ಸುಡಿ ಬಸದಿ

ಈ ಶಿರ್ಲಾಲು ಶೂಡಿ ಬಸದಿಯು 400 ಎಂದು ಮುಖ್ಯವಾದ ಹೆಸರು , ಚಕ್ರಪಾಡಿ, ಅಂಡಾರ್ಲು, ಶಿರ್ಲಾಲು ಶೂಡಿ ಎಂದು. ಶೂಡಿ ಗ್ರಾಮವೇ  ಒಂದು ಪ್ರತ್ಯೇಕ ಬಸದಿ  ಪ್ರತ್ಯೇಕ ದೇವಾಲಯ  ಪ್ರತ್ಯೇಕ ದೈವಾಲಯ ಎಂದು  ಮಾಡಿ ಎಲ್ಲಾ ವ್ಯವಸ್ಥೆಗಳಿಂದ ಕೂಡಿದ್ದ ಪ್ರದೇಶ ಇದು. ಬಹಳ ಹಿಂದೆ ಪೂರ್ವಜರು ಸೂಡಿ ಮನೆತನದವರು  ಈ ಭೂ ಪ್ರದೇಶವನ್ನು ಸಂಪೂರ್ಣವಾಗಿ ಹಿಡಿತದಲ್ಲಿಟ್ಟುಕೊಂಡಿದ್ದರು. ಅವರ ಜಮೀನ್ದಾರಿ ಪದ್ದತಿಯಿದ್ದಂತಹ ಸಂದರ್ಭದಲ್ಲಿ ನಿರ್ಮಾಣವಾದಂತಹ ಬಸದಿ ಇದು. ಕಾಲಾಂತರದಲ್ಲಿ ಭೂಸುಧಾರಣಾ ಕಾಯ್ದೆಯಲ್ಲ ಬಂದು ಪೂಜೆ ಗಳು ದಾನಗಳು ಪ್ರತಿಯೊಂದು ಕಾರ್ಯಗಳು ನಿಂತುಹೋದವು. ಸುಮಾರು ವರ್ಷಗಳ ಹಿಂದೆ ಬಸದಿ ಸಂಪೂರ್ಣವಾಗಿ ಅನುಪಸ್ಥಿತಿಗೆ ಬಂದು  ಈ ಬಸದಿ  ಯಿಂದ ಇನ್ನೊಂದು ಬಸದಿಗೆ ಬಾಹುಬಲಿ ಮೂರ್ತಿಯನ್ನು ಇಟ್ಟು ಪೂಜೆ ಮಾಡಲಾಗುತ್ತಿತ್ತು.ಈಗ ಈ ಬಸದಿಯು  ಸಂಪೂರ್ಣ ವಾಗಿ ಹಾಳಾಗಿದ್ದು ಅದರ ಮೇಲೆ ಗಿಡಮರಗಳು ಬಿದ್ದು ಸಂಪೂರ್ಣವಾಗಿ ಶೀಥಿಲಾವಸ್ಥೆ ಬಂದಿತ್ತು. ಕಾಲಾಂತರದಲ್ಲಿ ಈಗ ಒಂದು ಅಭಿವೃದ್ದಿ ಸಮಿತಿಯವರ ಕಡೆಯಿಂದ ಇಲ್ಲಿನ ನಮ್ಮ ಜೈನ ಕಾರ್ಯಕರ್ತರುಗಳು ಸೇರಿ ಹಾಗೂ ಪೂಜ್ಯಶ್ರೀ ಗಳವರ ಮಾರ್ಗದರ್ಶನ ಹಾಗೂ ಪೂಜ್ಯ ವೀರೇಂದ್ರಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ  ಹಾಗೂ ರಾಜೇಂದ್ರ ಕುಮಾರ್ ರವರ ಸಹಯೋಗದೊಂದಿಗೆ ಜೀರ್ಣೋದ್ದಾರ ಮಾಡುವ ಕೆಲಸವನ್ನು ಸಂಕಲ್ಪಮಾಡಿಕೊಂಡು ಬಸದಿಯ ಕಾರ್ಯಗಳನ್ನು ಮಾಡುತ್ತಿದ್ದೇವೆ.  ಸುಮಾರು 80 ಲಕ್ಷ ರೂಗಳ ಅಂದಾಜಿನಲ್ಲಿ  ನಿರ್ಮಾಣ ಕೆಲಸಕಾರ್ಯಗಳು ನಡೆಯುತ್ತಿವೆ. ಇದುವರೆಗೂ  ಯಾವುದೇ ಸಾರ್ವಜನಿಕರಿಂದ ನಾವು ಹಣವನ್ನು ಸಂಗ್ರಹಣೆ ಮಾಡಿಲ್ಲ . ಹಂತ ಹಂತವಾಗಿ ಬಸದಿಯ ಕಾರ್ಯವು ನಡೆಯುತ್ತಿದೆ. ಮಾನಸ್ಥಂಭ, ಪುರೋಹಿತರ  ವಾಸದ ಕೊಠಡಿ , ಸಮುದಾಯ ಭವನ ದ ಕಾರ್ಯಗಳೂ ಕೂಡ ಪ್ರಗತಿ ಹಂತದಲ್ಲಿದೆ. ನಮ್ಮಲ್ಲಾದ ಸಾಧ್ಯವಾದಷ್ಟು ಮಟ್ಟಿಗೆ ಪ್ರಗತಿ ಕಾರ್ಯಗಳನ್ನು  ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿಇನ್ನೂ ಹಲವಾರು ಕಾರ್ಯಗಳು ಸಹ ನಡೆಸಲು ನಾವು ಇಚ್ಛಿಸಿದ್ದೇವೆ. ಯಾರಾದರೂ ದಾನವನ್ನು ಕೊಡಲು ಇಚ್ಛಿಸುವವರು ಕೊಡಬಹುದು.

ಇನ್ನೂ ಮುಂದಿನ ದಿನಗಳಲ್ಲಿ ಇಲ್ಲೇ ಪಕ್ಕದಲ್ಲಿ ಕೆಲವು ಸೈಟುಗಳನ್ನು ಮಾಡಿ ನಮ್ಮ ಜನಾಂಗದವರು ಇರಲು ವಿಶ್ರಾಂತಿ ಜೀವನ ನಡೆಸಲು ಇಚ್ಛಿಸುವವರಿಗೆ ಅದರ  ಉಪಯೋಗವನ್ನು ಕೊಡಿಸುವ ಯೋಚನೆಯನ್ನು ಮಾಡಿದ್ದೇವೆ. ಅದಕ್ಕೆಲ್ಲಾ ಎಲ್ಲರ ಸಂಪೂರ್ಣವಾದ ಸಹಕಾರ ಬೇಕೆಂದು ಕೇಳಿಕೊಳ್ಳುತ್ತೇವೆ.