾಗಿ, ಎಂ ಆರ್ ಸುನೀಲ್ ಕುಮಾರ್ ಕಾರ್ಯದರ್ಶಿಯಾಗಿ, ಬಿ ಜ್ವಾಲೇಂದ್ರ ಪ್ರಸಾದ್ ಗೋಷ್ಯಾಧ್ಯಕ್ಷ, ಟಿ ಎಸ್ ಲಕ್ಷ್ಮಿಶ್ ಬಾಬು ಸಹಕಾರ್ಯದರ್ಶಿ ಹಾಗೂ ನಿರ್ದೇಶಕರಾಗಿ ಎಂ ಎನ್ ಧರಣೇಂದ್ರನ್, ಕೆ ಚಂದ್ರ ಶೇಖರ್ ಆರಿಗ, ಎಸ್ ಪಿ ಶ್ರೀಕಾಂತ್, ಎನ್ ಜಿನೇಂದ್ರ ಪ್ರಕಾಶ್, ವಸುಪಾಲ್, ವಿ ಭರತ್ ಆಶೋಕ್ ಪಾಟೀಲ್, ಬಿ ಸಿಮಂತಿನಿ ಆಯ್ಕೆಯಾಗಿದ್ದಾರೆ.

ರಾಜ್ಯದೆಲ್ಲೆಡೆ ಶ್ರೀ ಮಹಾವೀರ ಸ್ವಾಮಿಗೆ ನಿರ್ವಾಣ ಲಾಡು ಸಮರ್ಪಿಸುವುದರ ಮೂಲಕ ನಿರ್ವಾಣೋತ್ಸವವನ್ನು ಸಂಭ್ರಮಿಸಲಾಗಿದ್ದು, ಜ್ವಾಲಮಾಲಗೆ ತಲುಪಿದ ಒಂದೆರಡು ಸಂಭ್ರಮಾಚರಣೆ ಇಲ್ಲಿದೆ.

ರಾಜ್ಯದೆಲ್ಲೆಡೆ ಭಗವಾನ್ ಶ್ರೀ ಮಹಾವೀರ ಸ್ವಾಮಿಗೆ ನಿರ್ವಾಣ ಲಾಡು ಸಮರ್ಪಣೆ. ಕಡಲ ನಗರಿ ಮಂಗಳೂರಿನ ಬಜಿಲ ಕೇರಿ ಭಗವಾನ್  ಶ್ರೀ 1008 ಆದಿನಾಥ ಸ್ವಾಮಿ ಜೈನ ಬಸದಿಯಲ್ಲಿ ದಿನಾಂಕ 25-10-2022 ರಂದು ಭಗವಾನ್  ಶ್ರೀ 1008 ಮಹಾವೀರ ಸ್ವಾಮಿಯ 2549ನೇ  ನಿರ್ವಾಣೋತ್ಸವ ಪ್ರಯುಕ್ತ ರಕ್ಷಾವಳಿ, ಅಭಿಷೇಕ ಇತ್ಯಾದಿ ವಿಶೇಷ ಪೂಜೆಗಳು ಜರುಗಿತು. ಮಂಗಳೂರಿನ ಜೈನ ಶ್ರಾವಕ ಶ್ರಾವಕಿಯರು ಈ ಪೂಜಾ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಶ್ರದ್ಧಾ ಭಕ್ತಿಯಿಂದ ಭಾಗವಹಿಸಿದ್ದರು.

ಬೆಂಗಳೂರಿನ ಕರ್ನಾಟಕ ಜೈನ ಭವನದಲ್ಲಿ ಆದರ್ಶ ಜೈನ ಮಹಿಳಾ ರತ್ನ ಪ್ರಶಸ್ತಿಯನ್ನು ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರಿಗೆ ನೀಡಿ ಗೌರವಿಸಲಾಗಿದೆ. ಜ್ವಾಲಮಾಲ ಡಾಟ್ ನ್ಯೂಸ್ ವತಿಯಿಂದ ಅನಿತಮ್ಮನಿಗೆ ಹೃತ್ಪೂರ್ವಕ ಅಭಿನಂದನೆಗಳು.

ಬೆಂಗಳೂರಿನ ಕರ್ನಾಟಕ ಜೈನ ಭವನದಲ್ಲಿ ನಡೆದ ಆದರ್ಶ ಜೈನ ಮಹಿಳಾ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ. ಪಂಡಿತ ರತ್ನ ಎ ಶಾಂತಿನಾಥ ಶಾಸ್ತ್ರಿ ಟ್ರಸ್ಟ್ ವತಿಯಿಂದ ದಿನಾಂಕ 23-10-2022ರ ಭಾನುವಾರದಂದು ನಡೆದ ಆದರ್ಶ ಜೈನ ಮಹಿಳಾ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರಿಗೆ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿದ ಪರಮ ಪೂಜ್ಯ 108 ಯುಗಳ ಮುನಿ ಮಹಾರಾಜರು ಕಾರ್ಯಕ್ರಮದ ಉದ್ಘಾಟನೆಯನ್ನು ನ್ಯಾಯ ಮೂರ್ತಿ ಶ್ರೀ ಪದ್ಮರಾಜ ದೇಸಾಯಿಯವರು ಅಧ್ಯಕ್ಷತೆಯಲ್ಲಿ ಎಸ್ ಜಿತೇಂದ್ರ ಕುಮಾರ್ ರವರು, ಪ್ರಶಸ್ತಿ ಪ್ರಧಾನವನ್ನು ಡಾ|| ನಾಡೋಜ ಕಮಲ ಹಂಪನ ರವರು, ಶುಭ ನುಡಿಗಳನ್ನಾಡಿದ ನಾಡೋಜ ಡಾ|| ಹಂಪ ನಾಗರಾಜಯ್ಯ ಇವರುಗಳು ಉಪಸ್ಥಿತರಿದ್ದರು.

ಕೊಳಕ್ಕೆ ಇರ್ವತ್ತೂರು ಶ್ರೀ ನಾಗಬ್ರಹ್ಮ ಸ್ಥಾನಕ್ಕೆ ಸಚಿವರಾದ ಸುನೀಲ್ ಕುಮಾರ್ ರವರು ಭೇಟಿನೀಡಿದ್ದಾರೆ. ಇನ್ನೂ ಯಾರೆಲ್ಲಾ ಭೇಟಿನೀಡಿದ್ದಾರೆ ಬನ್ನಿ ತಿಳಿಯೋಣ.

ಕೊಳಕ್ಕೆ ಇರ್ವತ್ತೂರು ಗೊಲ್ದಿಂಬಿ ಸಾರ್ವಜನಿಕ ಶ್ರೀ ನಾಗಬ್ರಹ್ಮ ಸ್ಥಾನಕ್ಕೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶ್ರೀ ವಿ ಸುನೀಲ್ ಕುಮಾರ್ ರವರು ಬೇಟಿ ನೀಡಿದರು. ಈ ಸಮಯದಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವ ಅಧ್ಯಕ್ಷರಾದ ಭಾಸ್ಕರ್ ಎಸ್ ಕೋಟ್ಯಾನ್, ಜಯಕೀರ್ತಿ ಕಡಂಬ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಭರತ್ ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಉದಯ ಎಸ್ ಕೋಟ್ಯಾನಿ, ಊರಿನ ಹಿರಿಯರು, ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜಾಹೀರಾತು.

ಭಾರತೀಯ ಜೈನ್ ಮಿಲನ್ ವಲಯ 8ರ 19ನೇ ವಲಯ ಸಮ್ಮೇಳನದ ಸುಂದರ ದೃಶ್ಯಾವಳಿಗಳನ್ನು ನೀವು ನೋಡಿದ್ದೀರಿ. ಸಂಕ್ಷೀಪ್ತ ಸುದ್ದಿಯನ್ನೊಮ್ಮೆ ನೋಡೋಣ.

ಭಾರತೀಯ ಜೈನ್ ಮಿಲನ್ ವಲಯ 8ರ 19ನೇ ವಲಯ ಸಮ್ಮೇಳನ ಮೂಡುಬಿದ್ರೆಯ ಎಕ್ಸಲೆಂಟ್ ಕಾಲೇಜಿನಲ್ಲಿ ಅದ್ದೂರಿಯಾಗಿ ನಡೆದುದಲ್ಲದೆ, ವ್ಯವಸ್ಥಿತ ಕಾರ್ಯಕ್ರಮವಾಗಿ ಹೆಸರು ಮಾಡಿತು. ಪರಮ ಪೂಜ್ಯ ಭಾರತ ಭೂಷಣ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಚಾರ್ಯ ವರ್ಯ ಮಹಾಸ್ವಾಮೀಜಿ ಮೂಡುಬಿದ್ರೆ ಇವರ ಪಾವನ ಸಾನಿಧ್ಯದಲ್ಲಿ ರಾಜಶ್ರೀ ಪದ್ಮ ವಿಭೂಷಣ ಡಿ ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕಾರ್ಯಧ್ಯಕ್ಷರಾದ ಶ್ರೀ ಧರ್ಮಸ್ಥಳ ಸುರೇಂದ್ರ ಕುಮಾರ್ ರವರು, ವಲಯ ಅಧ್ಯಕ್ಷರಾದ ಶ್ರೀ ಪುಷ್ಪರಾಜ್ ಜೈನ್ ರವರು, ಶ್ರೀಮತಿ ಅನಿತ ಸುರೇಂದ್ರ ಕುಮಾರ್ ರವರು ಹಾಗೂ ಶ್ರೀಯುತ ಯುವರಾಜ್ ಜೈನ್ ರವರಿಗೆ ಮಿಲನ ಶ್ರೀ ಪ್ರಶಸ್ತಿಯನ್ನು ಪ್ರಧಾನ ಮಾಡಲು ಸಚಿವರಾದ ಸುನೀಲ್ ಕುಮಾರ್ ರವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಲು ಆಗಮಿಸಿದ ಎಂ ಎನ್ ರಾಜೇಂದ್ರ ಕುಮಾರ್ ರವರು ಹಾಗೂ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿವಿಧ ರಾಜ್ಯದ ವಿವಿದೇಡೆಗಳಿಂದ ಮಿಲನ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ಪರಮ ಪೂಜ್ಯ ಸ್ವಸ್ತಿಶ್ರೀ ಲಲಿತ ಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಗಳವರ ಸಾನಿಧ್ಯದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀ ನಿರಂಜನ್ ಜೈನ್ ಕುದ್ಯಾಡಿಯವರಿಗೆ ಸನ್ಮಾನ ಹಾಗೂ ಸುವ್ಯವಸ್ಥಿತವಾಗಿ ಜವಬ್ದಾರಿಯನ್ನು ನಿರ್ವಹಿಸಿದ ಶ್ರೀ ಪುಷ್ಪರಾಜ್ ಜೈನ್ ಮತ್ತು ಶ್ರೀ ರಾಜೇಶ್ ಜೈನ್ ರವರಿಗೆ ಸನ್ಮಾನಿಸಲಾಯಿತು. ಹಾಗೂ ಉತ್ತಮ ಮಿಲನ್ ಮತ್ತು ಅಧ್ಯಕ್ಷರುಗಳಿಗೆ ಪ್ರಶಸ್ತಿ ನೀಡಲಾಯಿತು. ಈಗೆ ಇನ್ನೂ ಅನೇಕ ಕಾರ್ಯಕ್ರಮಗಳ ಮೂಲಕ ಕಾರ್ಯಕ್ರಮ ಯಶಸ್ವಿಗೊಂಡಿತು.

ಬಿ ಜೆ ಎಸ್ ಗೋವ ತಂಡದ ವತಿಯಿಂದ ಬೀದಿಯಲ್ಲಿ ನಿರ್ಲಕ್ಷೆಗೆ ಒಳಗಾಗಿದ್ದ ಶ್ರೀ ಆದಿನಾಥ ಸ್ವಾಮಿ ಪ್ರತಿಮೆಯನ್ನು ರಕ್ಷಿಸಿ ಕೊಂಡೊಯ್ಯಲಾಗಿದೆ. ಬನ್ನಿ ಹೇಗೆ ಎಂಬುದನ್ನ ತಿಳಿಯೋಣ.

ಭಗಾವನ್ ಶ್ರೀ ಆದಿನಾಥ ಸ್ವಾಮಿ ತೀರ್ಥಂಕರರ ಪ್ರತಿಮೆಯನ್ನು ರಕ್ಷಿಸಿದ  ಬಿ ಜೆ ಎಸ್ ತಂಡ ಗೋವ. ಗೋವ ರಾಜ್ಯದ ಪ್ರಮುಖ ಬೀದಿಯಲ್ಲಿದ್ದಾ ಭಗವಾನ್ ಶ್ರೀ ಆದಿನಾಥ ಸ್ವಾಮಿ ತೀರ್ಥಂಕರರ ಪ್ರತಿಮೆಯನ್ನು ಬಿ ಜೆ ಎಸ್ ಗೋವ ತಂಡದವರು ಸಕಲ ಗೌರವದಿಂದ ತೀರ್ಥಂಕರರ ಪ್ರತಿಮೆಯನ್ನು ರಕ್ಷಿಸಲಾಯಿತು.

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಅಕ್ಟೋಬರ್ 28 2022 ರಂದು ರಾಜ್ಯದೆಲ್ಲೆಡೆ ಕೋಟಿ ಕಂಠ ಗಾಯನ ಸಂಭ್ರಮಾಚರಣೆ ಸಂಭ್ರಮಿಸಲಾಗಿತ್ತು. ಅದೇ ರೀತಿ ಮೂಡುಬಿದ್ರೆ ಹಾಗೂ ಅರೆತಿಪ್ಪುರಿನಲೂ ಕೂಡ ಈ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದೆ.

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ  28 ಅಕ್ಟೋಬರ್ 2022 ರಂದು ರಾಜ್ಯಾದ್ಯಂತ ಕೋಟಿ ಕಂಠ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಅಂದು ನಾಡಿನಾದ್ಯಂತ ಏಕ ಕಾಲದಲ್ಲಿ ಕನ್ನಡದ ಕವಿಗಳ ಜನಪ್ರಿಯ ಗೀತೆಗಳನ್ನು ಕೋಟಿ ಕಂಠಗಳಲ್ಲಿ ಪ್ರಸ್ತುತ ಪಡಿಸಲಾಗುವುದು. ಇದರ ಪ್ರಯುಕ್ತ ಶ್ರೀ ಕ್ಷೇತ್ರ ಆರತಿಪುರ ದಿಗಂಬರ ಜೈನ ಮಠದಲ್ಲಿ ಕೆ ಹೊನ್ನಲಗೆರೆ ಗ್ರಾಮದ ಆರ್ ಕೆ ಎಜುಕೇಶನಲ್ ಇನ್ಸ್ ಟ್ಯೂಷನ್ ಶಾಲೆಯ ವಿಧ್ಯಾರ್ಥಿಗಳಿಂದ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಪರಮ ಪೂಜ್ಯ ಸ್ವಸ್ತಿ ಶ್ರೀ ಸಿಧ್ದಾಂತ ಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಮಾರ್ಗ ದರ್ಶನದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು ಅದೇ ರೀತಿ ಮೂಡುಬಿದ್ರೆಯ ಸಾವಿರ ಕಂಬ ಬಸದಿಯಲೂ ಕೂಡ ಭಾರತ ಭೂಷಣ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ವರ್ಯ ಮಹಾಸ್ವಾಮೀಜಿಗಳವರ ನೇತೃತ್ವದಲೂ ಕೂಡ ಐಸ್ಕೂಲ್ ವಿಧ್ಯಾರ್ಥಿಗಳಿಂದ ವಿಜೃಂಭಣೆಯಿಂದ ಕೋಟಿ ಕಂಠ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಪ್ರಕಟಣೆ.

ತುಮಕೂರು ಜಿಲ್ಲೆಯ ದೇವರಾಯನ ದುರ್ಗದ ಸಮೀಪದಲ್ಲಿರುವ ಪ್ರಾಚೀನ ಊರು ದುರ್ಗದಹಳ್ಳಿಯಲ್ಲಿ 14ನೇ ಶತಮಾನದ ಪಾಳುಬಿದ್ದ ಜೈನ ಬಸದಿಯ ಸ್ವಚ್ಚತಾ ಕಾರ್ಯಕ್ರಮ ಇದೇ ಭಾನುವಾರ 06-11-2022ರಂದು ಸುಹಾಸ್ತಿ ಯುವ ಜೈನ್ ಮಿಲನ್ ಬೆಂಗಳೂರು ಮತ್ತು ಸಂಘಟನೆಗಳ ಸಹಾಭಾಗಿತ್ವದೊಂದಿಗೆ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜೈನ ಬಾಂಧವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡ ಬೇಕಾಗಿ ಕೇಳಿಕೊಳ್ಳುತ್ತಿದೇವೆ.

ಪಂಡಿತರತ್ನ ಎ ಶಾಂತರಾಜ ಶಾಸ್ತ್ರಿ ಟ್ರಸ್ಟ್ ವತಿಯಿಂದ ನೀಡಲಾದಂತಹ ಪ್ರತಿಭಾ ಪುರಸ್ಕಾರ ಸುದ್ದಿ ವಿವರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

 

ಇಲ್ಲಿಯ ವರೆಗೆ ವಾರದ ಜೈನ ಸುದ್ದಿಗಳನ್ನು ವೀಕ್ಷಿಸಿದ ತಮ್ಮೆಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತ, ಹೀಗೆ ಪ್ರತಿವಾರವು ವೀಕ್ಷಿಸುತ್ತಿರಿ ವಾರದ ಜೈನ ಸುದ್ದಿಗಳು ನಿಮ್ಮ  ಜ್ವಾಲಮಾಲ ಡಾಟ್ ನ್ಯೂಸ್ ನಲ್ಲಿ

ವಂದನೆಗಳೊಂದಿಗೆ ನಿಮ್ಮ ಜ್ವಾಲಮಾಲ ಡಾಟ್ ನ್ಯೂಸ್