“ಪಂಜಿಕಲ್ಲು ಬಸದಿಯ ಪಂಚಕಲ್ಯಾಣ ಆಹ್ವಾನ”

ಜ್ವಾಲಮಾಲಾ ಕ್ಷೇತ್ರ ಪರಿಚಯ ಸಹಿತ ಪಂಚಕಲ್ಯಾಣ ಮಹೋತ್ಸವದ ಆತ್ಮೀಯ ಆಮಂತ್ರಣ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಜೀರ್ಣೋದ್ಧಾರಗೊಂಡು ಕಂಗೊಳಿಸುತ್ತಿರುವ ಬಸದಿಯ ಹಿಂದಿರುವ ಪರಿಶ್ರಮದೊಂದಿಗೆ ಹೇಗೆಲ್ಲಾ ಮಾರ್ಪಾಡಾಯಿತು ನೋಡೋಣ ಬನ್ನಿ

 

ದಕ್ಷಿಣ ಕನ್ನಡ ಜಿಲ್ಲೆಯ ಭಂಟ್ವಾಳ ತಾಲ್ಲೂಕಿನ  ಮನೋಹರ ಹಸಿರು ಸಿರಿಯ ನಡುವೆ  ಪಂಚಕಲ್ಲು ಗ್ರಾಮದ ಬಾಲೇಶ್ವರ ಬಳಿ  ಭಗವಾನ್ ಶ್ರೀ ಆದಿನಾಥ ಸ್ವಾಮಿ  ಶ್ರೀ ಪದ್ಮಾವತಿ ದೇವಿಯ ಸನ್ನಿಧಿಯು ಸುಮಾರು 600 ವರ್ಷಗಳ ಇತಿಹಾಸ  ಇರುವಂತಹ ಅತ್ಯಂತ  ಕಾರ್ಣಿಕಮಯವಾದ ಬಸದಿ ಈಗ ನೀವು ನೋಡುತ್ತಿದ್ದೀರಿ ಸುಂದರವಾಗಿ ಕಲಾತ್ಮಕವಾಗಿ  ಬಸದಿಯ ಮುಂದಿನ  ಎತ್ತರದ ಮಾನಸ್ಥಂಭ  ಸಹಿತ ಮನೋಜ್ಞ  ಚಿತ್ತಾಕರ್ಷಕವಾಗಿ  ಪಂಚಕಲ್ಯಾಣಕ್ಕಾಗಿ ಅಣಿಯಾಗಿ  ನಿಂತಿದೆ. ಈಗ ನಿಮ್ಮ ಮನೆಸೂರೆಗೊಳ್ಳುವ ರೀತಿಯಲ್ಲಿ ಸಜ್ಜಾಗಿರುವ ಬಸದಿಯ ಹಿಂದೆ ಬಹು ದೊಡ್ಡ ಪರಿಶ್ರಮವಿದೆ. ಇಲ್ಲಿನ ಜೀರ್ಣೋದ್ದಾರ ಸಮಿತಿಯ ಮಹತ್ವದ ಸಂಕಲ್ಪವಿದೆ. ಇದೊಂದು ಬರಿ ಬಸದಿಯಲ್ಲ ಮಾದರಿ ಬಸದಿಯಾಗಿ ಪರಿವರ್ತನೆಯಾದ  ಪರಿಯನ್ನು ಹೇಳುತ್ತಾ ಹೋಗುತ್ತೇವೆ.

ಶ್ರೀಯುತರಾದ ಶ್ರೀ ಸುದರ್ಶನ್ ಜೈನ್ ರವರು ಈ ಬಸದಿಯ ಮೊದಲಿನ ಸ್ಥಿತಿ ಹಾಗೂ ಈಗ ಜೀರ್ಣೋದ್ದಾರವಾಗಿರುವ ಸ್ಥಿತಿಯನ್ನು ಸವಿಸ್ಥಾರವಾಗಿ ತಿಳಿಸಿ ಹೇಳಿದರು. ಬಸದಿಗೆ ಬಳಸಿರುವ ಉಪಕರಣಗಳು, ಪೀಠಗಳು, ಮರಗಳು , ಕಲ್ಲುಗಳು  ಹಾಗೂ ಗರ್ಭಗುಡಿಯ  ಅಂದಕ್ಕೆ ಬಳಸಿರುವ ಕಲ್ಲುಗಳ ಹಾಗೂ ಪ್ರಾಂಗಣದಲ್ಲಿರುವ ಅಳವಡಿಸಿರುವ ಕಲ್ಲುಗಳನ್ನು ಸವಿಸ್ತಾರವಾಗಿ ತಿಳಿಸಿಕೊಟ್ಟರು.  ನಾಗಪೀಠವನ್ನು ಒಳ್ಳೆಯ ಟೀಕ್ ಮರವನ್ನು ಉಪಯೋಗಿಸಿ ಮಾಡಲಾಗಿದೆ. ಹಾಗೂ ಸುತ್ತಲಿನ  ಆವರಣ ಕೋಟೆಯನ್ನು ಸುತ್ತಲೂ ಗಟ್ಟಿಯಾಗಿ ನಿರ್ಮಿಸಲಾಗಿದೆ.  ದೇವೆ ಅಭಿಷೇಕಕ್ಕಾಗಿ ಬಹಳ ಸುಂದರವಾದ ಹಾಗೂ ಶುಭ್ರವಾದ ಬಾವಿಯನ್ನೂ ಸಹ ನಿರ್ಮಿಸಲಾಗಿದೆ. ಬಸದಿಯ ಎದುರುಗಡೆ ಸಹ ಮಹಾ ಬಲಿಪೀಠವನ್ನು ಸಹ ನಿರ್ಮಿಸಿದ್ದು , ಬಸದಿಯ ಮುಂದುಗಡೆ  ಮಾನಸ್ಥಂಭವನ್ನು ಇನ್ನೂ ಕೆಲಸವನ್ನು ಮಾಡುತ್ತಿದ್ದು ಅದರ ಕಾರ್ಯಗಳನ್ನು ಇನ್ನೇನು ಸ್ವಲ್ಪ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಮುಂದಿನ ಪಂಚಕಲ್ಯಾಣಕ್ಕೆ ತಯಾರು ಮಾಡಲು ಬದ್ಧರಾಗಿದ್ದೇವೆ.

ಈ ಬಸದಿಯು ಕಾರ್ಕಳ ಜೈನ ಬಸದಿಗೆ ಸೇರಿದ ಮಾದರಿ ಬಸದಿಯಾಗುದ್ದಲ್ಲದೇ  ಪ್ರಸ್ತುತ ಈ ಬಸದಿಗೆ  ಕೆಲವೇ ಜೈನ ಮನೆಗಳಿದ್ದು, ಬಸದಿಯ ಮೂಲ ಬಿಂಬವು ಪಂಚಪರಮೇಶ್ರೀ ಶ್ರೀ ಆದಿನಾಥ ಸ್ವಾಮಿಯ ಮೂರ್ತಿಯಾಗಿದ್ದು ಮಹಾಮಾತೆ ಶ್ರೀ ಪದ್ಮಾವತಿ ದೇವಿಯ ಮೂರ್ತಿಯು ಮೂಲ ಸ್ವಾಮಿಯ ಬಲಭಾಗಕ್ಕೆ ಇರುವುದು  ಇಲ್ಲಿನ ವಿಶೇಷ. ಕಾರ್ಕಳ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚರ್ಯವರ್ಯ ಮಹಾಸ್ವಾಮೀಜಿಗಳವರ ದಿವ್ಯ ಆಶೀರ್ವಾದದಿಂದ  ಪ್ರತಿದಿನ ನಿತ್ಯ ಪೂಜೆಗಳು ವಾರ್ಷಿಕ ಪರ್ವದಿನಗಳು, ನವರಾತ್ರಿ ವಿಶೇಷ  ಪೂಜೆಗಳು  ಯಥಾವತ್ತಾಗಿ ನಡೆಯುತ್ತಾ ಬಂದು 1981 ರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ವೀರೇಂದ್ರ ಹೆಗ್ಗಡೆಯವರ  ಹಾಗೂ ಊರಿನವರ ಸಹಕಾರದಿಂದ  ಆಗಿನ ಅಗತ್ಯ ಜೀರ್ಣೋದ್ಧಾರ ಕಾರ್ಯ ನಡೆಯುತ್ತದೆ.  ಇದೀಗ 50 ವರ್ಷಗಳ ನಂತರ  ಸಂಪೂರ್ಣ ಬಸದಿಯನ್ನು ಜೀರ್ಣೋದ್ದಾರಗೊಳಿಸಿ  ಶಿಲಾಮಯ ಬಸದಿಯನ್ನಾಗಿ ಸಂಪೂರ್ಣ ನಿರ್ಮಾಣಗೊಳಿಸಲು ತೀರ್ಮಾನ ಮಾಡಿ ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷರಾಗಿ ಪೂಜ್ಯ ಡಾ|| ವೀರೇಂದ್ರ ಹೆಗ್ಗಡೆಯವರ   ಮಾರ್ಗದರ್ಶನದಲ್ಲಿ ಬಸದಿಯು ಹಂತ ಹಂತವಾಗಿ  ಅಗತ್ಯ ಅಡಿಪಾಯ  ಭದ್ರತೆಯನ್ನು ನೀಡುತ್ತಾ ಸುಂದರ ರೂಪವನ್ನು ಕೊಟ್ಟು ಅಭೂತಪೂರ್ವವಾಗಿ  ಇಲ್ಲಿನ ಕೆಲಸಗಳು ಸಾಗುತ್ತ ಹೋಗುತ್ತವೆ. ಸುಭದ್ರ ರೀತಿಯಲ್ಲಿ ಅಡಿಪಾಯವನ್ನು ನೀಡಿ ಬಸದಿಯ ಮುಂಭಾಗದಲ್ಲಿ ನೂತನವಾಗಿ ಮಾನಸ್ಥಂಭದ  ನಿರ್ಮಾಣ ಕಾರ್ಯವೂ ಕೂಡ ನಡೆದಿದೆ. ಇಷ್ಟೆಲ್ಲಾ ಕಾಮಗಾರಿಗಳು ಕೈಗೊಂಡು  ಈ ಬಸದಿಯನ್ನು ಸುಮಾರು 2, 50 ಕೋಟಿಗೂ ಹೆಚ್ಚು ಖರ್ಚಾಗಿದೆ. ಈಗಾಗಲೇ ಮುಂದಿನ ಫೆಬ್ರವರಿ ತಿಂಗಳ20 22 ನೇ ಇಸವಿ 3ನೇ ತಾರೀಖಿನಿಂದ 7ನೇ ತಾರೀಖಿನವರೆಗೂ ಪಂಚಕಲ್ಯಾಣ ಮಹೋತ್ಸವವು ನಡೆಯಲಿದ್ದು ತಾವುಗಳೆಲ್ಲರೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು-ಮನ-ಧನ ಸಹಾಯವನ್ನು ನೀಡಬೇಕಾಗಿ ಕೋರಿಕೊಳ್ಳುತ್ತೇವೆ. ಬಸದಿಯ ತುಂಬಾ ಸುಂದರವಾಗಿ ಮೂಡಿಬಂದಿದೆಯೆಂದು ನಾವುಗಳು ತಿಳಿದಿದ್ದೇವೆ.