ಜೈ ಜೀನೇಂದ್ರ ವೀಕ್ಷಕರೆ ದಕ್ಷಿಣಕನ್ನಡ ಜಿಲ್ಲೆಯ ಸಮುದ್ರ ಕರಾವಳಿಯಲ್ಲಿ ಪಡುಬಿದ್ರೆಯನ್ನು ಅರಿಯದವರಿಲ್ಲ ಈ ಊರು ಮೂಡುಬಿದ್ರೆಯಿಂದ ಪಡುವ ದಿಕ್ಕಿಗೆ ಇರುವುದರಿಂದ ಇದನ್ನು ಪಡುಬಿದ್ರೆ ಎಂದು ಸಂಸ್ಕೃತದಲ್ಲಿ ಇದನ್ನು ಪಡುವೇಣುಪುರ ಎಂದು ಪ್ರಸಿಧ್ಧವಾದ ಈ ಸ್ಥಳ ಪಡುವಣ ಜಲಸಂಪತ್ತು ಮೂಡಣನೆಲಸಂಪತ್ತುಗಳಿಂದ ಕೂಡಿದ ಬಯಲು ಮಜಲು ಗುಡ್ಡ ಬೆಟ್ಟ ಕಾಡುಮೇಡುಗಳಿಂದ ಕೂಡಿ ಪ್ರಕೃತಿದೇವಿಯ ಕಿರಿದೊಂದು ಪ್ರತೀಮರೂಪದಂತೆ ಹಸಿರು ಗಿಡಗೊಂಚಲಿಂದ ಶೋಭಿಸುತ್ತಿದೆ ಇಲ್ಲಿನ ಸುಂದರ ಬಸಿದಿಯು 1494ರಲ್ಲಿ ಜೀರ್ಣೋಧ್ಧಾರ ಗೊಂಡಿದೆ. ಎಂದು ಇಲ್ಲಿನ ತಾಮ್ರಶಾಸನದಲ್ಲಿ ಲಿಖಿತಗೊಂಡಿದೆ.ಗೇರುಸೊಪ್ಪಿನ ಮಹಾಮಂಡಲೇಶ್ವರರಾದ ಚನ್ನಬೈರಾದೇವಿ ಅಮ್ಮನವರ ಸಹಾಯದಿಂದ ಪಡುವಲದೇವಿ ಅಮ್ಮನವರು ತನ್ನ ತಮ್ಮನಿಗಾಗಿ ನಿರ್ಮಿಸಿದ ಬಸದಿ ಎಂದು ಬರೆಯಲಾಗಿದೆ. ಪಡುಬಿದ್ರೆ ಅರಸರಿಗೆ ಸೇರಿದ ಈ ಜಿನ ಮಂದಿರಕ್ಕೆ ಹಿಂದಿನ ಧರ್ಮಾಧಿಕಾರಿಗಳಾದ ಕೀರ್ತಿ ಶೇಷರಾದ ಶ್ರೀ ರತ್ನವರ್ಮ ಹೆಗಡೆಯವರು ಹಾಗು ಧರ್ಮಪತ್ನಿ ಮಾತೃಶ್ರೀ ರತ್ನಮ್ಮನವರು ಹಾಗು ತಮ್ಮ ಬಂಧುಗಳೊಂದಿಗೆ ಬೀಡಿಗೆ ಭೇಟಿನೀಡಿದಾಗ ದರ್ಶನಕ್ಕೆ ಬರುತ್ತಿದ್ದರೆಂದು ರತ್ನಮ್ಮನವರ ಮಹದಾಸೆಯಂತೆ ಮಾತೃಭಕ್ತರಾದ ಕುಲದೀಪಕ ಸುಪುತ್ರರಾದ ಶ್ರೀ ಡಿ ವಿ ವೀರೇಂದ್ರಹೆಗಡೆಯವರಿಂದ 1975ರಲ್ಲಿ ಮರುಜೀರ್ಣೋಧ್ದಾರಗೊಂಡಿದೆ ಎಂದು ಇಲ್ಲಿನ ಭದ್ರತೆಗಾಗಿ ಉಪಯೊಗಿಸಲಾದ ಭೀಗವು ಕೂಡ ಪ್ರಾಚೀನತೆಯನ್ನು ಸಾರುತ್ತದೆ.ಮಣ್ಣಿನ ಗೊಡೆಗಳಸೊಗಡಿನಿಂದ ಕಂಗೊಳಿಸುತ್ತಿದ್ದ ಈ ಬಸದಿ ಮೂಲ ನಾಯಕರು ಭಗವಾನ್ ಶ್ರೀ 1008ಸೂರತನಾಥ ಮುನಿ ತೀರ್ಥಂಕರರಾಗಿದ್ದು ಇಲ್ಲಿನಮಾತೆ ಪದ್ಮಾವತಿ ಅಮ್ಮನವರ ಮೂರ್ತಿಯು ನಿಂತ ಭಂಗಿಯಲ್ಲಿ ಇದೆ ಒಂದು ಕೈಯಲ್ಲಿ ಅಂಕುಶ ಇನ್ನೊಂದುಕೈಯಲ್ಲಿ ಪಾಶ ಒಂದು ಕೈಯಲ್ಲಿ ಫಲ ಮತ್ತೋಂದು ಕೈಯಲ್ಲಿ ವರದ ಹಸ್ತವಾಗಿ ಕಂಚಿನ ಪ್ರಭಾವಳಿ ಸಹಿತವಾಗಿದ್ದು ವಿಷೇಶವಾದ ವೀರಣಮೂರ್ತಿಯಾಗಿದೆ.ಇಲ್ಲಿನ ಮುಕುಟವಾಹನಕೂಡ ವಿರುಧ್ಧ ದಿಕ್ಕಿಗೆ ಮುಖಮಾಡಿನಿಂತು ಈ ಬಸದಿಯ ಒಂದು ವಿಷೇಶ ಈ ಮೂರ್ತಿಯ ಒಂದು ವಿಷೇಶತೆ ಇದೆ.ಕೆಲವು ವರ್ಷಗಳ ಮೊದಲು ಪಡುಬಿದ್ರೆ ಬೀಡಿನ ಬಲ್ಲಾಳರು ಗೇಣಿವಸೂಲಿಗಾಗಿ ನಿಡುಗಲ್ಲಿಗ ಹೊಗಿದ್ದರಂತೆ ಅವರು ತಮ್ಮ ಕಾರ್ಯಪೂರೈಸಿಕೊಂಡು ಹೊಳೆದಾಟಿಬರುವಾಗ ಏನೋ ಕರೆದ ಕೂಗು ಕೇಳಿಸಿದಂತೆ ಕರೆದವರು ಯಾರು ತಿರುಗಿನೊಡಿದಾಗ ಅಲ್ಲಿಯೇ ಮರಳರಾಶಿಯಲ್ಲಿ ಈ ಮೂರ್ತಿಯು ಕಾಣಸುತ್ತಿತಂತೆ ಅಲ್ಲಿಂದ ತಂದು ಈ ಬಸದಿಯಲ್ಲಿ ಪೂಜೆಗಾಗಿ ಈ ಮೂರ್ತಿಯನ್ನು ಪ್ರತಿಷ್ಠಾಪಿಸಿದರಂತೆ ಹೀಗೆಂದು ಕಥೆ ಇದೆ.ಈ ಸಂಧರ್ಭದಲ್ಲಿ ಶ್ರೀ ಚಂದ್ರನಾಥಸ್ವಾಮಿಯನ್ನು ಮೇಲಿನ ನೆಲೆಯಲ್ಲಿ ಪ್ರತಿಷ್ಠಾಪಿಸಿ ಈ ಜಿನ ಬಸದಿಯ ವಿನಿಯೊಗಕ್ಕೆಬೇಕಾದ ಖರ್ಚುಗಳಿಗೆ ಅಕ್ಕಿ ಮುಡಿ 75ರ ಭೂಮಿಯನ್ನು ಉಂಬಳ ಬಿಟ್ಟಿದ್ದರು ಎಂಬುದು ಪ್ರತೀತಿ ಇದು ಬಹಳ ಪುರಾತನ ಬಸದಿಯಾದ ಕಾರಣ 1972ರಲ್ಲಿ ನಿಧಿ ಕಲಶ ಸ್ಥಾಪನೆಮಾಡಿ 1975 ಪೂರ್ವಿಕರು ಜೀರ್ಣೋಧ್ದಾರ ಮಾಡಿರುತ್ತಾರೆ. ಇದು ಮಣ್ಣಿನ ಬಸದಿಯಾಗಿರುತ್ತದೆ.ಈಗ ಬಹಳ ಪುರಾತನಕಾಲದ್ದು ಆದ ಕಾರಣ ಕಳ್ಳರು ಹೋಕ್ಕದ ರೀತಿ ಮರಗಳಿಂದ ವಜ್ರ ಬಸಿದಿ ಕಟ್ಟಿದ್ದೇವೆ ಇದರ ಕಟ್ಟಿಸುವಾಗ ಧರ್ಮಸ್ಥಳ ಕೀರ್ತಿ ಶೇಷರಾದ ಶ್ರೀ ರತ್ನವರ್ಮ ಹೆಗಡೆಯವರು ಧರ್ಮಪತ್ನಿ ರತ್ನಮ್ಮಹೆಗಡೆಯವರ ಸಹಕಾರ ಮತ್ತು ಈಗಿನ ವೀರೇಂದ್ರಹೆಗಡೆಯವರ ಮುಂದಾಳತ್ವದಲ್ಲಿ ನಾವೆಲ್ಲರೂ ಸೇರಿ ಜಿನ ಮಂದಿರವನ್ನು ಕಟ್ಟಿಸಿ 1975ರಲ್ಲಿ ಜೀರ್ಣೋಧ್ಧಾರ ಮಾಡಿಸಿಕೊಂಡಿರುತ್ತೇವೆ.ಇದರ ನಿತ್ಯಪೂಜೆಯನ್ನು ಇಲ್ಲಿನ ಪುರೋಹಿತರು ಸೂರತ್ ಪ್ರಸಾದ್ ನೆಡೆಸುತ್ತಿದ್ದಾರೆ.ಇದಕ್ಕಿಂತ ಮೊದಲು ಅವರ ತಂದೆ ಅನಂತ ರಾಜೇಂದ್ರರವರು ಮಾಡುತ್ತಿದ್ದರು ಇಡೀ ಬಸದಿಯ ಅರ್ಚಕರು ಅವರಾದ ಕಾರಣ ಇದನ್ನು ಯಾವ ರೀತಿ ವಾಸ್ತು ರೀತಿಯಲ್ಲಿ ಮಾಡಬೇಕು ಪಡುಬಿದ್ರೆಯ ಶಾಸ್ತ್ರ ತಿಳಿದವರು ದೇವದಾಸ್ ಶರ್ಮ ಅವರ ಮುಖಾಂತರ ತಿಳಿದುಕೊಂಡು ಅದನ್ನು ಒಳ್ಳೆಯ ರೀತಿಯಲ್ಲಿ ಮಾಡಿಸಿದ್ದಾರೆ, ಇದು ಒಳ್ಳೆಯ ರೀತಿಯಲ್ಲಿ ನೆಡೆಯುತ್ತಾ ಉಂಟು ಈ ಬಸದಿಗೆ ಮೊದಲು ತುಂಬಾ ಜಮೀನು ಇತ್ತು ಅದು ಭೂ ಮಸೀದಿಯಿಂದ ಕಳೆದುಹೊಗಿದೆ ಆದರೂ ಪಡುಬಿದ್ರೆ ಅರಮನೆಯವರು ಇದನ್ನು ನೆಡೆಸಿಕೊಂಡು ಬಂದರು ಇದನ್ನು ಒಳ್ಳೆಯರೀತಿಯಲ್ಲಿ ನೆಡೆಸುತ್ತಾ ಬಂದಿದ್ದಾರೆ ಎಂದು ಹೇಳುವುದಕ್ಕೆ ಸಂತೋಷಪಡುತ್ತೇನೆ.ನಾನು ಪಡುಬಿದ್ರೆ ಅರಸರಲ್ಲಿ 21ನೇ ಅರಸನಾಗಿರುತ್ತೇನೆ.ಮೊದಲು ಪದ್ಮಲಾದೇವಿ ಅವರು ಈ ಜೈನ ಬಸೀದಿ ಕಟ್ಟಿಸಿದರು.ಎಂದು ಶಿಲಾ ಶಾಸನದಲ್ಲಿ ತಿಳಿದು ಬರುತ್ತದೆ.ಬೇರೆ ಸಮಾಜದವರು ಬಂದು ಪದ್ಮಷ್ಟಾಮಿ ಪೂಜೆ ಮಾಡಿಸುತ್ತಾರೆ ಶನಿದೋಷ ಇದ್ದವರು ಮುನಿಷುವೃತಸ್ವಾಮಿ 48 ದಿವಸ ಎಣ್ಣೆ ಹಾಕಿ ಪುರೋಹಿತರಿಗೆ ಪ್ರತಿ ದಿನ ಪಂಡಿತರು ಪೂಜೆಮಾಡುತ್ತಾರೆ.ಅವರಿಗೆ ಪ್ರತಿ ದಿವಸ ಪಂಚಾಮೃತ ಅಭಿಷೇಕ ಮಾಡಿಸಿ ಅವರಿಗೆ ಪ್ರಸಾದವನ್ನು ನಮ್ಮ ಪಂಡಿತರು ಕಳುಹಿಸುತ್ತಾರೆ. ಅದು ತುಂಬಾ ನೆಡೆಯುತ್ತಾ ಇದೆ ಅದು ಎಷ್ಟು ಅಂತ ಹೇಳಲಿಕ್ಕಾಗಲ್ಲಾ ಡಬ್ಬಗಟ್ಟಲೆ ಎಣ್ಣೆ ಬರುತ್ತದೆ. 10 ಜನ ಕೊಟ್ಟರು ಅವರ ನಕ್ಷತ್ರಕ್ಕೆ ಅನುಗುನವಾಗಿ 10 ಜನರ ಹೆಸರೇಳಿ ಕಾಲುದೀಪ ಇಡುತ್ತೇವೆ ಇದು ಶನಿದೋಷಕ್ಕೆ ಪ್ರಸಿದ್ದಿಯಾಗಿದೆ ಇದು ಮಂಗಳೂರಿನಿಂದ 27 ಕೀಲೋ ಮೀಟರ್ ದೂರದಲ್ಲಿದೆ.ಉಡುಪಿಯಿಂದ 22 ಕೀಲೋ ಮೀಟರ್ ದೂರದಲ್ಲಿದೆ ಇದು ಮೂಡುಬಿದ್ರೆಯಿಂದ 30 ಕೀಲೋ ಮೀಟರ್ ದೂರದಲ್ಲಿದೆ.ಇದು ಪಡುಬಿದ್ರೆ ಅಂದರೆ ಪಡುವೇಣುಪುರ ಎಂದು ಹೆಸರು ಯಾಕೆಂದರೆ ಇಲ್ಲಿ ಬಿದಿರು ಜಾಸ್ತಿ ಇದ್ದ ಕಾರಣ ವೇಣು ಎಂದರೆ ಬಿದಿರು ಎಂದರ್ಥ ಪಡುವೇಣುಪುರ ಸಮುದ್ರ ತೀರದಲ್ಲಿರುವ ಈ ಬಸದಿ ಒಮ್ಮೆಯದರೂ ದರ್ಶನ ಭಾಗ್ಯಪಡೆದು ಧನ್ಯರಾಗಿ ಎಂದು ಹೇಳುತ್ತೇವೆ.
ಕ್ಷೇತ್ರ ಪರಿಚಯ- ೪೦














