ಹೆಮ್ಮೆಯ ಶ್ರಾವಣಕ-ಶ್ರಾವಣಕಿ- 03

-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

ಜ್ವಾಲಾ ಮಾಲಾ ನ್ಯೂಸ್ ಅರ್ಪಿಸುತ್ತಿರುವ ನೂತನ ಕಾರ್ಯಕ್ರಮ ಸಮುದಾಯದ ಸೇವೆಯಲ್ಲಿ ನಿರತ ಶ್ರಾವಕ/ಶ್ರಾವಕಿಯರ ಜೀವನಗಾಥೆ.

ಹೆಮ್ಮೆಯ ಶ್ರಾವಕ ಅಥವಾ ಶ್ರಾವಕಿ

ಸಮಾಜಕ್ಕಾಗಿ ಮುಡುಪಾದ ಕಥೆಯನ್ನು ಸಮಾಜದವರೇ ನೋಡಿ ಅವರನ್ನು ಇನ್ನು ಹೆಚ್ಚಿನ ಸೇವೆಗಾಗಿ ಹುರಿದುಂಬಿಸುವ ಕಾರ್ಯ ನಿಮ್ಮಿಂದ ಆಗಲಿ

ಜೈ ಜಿನೇಂದ್ರ ವೀಕ್ಷಕರೆ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಳಗೆರೆ ಗ್ರಾಮ, ಪ್ರಕೃತಿ ನಿರ್ಮಿತ ಮಲೆನಾಡಿನ ಪರಿಸರ, ಈ ಪರಿಸರದ ನಡುವೆ ಬಹಳ ಹಿಂದಿನ ಕಾಲದಿಂದ ತನ್ನತನವನ್ನು ಉಳಿಸಿಕೊಂಡು ಬಂದಿರುವ ದೊಡ್ಡಮನೆ. ವೀಕ್ಷಕರೆ ಈ ಮನೆಯ ಪ್ರಸ್ತುತ ಒಡೆಯರಾಗಿರುವ ಜಮೀನುದಾರರಾದ ಎಲ್ಲದಕಿಂತ ಹೆಚ್ಚಾಗಿ  ಧರ್ಮಾತ್ಮರಾದ ಶ್ರೀ ವಿ ಸಿ ಪಾರ್ಶ್ವನಾಥ್ ಜೈನ್ ಇವರ ಬಗ್ಗೆ ನಾನು ಪ್ರಸ್ಥಾಪಿಸುತ್ತಿದ್ದೇನೆ.

ಅಲ್ಲಿನ ಸುತ್ತಮುತ್ತಲಿನ ಜನಕ್ಕೆ ಇವರು ಚಿರಪರಿಚಿತರಾದ ಗೌರವಾನ್ವಿತರಾದರು ಎಲೆಮರೆಕಾಯಿಯಂತೆ ಧಾರ್ಮಿಕ ಸೇವಾ ತತ್ಪರರಾಗಿರುವವರು ತಮ್ಮ ಕೆಲಸಗಳನ್ನು ಹೆಚ್ಚು ಹೇಳಿಕೊಳ್ಳದೆ ಪ್ರಚಾರಕ್ಕೆ ಬರದಿರುವವರು ಆಗಿದ್ದಾರೆ. ಆ ಊರಿನ ಕ್ಷೇತ್ರ ಪರಿಚಯಕ್ಕೆಂದು ತೆರಳಿದಾಗ ಅಲ್ಲಿನ ಶ್ರಾವಕರಿಂದ ಇವರ ಬಗ್ಗೆ ತಿಳಿದು ತಮಗೂ ಇಂತಹ ಹೆಮ್ಮೆಯ ಶ್ರಾವಕರ ಪರಿಚಯಿಸಲು ಹೊರಟಿದ್ದೇವೆ.

ಇವರು ಜನಿಸಿದ್ದು ಪ್ರಸಿದ್ದ ಧರ್ಮಾತ್ಮರು ಜಮೀನುದಾರರು ಆದ ಸ್ವರ್ಗಿಯ ಶ್ರೀ ಬಳಗೆರೆ ಚನ್ನೆಗೌಡರು ಹಾಗೂ  ಜಟ್ಟಮ್ಮನವರ ಸುಪುತ್ರರಾಗಿ ದಿನಾಂಕ 03-07-1955 ರಲ್ಲಿ. 1978ರಲ್ಲಿ ಬಿದನೂರಿನ ಲೀಲಾವತಿಯೊಂದಿಗೆ ವಿವಾಹವಾದರು. ಒಬ್ಬ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಕೂಡ ಸುಸಂಸ್ಕೃತರಾಗಿ ಬೆಳೆಸಿದ್ದಾರೆ. 1984ರಲ್ಲಿ ಶಿಕರ್ಜಿ ಯಾತ್ರೆ.

ವಿ ಸಿ ಪಾರ್ಶ್ವನಾಥ್ ಜೈನ್ ರವರು ಮಾತನಾಡಿ, ಅವರ ಪರಿಚಯ ಮತ್ತು ಅವರ ಬಾಲ್ಯ ಜೀವನದ ಬಗ್ಗೆ ತಿಳಿಸಿದರು.  

ಈ ಎಲ್ಲದರ ನಡುವೆ ಕರೂರಿನಲ್ಲಿ ಮುಳುಗಡೆಗೊಂಡ ಬಸದಿಯಿಂದ ಭಗವಾನ್ ಶ್ರೀ ಪಾರ್ಶ್ವನಾಥ, ಶಾಂತಿನಾಥ ಹಾಗೂ ಭಗವಾನ್ ಶ್ರೀ ವರ್ಧಮಾನ ಸ್ವಾಮಿ ಮೂರ್ತಿಗಳನ್ನು ತಂದು ಹಾಗೂ ಮನೆತನಕ್ಕೆ ಸಂಬಂಧಿಸಿದ ಗುಂಟಾಪುರ ಜಿನ ಮಂದಿರದಿಂದ ಮೂರ್ತಿಗಳನ್ನು ತಂದು ಹೊಂಬುಜ ಮಠದ ಪೀಠಾಧ್ಯಕ್ಷರಾದ ಹೇಮರತ್ನ ಸಾಗರರ ನೇತೃತ್ವದಲ್ಲಿ ಇವರು ಸತತ ಶ್ರಮವಹಿಸಿ ಓಡಾಡಿ ಪಂಚಕೂಟ ಜಿನ ಮಂದಿರ ಪಂಚಕಲ್ಯಾಣಗೊಂಡಿತ್ತು.

ವಿ ಸಿ ಪಾರ್ಶ್ವನಾಥ್ ಜೈನ್ ರವರು ಮಾತನ್ನು ಮುಂದುವರೆಸಿ ಅವರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಬಗ್ಗೆ ತಿಳಿಸುತ್ತ ಮತ್ತು ಅವರು ದೇವಸ್ಥಾನದ ಕೆಲಸಗಳಿಗೆ ಅವರನ್ನು ತೊಡಗಿಸಿಕೊಂಡ ಸಂದರ್ಭವನ್ನು ವಿವರಿಸಿದರು.

ನಂತರ ಇವರ ಸ್ವಂತ ಪರಿಶ್ರಮದಿಂದ ನಡೆದಿದ್ದೆ ಮತೊಂದು ಮಹತ್ಕಾರ್ಯ ಗುಡ್ಡದ ಬಸದಿ. ರಾಜಸ್ಥಾನದ ಜೈಪುರದಿಂದ ತಂದಂತಹ 24 ತೀರ್ಥಂಕರರು, ಸಹಸ್ರ ಪಣಿ ಪಾರ್ಶ್ವನಾಥರ ಮನೋಗ್ನ ಪ್ರತಿಮೆ ಇರುವ ಸುಂದರ ಜಿನ ಮಂದಿರದ ನಿರ್ಮಾಣ. ಇತ್ತೀಚಿನ ಹೊಂಬುಜದ ಶ್ರೀಗಳಾದ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಮಹಾಸ್ವಾಮೀಜಿಗಳವರ ನೇತೃತ್ವದಲ್ಲಿ ಪಂಚಕಲ್ಯಾಣಗೊಂಡ ಇಂತಹ ಬಸದಿಯ ನಿರ್ಮಾಣ ಮಾಡಿದ ಮಹಾನ್ ವ್ಯಕ್ತಿ. ಆದರೆ ಎಲೆಮರೆ ಕಾಯಿಯಂತೆ ಸರಳವಾಗಿ ತೆರೆಮರೆಯಲ್ಲಿ ಇದ್ದಾರೆ.

ವಿ ಸಿ ಪಾರ್ಶ್ವನಾಥ್ ಜೈನ್ :- ರಾಜಸ್ಥಾನದ ಜೈಪುರದಿಂದ ತಂದು 24 ತೀರ್ಥಂಕರರು, ಸಹಸ್ರ ಪಣಿ ಪಾರ್ಶ್ವನಾಥರ ಪ್ರತಿಮೆಯನ್ನು ತಂದು ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಮಹಾಸ್ವಾಮೀಜಿಗಳವರ ನೇತೃತ್ವದಲ್ಲಿ ನಿರ್ಮಾಣ ಮಾಡಿದ ಜಿನ ಮಂದಿರವನ್ನು ಕುರಿತು ತಿಳಿಸಿದರು.

ಹೊಂಬುಜ ಮಠದ ಇವರೊಂದಿಗಿನ ನಂಟು ಇಂದು ನೆನ್ನೆಯದಲ್ಲಾ ಅವರ ಮಾತಿನಿಂದಲೇ ಕೇಳಿ.

ವಿ ಸಿ ಪಾರ್ಶ್ವನಾಥ್ ಜೈನ್, ಹೊಂಬುಜದ ಮಠದ ಪೀಠಾಧ್ಯಕ್ಷರಾದ ಹೇಮರತ್ನ ಸಾಗರ ಮಹಾಸ್ವಾಮೀಜಿಯವರ ನಡುವಿನ ಒಡನಾಟ ಮತ್ತು ಹೇಮರತ್ನ ಸಾಗರ ಸ್ವಾಮೀಜಿಯವರ ಕಾಲ ನಂತರ ಮಠದ ಕೆಲಸಕ್ಕೆ ಅಡ್ಮಿನಿಸ್ಟ್ರೇಟರ್ ಆಗಿ ನೇಮಕ ಮಾಡಿದ ನಂತರ ಒಂದು ವರ್ಷ ಎಂಟು ತಿಂಗಳು ಯಾವುದೇ ಫಲಾಪೇಕ್ಷೆ ಇಲ್ಲದೆ ಕರ್ತವ್ಯ ನಿರ್ವಹಿಸಿದಂತಹ ಸಂದರ್ಭವನ್ನು ಜ್ವಾಲಮಾಲ ಡಾಟ್ ನ್ಯೂಸ್ ನೊಂದಿಗೆ ಹಂಚಿಕೊಂಡರು.

ಇವರು ಧಾರ್ಮಿಕವಾಗಿ ಅಷ್ಟೆ ಅಲ್ಲದೇ ಸಾಮಾಜಿಕವಾಗಿ ಕೂಡ ಮಾಡಿದ ಅನೇಕ ಸೇವೆಗಳ ಫಲವಾಗಿ 15 ವರ್ಷ ಸತತ ಮೂರು ಅವಧಿ ಮಂಡಲ ಹಾಗೂ ಗ್ರಾಮಪಂಚಾಯಿತಿ ಸದಸ್ಯ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಹಾಗೂ ಇದಕ್ಕಾಗಿ ಅವರ ಸಾಧನೆಯನ್ನು ಗುರುತಿಸಿ ಎರಡು ಬಾರಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ, ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ದೊರೆತಿದೆ. ತುಮರಿಯ ಸೊಸೈಟಿಯಲ್ಲಿಯೂ ಕೂಡ  ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ಪುತ್ರರಾದ ಶ್ರೀ ಭರತ್ ಕುಮಾರ್ ಬಿ ಪಿ ಇವರು ಕೂಡ ತುಮರಿಯಲ್ಲಿ ದಿನಸಿ ವ್ಯಾಪಾರದ ಮೂಲಕ ಬಡಜನರಿಗೆ ಸಹಾಯವನ್ನು ನೀಡುತ್ತಾ ಬಂದಿದ್ದಾರೆ. ಇವರನ್ನು ಹೆಮ್ಮೆಯ ಶ್ರಾವಕರಾಗಿ ಪರಿಚಯಿಸಲು ಜ್ವಾಲಮಾಲ ಹೆಮ್ಮೆ ಪಡುತ್ತದೆ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.