ಸಾಹಿತರೊಂದಿಗೆ ಸಂವಾದ- 05

ಅನುವಾದ ಶೈಕ್ಷಣಿಕ ಸಾಹಿತ್ಯ ಗ್ರಂಥ  ಸಂಪಾದನೆ ಹೀಗೆ  ಇನ್ನೂ ಹಲವು ಪ್ರಕಾರಗಳಲ್ಲಿ ಕೊಡುಗೆ ನೀಡಿರುವ  ಶಿಕ್ಷಣ ತಜ್ಞರಾದ ಶ್ರೀಮತಿ ಡಾ. ಎಸ್ .ಡಿ ಪ್ರೇಮಕುಮಾರಿ ಯವರು  ಹೊಸನಗರದಲ್ಲಿ  19 ಮೇ 1940 ರಲ್ಲಿ ಜನಿಸಿದರು. ಬಿಎಸ್ ಸಿ , ಎಂ.ಇ  ಬಿಎಡ್ ಪದವೀದರರಾದ  ಡಾ|| ಪ್ರೇಮಕುಮಾರಿಯವರು  ಹಿಂದಿ ಭಾಷಾಪ್ರವೀಣ ಸಂಸ್ಕೃತ ಭಾಷಾ ಕೋವಿದಾ  ಹಾಗೂ ಪ್ರಾಕೃತದಲ್ಲಿ ಡಿಪ್ಲೋಮಾ ಪಡೆದಿದ್ದಾರೆ.  28 ವರ್ಷಗಳ ಅವಧಿಯ ಭೋದನಾ  ಪಿ ಎಲ್ ಬಿ ಕೆ ಜೂನಿಯರ್ ಕಾಲೇಜಿನ ಪ್ರಿನ್ಸಿಪಾಲರಾಗಿ  ನಿವೃತ್ತರಾಗಿದ್ದಾರೆ. ಮೂಲತ: ವಿಜ್ಞಾನ ಶಿಕ್ಷಕರಾದ  ಇವರು ಹಿಂದಿ ಮಾಧ್ಯಮ ಶಾಲೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಹಿಂದಿ ಭಾಷೆಯಲ್ಲಿ ವಿಜ್ಞಾನ ಪಠ್ಯಪುಸ್ತಕಗಳ ಅವಶ್ಯಕತೆಯನ್ನು ಮನಗಂಡು  ರಸಾಯನ ಶಾಸ್ತ್ರ ಜೀವಶಾಸ್ತ್ರ  ಪಠ್ಯಪುಸ್ಕಗಳನ್ನು  ಹಿಂದಿ ಭಾಷೆಗೆ ಅನುವಾದಿಸಿದ್ದಾರೆ. ಅನುವಾದಿಸಿದ್ದಾರೆ  ಇವರ  ಈ ಕಾರ್ಯವನ್ನು ಎಲ್ಲರೂ ಪ್ರಶಂಸಿದ್ದಾರೆ. ಇತ್ತೀಚೆಗಷ್ಟೇ ಜ್ವಾಲಾಮಾಲಾ ಹಿಂದಿಯಲ್ಲೂ ಕೂಡ ಆರಂಭಗೊಂಡಿದ್ದು  ಈ ಸಂದರ್ಭದಲ್ಲಿ ಡಾ|| ಎಸ್. ಡಿ ಪ್ರೇಮಕುಮಾರಿಯವರನ್ನು ಪರಿಚಯಿಸುತ್ತಿರುವುದು ಜ್ವಾಲಾಮಾಲಾಗೆ ಹೆಮ್ಮೆಯ ವಿಷಯವಾಗಿದೆ. ಡಿ.ಡಿ.ಪಿ ಐ ಮತ್ತು ಕಮಿಷನರ್ ಆಫ್ ಪಬ್ಲಿಕ್ ಇನ್ಸ್ಡ್ರಕ್ವರ್  ಇವರಿಗಾಗಿ ಪರಿಸರ ಮಾಲಿನ್ಯ ಆರೋಗ್ಯ ಕುರಿತಾದ ಆಡಿಯೋ ವೀಡಿಯೋ  ಹಾಗೂ ಬ್ರಿದ್ಜ್ ಕೋರ್ಸ್ ಗಳನ್ನು ತಯಾರಿಸಿದ್ದಾರೆ.  ನಿವೃತ್ತಿಯ ನಂತರ ಜೈನ ಧಾರ್ಮಿಕ  ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ  ಪ್ರೇಮಕುಮಾರಿಯವರು ಮುನಿಶ್ರೀ ಪ್ರಮುಖ ಸಾಗರ್ ಜಿಯವರ  ಗೃಹಸ್ಥಗೀತೆ , ಶ್ರಾವಕಾಚಾರ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಮುನಿಶ್ರೀ ಧರ್ಮಸಾಗರರವರ  ಕಹಿ ಮಾತ್ರೆಗಳು  ಹೀಗೆ ಇನ್ನೂ ಹಲವಾರು ಪುಸ್ತಕಗಳನ್ನು ಅನುವಾದಿಸಿದ್ದಾರೆ.  ಶ್ರೀ ಪದ್ಮರಾಜ್ ಗಂಗಾವತಿಯವರ ಗೊಮ್ಮಟ ಹಾಗೂ ಪದ್ಮರಾಜ್ ಶರ್ಮರವರ  ನಿಗ್ರಂಥ ರತ್ನ ಕೃತಿಗಳನ್ನು ಕನ್ನಡದಿಂದ ಹಿಂದಿಗೆ ಅನುವಾದಿಸಿದ್ದಾರೆ. ಶ್ರೀ ಉದಯಚಂದ್ರ ಕವಿಯ ಸುಗಂಧ ದರ್ಶಿನಿ ಕಥಾ ಕೃತಿಯನ್ನು ಪ್ರಾಕೃತದಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾವಾಂಜಲಿ ಎಂಬ  ಕವನ ಸಂಕಲನ ಹಾಗೂ ವರ್ಧಮಾನ  ಪುರಾಣ ಕೃತಿಯನ್ನು ಇವರೇ ಸ್ವತಃ ರಚಿಸಿದ್ದಾರೆ. ಸ್ಮರ್ಣ ಸಂಜಿಕೆಗಳಾದ ಚಕ್ರೇಶ್ವರಿ  ಪಾವನಶ್ರೀ ಸುರಛಾಪ  ಸತಸಂಭ್ರಮ  ಚಿನ್ಮಯ ಸಿರಿ ಹಾಗೂ ಮಾಧವಿ ಸಹ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಶ್ರೀ ಚಕ್ರೇಶ್ವರಿ ಮಹಿಳಾ  ಸಮಾಜದ ಕಾರ್ಯಕಾರಿ ಸದಸ್ಯರಾಗಿ ಹಾಗೂ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.  ಡಾ. ಎಸ್ .ಡಿ ಪ್ರೇಮಕುಮಾರಿಯವರು  ಹೀಗೆ ಇನ್ನೂ ಹತ್ತು ಹಲವಾರು ಪ್ರಶಸ್ತಿಗಳನ್ನು ತೆಗೆದುಕೊಳ್ಳುವುದರಲ್ಲಿ ಬಾಜನರಾಗಿದ್ದಾರೆ. 1996 ರಲ್ಲಿ ಕರ್ನಾಟಕದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ , ಶಿವಮ್ಮ ಹೊಂಬೇಗೌಡ ಟ್ರಸ್ಟ್  ಪ್ರಶಸ್ತಿ ಅಲ್ಲದೇ ಶ್ರೀ ಚಕ್ರೇಶ್ವರಿ ಮಹಿಳಾ ಸಮಾಜ  ಕರ್ನಾಟಕ ಜೈನ್ ಅಸೋಸಿಯೇಷನ್ಸ್ , ಮೂಡುಬಿದಿರರೆ ಮಹಿಳಾ ಸಮಾಜ  ತುಮಕೂರು ಮಹಿಳಾ ಸಮಾಜ  ಹುಬ್ಬಳ್ಳಿ ಜೈನ ಸಮಾಜ ಸ್ವಸ್ಥಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಂದ ಸನ್ಮಾನಿಸಲ್ಪಟ್ಟಿದ್ದಾರೆ.  ಕನ್ನಡ, ಇಂಗ್ಲೀಷ್, ಹಿಂದಿ , ಸಂಸ್ಕೃತ , ಪ್ರಾಕೃತ ಹೀಗೆ ಪಂಚ ಭಾಷೆಗಳಲ್ಲಿ  ಪ್ರಾವಿಣ್ಯತೆ  ಹೊಂದಿರುವ  ಅತೀ ಉತ್ಸಾಹದಿಂದ ಕ ಕೂಡಿರುವ ಉತ್ಸಾಹದ  ಡಾ|| ಪ್ರೇಮಕುಮಾರಿಯವರು  ಶೈಕ್ಷಣಿಕವಾಗಿ ಧಾರ್ಮಿಕವಾಗಿ ,ಸಾಮಾಜಿಕವಾಗಿ ತಮ್ಮನನ್ನು ತೊಡಗಿಸಿಕೊಂಡಿದ್ದು ಯುವ ಪೀಳಿಗೆಗೆ ಸ್ಪೂರ್ತಿ ದಾಯಕರಾಗಿದ್ದಾರೆ. ಇವರಿಗೆ ನಮ್ಮ ಚಾನೆಲ್ ನ ಪರವಾಗಿ ಅಭಿನಂದನೆಗಳಉ ಗೌರವ ಪೂರ್ವಕ ನಮನಗಳನ್ನು ಸಮರ್ಪಿಸುತ್ತೇವೆ.

ನಾವು ಅವರನ್ನು ಸಂದರ್ಶನ ಮಾಡಿದಾಗ  ಅವರು ಮಾಡಿದ ಹಲವಾರು ಕೃತಿಗಳ ತರ್ಜುಮೆ ಮಾಡುವ ಕಾರ್ಯವನ್ನು ಹೇಳಿದರು. ಅವರು ಹಿಂದಿ , ಸಂಸ್ಕೃತದಲ್ಲಿರುವ ಕೃತಿಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಕಾರ್ಯವನ್ನು ವಿವರವಾಗಿ ತಿಳಿಸಿಕೊಟ್ಟರು. ಅವರು ಬರೆಯುವ ಕಲೆಯನ್ನು ಹೇಗೆ ರೂಢಿಸಿಕೊಂಡರು ಎಂದು ತಿಳಿಸಿಕೊಟ್ಟರು ಅವರು ಗೃಹಿಣಿಯಾಗಿ ಶಾಲೆಯ ಕೆಲಸವನ್ನು ಮುಗಿಸಿಕೊಂಡು ಬಂದು ನಂತರ ಬಿಡುವಿನ ವೇಳೆಯಲ್ಲಿ ತಮ್ಮ ಕೃತಿಗಳನ್ನು ಬರೆಯುವ ಹವ್ಯಾಸವನ್ನು ರೂಢಿಸಿಕೊಂಡಿದ್ದೆ ಎಂದು ತಿಳಿಸಿಕೊಟ್ಟರು.  ಸರ್ಕಾರಿಯ ಆದೇಶದ ಮೇರೆಗೆ ಬರೆದ ಪುಸ್ತಕಗಳು ನನಗೆ ತುಂಬಾ ತೃಪ್ತಿ ತಂದಿದೆ ಎಂದರು. ನಮ್ಮ ಹಾಗೆ ಈಗಲೂ ಸಹ ಹಲವಾರು ಪ್ರತಿಭೆಗಳು ನಮ್ಮ ಸುತ್ತ ಮುತ್ತಲೂ ಎಲೆಮರೆ ಕಾಯಿಯಂತೆ ಇರುತ್ತಾರೆ ಆದ್ದರಿಂದ  ಈಗಿನ ಪೀಳಿಗೆಯ ಮಕ್ಕಳಿಗೆ ನಾವು ಪ್ರೋತ್ಸಾಹವನ್ನು ಕೊಟ್ಟು ಅವರ ಹವ್ಯಾಸಗಳನ್ನು ಬೆಳೆಸಿಕೊಳ್ಳುವ ಕಾರ್ಯವನ್ನು ಮಾಡೋಣ ಎಂದು ಸಂದೇಶವನ್ನು ಹೇಳಿದರು. ಹಾಗೂ ನಮ್ಮ ಜೈನ ಸಾಹಿತ್ಯ ಉಳಿಸಿ ಬೆಳೆಸುವ ಕಾರ್ಯ ಪ್ರತಿಯೊಬ್ಬ ನಮ್ಮ ಜೈನ ಭಾಂದವರ ಆದ್ಯ ಕರ್ತವ್ಯ ವಾಗಿದೆ ಎಂದು ತಮ್ಮ ಅನಿಸಿಕೆಯನ್ನು ನಮ್ಮ ವಾಹಿನಿಗೆ ಹಂಚಿಕೊಂಡರು.

ಈ ಕಾರ್ಯಕ್ರಮದ ನಿರೂಪಣೆ ಮಾಡಿದವರು : ಪ್ರೋ. ಸಿ.ಪಿ ಉಷಾರಾಣಿ, ಮುಖ್ಯಸ್ಥರು, ಆಂಗ್ಲಭಾಷೆ ವಿಭಾಗ, ಬೆಂಗಳೂರು.

ಮತ್ತೆ ನಮ್ಮ ನಿಮ್ಮ ಭೇಟಿ ಮುಂದಿನ ಜ್ಞಾನದೀಪಿಕೆಗಳು ಕಾರ್ಯಕ್ರಮದಲ್ಲಿ ಜೈ ಜಿನೇಂದ್ರ

.