ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯ ತಾಲ್ಲೂಕು ಕೇಂದ್ರವಾದ ಇಂಡಿಯನ್ನು ಪ್ರವೇಶಿಸುತ್ತಲೆ ಮಾರ್ಗ ಮಧ್ಯದಲ್ಲಿ ಜೈನ ಧರ್ಮ ಚಕ್ರವನ್ನು ಒಳಗೊಂಡ ತ್ರಿಲೋಕ ಮತ್ತು ಸ್ವಪ್ನಾವಳಿಗಳ ಚಿತ್ರವನ್ನು ಒಳಗೊಂಡ ಸ್ತಂಭವು, ವೃತ್ತ ಒಂದರ ಮಧ್ಯದಲ್ಲಿ ನಿಲ್ಲಿಸಿರುವುದನ್ನು ಕಂಡಾಗಲೆ ಇಲ್ಲಿನ ಸಮಾಜ ಭಾಂದವರ ಧರ್ಮ ಶ್ರದ್ದೆಯ ಅನುಭವವಾಗುತ್ತದೆ. ಹೌದು ವಿಜಯಪುರದಿಂದ 50 ಕಿ,ಮೀ ದೂರದಲ್ಲಿ ಸೋಲ್ಲಾಪುರದಿಂದ 60 ಕಿ.ಮೀ ದೂರದಲ್ಲಿ ಇರುವಂತಹ ಅತಿಶಯ ಕ್ಷೇತ್ರವೇ ಇಂಡಿ.
ಕ್ರಿ. ಶ 1673ರಲ್ಲಿ ನಿರ್ಮಾಣಗೊಂಡಂತಹ ಅತಿಪುರಾತನವಾದ ಜಿನ ಮಂದಿರ. ಇಲ್ಲಿ ಅನೇಕ ಜೈನ ಮನೆತನಗಳು ಧರ್ಮ ಪ್ರಭಾವನೆಯಲ್ಲಿ ತಮ್ಮ ಮಹತ್ವದ ಕಾರ್ಯವನ್ನ ನಿರ್ವಹಿಸುತ್ತಿವೆ.
ಇಲ್ಲಿನ ಭಗವಾನ್ 1008 ಆದಿನಾಥ ದಿಗಂಬರ ಜೈನ ಮಂದಿರ ಬಹಳ ಪ್ರಾಚೀನವಾದುದ್ದು ಇದರ ನಿರ್ಮಾಣ ಕ್ರಿ. ಶ 1673ರಲ್ಲಿ ಆಗಿದೆ. ಈ ಮಂದಿರದ ಬಗ್ಗೆ ಹೇಳ ಬೇಕೆಂದರೆ ಈ ಮಂದಿರಕ್ಕೆ ವಿಶೇಷವಾಗಿ ಆರು ಶಿಖರಗಳು ಇವೆ. ಈ ಜಿನಾಲಯ ಪ್ರವೇಶ ದ್ವಾರ, ಮಂಟಪ ನಂತರ ಮಾನಸ್ತಂಭ ದರ್ಶನ, ಮಂಟಪ, ಗರ್ಭಗುಡಿ, ನವರಂಗ ಮಂಟಪ, ನವರಂಗ ಮಂಟಪದಲ್ಲಿ ಮೂಲನಾಯಕ. 16 ನೇ ಶತಮಾನದ ಪ್ರಾರಂಭದಲ್ಲಿ ಮಂದಿರದ ಮೂಲ ನಾಯಕರಾದ ಅತಿಶಯಕಾರಿ ಚೌಹೀಸ ತೀರ್ಥಂಕರ ಸಹಿತ ಆದಿನಾಥ ಮೂರ್ತಿಯನ್ನು ಇಲ್ಲಿನ ಪುರೋಹಿತ ಮನೆತನದ ಪೂರ್ವಜರು ಮತಾಂದತೆಯ ದಾಳಿಯಿಂದ ತೊಂದರೆಗೆ ಒಳಗಾದಾಗ ಉಪಾಯದಿಂದ ಈ ಮೂರ್ತಿಯನ್ನು ರಾತ್ರೋರಾತ್ರಿ ಪರಿವಾರ ಜೊತೆಯಾಗಿ ಶವದ ರೂಪದಲ್ಲಿ ಇಂಡಿಗೆ ತಂದು ಇಲ್ಲಿನ ಶ್ರಾವಕರ ಆಶ್ರಯ ಪಡೆದು ಕಾಲಕ್ರಮೇಣದಲ್ಲಿ ವಾಸ್ತು ವಿಶೇಷತೆ ಇಂದ ಮಂದಿರದ ಭೌವ್ಯ ನಿರ್ಮಾಣವಾಗುತ್ತದೆ. ಇಲ್ಲಿನ ಆದಿನಾಥ ತೀರ್ಥಂಕರರು ಅತಿಶಯ ಕಾರಿಯಾಗಿದ್ದಾರೆ. ಇಲ್ಲಿನ ಗರ್ಭ ಮಂದಿರದ ವಿನ್ಯಾಸ ನವರಂಗ ಮಂಟಪದಿಂದ ಕೂಡಿದ್ದಲ್ಲದೆ ವಿಶಾಲವಾಗಿದೆ. ಮಹಾವೀರ ಸ್ವಾಮಿ ನವರತ್ನ ನವಗ್ರಹಗಳ ಪ್ರತಿಮೆ ಬಿಟ್ಟರೆ ಇಲ್ಲಿನ ಎಲ್ಲಾ ಮೂರ್ತಿಗಳು ಪ್ರಾಚೀನವಾಗಿವೆ.
ವಿಶೇಷವಾಗಿ ಆರಾಧನ ಮಂಟಪ ತ್ಯಾಗಿ ನಿವಾಸ ಸುಂದರ ವಿನ್ಯಾಸ ಉಳ್ಳ ಮಾನಸ್ತಂಭ ಈ ಮಂದಿರದ ಮೇಲ್ಛಾವಣಿಯ ವಿನ್ಯಾಸವೂ ಕೂಡ ವಿಶೇಷತೆ ಯಿಂದ ಕೂಡಿದೆ. ಈಗೆ ಮಂದಿರ ವಿಶೇಷವಾದ ವಿನ್ಯಾಸವನ್ನು ಹೊಂದಿದೆ. ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಇದೇ ಪುರೋಹಿತ ಮನೆತನದವರು ಪೂಜೆ ವಿಧಿವಿಧಾನವನ್ನು ನಡೆಸಿಕೊಂಡು ಬಂದಿದ್ದಾರೆ. ಇಲ್ಲಿನ ಶ್ರಾವಕರು ಸಹ ಉತ್ಸುಕತೆಯಿಂದ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ಇಲ್ಲಿನ ಪುರೋಹಿತ ಮನೆತನದ ಇನ್ನೊಂದು ವಿಶೇಷತೆ ಏನೆಂದರೆ ಈ ಮನೆತನದ ಪೂರ್ವಜರು ಆದಿಲ್ ಶಾಹಿ ಕಾಲದಲ್ಲಿ ಅವನ ಮಗಳ ರೋಗವನ್ನು ಕೇವಲ ವನಸ್ಪತಿಯಿಂದ ವಾಸಿ ಮಾಡಿದ್ದರು. ಅದರ ಬದಲಾಗಿ ಕೃತಜ್ಞತೆಯನ್ನು ಸಲ್ಲಿಸುವ ಸಲುವಾಗಿ ರಾಜನು ಅವರಿಗೆ ಒಂದು ಗುಡ್ಡವನ್ನು ಬಳುವಳಿಯಾಗಿ ಕೊಟ್ಟನ್ನು, ಅದುವೇ ಇಂದಿನ ಅತಿಶಯ ಕ್ಷೇತ್ರ ಸ್ಥವನಿಧಿ, ಸ್ಥವನಿಧಿಯ ಬ್ರಹ್ಮರಾಯ. ಇವತ್ತಿಗೂ ಇದರ ಉಲ್ಲೇಖ ಬ್ರಹ್ಮರಾಯ ಮಂದಿರದಲ್ಲಿ ಇರುವ ತಾಮ್ರದ ಪಟ್ಟಿಯ ಮೇಲೆ ಇದೆ. ಇದನ್ನು ನಾವು ಸ್ಥವನಿಧಿ ಕ್ಷೇತ್ರ ಪರಿಚಯದಲ್ಲೂ ಸಹ ಉಲ್ಲೇಖಿಸಿದ್ದೇವೆ. ಇಲ್ಲಿನ ಮಂದಿರದಲ್ಲಿ ಮಾತೆ ಪದ್ಮಾವತಿ ತಾಯಿ ಹಾಗೂ ಕ್ಷೇತ್ರಪಾಲ ವಿಗ್ರಹವು ಕೂಡ ಪ್ರತಿಷ್ಟಾಪನೆಗೊಂಡಿದೆ.
ಈ ಕ್ಷೇತ್ರದ ಮತ್ತೊಂದು ಆಕರ್ಷಣೆ ಎಂದರೆ ಸ್ವಾಮಿ ಕಟ್ಟೆ, ಇದು ಆಚಾರ್ಯ ಪಾಯಸಾಗರ ಮಹಾರಾಜರು ಧ್ಯಾನ ಮಾಡಿದ ಸ್ಥಳವಾಗಿದೆ. ವಿಶೇಷ ಹಬ್ಬ ಹರಿದಿನಗಳಲ್ಲಿ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಇಲ್ಲಿನ ಸಮಾಜ ಬಾಂಧವರು ಕ್ಷೇತ್ರದಲ್ಲಿ ಬೃಹತ್ ಶಾಲೆಯ ನಿರ್ಮಾಣಮಾಡಿ ವೀರಭಾರತಿ ವಿದ್ಯಾ ಕೇಂದ್ರ ಸ್ಥಾಪಿಸಿ ಶೈಕ್ಷಣಿಕ ಪ್ರಗತಿಗೆ ಕೈಜೋಡಿಸಿದ್ದಾರೆ. ಅಲ್ಲದೇ ಶ್ರೀಮತಿ ರಾಜಮತಿ ನೇಮಿನಾಥ ವರ್ಧಮಾನ ಕ್ರೀಡಾಂಗಣ ಕೂಡ ಇಲ್ಲಿನ ಸಮಾಜದ ಕೊಡುಗೆಯಾಗಿದೆ. ಇಲ್ಲಿ ಸಮುದಾಯ ಭವನ ಕೂಡ ನಿರ್ಮಾಣಗೊಂಡಿದೆ. ಈ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ನಮ್ಮ ತಂಡ ಭೇಟಿನೀಡಿದಾಗ ಉಪಸ್ಥಿತರಿದ್ದರು. ಒಟ್ಟಿನಲ್ಲಿ ಸಮುದಾಯಕ್ಕೆ ಮಾದರಿಯಾಗಿದೆ ಇಲ್ಲಿನ ಜೈನ ಸಮಾಜ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.














