ಜ್ವಾಲಾಮಲೆ ನ್ಯೂಸ್ / 2021

ಜೈ ಜಿನೇಂದ್ರ ವೀಕ್ಷಕರೆ, ಯಾವಾಗಲು ಸಮಾರಂಭಗಳಿಂದ ವಾಧ್ಯ ವೃಂದ್ದದವರಿಂದ ಭಕ್ತವೃಂದ್ಧದವರಿಂದ ಚಟುವಟಿಕೆಯಿಂದ ಇರುತ್ತಿದ್ದ ಶ್ರೀ ಕ್ಷೇತ್ರ ಶ್ರವಣ ಬೆಳಗೊಳ ಹಲವು ದಿನಗಳಿಂದ, ದಿನಗಳು ಏಕೆ, ಎರಡುವರೆ ವರ್ಷಗಳಿಂದ ಯಾವುದೇ ವಿಜೃಂಭಣೆಯ ಕಾರ್ಯಕ್ರಮಗಳು ಮಹೋತ್ಸವಗಳು ಸ್ವಾಗತ ಮೆರವಣಿಗೆಗಳು ಕಾಣದೆ ನೀರವ ಮೌನವಹಿಸಿತ್ತು. ಎಷ್ಟೊ ದಿನಗಳ ನಂತರ ನವೆಂಬರ್ 24,25-2021 ಈ ದಿನಗಳು ಅವುಗಳನ್ನು ಮತ್ತೇ ತಂದು ಕೊಟ್ಟಿವೆ. 24 ರಂದು ಶಾಂತಿ ವಿಧಾನದಿಂದ ಚಾಲನೆ ನೀಡಿ 25-11-2021ರಂದು ಅಖಿಲ ಭಾರತೀಯ ವರ್ಷೀಯ ದಿಗಂಬರ ಜೈನ ತೀರ್ಥಕ್ಷೇತ್ರ ಕಮಿಟಿಯ ನೂತನ ಅಧ್ಯಕ್ಷರಾದ ಶ್ರೀ ಶಿಖರ್ ಚಂದ್ ಜೀ ಪಹಾಡಿಯಾ ಅವರಿಗೆ ಸ್ವಾಗತ ಮತ್ತು ಅಭಿನಂದನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಪಹಾಡಿಯಾ ದಂಪತಿಯನ್ನು ಪೂರ್ಣ ಕುಂಭ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು.

ನಂತರ ನಡೆದ ವೇದಿಕೆ ಕಾರ್ಯಕ್ರಮ ಪರಮ ಪೂಜ್ಯ ಮುನಿಶ್ರೀ 108 ಗುಲಾಬಿ ಭೂಷಣ ಮುನಿ ಮಹಾರಾಜರು, ಪರಮ ಪೂಜ್ಯ ಮುನಿಶ್ರೀ 108 ಅಮಿತಂಜನ ಮುನಿ ಮಹಾರಾಜರು, ಪೂಜ್ಯ ಮಾತಾಜೀ  ವೃಂದದವರ ಪಾವನ ಸಾನಿಧ್ಯ. ಪರಮ ಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದೊಂದಿಗೆ ಚಾವುಂಡರಾಯ ಮಂಟಪದಲ್ಲಿ ನಡೆಯಿತು. ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಬಿ ಪ್ರಸನ್ನಯ್ಯ ನವರಿಂದ ದೀಪಪ್ರಜ್ವಲನೆ ಮೂಲಕ ಉದ್ಘಾಟನೆಗೊಂಡ ವೇದಿಕೆಯಲ್ಲಿ ಸಮಾರಂಭದ ಮುಖ್ಯ ಕೇಂದ್ರ ಬಿಂದು ತೀರ್ಥ ಕ್ಷೇತ್ರ ಕಮಿಟಿಯ ಅಧ್ಯಕ್ಷರಾದ ಶ್ರೀ ಶಿಖರ್ ಚಂದ್ ಜೀ ಪಹಾಡಿಯಾ, ಕಮಿಟಿಯ ರಾಷ್ಟ್ರೀಯ ಮಹಾಮಂತ್ರಿಗಳಾದ ಸಂತೋಷ್ ಜೈನ್ ಪೆಂಡಾರಿ, ರಾಷ್ಟ್ರೀಯ ಮಂತ್ರಿ ಶ್ರೀ ಜೈ ಕುಮಾರ್ ಕೋಟಾವಾಲ, ಕರ್ನಾಟಕ ತೀರ್ಥ ಕ್ಷೇತ್ರ ಕಮಿಟಿಯ ಅಧ್ಯಕ್ಷರಾದ ಶ್ರೀ ವಿನೋದ್ ಭಾಕ್ಲಿವಾಲ, ತಮಿಳುನಾಡಿನ ಕ್ಷೇತ್ರಿಯ ಅಧ್ಯಕ್ಷರಾದ ಶ್ರೀ ದಿನೇಶ್ ಜೀ ಸೇಟಿ, ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಬಿ ಪ್ರಸನ್ನಯ್ಯ, ಕರ್ನಾಟಕ ದಿಗಂಬರ ಜೈನ ತೀರ್ಥ ಕ್ಷೇತ್ರ ಕಮಿಟಿಯ ಮಹಾಮಂತ್ರಿ ವಿನೋದ್ ದೊಡ್ಡಣ್ಣನವರ್, ಖಂಡೇವಾಲ್ ಜೈನ ಸಮಾಜದ ಅಧ್ಯಕ್ಷರಾದ ನಿಹಾರ್ ಚೈನ್ಜೀ, ಶ್ರವಣ ಬೆಳಗೊಳದ ಸಮಾಜದ ಅಧ್ಯಕ್ಷರು ಹಾಗೂ ಕರ್ನಾಟಕದ ಅನೇಕ ಊರುಗಳಿಂದ ಆಗಮಿಸಿದ ಜೈನ ಸಮಾಜದ ಅಧ್ಯಕ್ಷರುಗಳು, ಕೆ ಜೆ ಎ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕರ್ನಾಟಕ ತೀರ್ಥಂಕರರ ಕ್ಷೇತ್ರ ಕಮಿಟಿ ಹಾಗೂ ಶ್ರೀ ಮಠದ ಪರವಾಗಿ ಶ್ರೀಯುತರಿಗೆ ಸನ್ಮಾನ ಕಾರ್ಯ ನಡೆದುದ್ದಲ್ಲದೇ, ಶ್ರೀಗಳಿಂದ ಪಹಾಡಿಯಾ ಜೀ ಯವರಿಗೆ ಶ್ರಾವಕ ರತ್ನ ಪ್ರಶಸ್ಥಿ ನೀಡಿ ಗೌರವಿಸಲಾಯಿತು. ಅತಿಥಿಗಳು ಕಾರ್ಯಕ್ರಮದಲ್ಲಿ ಮಾತನಾಡಿದರಲ್ಲದೆ ಅವರು ಕೈಗೊಂಡ ಬೃಹತ್ ಕಾರ್ಯ ಅಧ್ಯಕ್ಷರದಾಗಿನಿಂದ ಬಿಡುಗಡೆಗೊಳಿಸಿದ 85 ಲಕ್ಷಗಳವರೆಗಿನ ಅನುದಾನದ ವಿವರದ ಜೊತೆಗೆ ಅನೇಕ ಕ್ಷೇತ್ರಗಳಿಗೆ ಅನುದಾನವನ್ನು ಸ್ಥಳದಲ್ಲಿಯೆ ಗೋಷಿಸಿದರು. ಅದರಲ್ಲಿ ಪ್ರಮುಖವಾಗಿ ಶ್ರವಣ ಬೆಳಗೊಳಕ್ಕೆ 25 ಲಕ್ಷ ಈ ಮೊದಲೆ ನೀಡಲಾಗಿದ್ದು ಈ ಬಾರಿ ಇನ್ನು 25 ಲಕ್ಷ ಗೋಷಣೆಯನ್ನು ಮಾಡಲಾಯಿತು ಹಾಗೂ ಮಂದಾರಗಿರಿ ಕ್ಷೇತ್ರಕ್ಕೆ 11 ಲಕ್ಷ ಬಿಡುಗಡೆಗೊಳಿಸಲಾಗಿದ್ದು, ಇನ್ನೂ 14 ಲಕ್ಷ ರೂಗಳ ಅನುದಾನದ ಗೋಷಣೆ ಆಯಿತು.

ಅಲ್ಲದೇ ಇದೆ ಸಂದರ್ಭದಲ್ಲಿ ಆಗಮಿಸಿದ ಎಲ್ಲಾ ಅನೇಕ ಸಮಾಜದವರ ವತಿಯಿಂದಲು ಕೂಡ ಅವರಿಗೆ ಗೌರವ ಸಮರ್ಪಿಸಲಾಯಿತು.

ಪರಮ ಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಯವರು ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಆದಂತಹ ತೊಂದರೆಗಳನ್ನು ಕುರಿತು ಮಾತನಾಡಿದರು. ಆ ಸಂದರ್ಭದಲ್ಲಿ ಶ್ರೀ ಶಿಖರ್ ಚಂದ್ ಜೀ ಪಹಾಡಿಯಾ ಅವರು ಮಾಡಿದಂತಹ ಕಾರ್ಯಗಳನ್ನು ಕುರಿತು ಶ್ಲಾಘೀಸಿದರು.

ಕಾರ್ಯಕ್ರಮ ಶ್ರೀ ಕುಮುದ ನಾಗಭೂಷಣ್ ರವರ ನಿರೂಪಣೆಯಲ್ಲಿ ಅಚ್ಚುಕಟ್ಟಾಗಿ ಮೂಡಿಬಂತು