ಜ್ವಲಮಾಲಾ ನ್ಯೂಸ್

ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಪರಮಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಗಳವರ ಶುಭಾಶೀರ್ವಾದ  ಹಾಗೂ ಮಾರ್ಗದರ್ಶನದಂತೆ ನ್ಯೂ ಕರ್ನಾಟಕ ದಿಗಂಬರ ಜೈನ  ಚಾರಿಟಬಲ್ ಟ್ರಸ್ಟ್ ವತಿಯಿಂದ ಭಗವಾನವ ಶ್ರೀ 1008 ಪದ್ಮಪ್ರಭು ನೂತನ ಭವ್ಯ ಜಿನಾಲಯ  ನಿರ್ಮಾಣಗೊಳ್ಳುತ್ತಿದ್ದು  8000 ಚದುರ ಅಡಿಗಳ ವಿಶಾಲವಾದ ಜಾಗದಲ್ಲಿ ಜಿನಾಲಯ ಸೇರಿದಂತೆ ತ್ಯಾಗ ನಿವಾಸ , ಮುನಿ ನಿವಾಸ, ಭೋಜನ ಶಾಲೆ , ವಿದ್ಯಾರ್ಥಿ ನಿಲಯ ಅಲ್ಲದೇ ಪಕ್ಕದ ಉದ್ಯಾನವನ ಜಾಗದಲ್ಲಿ ಯೋಗ ಹಾಗೂ ಧ್ಯಾನ ಮಂದಿರ ಕೂಡ  ನಿರ್ಮಾಣ ಹಂತದಲ್ಲಿದೆ .

ಈಗಾಗಲೇ ಅಗತ್ಯ ಸೌಲಭ್ಯಗಳಿರುವ  24 ಕೊಠಡಿಗಳುಳ್ಳ ಕಟ್ಟಡ ಪೂರ್ಣ ಗೊಳ್ಳುತ್ತಿದ್ದು  ಜಿನಮಂದಿರ ಹಾಗೂ ಉಳಿದ ಕಟ್ಟಡಗಳು ಪ್ರಗತಿಯಲ್ಲಿದೆ. ಈ ಪುಣ್ಯಕಾರ್ಯದಲ್ಲಿ ಭಾಗಿಯಾಗಲು ಇಚ್ಛಿಸುವವರು ಈ ಕೆಳಗಿನ ವಿವರಗಳನ್ನು ದಯವಿಟ್ಟು ಗಮನಿಸಿ.