ಹೇ ಎ ಲ ವಿ ವಿಮಾನಪುರ

ಎಲ್ಲರಿಗೂ ಜೈ ಜಿನೇಂದ್ರ, ಇಂದು ನಾವು ಈ ಒಂದು ಕ್ಷೇತ್ರವನ್ನು ದರ್ಶನ ಮಾಡುತ್ತಿದ್ದೀರಿ, ಈ ಒಂದು ಕ್ಷೇತ್ರದಲ್ಲಿ ವಿಶೇಷವಾಗಿ ಹೆಚ್ ಎ ಎಲ್ ಜಿನ ಮಂದಿರ ಎಂದು ಕರೆಯಲ್ಪಡುತ್ತದೆ. ವಿಮಾನ ಪುರದ ಹೆಚ್ ಎ ಎಲ್ ನಲ್ಲಿ 1008 ಭಗವಾನ್ ಮಹಾವೀರ ಸ್ವಾಮಿಯ ಜಿನ ಮಂದಿರವಿದ್ದು ಮೂಲ ಸ್ವಾಮಿಯಾದಂತಹ ಮಹಾವೀರ ಸ್ವಾಮಿಗೆ ವಿಶೇಷ ಅಭಿಷೇಕ ಪೂಜೆಗಳು, ಆರಾಧನೆ, ಭಕ್ತಿ, ಜಪ-ತಪಗಳು, ಭಜನೆ ಇತ್ಯಾದಿ ಕಾರ್ಯಕ್ರಮಗಳನ್ನ ಪ್ರತಿ ದಿನ ನಡೆಸಲಾಗುತ್ತದೆ.

ಈ ಮಂದಿರದಲ್ಲಿ ಪ್ರತಿ ದಿನ ಅಭಿಷೇಕಕ್ಕೆ 30 ರಿಂದ 35 ಜನರು ಬಂದು ಭಗವಂತರಿಗೆ ಅಭಿಷೇಕವನ್ನು ಮಾಡಲಾಗುತ್ತದೆ. ಅದೇ ರೀತಿ ಈ ಒಂದು ಮಂದಿರದ ವಿಶೇಷತೆ ಎಂದರೆ ಮಂದಿರದಲ್ಲಿ ಶಿಖರ, ಮಾನಸ್ತಂಭ ಮತ್ತು ಈ ಒಂದು ಮಂದಿರ ಬಹಳ ವಿಶೇಷವಾಗಿ ಅಮೃತ ಶಿಲೆಯಿಂದ ನಿರ್ಮಾಣ ಮಾಡಲಾಗಿದೆ. ಅದೇ ರೀತಿ ಕನ್ನಡಿ ದೇವಸ್ಥಾನ ಎಂದು ಈ ಮಂದಿರವನ್ನು ಕರೆಯಲಾಗುತ್ತದೆ.

ಈ ಮೂಲ ಸ್ವಾಮಿಯ ವೇದಿಯಲ್ಲಿ ಭಗವಾನ್ ಶ್ರೀ ಮಹಾವೀರ ಸ್ವಾಮಿ ರಾರಾಜಿಸುತ್ತಾ ಇರುತ್ತಾರೆ. ಅದೇ ರೀತಿ ದರಣೇಂದ್ರ ಯಕ್ಷ, ಪದ್ಮಾವತಿ ಅಮ್ಮನವರು ಪಂಚ ಕುಲದೇವತೆ, ಕ್ಷೇತ್ರ ಪಾಲ, ನಾಗ ಬಿಂಬ ಈ ಒಂದು ಮಂದಿರದಲ್ಲಿ ವಿಶೇಷವಾಗಿ ಕಾಣಬಹುದು. ಅದೇ ರೀತಿ ಪಕ್ಕದಲ್ಲಿ ಮತ್ತೊಂದು ಬಸದಿಯನ್ನು ನಿರ್ಮಾಣ ಮಾಡಲಾಗಿದೆ. ಅಲ್ಲಿ ಮೂರು ವೇದಿಗಳಿವೆ, ಆ ಮೂರು ವೇದಿಯಲ್ಲಿ ಮೂಲತಃ ಪಾರ್ಶ್ವನಾಥ ಸ್ವಾಮಿ ಮೂಲ ಸ್ವಾಮಿಯಾಗಿದ್ದು ಅದರಂತೆ ಮತ್ತೊಂದು ವೇದಿಯಲ್ಲಿ ಪದ್ಮಪ್ರಭ ಸ್ವಾಮಿ, ಮತ್ತೊಂದು ವೇದಿಯಲ್ಲಿ ಚಂದ್ರನಾಥ ಸ್ವಾಮಿಯ ದರ್ಶನ ಮಾಡಬಹುದು.

ಅದೇ ರೀತಿ ಕೆಳ ಭಾಗದಲ್ಲಿ ಭಗವಂತರ ದರ್ಶನ ಮಾಡಿದ ನಂತರ ಮೇಲ್ಭಾಗದಲ್ಲಿ ತ್ರಿಕಾಲ ಚೌಹೀಸಿ ದರ್ಶನ ಮಾಡಬಹುದು, ಭೂತಕಾಲ, ಭವಿಷ್ಯತ್ ಕಾಲ, ವರ್ತಮಾನ ಕಾಲ ಈ ಮೂರು ಕಾಲದ  ಚೌಹೀಸಿ ತೀರ್ಥಂಕರರ ದರ್ಶನವನ್ನು ಮಾಡ ಬಹುದು. ಅದರಂತೆ ಮೂರು ಕಾಲದ  ಚೌಹೀಸಿ ತೀರ್ಥಂಕರರ ದರ್ಶನವನ್ನು ಮಾಡಿದ ನಂತರ ನಾವು 9 ಜನ ತೀರ್ಥಂಕರರ ದರ್ಶನವನ್ನು ಮಾಡಬಹುದು. ಈ 9 ಜನ ತೀರ್ಥಂಕರರ ದರ್ಶನವನ್ನು ಮಾಡಿ ಅದೇ ರೀತಿ ಪ್ರತಿ ಅಮವಾಸ್ಯೆ ದಿನ, ಪೌರ್ಣಮಿ ದಿನ ಮತ್ತು ವಿಶೇಷ ಪರ್ವಗಳಲ್ಲಿ 9 ತೀರ್ಥಂಕರರ ಮುಂಭಾಗದಲ್ಲಿ ನವಗ್ರಹ ಆರಾಧನೆ, ಭಕ್ತಾಂಬರ ಆರಾಧನೆ, ಕಲಿಕುಂಡಲ ಆರಾಧನೆ, ಕಾಳ ಸರ್ಪದೋಷ ನಿವಾರಣೆಗೆ ಪೂಜೆಗಳು ಚೆನ್ನಾಗಿ ನಡೆಯುತ್ತದೆ. ಈ ಒಂದು ಮಂದಿರದಲ್ಲಿ ಪರಮ ಪೂಜ್ಯ ಭುವನ ಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಆಶೀರ್ವಾದ ಅವರ ಮಾರ್ಗದರ್ಶನದೊಂದಿಗೆ ಈ ಒಂದು ಮಂದಿರ ಬಹಳ ಸುಂದರವಾಗಿ ನಿರ್ಮಣವಾಗಿದೆ.

ಅದೇ ರೀತಿ ಎಲ್ಲಾ ಪೂಜ್ಯ ಭಟ್ಟಾರಕ ಸ್ವಾಮೀಜಿಯವರ ಆಶೀರ್ವಾದ ಮಾರ್ಗದರ್ಶನದಲ್ಲಿ ಈ ಒಂದು ಮಂದಿರದಲ್ಲಿ ವಿಶೇಷ ಪೂಜೆ, ಪೂಜಾದಿಕಾರ್ಯಗಳು ನಡೆದುಕೊಂಡು ಬರುತ್ತಾಯಿದೆ. ನಾವು ಕೇಳಿಕೊಳ್ಳುತ್ತಾ ಇದ್ದೇವೆ ಎಂದರೆ ತಾವುಗಳು ಸಹ ಒಂದು ಸಾರಿ ಎಲ್ಲರೂ ಬಂದು ಈ ಒಂದು ಜಿನ ಮಂದಿರವನ್ನು ದರ್ಶನ ಮಾಡಿ ಪುಣ್ಯ ಭಾಗಿಗಳಾಗಬೇಕಾಗಿ ಕೇಳಿಕೊಳ್ಳುತ್ತೇವೆ. ಎಲ್ಲರಿಗೂ ಜೈ ಜಿನೇಂದ್ರ.

 

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

          ಜ್ವಾಲಮಾಲ ಡಾಟ್ ನ್ಯೂಸ್