ಇಂದು ಪರಿಚಯಿಸುತ್ತಿರುವ ಪುಸ್ತಕಗಳು ಕವಿವರ ಕಾಮಧೇನು ಮತ್ತು ಇಪ್ಪತ್ತನಾಲ್ಕು ತೀರ್ಥಂಕರರ ಲಘು ಪುರಾಣ.
ಡಾ.ಪದ್ಮಿನಿ ನಾಗರಾಜು.
ಲೇಖಕಿ, ಪ್ರಾದ್ಯಾಪಕಿ, ಸದಸ್ಯರು, ಕನ್ನಡ ಸಲಹಾ ಸಮಿತಿ, ಕೇಂದ್ರ ಸಾಹಿತ್ಯ ಆಕಾಡೆಮಿ, ನವದೆಹಲಿ.
ಆತ್ಮಿಯರೇ ನಮಸ್ಕಾರ, ಜ್ವಾಲಮಾಲ ಡಾಟ್ ನ್ಯೂಸ್ ವತಿಯಿಂದ ಪ್ರಸಾರವಾಗುತ್ತಿರುವಂತಹ ಸರಣಿ ಕಾರ್ಯಕ್ರಮಕ್ಕೆ ಆತ್ಮಿಯವಾದಂತಹ ಸ್ವಾಗತ. ಈ ಸರಣಿಕಾರ್ಯಕ್ರಮದಲ್ಲಿ ಈ ದಿನ ನಾನು ಎರಡು ಕೃತಿಗಳನ್ನ ಪರಿಚಯ ಮಾಡಿಕೊಡುತ್ತಿದ್ದೇನೆ. ಜ್ಞಾನ ದೀಪಿಕೆಗಳು ವಿಭಾಗದಲ್ಲಿ ಪ್ರಸಾರವಾಗುತ್ತಿರುವಂತಹ ಈ ಎರಡು ಪುಸ್ತಕಗಳು ಯಾವುವು ಎಂದರೆ ಕವಿವರ ಕಾಮಧೇನು ಎನ್ನುವಂತಹ ಪುಸ್ತಕ ಎನ್ನುವಂತಹದ್ದು, ಇದು ಡಾ|| ಹಂ ಪಾ ನ ಅವರು ಬರೆದಿರುವಂತಹ ಪುಸ್ತಕ ಅತ್ತಿಮಬ್ಬೆಯ ಬಗ್ಗೆ ಅತ್ಯಂತ ಅಧಿಕೃತವಾಗಿ ಅನೇಕ ಶಾಸನಗಳನ್ನ ಈ ಪುಸ್ತಕದಲ್ಲಿ ಬರೆದ್ದಿದ್ದಾರೆ. ಮತ್ತೊಂದು ಕೃತಿ ವಿಮಲ ಸುಮತಿ ಕುಮಾರ್ ರವರು ಸಂಗ್ರಹಿಸಿರುವಂತಹ ಇಪ್ಪತ್ತನಾಲ್ಕು ತೀರ್ಥಂಕರರ ಲಘು ಪುರಾಣ ಅನ್ನುವಂತಹ ಕೃತಿ, ಈ ಎರಡು ಕೃತಿಗಳು ಬಹಳ ಮಹತ್ವದ ಕೃತಿಯಾಗಿದ್ದು ಈ ಎರಡು ಕೃತಿಗಳನ್ನು ಇವತ್ತು ಪರಿಚಯ ಮಾಡಿಕೊಡುತ್ತಿದ್ದೇನೆ.
ಕವಿವರ ಕಾಮಧೇನು ಅನ್ನುವಂತಹ ಕವಿವರರಿಗೆ ಕಾಮಧೇನುವಿನಂತೆ ಇದ್ದವರು ಅತ್ತಿಮಬ್ಬೆ ಎನ್ನುವಂತಹ ಈ ಕೃತಿಯನ್ನು ಪ್ರಕಾಶನ ಮಾಡಿದಂತವರು ರತ್ನಾತ್ರೇಯ ಪ್ರಕಾಶನದವರು 1996ರಲ್ಲಿ ಈ ಕೃತಿ ಪ್ರಕಟವಾಯಿತು. ಆಗ 55 ರೂಪಾಯಿ ಇತ್ತು.
ಇದು ಆ ಕಾಲದ ಮಹತ್ವದ ಕೃತಿ ಎಂದರೆ, ಅತ್ತಿಮಬ್ಬೆಯನ್ನ ಯಾರು ಎಂದು ಈ ಕನ್ನಡ ನಾಡಿಗೆ ಪರಿಚಯ ಮಾಡಿಕೊಟ್ಟಂತವರು ಹಂ ಪಾ ನ ದಂಪತಿಗಳು. ಇವರಿಬ್ಬರು ಕೂಡ ಅತ್ತಿಮಬ್ಬೆ ಶಾಸನಗಳನ್ನ ಹುಡುಕಿ ಅಧಿಕೃತವಾಗಿ ಪ್ರಸ್ತುತ್ತಪಡಿಸಿದಕ್ಕೆ ಅತ್ತಿಮಬ್ಬೆ ಹೆಸರಿನಲ್ಲಿ ಪ್ರತಿವರ್ಷ 1,00,000 ರೂಪಾಯಿಯನ್ನು ಕರ್ನಾಟಕ ಸರ್ಕಾರ ಕೊಡುತ್ತಾ ಇದೆ. ದಾನ ಚಿಂತಾಮಣಿ ಅತ್ತಿಮಬ್ಬೆ ಎನ್ನುವ ಪ್ರಶಸ್ತಿಯನ್ನ ಕರ್ನಾಟಕ ಸರ್ಕಾರ ಪ್ರತಿವರ್ಷ ನೀಡುತ್ತಾರೆ. ಹಾಗ ಮುಖ್ಯಮಂತ್ರಿಯಾಗಿದ್ದ ದೇವೇಗೌಡರು ಈ ಪ್ರಶಸ್ತಿಯನ್ನು ಕೊಡುವುದನ್ನು ಪ್ರಕಟಮಾಡಿದರು. ಈ ಕೃತಿಯಲ್ಲಿ ಬಹಳ ಮುಖ್ಯವಾಗಿ ಗವರ್ವಾಡ ಶಾಸನ, ಹಣ್ಣಿಗೆರಿ ಶಾಸನ, ಶಾಸನಗಳಲ್ಲಿ ಸ್ತುತಿ ಪಠ, ಪೊನ್ನ ಕವಿ ಶಾಸನ, ರನ್ನಕವಿ ಶಾಸನ, ಬ್ರಹ್ಮ ಕವಿಯ ಪದ್ಯ ಇವೇಲ್ಲವನ್ನು ಸಂಗ್ರಹಿಸಿರುವಂತಹ ಒಂದು ಮಹತ್ವದ ಕೃತಿ. ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಕ್ರಿಯಾಶೀಲರಾಗಿ ಅತ್ತಿಮಬ್ಬೆಯ ಆಕಾರ ಕೊಟ್ಟು ಹಳೆಗನ್ನಡ ಕಾವ್ಯದಲ್ಲಿ ತಂದು ನಿಲ್ಲಿಸಿದವನು ರನ್ನ ಕವಿ. ಅತ್ತಿಮಬ್ಬೆಯ ಸಮಗ್ರ ಮಂತನ, ಆ ಕಾಲದ ಬಿಕ್ಕಟ್ಟು ಇವೇಲ್ಲವು ಕೂಡ ಈ ಕೃತಿಗಳಲ್ಲಿ ನಾವು ನೋಡಬಹುದು.
ಹಂ ಪಾ ನ ಅವರನ್ನು ಪರಿಚಯ ಮಾಡಿ ಕೊಡುವುದು ಸಮುದ್ರವನ್ನು ಪರಿಚಯ ಮಾಡಿಕೊಟ್ಟಂತೆ. ನಮ್ಮ ಕನ್ನಡ ಸಾಹಿತ್ಯದಲ್ಲಿ ಸಂಶೋಧನ ದಂಪತಿಗಳು ಎಂದರೆ ಹಂ ಪಾ ನ ದಂಪತಿಗಳು.
ಅತ್ತಿಮಬ್ಬೆ ಚರಿತ್ರೆಯನ್ನು ಓದುವುದು ಪವಿತ್ರವಾದದ್ದು ಎಂದು ಹೇಳುವ ಕವಿವರ ಕಾಮಧೇನು ಅತ್ತಿಮಬ್ಬೆ ಎನ್ನುವ ಕೃತಿ.
ಮತ್ತೊಂದು ಕೃತಿ ಇಪ್ಪತ್ತನಾಲ್ಕು ತೀರ್ಥಂಕರರ ಲಘು ಪುರಾಣ ಅನ್ನುವಂತಹ ಕೃತಿ ಈ ಕೃತಿಯನ್ನು ಪ್ರಕಟಮಾಡಿರುವಂತವರು ವಿಜ್ಞೇಶ್ ಪ್ರಿಂಟರ್ಸ್ ಸಿಸ್ಟಂಮ್ ರವರು 1997ರಲ್ಲಿ ಈ ಕೃತಿಯನ್ನು ಪ್ರಕಟಣೆ ಮಾಡುತ್ತಾರೆ. ಈ ಕೃತಿಯ ಅನುವಾದಕರು ವಿಮಲ ಸುಮತಿ ಕುಮಾರ್ ರವರು. ವಿಮಲ ಸುಮತಿ ಕುಮಾರ್ ರವರು ಕನ್ನಡ ಸಾಹಿತ್ಯದಲ್ಲಿ ಬಹಳಷ್ಟು ಕೆಲಸವನ್ನು ಮಾಡಿದಂತವರು, ಉತ್ತಮ ಭಾಷಣಕಾರರು ಕೂಡ ಹಾಗಿದ್ದರು. ಅವರ ಕೃತಿಯ ಬಗ್ಗೆ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಆಶೀರ್ವಚನ ಕೊಡುತ್ತಾ ಬರೆದಿರುವುದು :- ಚಾವುಂಡರಾಯ ಪುರಾಣದ ಸಂಕ್ಷಿಪ್ತ ರೂಪದಂತೆ ಇರುವ ಈ ಪುಸ್ತಕ ಜೈನ ಸಮಾಜದ ಸಾಮಾನ್ಯ ಓದುಗರಿಗೆ ಉಪಯುಕ್ತವಾಗಿದೆ. ಈ ಪುಸ್ತಕದಲ್ಲಿ 63 ಜನ ಮಹಾಪುರುಷರ ಜೀವನದ ಮುಖ್ಯ ಘಟನೆಗಳ ಪರಿಚಯವಿದೆ. 24 ತೀರ್ಥಂಕರರ ಭಾವವಳಿಗಳು ಮತ್ತು ಪಂಚ ಕಲ್ಯಾಣಗಳ ಸೂಕ್ಷ್ಮ ಪರಿಚಯ. ಈ ಕಥೆಗಳಿಗೆ ಆಕಾರ ಗ್ರಂಥಗಳಾಗಿರುವ ಜಿನ ಸೇನಾಚಾರ್ಯರ ಮಹಾಪುರಾಣ ಮತ್ತು ಚಾವುಂಡರಾಯ ಪುರಾಣಗಳಿಗಿಂತ ಭಿನ್ನವಾದಂತಹ ಕೆಲವು ಅಂಶಗಳಿರುವುದು ಕಂಡುಬರುತ್ತದೆ. ಶ್ರೀಮತಿ ವಿಮಲ ಸುಮತಿ ಕುಮಾರ್ ರವರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಅನ್ನುವಂತಹದನ್ನ ಆಶೀರ್ವಚನದಲ್ಲಿ ತಿಳಿಸಿದ್ದಾರೆ.
ವಿಮಲ ಸುಮತಿ ಕುಮಾರ್ ರವರು ಈ ಕೃತಿಯನ್ನು ಸ್ಪಷ್ಟಪಡಿಸುತ್ತ 63 ಜನ ಶಲಾಕ ಪುರುಷರಿಗೆ ಜೈನ ಧಾರ್ಮಿಕ ಪರಂಪರೆಯ ತ್ರಿಷಸ್ಟಿ ಶಲಾಕ ಪುರುಷರ ಬಗ್ಗೆ ಲಘು ಪುರಾಣ ಗ್ರಂಥವನ್ನು ತೆಗೆದುಕೊಂಡಾಗ ಯಾರು ಬರೆದಿರುವುದು ಎಂದು ತಿಳಿಯುವುದ್ದಿಲ್ಲಾ. ನಮಗೆ ಸಿಕ್ಕಿರುವ ಪ್ರತಿಯಿಂದ ಚಾಮರಾಜ ನಗರದ ಬ್ರಹ್ಮ ಸೂರಿ ಪಂಡಿತರ ಮಗ ಪದ್ಮರಾಜ ಪಂಡಿತರು ಪರಿಷ್ಕರಿಸಿರುವುದಾಗಿ ತಿಳಿದು ಬರುತ್ತದೆ. ಈ ಪುಸ್ತಕದ ಮೊದಲ ಮುದ್ರಣ 1910 ನೇ ಇಸವಿ ಯಲ್ಲಿ ಆಗಿರುವುದು ಕಂಡು ಬರುತ್ತದೆ. ನಂತರ 1993 ನೇ ವರ್ಷದಲ್ಲಿ ಮಾನ್ಯ ಬೂವನಹಳ್ಳಿ ಶ್ರೀಪತಿ ಜೋಹಿಸರು ಸಂಪಾದಿಸಿ ಪ್ರಕಟಿಸಿದ್ದಾರೆ ಆದರೆ ಮೊದಲನೆಯ ಮುದ್ರಣಕ್ಕೂ ಎರಡನೇಯ ಮುದ್ರಣಕ್ಕೂ ಯಾವುದೇ ವ್ಯತ್ಯಾಸ ಇರಲ್ಲಿಲ್ಲಾ ಎಂದು ಹೇಳುತ್ತಾರೆ.
ಇಪ್ಪತ್ತನಾಲ್ಕು ತೀರ್ಥಂಕರರು ಮತ್ತು 63 ಜನ ತ್ರಿಷಸ್ಟಿ ಶಲಾಕ ಪುರುಷರ ಬಗ್ಗೆ ಇರುವಂತಹ ಇಪ್ಪತ್ತನಾಲ್ಕು ತೀರ್ಥಂಕರರ ಲಘು ಪುರಾಣ ಪುಸ್ತಕವು ಕೇವಲ 55 ಪುಟಗಳನ್ನು ಒಳಗೊಂಡಿದೆ. ಇಂತಹ ಪುಸ್ತಕಗಳನ್ನು ಇಂಗ್ಲೀಷ್ ಗೆ ಅನುವಾದವಾಗ ಬೇಕು ಏಕೆಂದರೆ ನಮ್ಮ ಮಕ್ಕಳು ಕನ್ನಡದಲ್ಲಿ ಓದುವುದನ್ನು ಕಡಿಮೆ ಮಾಡುತ್ತಿದ್ದಾರೆ ಎಂದು ಈ ಮಾತನ್ನು ಹೇಳ ಬಯಸುತ್ತೇನೆ. ಹೀಗಾಗಲೆ ಹಿಂದಿಯಲ್ಲಿ ಇಂತಹ ಕೆಲಸಗಳು ನಡೆಯುತ್ತಿದೆ. ಆದ್ದರಿಂದ ಇಂತಹ ಕೆಲಸಗಳನ್ನ ಜೈನ ಸಮಾಜ ಮಾಡಬೇಕು ಎಂದು ನನಗೆ ಅನಿಸುತ್ತಿದೆ.
ಹಾಗಾಗಿ ಈ ಎರಡು ಮಹತ್ವದ ಕೃತಿಗಳನ್ನು ನಿಮ್ಮ ಮುಂದೆ ಇಟ್ಟಿದೇವೆ, ಮುಂದಿನ ವಾರ ಮತ್ತೇರಡು ಕೃತಿಗಳ ಪರಿಚಯದೊಂದಿಗೆ ನಿಮ್ಮ ಮುಂದೆ ಹಾಜರಾಗುತ್ತೇನೆ.














