ಜೈ ಜಿನೇಂದ್ರ ವೀಕ್ಷಕರೆ, ಕಳೆದ ಸಂಚಿಕೆಯಲ್ಲಿ ಒಳಗೆರೆ ಪಂಚಕೂಟ ಬಸದಿ ವೀಕ್ಷಿಸಿದ್ದೀರಿ. ಈ ಭಾರಿ ಮುಸುಕಿದ ಬಿಳಿ ಮಂಜಿನ ನಡುವೆ ಬೆಟ್ಟದ ಮಧ್ಯೆ ಸುಂದರವಾಗಿ ಎದ್ದು ಕಾಣುವ ಒಂದು ಜಿನಾಲಯ, ಈ ವಾತಾವರಣವೆ ನನ್ನಲ್ಲಿ ಆನಂದ ಮುಡಿಸಿದೆ.
ಮಂಜಿನ ಹಾಸನ್ನು ಒದ್ದುನಿಂತಿದೆ ಹಸಿರ ವನ ರಾಣಿ ಒಳಗೆರೆ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಗೆ ಇಲ್ಲಿ ಅಲಂಕರಿಸಿದೆ ಸಹಸ್ರಪಣಿ.
ಗುಡ್ಡದ ಈ ಚೌಹಿಸ ತೀರ್ಥಂಕರರ ಜಿನಾಲಯದಲ್ಲಿ ಸಹಸ್ರಪಣಿ ಪಾರ್ಶ್ವನಾಥ ಮನೋಹರ ಬೃಹತ್ ಮೂರ್ತಿ ವಿರಾಜಮಾನವಾಗಿದ್ದು ಸುತ್ತಲು 24 ತೀರ್ಥಂಕರರ ವಿಗ್ರಹಗಳಿವೆ. ಇಲ್ಲಿ ಶ್ರೀಕ್ಷೇತ್ರ ಪಾಲ ಬ್ರಹ್ಮಯಕ್ಷ ಮೂರ್ತಿ, ಶ್ರೀ ಧರಣೇಂದ್ರ ಪದ್ಮಾವತಿ ಮಾತೆ, ಶ್ರೀ ಜ್ವಾಲಮಾಲಿನಿ ದೇವಿ ಮೂರ್ತಿ ಪೂಜಿಸಲಾಗುತ್ತದೆ. ಈ ಬಸದಿಯನ್ನು 2003ರಲ್ಲಿ ಹೊಂಬುಜ ಶ್ರೀಗಳ ಆಶೀರ್ವಾದದೊಂದಿಗೆ ಸ್ವತಃ ವಿ ಸಿ ಪಾರ್ಶ್ವನಾಥ್ ರವರೆ ನಿಂತು ಕಟ್ಟಿಸಿದಂತಹ ಮನೋಹರ ಬಸದಿ ಇದು.
ವಿ ಸಿ ಪಾರ್ಶ್ವನಾಥ್ ರವರು ಹೊಂಬುಜ ಶ್ರೀಗಳ ಆಶೀರ್ವಾದದೊಂದಿಗೆ 2003ರಲ್ಲಿ ಕಟ್ಟಿಸಿದಂತಹ ಈ ಬಸದಿಯ ಬಗ್ಗೆ ಜ್ವಾಲಮಾಲ ನ್ಯೂಸ್ ನೊಂದಿಗೆ ಮಾತನಾಡಿದರು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂ














