ಸಡಾಕಾರ ಹೆಜ್ಜೆ

ಈ ಸಂಸ್ಥೆಯಲ್ಲಿ ಇಲ್ಲಿನ ವಾತಾವರಣದಲ್ಲಿ ಕಲಿತರೆ  ನಮ್ಮ ಮಕ್ಕಳು ಒಳ್ಳೆಯ ವಿದ್ಯಾಭ್ಯಾಸದೊಂದಿಗೆ ಉತೃಷ್ಟ ಜೀವನ ಶೈಲಿ ಅವರದಾಗುತ್ತದೆ. ಅವರ ಭವಿಷ್ಯ ಉತ್ತಮವಾಗಿ ರೂಪುಗೊಳ್ಳುತ್ತದೆ. ಎಂಬ ನಂಬಿಕೆಯನ್ನು ಹುಟ್ಟುಹಾಕಿದ  ವಿದ್ಯಾ ಸಂಸ್ಥೆ. ಇಂತಹ ವಿದ್ಯಾ ಸಂಸ್ಥೆಯನ್ನು ಬೃಹದಾಕಾರವಾಗಿ ರೂಪಿಸಿದ ಸಂಸ್ಥೆಯ ರೂವಾರಿ  ಶ್ರೀಯುತ ಯುವರಾಜ್ ಜೈನ್. ಧರ್ಮಸ್ಥಳದ ಗುರುಕುಲ ಮಾದರಿಯ ಕಲಿಕೆಯಿಂದ  ಸಂಸ್ಕಾರಭರಿತರಾಗಿ  ಈ ಪರಂಪರೆಯ ಸತ್ವ ಸ್ವತ್ತುಗಳನ್ನು ಮೈಗೂಡಿಸಿಕೊಂಡ ಸಾಧನೆಯ ಸೀಮೆಯನ್ನು ವಿಸ್ತರಿಸಿದ  ಹೊಸ ಸಾಧ್ಯತೆಗಳನ್ನು ಶೋಧಿಸಿದ   ಅಪೂರ್ವ ಸಾಧಕ. ಮಗುವಿನ ಮುಗ್ಧತೆ ಸಾಧಿಸುವ ಛಲ ಬದ್ದತೆ ವೀರಯೋಧನಂತೆ ಕಿಚ್ಚು ಸಾಹಸಪ್ರಿಯತೆ  ಜ್ನಾನಿಯಂತೆ ಅಂತರ್ಮುಖಿ  ಸನ್ನಡತೆ ಇವೆಲ್ಲವನ್ನೂ ಹೊಂದಿರುವ ಇನ್ನು ಇವರ ಮಾತಿನ  ಪರಿಯು ಇವರ ವ್ಯಕ್ತಿತ್ವವನ್ನು  ಎತ್ತಿ ಹಿಡಿದ ಕೈಕನ್ನಡಿಯಾಗಿದೆ.

ದಿವಂಗತ ಭೋಜರಾಜ್ ಹಾಗೂ ಪದ್ವಾವತಿ ದಂಪತಿಗಳಿಗೆ  ಪ್ರಿಯ ಸುಪುತ್ರನಾಗಿ  1974 ರ ಜೂನ್ 1 ರಂದು ಜನಿಸಿದರು. 1995 ರಲ್ಲಿ ಎಸ್ ಡಿ ಎಂ ಕಾಲೇಜಿನಲ್ಲಿ ಬಿಎಸ್ ಸಿ ಮುಗಿಸಿ 1997ರಲ್ಲಿ  ಮಂಗಳೂರಿನಲ್ಲಿ ಎಂಎಸ್ ಸಿ ಪದವಿಯನ್ನು ಪಡೆದರು. ದೆಹಲಿ ವಿಶ್ವವಿ ದ್ಯಾನಿಲಯದಿಂದ  ಎಂ.ಸಿ.ಎ ನಂತರ ತಮಿಳುನಾಡಿನ ಹಲಗಪ್ಪ ವಿಶ್ವವಿದ್ಯಾನಿಲಯದಲ್ಲಿ  ಉನ್ನತ ಶಿಕ್ಷಣ ವನ್ನು ಮುಗಿಸಿದರು.