ವಿಶ್ವ ಕನ್ನಡ ರಾಜ್ಯೋತ್ಸವ

ಬಂಧುಗಳೆ, ಕನ್ನಡಿಗರು ವಿದ್ಯಾಭ್ಯಾಸ ಹಾಗೂ ಉದ್ಯೋಗದ ನಿಮಿತ್ತ ವಿವಿಧ ದೇಶಗಳಲ್ಲಿ ನೆಲೆಸಿದ್ದಾರೆ. ತಾವು ಅನ್ಯ ದೇಶಗಳಲ್ಲಿ ನೆಲೆಸಿದ್ದರು ಕನ್ನಡ ನಾಡು ಹಾಗೂ ನುಡಿಯ ಮೇಲೆ ಪ್ರೀತಿ ಮಾತ್ರ ಕಡಿಮೆಯಾಗಿಲ್ಲಾ ಅಭಿಮಾನವನ್ನು ಉಳಿಸಿಕೊಂಡಿದ್ದಾರೆ. ತಾಯಿ ನಾಡಿನಿಂದ ದೂರವಿದ್ದರು ನಾವು ನೆಲೆಸಿರುವ ವಿವಿಧ ಪ್ರಾಂತ್ಯಗಳಲ್ಲಿ ಕನ್ನಡ ಸಂಘಗಳನ್ನು ಕಟ್ಟಿ ಸಂಘಟನೆಗಳನ್ನು ರಚಿಸಿ ಕನ್ನಡ ಭಾಷೆಯ ಕೆಲಸಗಳನ್ನು ನಿರಂತರವಾಗಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.  ಕಲೆ, ಸಂಸ್ಕೃತಿ, ಸಾಹಿತ್ಯದ ಮೂಲಕ ವಿದೇಶಗಳಲ್ಲಿ ಕನ್ನಡದ ಕಂಪನ್ನು ಬೀರುತ್ತಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಯೋಗದಲ್ಲಿ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರೆಲ್ಲರು ಒಟ್ಟಾಗಿ ಸೇರಿ ವಿಶ್ವ ಕನ್ನಡಿಗರ ಕರ್ನಾಟಕ ರಾಜ್ಯೋತ್ಸವ 2021.

ಈ ಕಾರ್ಯಕ್ರಮ ವಿಶ್ವ ಕನ್ನಡ ಸಂಘಟನೆಗಳ ಒಕ್ಕೂಟ ಫೇಸ್ಬುಕ್ ಪೆಜ್ ಮೂಲಕ ದಿನಾಂಕ 20-11-2021 ರಂದು ಭಾರತೀಯ ಸಮಯ ಬೆಳಗ್ಗೆ 8:30ಕ್ಕೆ ಸರಿಯಾಗಿ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಟಿ ಎಸ್ ನಾಗಾಭರಣರವರು ವಹಿಸಲಿದ್ದಾರೆ. ಉದ್ಘಾಟನೆಯನ್ನು ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ಸುನಿಲ್ ಕುಮಾರ್ ರವರು ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್ ರವರು ಭಾಗವಹಿಸಲಿದ್ದಾರೆ. ಅದೇ ದಿನ ಭಾರತೀಯ ಸಮಯ ರಾತ್ರಿ 8:30ಕ್ಕೆ ಸಮಾರೋಪ ಸಮಾರಂಭ ಕೂಡ ಹಮ್ಮಿಕೊಳ್ಳಲಾಗಿದ್ದು ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಶ್ರೀ ರಂಗಪ್ಪನವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಮಾರೋಪ ಭಾಷಣ ನಾಡಿನ ಹಿರಿಯ ಸಾಹಿತಿಗಳಾದ ನಾಡೋಜ ಹಂಪಾ ನಾಗರಾಜಯ್ಯನವರು ನಡೆಸಿ ಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೈಸೂರು ವಿಶ್ವವಿದ್ಯಾನಿಲಯ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕರಾದ ಡಾ|| ಮಂಜುನಾಥ ರವರು ಭಾಗವಹಿಸಲ್ಲಿದ್ದಾರೆ.

ಇಂತಹ ಒಂದು ಸೊಗಸಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತಮಗೆಲ್ಲರಿಗೂ ಹೃತ್ಪೂರ್ವಕವಾದ ಸ್ವಾಗತ.