ಕ್ಷೇತ್ರ ಪರಿಚಯ- ೩೯

ಜೈ ಜಿನೇಂದ್ರ ವೀಕ್ಷಕರೆ, ಸಾವಿರಾರು ವರ್ಷದ ಪ್ರಾಚೀನ ಸುಕ್ಷೇತ್ರ ಹುಣಸಿ ಹಡಗಲಿ ಗ್ರಾಮ, ಇಲ್ಲಿನ ಚಾಲುಕ್ಯ ವಾಸ್ತುಶಿಲ್ಪ ಶೈಲಿಯ ಜಿನ ಮಂದಿರದಲ್ಲಿ  ಶ್ರೀ ಪಾರ್ಶ್ವನಾಥ ಭಗವಂತರು ವಿರಾಜಮಾನರಾಗಿದ್ದಾರೆ. ಇಲ್ಲಿನ ಪದ್ಮಾವತಿ ದೇವಿ ಬಹಳ ಕಾರ್ಣಿಕಳಾಗಿದ್ದು ಇಷ್ಟಾರ್ಥಸಿದ್ದಿಯಾಗಿದ್ದಾಳೆ.

ಕಲ್ಬುರ್ಗಿ ಜಿಲ್ಲೆಯಲ್ಲಿ ಇತಿಹಾಸದ ಪುಟ ತಿರುವಿದಾಗ ಸುಮಾರು 1600 ಜೈನ ಬಸದಿಗಳು ಇದ್ದು ಎಲ್ಲಾ ಜೈನ ಬಸದಿಗಳಲ್ಲಿ ಕೇವಲ ಬೆರಳೆಣಿಕೆಯಷ್ಟೆ ಬಸದಿಗಳು ಉಳಿದಿದ್ದು, ಉಳಿದ ಜೈನ ಬಸದಿಗಳು ಇತಿಹಾಸದ ಪುಟಗಳಲ್ಲಿ ಮಾತ್ರ ಉಳಿದಿದೆ. ಭಾರತದ ಸಾವಿರಾರು ವರ್ಷದ ಪ್ರಾಚೀನ ಇತಿಹಾಸ ಪುಟಗಳನ್ನು ತಿರುವಿದಾಗ ಕರ್ನಾಟಕದ ಪುಣ್ಯ ಕ್ಷೇತ್ರಗಳಲ್ಲಿ ಹಿಂದುಳಿದ ಹೈದ್ರಬಾದ್ ಕರ್ನಾಟಕ ಭಾಗದಲ್ಲಿ ವಿರಳವಾಗಿ ಹಳ್ಳಿ ಹಳ್ಳಿಗಳಲ್ಲಿ ಇರುವ ಜೈನ ಬಸದಿಗಳಲ್ಲಿ ಒಂದಾದ ಅತಿಶಯ ಕ್ಷೇತ್ರ ಹುಣಸಿ ಹಡಗಲಿ ಸುಮಾರು 915 ವರ್ಷಗಳ ಪುರಾತನ ಶ್ರೀ 1008 ಪಾರ್ಶ್ವನಾಥ ಭಗವಾನರು ಹಾಗೂ ಜಗನ್ಮಾತೆ  ಶ್ರೀ ಧರಣೇಂದ್ರ ಪದ್ಮಾವತಿ ಅಮ್ಮನವರ ಕ್ಷೇತ್ರವಾಗಿದೆ. ಇದ್ದು ಟ್ರಸ್ಟ್ ನ ಆಡಳಿತಕ್ಕೆ ಒಳಪಟ್ಟಿದ್ದು ಜಿನ ಮಂದಿರವು ಕಲ್ಯಾಣ ಚಾಲುಕ್ಯ ಸಾಮ್ರಾಟರ ಅಳಂದ ಸಂಸ್ಥಾನದ ಮಹಾ ಮಾಂಡಲೇಶ್ವರ ಹಾಗೂ ದಂಡಾಧಿಕಾರಿ ಜೈನ ಧರ್ಮ ಅವಲಂಬಿಯಾಗಿದ ಚೌತರೆಯ ರಕಸಯ್ಯನ ಸಂಪೂರ್ಣ ಆಡಳಿತಕ್ಕೆ ಒಳಪಟ್ಟು ಸ್ವಗ್ರಾಮ ಹಡಂಗಿಲೆಯಲ್ಲಿ ಹೆಂಡತಿ ಅಕ್ಕಮಬ್ಬೆಯ ಇಚ್ಚೆಯಂತೆ 1008 ಪಾರ್ಶ್ವನಾಥ ತೀರ್ಥಂಕರರ ಬಸದಿಯನ್ನು ಮತ್ತು ಸುಪುತ್ರ ಶಾಂತಿವರ್ಮನ ಹೆಂಡತಿ ಮಲ್ಲಿಯಕ್ಕಳ ಮನದಾಸೆಯಂತೆ 1008 ಶ್ರೀ ಶಾಂತಿನಾಥ ತೀರ್ಥಂಕರರ ಬಸದಿಗಳನ್ನು ನಿರ್ಮಿಸಿದ ಬಗ್ಗೆ ಈ ಜಿನ ಮಂದಿರದಲ್ಲಿ ಶಿಲಾ ಶಾಸನದಲ್ಲಿ ಉಲ್ಲೇಖಗೊಂಡಿದೆ. ಮೂಲನಾಯಕ 1008 ಶ್ರೀ ಪಾರ್ಶ್ವನಾಥ ಭಗವಾನರು ಏಳು ಹೆಡೆಯ ಸರ್ಪದ ಛತ್ರಚಾಯೆಯಲ್ಲಿ ಇರುವ ಅದ್ಬುತ ಚಮತ್ಕಾರಿಕ, ಸಂಕಟ ನಿವಾರಕ, ಅತಿಮನೋಜ್ಞ, ಅತಿಶಯೋಕ್ತ ಧ್ಯಾನಸ್ಥ ಮುದ್ರೆಯಲ್ಲಿರುವ ಮೂರ್ತಿ.

ಗರ್ಭ ಗೃಹದ ಅಕ್ಕಪಕ್ಕದಲ್ಲಿ ಯಕ್ಷದಂಪತಿಗಳಾದ ಶ್ರೀ ಧರಣೆಂದ್ರ ಯೆಕ್ಷದೇವ ಹಾಗೂ ಶ್ರೀ ಮಹಾಮಾತೆ ಪದ್ಮಾವತಿ ಅಮ್ಮನವರ ಪದ್ಮಾಸನ ರೂಪದಲ್ಲಿ ಆಕರ್ಷಕ ಶಾಂತ ಭಂಗಿಯಲ್ಲಿ ಪ್ರತಿಷ್ಠಾಪಿತರಾಗಿರುವ ಅಮ್ಮನವರ ದಿವ್ಯ ಮಹಾ ಚಮತ್ಕಾರದಿಂದ ದೇವಸ್ಥಾನಕ್ಕೆ ದಿನ ದಿಂದ ದಿನಕ್ಕೆ ಜಗತ್ ಪ್ರಸಿದ್ದಿ ಪಡೆದು ಹರಿದು ಬರುವ ಶ್ರಾವಕ ಶ್ರಾವಕಿಯರು ನಿತ್ಯ ಪೂಜೆ ಮಾಡಿ ಶ್ರೀ ಪದ್ಮಾವತಿ ಅಮ್ಮನವರ ಹತ್ತಿರ ಬೇಡಿಕೊಂಡ ಯಾವುದೇ ಅರಿಕೆಗಳು  ಕೆಲಸ ಕಾರ್ಯಗಳು ಈಡೇರುತ್ತವೆ ಮತ್ತು ಜನರ ಮನದಲ್ಲಿದ್ದ ಅರಿಕೆಗಳು ತಮ್ಮ ಮನೆಯಲ್ಲಿದ್ದ ಸಂಕಟ ತಮಗೆ ಇದ್ದಂತಂಹ ಸಮಸ್ಯೆಗಳು ಶ್ರೀ ಪದ್ಮಾವತಿ ಅಮ್ಮನವರಿಗೆ ಬೇಡಿಕೊಂಡು ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾರೆ. ಮಾತೆ ಪದ್ಮಾವತಿ ದೇವಿ ಜನರಿಗೆ ಕಾಮದೇನು ಕಲ್ಪವೃಕ್ಷವಾಗಿ ಜನರ ಇಷ್ಟಾರ್ಥಗಳನ್ನು ಪೂರೈಸುತ್ತಿದ್ದಾರೆ. ಶುಕ್ರವಾರ ಮಂಗಳವಾರ ರವಿವಾರ ಅಮವಾಸ್ಯೆ ಹುಣ್ಣಿಮೆಯಂದು ಸಾವಿರಾರು ಜನ ಹರಿದುಬಂದು ಅಮವಾಸ್ಯೆ ದಿನ ವಿಶೇಷ ಮಹಾಪೂಜೆ ಜೊತೆಗೆ ಪ್ರಸಾದದ ವ್ಯವಸ್ಥೆ ಕೂಡ ಇರುತ್ತದೆ. ಬಂದಂತಹ ಭಕ್ತಾದಿಗಳಿಗೆ 15 ರೂಮ್ ಗಳ ವಸತಿ ವ್ಯವಸ್ಥೆ ಕೂಡ ಇದ್ದು ಸುವ್ಯವಸ್ಥೆಯಿಂದ ಕೂಡಿರುತ್ತದೆ. ಇಂತಹ ಕ್ಷೇತ್ರದ ವಾರ್ಷಿಕ ಪೂಜಾ ಮಹೋತ್ಸವ ಇದೆ ತಿಂಗಳ ಡಿಸೆಂಬರ್ 2021ರ ದಿನಾಂಕ 29, 30, 31 ರಂದು ವಿಜೃಂಭಣೆಯಿಂದ ಏರ್ಪಡಿಸಲಾಗಿತ್ತು.

ನಡೆದ ಕಾರ್ಯಕ್ರಮದಲ್ಲಿ ಸಭಾ ಕಾರ್ಯಕ್ರಮದೊಂದಿಗೆ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನಡೆಯಿತು.

ಬನ್ನಿ ಶ್ರೀ ಮಹಾ ಮಾತೆ ಪದ್ಮಾವತಿಯ ಆಶೀರ್ವಾದವನ್ನು ಪಡೆದುಕೊಂಡು ಧನ್ಯರಾಗಿ ಪುನೀತರಾಗಿ.