ಇಂದು ಪರಿಚಯಿಸುತ್ತಿರುವ ಪುಸ್ತಕಗಳು ಜಿನ ಸೇನನ “ಹರಿವಂಶ ಪುರಾಣ” ಒಂದು ಅಧ್ಯಾಯನ ಮತ್ತು ಉಪಾಧ್ಯೆ ಸ್ಮೃತಿ ಸಂಚಯ.
ಡಾ.ಪದ್ಮಿನಿ ನಾಗರಾಜು.
ಲೇಖಕಿ, ಪ್ರಾದ್ಯಾಪಕಿ, ಸದಸ್ಯರು, ಕನ್ನಡ ಸಲಹಾ ಸಮಿತಿ, ಕೇಂದ್ರ ಸಾಹಿತ್ಯ ಆಕಾಡೆಮಿ, ನವದೆಹಲಿ.
ಆತ್ಮಿಯರೇ ನಮಸ್ಕಾರ, ಮತ್ತೊಂದು ಸರಣಿ ಕಾರ್ಯಕ್ರಮಕ್ಕೆ ಆತ್ಮಿಯವಾದಂತಹ ಸ್ವಾಗತ. ಜ್ವಾಲಮಾಲ ಡಾಟ್ ನ್ಯೂಸ್ ವತಿಯಿಂದ ಎರಡು ಕೃತಿಗಳನ್ನು ಜ್ಞಾನ ದೀಪಿಕೆಗಳು ಅನ್ನುವಂತಹ ಸರಣಿ ಕಾರ್ಯಕ್ರಮದ ಮೂಲಕ ಪರಿಚಯ ಮಾಡಿಕೊಡುತ್ತಿದೇವೆ. ಇಂದು ಪರಿಚಯ ಮಾಡಿಕೊಡುತ್ತಿರುವ ಎರಡು ಕೃತಿಗಳಲ್ಲಿ ಒಂದು ಆ ನೇ ಉಪಾಧ್ಯಾಯರು ಇಡುವಂತಹ ಒಂದು ಉಪಾಧ್ಯೆ ಸ್ಮೃತಿ ಸಂಚಯ ಎನ್ನುವಂತಹ ಕೃತಿಯನ್ನು ಪರಿಚಯಮಾಡಿಕೊಡುತ್ತಾ ಇದ್ದೀನಿ, ಇನ್ನೊಂದು ಮಹತ್ವದ ಕೃತಿ ಜಿನ ಸೇನಾಚಾರ್ಯರು ಬರೆದಿರುವಂತಹ ಹರಿವಂಶ ಪುರಾಣ ಎನ್ನುವಂತಹ ಅಧ್ಯಾಯನ ಇದೊಂದು ಸಂಶೋಧನ ಪ್ರಬಂಧವನ್ನು ಮೈಸೂರು ವಿಶ್ವವಿಧ್ಯಾಲಯಕ್ಕೆ ಸಲಿಸಿದಂತಹ ಮಹತ್ವದ ವಿಮರ್ಶಕಿ ಡಾ|| ಬಿ ಎನ್ ಸುಮಿತ್ರಾ ಬಾಯಿಯವರ ಒಂದು ಸಂಶೋಧನ ಪ್ರಬಂಧವನ್ನು ನಾವು ಇಂದು ಪರಿಚಯ ಮಾಡಿಕೊಡುತ್ತಿದ್ದೀವಿ.
ಆ ನೇ ಉಪಾಧ್ಯಾಯರು ಕನ್ನಡ ಸಾಹಿತ್ಯ, ಪ್ರಾಕೃತ ಸಾಹಿತ್ಯ, ಸಂಸ್ಕೃತ ಸಾಹಿತ್ಯ, ಜೈನ ಸಾಹಿತ್ಯವನ್ನು ಓದಿ ಅದ್ಯಾಯನ ಮಾಡಿದಂತಹ ಮತ್ತು ಜೈನ ಸಾಹಿತ್ಯಕ್ಕೆ ಮಹತ್ವದ ಕೊಡುಗೆಯನ್ನು ಕೊಟ್ಟಿದಂತವರು ಆ ನೇ ಉಪಾಧ್ಯಾಯರು. 20ನೇ ಶತಮಾನದ ಅತ್ಯಂತ ಶ್ರೇಷ್ಠ ವಿದ್ವಾಂಸರಲ್ಲಿ ಡಾ|| ಆದಿನಾಥ ನೇಮಿನಾಥ ಉಪಾಧ್ಯೆ ಅವರು ಚಿರಸ್ಮರಣಿಯರಾಗಿದ್ದಾರೆ. ಅವರನ್ನು ಬಲ್ಲವರು ಅವರನ್ನು ಕೊಂಡಾಡಿದ್ದಾರೆ, ವಿದ್ವತ್ತಿನ ಜೊತೆಗೆ ಅವರಲ್ಲಿ ವಿನಯವು ಕೂಡ ಇತ್ತು. ಸಂಸ್ಕೃತ, ಪ್ರಾಕೃತ, ಅರ್ಧಮಾಗದಿ, ಕನ್ನಡ, ಹಿಂದಿ, ಮರಾಠಿ ಮೊದಲಾದ ಭಾಷೆಗಳಲ್ಲಿ ಪರಿಣಿತಿಯನ್ನು ಕೂಡ ಹೊಂದಿದಂತವರು. ಡಾ|| ಕುವೆಂಪು ಅವರು ಆ ನೇ ಉಪಾಧ್ಯೆ ಯರ ಬಗ್ಗೆ ಅವರು ವಿದ್ವತ್ತಿನಲ್ಲಿ ಆನೆಯಾದರು ವಿನಯದಲ್ಲಿ ಅಣು ಹಾಗಾಗಿ ನಾನು ಅವರನ್ನು ತುಂಬ ಗೌರವಿಸುತ್ತೇನೆ ಎಂದು ಹೇಳಿದ್ದಾರೆ. ಅದೇ ರೀತಿ ಡಿ ಎಲ್ ನರಸಿಂಹಚಾರ್ಯರು, ಸಂಸ್ಕೃತ, ಪ್ರಾಕೃತ, ಅರ್ಧಮಾಗದಿ, ಭಾಷಾ ಸಾಹಿತ್ಯಗಳಲ್ಲಿ ಮೂರ್ಧನ್ಯ ವಿದ್ವಾಂಸರಾಗಿರುವಂತಹ ಇವರು ಭರತ ಖಂಡದಲ್ಲಿ ಕೀರ್ತಿಯನ್ನು ಸ್ಥಾಪಿಸಿದ್ದಾರೆ, ಇವರು ಜೈನ ಸಾಹಿತ್ಯಕ್ಕೆ ಸೇವೆ ಸಲ್ಲಿಸಿರುವ ಪ್ರಾಚ್ಯ ವಿದ್ವಾಂಸರ ವೃಂದ್ದದಲ್ಲಿ ಅತಿಶಯ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದು ಹೇಳಿದ್ದಾರೆ.
ಈ ಸ್ಪರ್ತಿಸಂಚಯವನ್ನು ಕೊಟ್ಟಿರುವಂತಹದ್ದು ಹಾಗೂ ಬೇರೆ ಬೇರೆ ವಿದ್ವತ್ತ್ ಗೊಷ್ಠಿಗಳಲ್ಲಿ ಬರೆದಿರುವಂತಹ ಮತ್ತು ಬೇರೆ ಬೇರೆ ಕಡೆ ಪ್ರಕಟವಾಗಿರುವುದನ್ನ ಸೇರಿಸಿ ಪಂಡಿತ್ ಎ ಶಾಂತರಾಜ ಶಾಸ್ತ್ರಿ ಟ್ರಸ್ಟ್ ನವರು ಈ ಕೃತಿಯನ್ನು ಪ್ರಕಟಮಾಡಿದ್ದಾರೆ. ಈ ಕೃತಿಗೆ ಪ್ರಧಾನ ಸಂಪಾದಕರು ಡಾ|| ಅ ಮ ನ ಅವರು, ಮತ್ತು ಈ ಕೃತಿಯನ್ನು ಸಂಪಾದನೆ ಮಾಡಿರುವಂತವರು ಪಂಡಿತ್ ನಾಗರಾಜಯ್ಯನವರು. ಇವರೆಲ್ಲರು ಸಹ ಸೇರಿ 75 ರೂಪಾಯಿಯ ಈ ಕೃತಿಯನ್ನು 2001ರಲ್ಲಿ ಮುದ್ರಣ ಮಾಡಿಸಿದರು. ಆ ನೇ ಉಪಾದ್ಯಾಯರ ಬಗ್ಗೆ ತಿಳಿದುಕೊಳ್ಳ ಬೇಕು ಎಂದರೆ ಈ ಪುಸ್ತಕವನ್ನು ನಾವು ಓದ ಬೇಕು.
ಆ ನೇ ಉಪಾದ್ಯಾಯರು 1906ರಲ್ಲಿ ಜನಿಸುತ್ತಾರೆ, ಇವರು ಕನ್ನಡನಾಡು ಕಂಡಂತಹ ಒಬ್ಬ ಮಹಾನ್ ವಿದ್ವಾಂಸ ಇವರು ಬೆಳಗಾಂ ಜಿಲ್ಲೆಯ ಸದಲಗ ಎಂಬ ಹಳ್ಳಿಯಲ್ಲಿ ಜನಿಸಿದರು. ಅವರ ಹಿರಿಯರು ವೃತ್ತಿಯಲ್ಲಿ ಕೃಷಿಕರು, ಸಂಪ್ರದಾಯದಿಂದ ಅರ್ಚಕರು, ಹಳ್ಳಿಯಲ್ಲಿಯೇ ಪ್ರಾಥಮಿಕ ಮಾದ್ಯಮಿಕ ಶಿಕ್ಷಣವನ್ನು ಮುಗಿಸಿ ಪ್ರೌಢಶಾಲ ಶಿಕ್ಷಣಕೆಂದು ಬೆಳಗಾವಿಗೆ ಬಂದರು. 1928ರಲ್ಲಿ ಬಿ ಎ ಪದವಿಯನ್ನು ಪಡೆಯುತ್ತಾರೆ. ಪದವಿ ಶಿಕ್ಷಣದಲ್ಲಿ ಸಂಸ್ಕೃತವನ್ನು ಪ್ರಧಾನ ವಿಷಯವಾಗಿ ತೆಗೆದುಕೊಂಡು ಅರ್ಧಮಾಗದಿಯನ್ನು ಎರಡನೇ ವಿಷಯವಾಗಿ ಆಯ್ದುಕೊಳುತ್ತಾರೆ. ಮುಂಬೈ ವಿಶ್ವವಿದ್ಯಾನಿಲಯದಲ್ಲಿ 1930ರಲ್ಲಿ ಎಂ ಎ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುತ್ತಾರೆ.
ಮೈಸೂರು ವಿಶ್ವವಿದ್ಯಾನಿಲಯದ ಜೈನ ಶಾಸ್ತ್ರ ಪ್ರಾಕೃತ ವಿಭಾಗದ ಮೊದಲನೇ ಪ್ರಾಧ್ಯಾಪಕರಾಗಿ 1970ರಲ್ಲಿ ಆ ಇಲಾಖೆಗೆ ಮುಖ್ಯಸ್ಥರಾಗಿ ಆಯ್ಕೆಯಾಗುತ್ತಾರೆ. ನಂತರ ಬಹಳಷ್ಟುಕಾಲ ಅಲ್ಲಿ ಕೆಲಸವನ್ನು ಮಾಡುತ್ತಾರೆ.
ಈ ಕೃತಿಯಲ್ಲಿ ಅನುವಾದ ಮಾಡಿರುವಂತಹ ಲೇಖನಗಳು ಕೂಡ ಇವೆ, ಸುಮಾರು 38 ಲೇಖನಗಳು ಈ ಕೃತಿಯಲ್ಲಿ ಇವೆ. ಬಹಳಷ್ಟು ಜನ ಈ ಕೃತಿಯನ್ನು ಬರೆದಿರುವಂತವರು. ಆ ನೇ ಉಪಾಧ್ಯಾಯರು ಜೈನ ಸಾಹಿತ್ಯಕ್ಕೆ ಪ್ರಾಕೃತಕ್ಕೆ ಕೊಟ್ಟಿರುವಂತಹ ಕೊಡುಗೆಗಳನ್ನು ಸದಾ ಕಾಲ ಜ್ಞಾಪಿಸಿಕೊಳ್ಳ ಬೇಕು.
ಮತ್ತೊಂದು ಕೃತಿ ಜಿನ ಸೇನರ ಹರಿವಂಶ ಪುರಾಣದ ಒಂದು ಅಧ್ಯಾಯನ. ಡಾ|| ಬಿ ಎನ್ ಸುಮಿತ್ರ ಬಾಯಿಯವರ ಸಂಶೋಧನ ಗ್ರಂಥ. ಮೈಸೂರು ವಿಶ್ವವಿದ್ಯಾನಿಲಯಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಇದನ್ನು ಪ್ರಕಟಮಾಡಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಈ ಒಂದು ಕೃತಿ 1975ರಲ್ಲಿ ಪ್ರಕಟವಾಗಿರುವಂತಹದ್ದು 30ರೂಪಾಯಿಗೆ ಸಿಗುತ್ತಿದಂತಹ ಕೃತಿ. ಪ್ರೋಫೆಸರ್ ಬಿ ಎನ್ ಸುಮಿತ್ರಾ ಬಾಯಿ ವಿಮರ್ಶೆಯಲ್ಲಿ ದೊಡ್ಡ ಹೆಸರನ್ನು ಪಡೆದಿರುವಂತವರು. ಪ್ರಾಕೃತ ಮತ್ತು ಜೈನ ಶಾಸ್ತ್ರ ವಿಭಾಗದಲ್ಲಿ ಈ ಒಂದು ಹರಿವಂಶ ಪುರಾಣ ಎನ್ನುವ ಕೃತಿಯನ್ನ ರಚನೆ ಮಾಡಿದ್ದಾರೆ. ಈಗೆ ಬಹಳಷ್ಟು ವಿಮರ್ಶೆ ಗಳನ್ನು ಬರೆದಿದ್ದಾರೆ, ಬೊಗಸೆಯಲ್ಲಿ ಹೊಳೆ ಎನ್ನುವಂತಹ ಕೃತಿಗೆ ಬಹಳಷ್ಟು ಪ್ರಶಸ್ತಿಗಳು ಬಂದಿವೆ. ಈ ರೀತಿ ಬಹಳಷ್ಟು ಪ್ರಶಸ್ತಿಗಳು ಬಂದಿರುವಂತಹ ಲೇಖಕಿ ವಿಮರ್ಷಕಿ ಇವರು ಡಾ|| ಎಂ ಡಿ ವಸಂತರಾಜ್ ಅವರ ಮಾರ್ಗದರ್ಶನದಲ್ಲಿ ಈ ಕೃತಿಯನ್ನು ಅವರು ರೂಪುಗೊಳಿಸುತ್ತಾರೆ. ಸಂಸ್ಕೃತಕ್ಕೆ ಜೈನ ಕೊಡುಗೆಗಳು ಬಹಳ ವಿಸ್ತಾರವಾಗಿದೆ ಆದರು ಸಾಹಿತ್ಯ ಮತ್ತು ಇತಿಹಾಸ ಗ್ರಂಥಗಳಲ್ಲಿ ಉಲ್ಲೇಖಿಸುವುದರ ಆಚೆಗೆ ಜೈನ ಸಂಸ್ಕೃತ ಕೃತಿಗಳ ಅದ್ಯಾಯನ ವಿಶೇಷ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಈ ಕೃತಿಯಲ್ಲಿ ತಿಳಿಸಲಾಗಿದೆ.
ಹಾಗಾಗಿ ಈ ಎರಡು ಮಹತ್ವದ ಕೃತಿಗಳನ್ನು ಓದಿ ಮನನ ಮಾಡಿಕೊಳ್ಳಬೇಕು ಹಾಗ ಜೈನ ಧರ್ಮ ಎಂದರೆ ಏನು ಎಂಬುವುದು ಮನನವಾಗುತ್ತದೆ. ಹಾಗ ತಿಳಿವು ಮತ್ತು ಅರಿವು ಮೂಡುತ್ತದೆ ಎಂದು ನಮಗೆ ಅನಿಸುತ್ತದೆ. ಮುಂದಿನ ವಾರ ಮತ್ತೇರಡು ಕೃತಿಗಳ ಪರಿಚಯದೊಂದಿಗೆ ನಿಮ್ಮ ಮುಂದೆ ಹಾಜರಾಗುತ್ತೇನೆ














