ವಾರವಾರ ಜೈನ ಸುದ್ದಿ – 61

ಜೈ ಜಿನೇಂದ್ರ ವೀಕ್ಷಕರೆ, ವಾರದ ಜೈನಸುದ್ದಿಗಳಿಗೆ ನಿಮ್ಮಗೆಲ್ಲಾ ಸ್ವಾಗತಿಸುತ್ತ ಮಕರಸಂಕ್ರಾತಿ ಹಬ್ಬದ ಶುಭಾಶಯಗಳು.

ಮುಖ್ಯಾಂಶಗಳು

ಗಂಗರಸರು ಮತ್ತು ಚಾವುಂಡರಾಯ ರಾಷ್ಟ್ರೀಯ ವಿಚಾರ ಸಂಕಿರಣದ ಕಾರ್ಯಕ್ರಮದ ಬಗ್ಗೆ ಚಾರು ಶ್ರೀಗಳಿಂದ ಮಾರ್ಗದರ್ಶನ.

ಜನವರಿ 5 ಮತ್ತು 6 ರಂದು ಬೆಳಗಾವಿಯಲ್ಲಿ ನಡೆದ ವಿವಿಧ ಕಾರ್ಯಕ್ರಮದಲ್ಲಿ ಪಾವನ ಸಾನಿಧ್ಯವನ್ನು ವಹಿಸಿದ ಸ್ವಾದಿ ಶ್ರೀಗಳು.

ಅವಸಾನದ ಅಂಚಿನಲ್ಲಿ ಅಜ್ಞಾತ ಜೈನ ಸ್ಮಾರಕಗಳು.

ಯುಗಳ ಮುನಿಗಳ ದಕ್ಷಿಣ ಕನ್ನಡ ಜಿಲ್ಲೆಯ ವಿಹಾರ.

ಭಾರತೀಯ ಜೈನ್ ಮಿಲನ್ ಕಾರ್ಕಳ ಮತ್ತು ಯುವ ಜೈನ್ ಮಿಲನ್ ಕಾರ್ಕಳ ಇದರ ಡಿಸೆಂಬರ್ ತಿಂಗಳ ಮಾಸಿಕ ಸಭೆ.

ಜೈನ ಕಾಶಿ ಮೂಡುಬಿದಿರೆಯಲ್ಲಿ ಪರಮಪೂಜ್ಯ ಯುಗಳ ಮುನಿ ಮಹಾರಾಜರ ಹಾಗೂ 108 ಪ್ರಸಂಗ ಮಹಾರಾಜರ ಪಾವನ ಸಾನಿಧ್ಯದಲ್ಲಿ ಜರುಗಿದ ಕಲಿಕುಂಡ ಯಂತೃರಾಧನ ವಿಧಾನ.

ಬಂಗ್ವಾಡಿ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ರಥೋತ್ಸವ.

ಸುದ್ದಿಗಳ ವಿವರ.

ಗಂಗರಸರು ಮತ್ತು ಚಾವುಂಡರಾಯ ವಿಚಾರ ಸಂಕಿರಣ ನಡೆಸುವ ಬಗ್ಗೆ ಶ್ರವಣ ಬೆಳಗೊಳದ ಸ್ವಸ್ತಿಶ್ರೀ ಜಗದ್ಗುರು ಚಾರುಕೀರ್ತಿ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರೊಂದಿಗೆ ಚರ್ಚೆ ನಡೆಸಿ ಮಾರ್ಗದರ್ಶನ ಪಡೆಯಲಾಗಿದೆ.

ತಲಕಾಡಿನಲ್ಲಿ ಫೆಬ್ರವರಿ 2 ಮತ್ತು 3 ಎರಡು ದಿನ ಏರ್ಪಡಿಸಲಾಗಿರುವ ಗಂಗರಸರು ಮತ್ತು ಚಾವುಂಡರಾಯ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮವು ಮೈಸೂರು ವಿಶ್ವವಿದ್ಯಾನಿಲಯ ಶ್ರವಣಬೆಳಗೊಳ ಶ್ರೀ ಮಠ ಭಾರತೀಯ ಸರ್ವೇಕ್ಷಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ಪ್ರಾಚ್ಯವಸ್ತು ಇಲಾಖೆ ಸಹಯೋಗದಲ್ಲಿ ನಡೆಯಲಿದೆ. ಮೈಸೂರು ವಿಶ್ವವಿದ್ಯಾನಿಲಯದ ಜೈನಾಲಜಿ ವಿಭಾಗದ ಅಧ್ಯಕ್ಷರಾದ ಶ್ರೀಮತಿ ವಿಜಯ ಕುಮಾರಿ ಕರಿಕಲ್, ತಲಕಾಡು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮುರುಳಿದರ್ ಮತ್ತು ಶ್ರೀ ವಸಂತ ರಾಜು ಅವರು ಹಾಗೂ ಮೈಸೂರಿನ ಪ್ರಸನ್ನಕುಮಾರ್ ರವರು ಶುಕ್ರವಾರ ಶ್ರವಣ ಬೆಳಗೊಳದಲ್ಲಿ ಪರಮ ಪೂಜ್ಯ ಸವಾಮೀಜಿಯವರನ್ನು ಭೇಟಿಮಾಡಿ ಕಾರ್ಯಕ್ರಮದ ಬಗ್ಗೆ ಮಾರ್ಗ ದರ್ಶನ ಮತ್ತು ಆಶೀರ್ವಾದ ಪಡೆದರು.

91 ವರ್ಷದ ಮೈಸೂರಿನ ಹಿರಿಯ ಶ್ರಾವಕಿ ಶ್ರೀಮತಿ ವಿಲಾಸಕುಮಾರಿಶರ್ಮ ಅವರು 10-01-2022 ರಂದು ಬೆಳಿಗ್ಗೆ ಶ್ರವಣ ಬೆಳಗೊಳದಲ್ಲಿ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಹಾಗೂ ಶ್ರೀ ಕ್ಷೇತ್ರದ ದರ್ಶನ ಮಾಡಿದರು. ಇವರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಏಳು ಮಹಾಮಸ್ತಕಾಭಿಷೇಕವನ್ನು ಕಣ್ಣತುಂಬಿಸಿ ಕೊಂಡಿರುವ ಪೂಣ್ಯ ಶ್ರಾವಕಿ. ಮೈಸೂರಿನ ಪದ್ಮಶ್ರೀ ಜೈನ ಮಹಿಳಾ ಸಮಾಜದಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದವರು. ಆಕಾಶವಾಣಿ ಕಲಾವಿದೆಯಾಗಿದ್ದ ಇವರು ತಮ್ಮ ಜೀವನ ಪರಿಯಂತ ಅನೇಕ ಗಮಕ ಗಾಯನ ಹಾಗೂ ಜಿನ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟವರು. ಇವರು ಮೈಸೂರು ವಿಶ್ವವಿದ್ಯಾನಿಲಯ ಜೈನ ಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ಕೇಂದ್ರದ ಹಿರಿಯ ವಿದ್ವಾಂಸರಾದ  ಡಾ|| ಎಂ ಎಸ್ ಪದ್ಮ ಅವರ ಮಾತೃಶ್ರೀ ಶ್ರೀ ಮಠದಲ್ಲಿ ಹಿರಿಯ ಶ್ರಾವಕಿಯನ್ನು ಗೌರವಿಸಲಾಯಿತು. ಶ್ರವಣಬೆಳಗೊಳದ ಬಾಹುಬಲಿ ಪ್ರಾಕೃತ ವಿದ್ಯಾ ಪೀಠದ ಹಿರಿಯ ಪ್ರಾಕೃತ ವಿದ್ವಾಂಸರಾದ ಪ್ರಾಕೃತ ಶಾರದೆ ಡಾ|| ಕುಸುಮ ಪ್ರಕಾಶ್ ರವರು ಪರಮ ಪೂಜ್ಯರ ಆದೇಶದಂತೆ ಶ್ರೀ ಮಠದ ಪರವಾಗಿ ಸನ್ಮಾನಿಸಿ ಗೌರವಿಸಿದರು.

ಸೋಂಧ ಮಠದ ಸ್ವಸ್ತಿಶ್ರೀ ಭಟ್ಟಾಕಲಂಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಯವರು ಬೆಳಗಾವಿಯ ವಿವಿಧ ಕಾರ್ಯಕ್ರಮಗಳಲ್ಲಿ ತಮ್ಮ ಪಾವನ ಸಾನಿಧ್ಯವಹಿಸಿದ್ದಾರೆ ಇವುಗಳ ಕಿರು ಮಾಹಿತಿ ಇಲ್ಲಿದೆ.

ದಿನಾಂಕ 05-01-2022ರಂದು ಬೆಳಗಾವಿಯ ಭರತ್ ಎಜ್ಯುಕೇಷನ್ ಟ್ರಸ್ಟ್ ನ 60ನೇ ವರ್ಷದ ವಜ್ರ ಮಹೋತ್ಸವದ ಕಾರ್ಯಕ್ರಮವು ಪಾರ್ಶ್ವನಾಥ ದೊಡ್ಡಣ್ಣನವರ್ ಕಾಲೇಜ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ ನಡೆಯಿತು ಈ ಕಾರ್ಯಕ್ರಮದಲ್ಲಿ ಸ್ವಸ್ತಿಶ್ರೀಗಳು ತಮ್ಮ ಪಾವನ ಸಾನಿಧ್ಯದವನ್ನು ವಹಿಸಿ ಶುಭಾಶೀರ್ವಾದ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಟ್ರಸ್ಟಿಗಳು ಪ್ರಾಂಶುಪಾಲರು ಸಿಬ್ಬಂದಿ ವರ್ಗದವರು ಮುಖ್ಯ ಅತಿಥಿಗಳು ಪಾಲ್ಗೊಂಡಿದ್ದರು. ದಿನಾಂಕ 06-01-2022ರ ಗುರುವಾರದಂದು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಕೇಸ್ತಿ ಗ್ರಾಮದಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿನ ಶ್ರೀ ಅಶೋಕ್ ಬರಮು ಸೂರ್ಯವಂಶಿ ರವರ ಸ್ಮರಣಾರ್ಥವಾಗಿ ನಿರ್ಮಿಸಲಾದ ಸಭಾಭವನದ 25ನೇ ವರ್ಷದ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಜಗದ್ಗುರು ಅಕಲಂಕ ಕೇಸರಿ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಮಹಾ ಸ್ವಾಮೀಜಿಯವರು ಪಾವನ ಸಾನಿದ್ಯವನ್ನ ವಹಿಸಿ ಆಶೀರ್ವಚನವನ್ನು ನೀಡಿದರು. ಕಾರ್ಯಕ್ರಮವನ್ನು ಸ್ವಸ್ತಿಶ್ರೀಗಳು ಸಸ್ಯಕ್ಕೆ ನೀರೆರೆಯುವ ಮುಖಾಂತರ ಉದ್ಘಾಟಿಸಿದರು. ನಂತರದಲ್ಲಿ ಶ್ರೀಗಳನ್ನು ಶಾಲೆಯ ಪ್ರಾಂಶುಪಾಲರು ಹಾಗೂ ಮುಖ್ಯ ಅತಿಥಿಗಳು ಸನ್ಮಾನಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಶ್ರೀ ಶಿತಲ್ ಪಾಟೀಲ್ ಉಗಾರ್, ಶ್ರೀ ವಜ್ರ ಕುಮಾರ್ ಮಗ್ದುಮ್ ಉಗಾರ್, ಶ್ರೀ ಆದಿನಾಥ ಹೊಸಬಡೆ ಉಗಾರ್ ಹಾಗೂ ಶ್ರೀಮತಿ ಸುರೇಖಾ ಸೂರ್ಯವಂಶಿ ಹಾಗೂ ಶಾಲೆಯ ಸಿಬಂದ್ಧಿಗಳು ಮತ್ತು ಮಕ್ಕಳು ಸಹ ಭಾಗವಹಿಸಿದ್ದರು. 

ಕಡೂರಿನ ಒಡಲಲ್ಲಿ ಬಹಳಷ್ಟು ಐತಿಹಾಸಿಕ ಸ್ಮಾರಕಗಳು ಇವೆ. ಕೆಲವಂದು ಅಜ್ಞಾತವಾದರೆ ಕೆಲವೊಂದು ಅವಸಾನದ ಹಂಚಿಗೆ ಸಾಗಿದೆ, ಅಂತಹದೆ ಒಂದು ತಾಣ ಹುಲಿಕಲ್ಲು. ಇದರ ವಿವಿರವನ್ನು ನೋಡೋಣ ಬನ್ನಿ.

ಹುಲಿಕಲ್ಲು ಇರುವುದು ಕಡೂರಿನಿಂದ ಆರು ಕಿ.ಮೀ ದೂರದಲ್ಲಿ ತಂಗಲಿ ಗ್ರಾಮದ ಹತ್ತಿರ ಜೈನ ವಸಾಹತು ಹಾಗಿತ್ತು ಎಂಬ ದಾಖಲೆಗಳು ಇವೆ. ಕಡೂರು ಸಹ ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಇತ್ತು. ಇಲ್ಲಿ ಸುಮಾರು 40 ಅಡಿ ಎತ್ತರದ ಬಂಡೆಯೊಂದರ ಮೇಲೆ 24 ತೀರ್ಥಂಕರರ ವಿಗ್ರಹಗಳ ರೇಖಾ ಚಿತ್ರಗಳಿವೆ ಈ ಬಂಡೆಯ ಮೇಲೆ 1 ಅಡಿ ಅಗಲ ಮತ್ತು 2ಅಡಿ ಎತ್ತರದ 6 ಮನೆಗಳಿರುವ 4 ಸಾಲುಗಳಲ್ಲಿ ತೀರ್ಥಂಕರರ ರೇಖಾ ಚಿತ್ರವಿದ್ದು. ಪ್ರತಿ ತೀರ್ಥಂಕರರ ಕೆಳಗೆ ಕೈಮುಗಿದು ಕುಳಿತಿರುವ ಚಿತ್ರಗಳಿವೆ. ತೀರ್ಥಂಕರರು ಇರುವ ಬಂಡೆಯ ಪಕ್ಕದಲ್ಲಿರುವ ಮತ್ತೊಂದು ಬೃಹತ್ ಬಂಡೆಯ ಕಲ್ಲು ಗಣಿಗಾರಿಕೆಗೆ ಆವುತಿಯಾಗಿದೆ. ಜೈನ ಸಮಾಜದವರು ಈ ಪ್ರದೇಶದಲ್ಲಿ ಗಣನಿಯ ಸಂಖ್ಯೆಯಲ್ಲಿ ಇದ್ದರು ಈ ಸ್ಥಳದ ಬಗ್ಗೆ ಗಮನ ಅರಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ. ವಿಜಯನ ಸ್ಮಾರಕದ ಸುತ್ತ ಕಲ್ಲು ಗಣಿಗಾರಿಕೆ ನಡೆಸುವ ಕಾರ್ಯ ವ್ಯಾಪಕವಾಗಿ ನಡೆಯುತ್ತಿದ್ದು ಶೀಘ್ರದಲ್ಲೆ ಬಂಡೆಯು ನಾಮಾವಶೇಷ ಹಾಗುವ ಮುನ್ನ ಮೇಲಾಧಿಕಾರಿಗಳು ರಕ್ಷಿಸುವ ಕಾರ್ಯ ಕೈಗೊಳ ಬೇಕೆಂಬುವುದು ಅಲ್ಲಿನ ಸ್ಥಳಿಯರ ಒತ್ತಾಯ.

ಜಾಹೀರಾತು.

ಯುಗಳ ಮುನಿಗಳಾದ ಪರಮ ಪೂಜ್ಯ 108 ಅಮರ ಕೀರ್ತಿ ಮುನಿ ಮಹಾರಾಜರು, ಪರಮ ಪೂಜ್ಯ 108 ಅಮೋಘ ಕೀರ್ತಿ ಮುನಿ ಮಹಾರಾಜರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಹಾರ ಕೈ ಗೊಂಡಿದ್ದು ಅಲ್ಲಿನ ದೃಶ್ಯ ಸಹಿತ ಸುದ್ದಿಗಳನ್ನು ತಂದಿದ್ದೇವೆ.

ಪರಮ ಪೂಜ್ಯ ಯುಗಳ ಮುನಿಮಹಾರಾಜರ ಶ್ರೀ ಕ್ಷೇತ್ರ ಕಾರ್ಕಳ ಪುರ ಪ್ರವೇಶದ ಮುಂಚೂಣಿಯಲ್ಲಿ ಸ್ವಸ್ತಿ ಶ್ರೀ ಲಲಿತ ಕೀರ್ತಿ ಭಟ್ಟಾರಕರು ಸಂಪ್ರದಾಯಕ ವಾದ್ಯ ತುಳು ನಾಡಿನ ಕೊಂಬು ವಾದನ ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷ ಚಂಡೆತಾಡದ ಮಹಿಳೆ ಹಾಗೂ ಪುರುಷರ ತಂಡ ಸುಂದರ ಸಾಂಪ್ರದಾಯಕ ಸಮವಸ್ತ್ರ ಸೀರೆಯನ್ನು ಧರಿಸಿ ಕಳಸ ಒತ್ತ ನೀರೆಯರು ಮುನಿ ಭಗವಂತರ ಸ್ವಾಗತ ಸಂಭ್ರಮದಲ್ಲಿ ಜಯ ಘೋಷದೊಂದಿಗೆ ಸಾಗುತ್ತಿರುವ ಯುವತಿಯರು ಶುದ್ದ ಶ್ವೇತ ವಸ್ತ್ರದಾರಿ ಮುನಿ ಭಗವಂತರ ಸೇವೆಗೆ ಸಜ್ಜಾಗಿ ಬಂದ ಸೇವಕರ ದಂಡು ಮುನಿ ಭಗವಂತರ ಜೊತೆಗೆ ಹೆಜ್ಜೆ ಹಾಕಿದ ಕಾರ್ಕಳದ ಪ್ರಮುಖ ಗಣ್ಯರು. ಬಾಹುಬಲಿ ನಗರ ಕಾರ್ಕಳದ ಪ್ರಮುಖ ರಸ್ತೆಗಳಲ್ಲಿ ಸಾಗಿ ಶ್ರೀ ಜೈನ ಮಠದ ಶ್ರೀ ಜೈನ ಮಠಕ್ಕೆ ಭೇಟಿ ನೀಡಿ ಶ್ರೀ ಮಠದ ಜಿನ ಮಂದಿರದ ದರ್ಶನ ಪಡೆದ ಯುಗಳ ಮುನಿ ಮಹಾರಾಜರು ಸಂಭ್ರಮದಿಂದ ಕಾರ್ಕಳದ ಭಟ್ಟಾರಕರು ಸ್ವಾಗತಿಸಿದರು. 

ಜೈನ ಕಾಶಿ ಮೂಡುಬಿದ್ರೆಯಲ್ಲಿ ಯುಗಳ ಮುನಿಗಳ ಹಾಗೂ ಪರಮ ಪೂಜ್ಯ ಸ್ವಸ್ತಿಶ್ರೀ 108 ಪ್ರಸಂಗ ಸಾಗರ ಮುನಿ ಮಹಾರಾಜರ ಪಾವನ ಸಾನಿಧ್ಯದಲ್ಲಿ ಕಲಿ ಕುಂಡಲ ಯಂತ್ರರಾಧನೆ ನಡೆದಿದೆ.

ಬಂಗ್ವಾಡಿಯ ಶ್ರೀ ಶಾಂತಿನಾಥ ಸ್ವಾಮಿ ಬಸದಿ ವಾರ್ಷಿಕ ಪೂಜಾ ಮಹೋತ್ಸವದ ಕೆಲವು ಕ್ಷಣಗಳು.

ದಿನಾಂಕ 12-01-2022ನೇ ಬುಧವಾರದಂದು ಬಂಗ್ವಾಡಿಯ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ರಥೋತ್ಸವವು ವಾಧ್ಯ ತಂಡದೊಂದಿಗೆ ಹಾಗೂ ಸಕಲ ಪೂಜಾ ವಿಧಿ ವಿಧಾನದೊಂದಿಗೆ ಎಲ್ಲಾ ಶ್ರಾವಕ ಶ್ರಾವಕಿಯರು ಭಕ್ತಿ ಪೂರ್ವಕ ನಮನಗಳೊಂದಿಗೆ ನಡೆಸಿದರು.

ಪ್ರಕಟಣೆಗಳು.

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ನಿಡಗಲ್ಲು ಕ್ಷೇತ್ರದಲ್ಲಿ ಭಗವಾನ್ ಶ್ರೀ 1008 ಕಷ್ಟಹರ ಪಾರ್ಶ್ವನಾಥ ಸ್ವಾಮಿ ಹಾಗೂ ಮಹಾ ಮಾತೆ ಪದ್ಮಾವತಿ ಅಮ್ಮನವರ ವಾರ್ಷಿಕ ಪೂಜಾ ಮಹೋತ್ಸವವನ್ನು ದಿನಾಂಕ 09-01-2022 ರಂದು ನಡೆಸಲು ತೀರ್ಮಾನಿಸಲಾಗಿತ್ತು ಆದರೆ ಕೊರೋನ ಕಟ್ಟು ನಿಟ್ಟಿನ ಆದೇಶದ ಮೇರೆಗೆ ಕಾರ್ಯಕ್ರಮವನ್ನು ಮುಂದೂಡಲಾಗಿದ್ದು ಮುಂದಿನ ಸುರಕ್ಷಿತ ದಿನಗಳಲ್ಲಿ ನಡೆಸಲಾಗುವುದು ಎಂದು ದಿನಾಂಕವನ್ನು ತಿಳಿಸಲಾಗುವುದು ಎಂದು ಸಮಿತಿ ವತಿಯಿಂದ ಜ್ವಾಲಮಾಲಗೆ ಪ್ರಕಟಣೆಯನ್ನು ತಿಳಿಸಿದ್ದಾರೆ.

ಭಾರತೀಯ ಜೈನ್ ಮಿಲನ್  ಕಾರ್ಕಳ ಹಾಗೂ ಯುವ ಜೈನ್ ಮಿಲನ್ ಕಾರ್ಕಳ ಇದರ ಮಾಸಿಕ ಸಭೆಯ ವರದಿ ಈಗಿದೆ. 

ಭಾರತೀಯ ಜೈನ್ ಮಿಲನ್ ಕಾರ್ಕಳ ಮತ್ತು ಯುವ ಜೈನ್ ಮಿಲನ್ ಕಾರ್ಕಳ ಇದರ ಡಿಸೆಂಬರ್ ತಿಂಗಳ ಮಾಸಿಕ ಸಭೆ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾರತೀಯ ಜೈನ್ ಮಿಲನ್ ವಲಯ 8ರ ಪ್ರಧಾನ ಕಾರ್ಯದರ್ಶಿಯವರಾದ ವೀರ್ ರಾಜೇಶ್ ಎಂ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಶ್ರಾವಕರು ನಿತ್ಯ ಅನುಸರಿಸ ಬೇಕಾದ ಕ್ರಿಯೆಗಳು ಜೀವನದ ಮೌಲ್ಯ ಮತ್ತು ವ್ಯಕ್ತಿತ್ವ ವಿಕಸನದ ಬಗ್ಗೆ ತಿಳಿಸಿದರು. ಸಭೆಯ ಆರಂಭದಲ್ಲಿ ಪ್ರಸ್ತುತ ಸಾಲಿನ ಮಿಲನ್ ಅಧ್ಯಕ್ಷರಾದ ದಿವಂಗತ ಅಮರ್ ನಾಥ್ ಪ್ರಸಾದ್ ಇವರ ಆತ್ಮನಿಗೆ ಸದ್ಗತಿದೊರೆಯಲೆಂದು ಮೌನ ಪ್ರಾರ್ಥನೆ ಮಾಡಲಾಯಿತು. ವೇದಿಕೆಯಲ್ಲಿದ್ದ ಗಣ್ಯರು ಪುಷ್ಪ ನಮನಗೈದರು. ಮಿಲನ್ ಕಾರ್ಯದರ್ಶಿ ವೀರ್ ಜಗದೀಶ್ ಹೆಗ್ಗಡೆ ನುಡಿ ನಮನ ಸಲ್ಲಿಸಿದರು ತದನಂತರ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಪಿ ಹೆಚ್ ಡಿ ಪದವಿ ಗಳಿಸಿದ ವಿರಾಂಗನ ವಿಜಯ ಕುಮಾರಿ, ಕಾರ್ಕಳದ  ಸ್ವರಾಜ್ ಮೈದಾನದ ಬಳಿ ಮಹಾವೀರ ಸರ್ಕಲ್ ನಿರ್ಮಿಸುವಲ್ಲಿ ಪ್ರಧಾನ ಪಾತ್ರ ವಹಿಸಿದಂತಹ ರತ್ನವರ್ಮ ಅಜಿರಿ ಸಾಂತ್ರಬೆಟ್ಟು ಹಾಗೂ ಆನ್ ಲೈನ್ ಮಾಧ್ಯಮದಲ್ಲಿ ಜಿನ ಭಜನಾ ಗಾಯನ ಸೇವ ಕೈಂಕರ್ಯವನ್ನು ಗೈಯುತ್ತಿರುವ ವೀರ್ ವಸಂತ ಕುಮಾರ್ ಬಂಗ ಇವರನ್ನು ಸನ್ಮಾನಿಸಲಾಯಿತು. ಅದೇ ರೀತಿ ಇತ್ತೀಚೆಗೆ ಮೂಡುಬಿದ್ರೆ ಮತ್ತು ವೇಣೂರಿನಲ್ಲಿ ಜರುಗಿದ ಕ್ರೀಡಾ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಮಿಲನ್ ಬಂಧುಗಳನ್ನು ಗುರುತಿಸಿ ಗೌರವಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ವೀರ್ ಅಮರ್ ನಾಥ ಹೆಗ್ಗಡೆ ಯವರು ವಹಿಸಿದ್ದರು. ಭಾರತೀಯ ಜೈನ್ ಮಿಲನ್ ವಲಯ 8ರ ನಿರ್ದೇಶಕರಾದ ಶ್ರೀ ಮಹಾವೀರ್ ಹೆಗ್ಗಡೆ ಅಂಡಾರು ಜೊತೆ ಕಾರ್ಯದರ್ಶಿಗಳಾದ ವಿರಾಂಗನ ಶಶಿಕಲಾ ಕೆ ಹೆಗ್ಗಡೆ, ಮಿಲನ್ ಕಾರ್ಯದರ್ಶಿ ವೀರ್ ಜಗದೀಶ್ ಹೆಗ್ಗಡೆ ಯುವ ಮಿಲನ್ ಅಧ್ಯಕ್ಷರಾದ ವೀರೆಂದ್ರ ಜೈನ್ ಕಾರ್ಯಕ್ರಮದ ಅತಿಥ್ಯ ವಹಿಸಿದ ವೀರ್ ಶಾಂತಿರಾಜ್ ಹೆಗ್ಗಡೆ, ವೀರ್ ಶರತ್ ಕುಮಾರ್, ವೀರ್ ಶ್ರೀಧರ್ ಭಂಡಾರಿ, ವೀರ್ ಹೇಮಚಂದ್ರ ಜೈನ್, ವೀರ್ ಸುರೇಂದ್ರ ನಾಥ ಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಿಲನ್ ಜೊತೆ ಕಾರ್ಯದರ್ಶಿ ವೀರ್ ನಿರಂಜನ್ ಜೈನ್ ವರದಿ ವಾಚಿಸಿದರು, ವಿರಾಂಗನ ವೀರ್ ಹೇಮಚಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿದರು, ವೀರ ಕುವರಿ ನಿಶಾ ಪ್ರಸಾದ್, ಪ್ರಾರ್ಥಿಸಿ ವಂದಿಸಿದರು, ಪಿ ವಿ ಸುರೇಶ್ ಇಂದ್ರ ಇವರು ಶಾಂತಿ ಮಂತ್ರ ಪಠಿಸುವುದರೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು.