ಭಾರತೀಯ ಜೈನ ಮಿಲನ್ ವಲಯ – 8 ರ ಬದುಕು ಬದುಕಲು ಬಿಡು ಘೋಷವಾಕ್ಯ ದೊಂದಿಗೆ 19 ನೇ ವಲಯ ಸಮ್ಮೇಳನ ನಮ್ಮ ಮೂಡುಬಿದಿರೆಯ ಎಕ್ಸಲೆಂಟ್ ಕಾಲೇಜು ವಿದ್ಯಾಸಂಸ್ಥೆಯ ಹಚ್ಚಹಸುರಿನ ಸುಂದರ ಪರಿಸರದಲ್ಲಿ ವೈಭವಯುತ ಸಾಂಪ್ರಾದಾಯಿಕ ಮೆರವಣಿಗೆಯೊಂದಿಗೆ ಬೆಳಗ್ಗೆ 9.15 ಕ್ಕೆಆರಂಭ ಗೊಂಡು ಬೆಳಗ್ಗೆ 9.30 ಕ್ಕೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಪಾವನ ಸಾನಿಧ್ಯ ವಹಿಸಿದ್ದಾರೆ ಪರಮಪೂಜ್ಯ ಭಾರತ ಭೂಷಣ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಮೂಡುಬಿದಿರೆ ಶ್ರೀ ಜೈನ ಮಠ.
ಪದ್ಮವಿಭೂಷಣ ರಾಜಶ್ರೀ ಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು, ಧರ್ಮಾದಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಇವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಮಿಲನ ಶ್ರೀ ಪ್ರಶಸ್ತಿ ಪ್ರಧಾನ ಶ್ರೀ ವಿ. ಸುನೀಲ್ ಕುಮಾರ್. ಗೌರವಾನ್ವಿತ ಸಚಿವರು. ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು.
ಎಂ. ಎನ್ ರಾಜೇಂದ್ರ ಕುಮಾರ್ ರವರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದು , ಗೌರವ ಉಪಸ್ಥಿತಿಯಲ್ಲಿ ಧರ್ಮಸ್ಥಳದ ಸುರೇಂದ್ರಕುಮಾರ್ ರವರು ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಪುಷ್ಪರಾಜ್ ಜೈನ್ ರವರು ವಹಿಸಲಿದ್ದಾರೆ.
ನಂತರ ಪ್ರೊಫೆಸರ್ ಕೃಷ್ಣೇಗೌಡ ರವರಿಂದ ಉಪಾನ್ಯಾಸ ಕಾರ್ಯಕ್ರಮ .
ಮದ್ಯಾಹ್ನ 2.10ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು. ಹಾಗೂ ಎಂ, ಎಸ್ ಮೃತ್ಯುಂಜಯ ಜೈನ್ ಮತ್ತು ಯುವರಾಜ್ ಜೈನ್ ರವರಿಂದ ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿದೆ.
3.30ಕ್ಕೆ ಸಮಾರೋಪ ಸಮಾರಂಭ ಪಾವನ ಸಾನಿಧ್ಯ ವಹಿಸಲಿದ್ದಾರೆ ಪರಮಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು.
ಶ್ರೀ ಕ್ಷೇತ್ರ ಧರ್ಮಸ್ಥಳ ಸುರೇಂದ್ರಕುಮಾರ್ ರವರು ಶ್ರೀಮತಿ ಅನಿತಾ ಸುರೇಂದ್ರಕುಮಾರ್ ರವರು ಪ್ರಶಸ್ತಿ ಪ್ರಧಾನ ಮಾಡಲಿದ್ದು ಕಾರ್ಯಕ್ರಮದ ಗೌರವ ಉಪಸ್ಥಿತಿಯಲ್ಲಿ ಶ್ರೀ ಕೆ. ಅಭಯ್ಚಂದ್ರ ಜೈನ್, ಶ್ರೀ ಕೆ. ಪ್ರಸನ್ನ ಕುಮಾರ್, ಶ್ರೀ ಇ.ವಿ ಅಜ್ಜಪ್ಪ ಇವರುಗಳು ಭಾಗವಹಿಸಲಿದ್ದಾರೆ.
ಈ ಬಾರಿಯ ಮಿಲನ ಶ್ರೀ ಪ್ರಶಸ್ತಿಯನ್ನು ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್ ರವರಿಗೆ ಘೋಷಿಸಲಾಗಿದೆ.
ಸಂಜೆ; 6.00 ಗೆ ಧರ್ಮಸ್ಥಳದ ಸಿಬ್ಬಂದಿ ವರ್ಗದವರಿಂದ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ ಇವರ ವಿರಚಿತ ಹಾಗೂ ಮಾರ್ಗದರ್ಶನದಲ್ಲಿ ಕೃಷ್ಣಸಂಧಾನೊ ಹಾಸ್ಯ ನಾಟಕವನ್ನು ಏರ್ಪಡಿಸಲಾಗಿದೆ.
ವಿಶೇಷ ಸೂಚನೆ :
ದಿನಾಂಕ; 15/10/2022 ರ ಶನಿವಾರ ಸಂಜೆ 6ಗಂಟೆಗೆ ವಲಯ ಸಮ್ಮೇಳನದ ಅಂಗವಾಗಿ ಮೂಡುಬಿದ್ತೆ ಐತಿಹಾಸಿಕ ಸಾವಿರ ಕಂಬದ ಬಸದಿಯಲ್ಲಿ ಲಕ್ಷ ದೀಪೋತ್ಸವ ಪೂಜೆ ಏರ್ಪಡಿಸಲಾಗಿದೆ. ಭಕ್ತಾದಿಗಳಯ ಪುಣ್ಯ ಲಾಭವನ್ನು ಪಡೆದುಕೊಳ್ಳುವುದು . ಬನ್ನಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.














