ಅಖಿಲ ಕರ್ನಾಟಕ ಜೈನ ಮಹಿಳಾ ಸಮ್ನೇಳನ

ಪರಮಪೂಜ್ಯ 108 ಯುಗಳ ಮುನಿಮಹಾರಾಜರ ಪಾವನ ಸಾನಿಧ್ಯದಲ್ಲಿ ನಡೆದ ಅಖಿಲ ಕರ್ನಾಟಕ ಜೈನ ಮಹಿಳಾ ಸಮ್ಮೇಳನದಲ್ಲಿ “ಸ್ಥಿತ್ಯಂತರವಾಗುತ್ತಿರುವ ಇಂದಿನ ಜೈನ ಸಮಾಜ” ವಿಷಯವನ್ನು ಮಂಡಿಸಿದ ಕು|| ಕೆ. ಪಿ. ಭೂಮಿಕಾ, ಬಿ. ಎಸ್ಸಿ., ಶ್ರವಣಬೆಳಗೊಳದ ವಿದ್ಯಾರ್ಥಿನಿ.

ಪ್ರಪ್ರಥಮವಾಗಿ ಲೋಕಪೂಜ್ಯಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಪಾದಗಳಿಗೆ ನಮೋಸ್ತುಗಳನ್ನು ಅರ್ಪಿಸುತ್ತಾ ಪರಮಪೂಜ್ಯ 108 ಯುಗಳಮುನಿ ಮಹಾರಾಜರ ಪಾದಕಮಲಗಳಿಗೆ ನಮೋಸ್ತುಗಳನ್ನು ಅರ್ಪಿಸುತ್ತಾ ಪೂಜ್ಯಮಾತೃಶ್ರೀ ಯವರ ಆರ್ಶೀವಾದವನ್ನು ಭೇಡುತ್ತಾ ವೇದಿಕೆಯ ಮೇಲೆ ಆಸೀನರಾಗಿಕಂತಹ ಪೂಜ್ಯರೇ ಗಣ್ಯರೇ ಹಾಗೂ ಎಲ್ಲಾ ಧರ್ಮಬಂಧುಗಳೇ,

 ಪೂರ್ವಜನ್ಮದ ಪುಣ್ಯದ ಫಲವಾಗಿ ನನಗೆ ಇವತ್ತು ಈ ಸಭೆಯಲ್ಲಿ ಭಾಗವಹಿಸುವಂತಹ ಅವಕಾಶ ಸಿಕ್ಕಿದೆ ಎಂದು ಹೆಮ್ಮೆಯಾಗುತ್ತಿದೆ.ಇದರಿಂದ ನಾನು ನನ್ನ ಅಖಿಲ ಕರ್ನಾಟಕ ಮಹಿಳಾಒಕ್ಕೂಟದ ಎಲ್ಲಾ ಕಾರ್ಯಕರ್ತೆಯರಿಗೆ ನನ್ನ ವಂದನೆಯನ್ನು ತಿಳಿಸುತ್ತಾ ಇದ್ದೇನೆ ಇವತ್ತು ನಾನು ಒಂದು ವಿಷಯವನ್ನು ಹೇಳಲು ಇಷ್ಟಪಡುತ್ತೇನೆ.ನನ್ನ ವಿಧ್ಯಾಭ್ಯಾಸದ ನೆರವಿಗೆ ಅಂತ ನಾನು ಅಖಿಲ ಕರ್ನಾಟಕ ಮಹಿಳಾ ಒಕ್ಕೂಟಕ್ಕೆ ವಿಧ್ಯಾರ್ಥಿ ವೇತನ ಕೋರಿ ಅರ್ಜಿಯನ್ನು ಸಲ್ಲಿಸಿದ್ದೆ ಅಲ್ಲಿನ ಎಲ್ಲಾ ಕಾರ್ಯಕರ್ತೆಯರು ನನ್ನ ವಿಧ್ಯಾರ್ಥಿವೇತನಕ್ಕೆ ಅಂತ  ಆಯ್ಕೆಮಾಡಿದ್ದಾರೆ. ಕಳೆದ 3 ವರ್ಷಗಳಿಂದ ನಾನು ಒಕ್ಕೂಟದ ವತಿಯಿಂದ ವಿಧ್ಯಾರ್ಥಿ ವೇತನವನ್ನು ಪಡೆಯುತ್ತಾ ಇದ್ದೇನೆ. ಹಾಗೆಯೇ ಮುಂದಿನ ವಿದ್ಯಾಭ್ಯಾಸಕ್ಕೂ ಸಹಾ ನಿಮ್ಮ ಸಹಾಕಾರ ನಮ್ಮಮೇಲೆ ಇರಲಿ ಅಂತ ಕೇಳಿಕೊಳ್ಳುತ್ತೇನೆ.ಇದಕ್ಕೆ ನನ್ನ ಹಾಗೇ ನನ್ನ ಪೋಷಕರಪರವಾಗಿ ಅಖಿಲಕರ್ನಾಟಕ ಮಹಿಳಾ ಒಕ್ಕೂಟದ ಎಲ್ಲಾ ಅಧ್ಯಕ್ಷರಿಗೆ ಕಾರ್ಯಕರ್ತೆಯರಿಗೆ ತುಂಬು ಹೃದಯದ ಧನ್ಯವಾದವನ್ನು ತಿಳಿಸುತ್ತಾ ಇದ್ದೇನೆ.

ಇನ್ನು ಈ ದಿನದ ವಿಷಯದ ಬಗ್ಗೆ ಚರ್ಚಿಸುವುದಾದರೆ ನಮ್ಮ ಜೈನಧರ್ಮ ದಿನದಿಂದ ದಿನಕ್ಕೆ ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುತ್ತಾ ಹೋಗುತ್ತಾ ಇದೆ.ಇದಕ್ಕೆ ಹಲವಾರು ಕಾರಣಗಳನ್ನು ಕೊಡಬಹುದು ಮೊದಲನೆದಾಗಿ ನಮ್ಮ ಸಮುದಾಯದಲ್ಲಿ ಕಾಡುತ್ತಿರುವ ಬಡತನ ಹಾಗು ದುಬಾರಿ ವಿದ್ಯಾಭ್ಯಾಸ ಮಕ್ಕಳನ್ನು ಉತ್ತಮ ಪಧವಿ ಕಳಿಸುವ ಭ್ರಮೆ ದೇಶದಲ್ಲಿ ಆಗುತ್ತಿರುವಂತಹ ಜನಸಂಖ್ಯಾಸ್ಪೋಟ ಇನ್ನೊಂದು ಮುಖ್ಯವಾಗಿರುವಂತಹ ಕಾರಣ ಅಂತರ್ ಜಾತಿಯ ವಿವಾಹಗಳು ನಮ್ಮ ಯುವ ಪೀಳಿಗೆ ಅಂತರ್ ಜಾತಿಯ ವಿವಾಹಕ್ಕೆ ಮಾರುಹೋಗಲು ಮುಖ್ಯ 3 ಕಾರಣಳನ್ನು ಕೋಡುತ್ತೇನೆ ಇದರಲ್ಲಿ ಶೇಕಡಾ 25% ಯುವಪೀಳಿಗೆಗಳು ಕಾರಣವಾದರೆ ಇನ್ನೂ 50 ರಷ್ಟು ಪೊಷಕರು ಕಾರಣವಾಗುತ್ತಾರೆ ಮತ್ತೆ 25ರಷ್ಟೂ ನಮ್ಮ ಸಮಾಜ ಪಾತ್ರವನ್ನು ವಹಿಸುತ್ತದೆ.ಯುವಕರ ಪಾತ್ರ ಯಾವ ರೀತಿಯದ್ದಾಗಿದೆ ಅಂದರೆ ಆಧುನಿಕತೆ ಬೆಳೆದಂತೆಲ್ಲಾ ಮೊಜು ಮಸ್ತಿಗೆ ಬಲಿಯಾಗುತ್ತಿರುವ ಯುವಪೀಳಿಗೆ ನಮ್ಮ ಭಾರತ ಸಂಸ್ಕೃತಿಯನ್ನು ಮೂಲೆ ಗುಂಪುಮಾಡಿದೆ. ಚಲನಚಿತ್ರ ಇಂಟರ್ನೆಟ್ ಇವುಗಳನ್ನೆಲ್ಲಾ ನೋಡಿ ಆ ಪರದೆಯಲ್ಲಿ ಬರುವಂತಹ ಸನ್ನಿವೇಶಗಳನ್ನು ತಮ್ಮನಿಜ ಜೀವನ ಅಳವಡಿಸಿಕೊಳ್ಳುತ್ತಿದ್ದಾರೆ.ತಮ್ಮ ಮಿತಿಯನ್ನು ಮೀರಿ ಅವರಜೀವನಕ್ಕೆ ಆಪತ್ತನ್ನು  ತಂದುಕೊಳ್ಳುತ್ತಿದ್ದಾರೆ.ಅವರ ವಯಸ್ಸಿಗೆ ಮೀರಿದ ನಿರ್ಧಾರಗಳನ್ನು ತೆಗೆದುಕೊಂಡು ಮಾನವ ಜನ್ಮವಿದು ಹಾಳುಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರ ಮಾತಿಗೆ ವಿರುಧ್ದವಾಗಿ ನೆಡೆದುಕೊಳ್ಳುತ್ತಾ ಅವರ ಜೀವನವನ್ನು ಅವರೆ ಕೈಯಾರೆ ಹಾಳುಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳುವುದರಲ್ಲಿ ಯಾವ ಸಂದೇಹನೂ ಇಲ್ಲಾ. ಇನ್ನೂ ಇದರಲ್ಲಿ ಪೋಷಕರಪಾತ್ರ ಯಾವ ರೀತಿಯಲ್ಲಿ ಇದೆ ಅಂದರೆ ಬೆಳೆವಸಿರಿ ಮೊಳಕೆಯಲ್ಲಿ ಬೆಳೆಯುವಾಗಲೆ ಅದರ ಗುಣವನ್ನು ತೋರಿಸುತ್ತದೆ.ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತ್ತೆ ಎಂಬ ನಾನ್ಮುಡಿಯಂತೆ ಒಂದು ಗಿಡ ಅದು ಚಿಕ್ಕದಿದ್ದಾಗ ಅದನ್ನು ಯಾವಕಡೆಗೆ ಬೇಕಾದರು ಬಗ್ಗಿಸಬಹುದು ಅದರ ರೆಂಬೆ ಕೊಂಬೆಗಳು ಚಿಗುರು ಒಡೆಯುವಂತೆ ಮಾಡಬಹುದು ಹಾಗೇಯೆ ಆ ರೆಂಬೆ ಕೊಂಬೆಗಳಲ್ಲಿ ಅನೇಕ ಜೀವಿಗಳು ಅನುಕೂಲ ಪಡೆಯುತ್ತೆ ಅಲ್ಲವೇ ಅದೇ ರೀತಿ ಒಂದು ಗಿಡವನ್ನು ನೆಟ್ಟು ನಾವು ಯಾವುದೇ ರೀತಿ ಗಮನವನ್ನು ಕೊಡದಿದ್ದರೆ ಆ ಗಿಡ ತನ್ನಷ್ಟೇ ತಾನು ರಾಕ್ಷಸೋಪಾದಿಯಲ್ಲಿ ಬೆಳೆಯುತ್ತಾ ಅನೇಕ ಪ್ರಕೃತಿ ವಿಕೋಪಕ್ಕೆ ಕಾರಣವಾಗಿ ಜೀವಿಗಳ ಸಾವು ನೋವಿಗೆ ಕಾರಣವಾಗುತ್ತೆ ಅಂತೆಯೇ ನಮ್ಮ ಯುವಪೀಳಿಗೆ ಅಂತರ್ ಜಾತಿಯವಿವಾಹಕ್ಕೆ ಮಾರುಹೋಗುತ್ತಾ ಇರುವುದಕ್ಕೆ ನಮ್ಮ ಕುಟುಂಬ ಪರಿಸ್ಥಿತಿ ಕಾರಣ ಎಂದು ಹೇಳಬಹುದು ಏಕಪ್ಪಾ ಅಂದರೆ ಮಕ್ಕಳನ್ನು ಅತೀ ಮುದ್ದಾಗಿ ಬೆಳಸುತ್ತಾಇದ್ದಾರೆ ಅವರು ಏನು ಮಾಡಿದರು ಸರಿ ಎನ್ನುವ ಪೋಷಕರು ಕಾರಣ ಆಗಿದ್ದಾರೆ ನೀವು ಮಾಡುತ್ತಿರುವುದು ತಪ್ಪು ಎಂದು ತಿದ್ದಿ ಬುದ್ದಿ ಹೇಳಲು ಹಿಂಜರಿಯುತ್ತಿದ್ದಾರೆ ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬಗಳ ಸಂಖ್ಯೆ ಜಾಸ್ತಿ ಇತ್ತು ಅಲ್ಲಿ ಮನೆ ಮಂದಿಯೆಲ್ಲಾ ಸೇರಿ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾ ಇದ್ದರು ಆದರೆ ಈಗ  ಕುಟುಂಬಗಳೆಲ್ಲಾ ಚದುರಿ ಹೋಗಿ ಕೇವಲ ಒಂದು ಕುಟುಂಬದಲ್ಲಿ 3ರಿಂದ 4ಮಂದಿ ಇರೋದನ್ನ ನೋಡುತ್ತೀವಿ ಇಂತ ಸಮಾಜದಲ್ಲಿ ಅಪ್ಪ ಅಮ್ಮ ಇಬ್ಬರು ಕೆಲಸಕ್ಕೆ ಹೋಗುತ್ತಾರೆ ಮಕ್ಕಳಜೊತೆ ಸಮಯಕಳೆಯಲು ಆಗುತ್ತಿಲ್ಲ ಹಣ ಮತ್ತು ಅಧಿಕಾರದ ದಾಹದಿಂದ ಮಕ್ಕಳ ಹಾಗು ಹೋಗುಗಳ ಬಗ್ಗೆ ಗಮನವನ್ನು ಕೊಡದೆ ತಮ್ಮದೇ ಆದ ಲೋಕದಲ್ಲಿ ಮುಳುಗಿ ಮಕ್ಕಳಿಂದ ದೂರ ಉಳಿತ ಇದ್ದಾರೆ. ಹೇಳಿ ಇದ್ದಕ್ಕೆ ಕಾರಣ ಪೋಷಕರು ತಾನೆ ಇಲ್ಲಿರುವ ಪೋಷಕರಲ್ಲಿ ನಾನು ಒಂದು ಮನವಿಯನ್ನು ಮಾಡಿಕೊಳ್ಳುತ್ತಿದ್ದೇನೆ ನಿಮ್ಮ ನಡುವೆ ಇದ್ದಂತಹ ಅನ್ಯೂನ್ಯತೆಗಳು ಪ್ರತಿದಿನ ಬೆಳಗ್ಗೆ ಆದರೆ ಜಗಳ ಕಿತ್ತಾಟಗಳು ಮಕ್ಕಳ ಮನಸ್ಸಿನ ಮೇಲೆ ಅಪಾರವಾದ ಪರಿಣಾಮ ಬೀರುತ್ತದೆ ದಯವಿಟ್ಟು ನಿಮ್ಮ ನಿರ್ಧಾರಗಳನ್ನು ಬಲವಂತವಾಗಿ  ಮಕ್ಕಳಮೇಲೆ ಹೇರಬೇಡಿ ಅವರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳಿ ಅವರಿಗೆ ಗೌರವನ್ನು ಕೊಡಿ ಈ ವಯಸ್ಸು ಏನಿದೆಯಲ್ಲಾ ಮಕ್ಕಳನ್ನ ಅತೀ ಒಳ್ಳೆಯ ವಿಷಯಕ್ಕೆ ಹೆಚ್ಚಾಗಿ ಕೆಟ್ಟವಿಷಯದ ಕಡೆ ಬೇಗ ಆಕರ್ಷಣೆಗೆ ಒಳಗಾಗುತ್ತಾರೆ ಎಷ್ಟೊ ಜನ ಪೊಷಕರು ಅಂದುಕೊಂಡಿರಬಹುದು ನನ್ನ ಮಗ ಅಥವಾ ಮಗಳಿಗೆ 18 ವರ್ಷ ಆಯಿತು ಇನ್ನು ಅವರ ಜೀವನದಲ್ಲಿ ನಮ್ಮ ಅವಶ್ಯಕತೆ ಇರೋದಿಲ್ಲ ಅವರು ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಅವರಿಗೆ ಬಂದಿದೆ ಇದು ಅವರ ತಪ್ಪು ಕಲ್ಪನೆ ಈ ಸಂದರ್ಭದಲ್ಲಿ ಮಕ್ಕಳು ಒಳ್ಳೆಯ ವಿಷಯಕ್ಕಿಂತ ಹೆಚ್ಚಾಗಿ ಕೆಟ್ಟವಿಷಯಗಳ ಬಗ್ಗೆ ಆಕರ್ಷಣೆಗೆ ಒಳಗಾಗುತ್ತಾರೆ.

ನಿಮ್ಮ ಒಂದೆರಡು ಒಳ್ಳೆಯ ಬುದ್ಧಿ ಮಾತು ಪ್ರೀತಿ ಮಾತು ಒಳ್ಳೆಯ ಮಾರ್ಗದರ್ಶನ ಆ ಸಂಧರ್ಭದಲ್ಲಿ ಅತೀ ಮುಖ್ಯವಾಗಿರುತ್ತೆ ಇದು ಮಕ್ಕಳು ತಪ್ಪು ಅಂತ ಹೇಳೊದಲ್ಲಾ ಅವರ ದೇಹದಲ್ಲಿ ಆಗುವ ಬದಲಾವಣೆ ಹಾರ್ಮೊನ್ ಹಿಂಬ್ಯಾಲನ್ಸ್ ಅಂತ ಕರಿತೀವಲ್ಲ ಇದು ಆ ರೀತಿ ಮಾಡುತ್ತಾ ಇರುತ್ತೆ ನಿಮ್ಮ ಕಟುವಾದ ವರ್ತನೆ ಆ ಸಮಯದಲ್ಲಿ ಎಷ್ಟೊಂದು ಆಪತ್ತುಗಳಿಗೆ ಕಾರಣವಾಗುವಂತಹ ನಿದರ್ಶನಗಳನ್ನು ನೊಡುತ್ತಾ ಇದ್ದೀರ ಇನ್ನು ನಮ್ಮ ಸಮಾಜ ಯಾವ ತರ ಪಾತ್ರ ವಹಿಸುತ್ತಿದೆ ಅಂದರೆ ಆಧುನಿಕತೆ ಬೆಳೆದಂತೆಲ್ಲಾ ಹಳೆಯ ಸಂಪ್ರದಾಯಗಳನ್ನು ಮರೆತು ಮೊಜು ಮಸ್ತಿಗೆ ಹಿಂದೆ ಹೊಗುತ್ತಿರುವ ಸಮಾಜ ಕಾರಣವಾಗುತ್ತೆ ಧರ್ಮದತ್ತ ಸಂಪ್ರದಾಯಗಳನ್ನು ಬರೀ ನಂಬಿಕೆಗಳು ನೀವೆಲ್ಲಾ ಮೂಢನಂಬಿಕೆಗಳ ದಾಸರಾಗಬೇಡಿ ಎಂದು ಹೇಳಿ ಕೊಡುತ್ತಾರೆ.ಜಾತೀಯತೆಯ ಮಹತ್ವವನ್ನು ಹೇಳಿಕೊಡುತ್ತಾ ಇಲ್ಲ. ಬರೀ ಗಂಡು ಹೆಣ್ಣು ಇರುವುದು ಎರಡೆ ಜಾತಿ ಎಂದು ಹೇಳುತ್ತಿದ್ದಾರೆ.ಹೌದು ನಾವು ಜಾತೀಯತೆ ಮಾಡಬಾರದು ನಮ್ಮ ನಮ್ಮ ಧರ್ಮಗಳನ್ನು ನಾವು ಕಾಪಾಡಿಕೊಂಡು ಬಂದರೆ ತಾನೆ ಕೊನೆಗೆ ಭಾರತಮಾತೆಯನ್ನು ಉನ್ನತಮಟ್ಟದಲ್ಲಿ ನೊಡಲು ಸಾಧ್ಯ ಹಾಗೆ ಇದರ ಪರಿಣಾಮಗಳಾದ ಡೈವೊರ್ಸ್ ಗಳು ಮುಂದೆ ಸಮಾಜದಲ್ಲಿ ಒಳ್ಳೆಯ ಸ್ಥಾನ ಮಾನ ಸಿಗದೆ ಇರುವಂತದ್ದು ಹಾಗು ಜಾತಿಯತೆಯ ಕಲಹ ಆಗುತ್ತೆ.ಅನ್ನೊದನ್ನ ಮಕ್ಕಳಿಗೆ ತಿಳಿಸಿ ಹೇಳುತ್ತಾ ಇಲ್ಲ ಈ ಕಾರಣದಿಂದಾಗಿ ಸಮಾಜನೂ ಒಂದು ರೀತಿ ಕಾರಣವಾಗುತ್ತೆ ಈಗಿನ ಯುವಪೀಳಿಗೆಗೆ ಮೌಲ್ಯಶಿಕ್ಷಣ ಅತ್ಯಗತ್ಯ ಇಲ್ಲಿ ಎಷ್ಟೂಪೊಷಕರಿಗೆ ಕೇಳಿಕೊಳ್ಳುತ್ತೇನೆ

 ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸೊದಕ್ಕಿಂತ ಮುಂಚೆ ಅವರಿಗೆ ಜೀವನದಲ್ಲಿ ಮೌಲ್ಯಶಿಕ್ಷಣವನ್ನು ತಿಳಿಸಿಹೇಳಿ ಮೌಲ್ಯಶಿಕ್ಷಣ ಎಂದರೆ ಏನು ಪ್ರೀತಿ ಸ್ನೇಹ ಕರುಣೆ ಪರೋಪಕಾರ ನಂಬಿಕೆ ಇವುಗಳ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಡಿ ನೀವು ಅವರಿಗೆ ಆಸ್ತಿಯನ್ನು ಮಾಡದೇ ಇದ್ದರು ಪರವಾಗಿಲ್ಲ ಅವರಿಗೆ ಮೌಲ್ಯಶಿಕ್ಷಣ  ಎಂಬ ಆಸ್ತಿಯನ್ನು ಕೊಡಿಸಿ ಅದರಿಂದ ಶ್ರೀಮಂತವಾಗಿರಿಸಿ ಆಗ ನೀವು ಆಗ ಸಮಾಜಕ್ಕೆ ಒಬ್ಬ ಪರಿಪೂರ್ಣ ವ್ಯಕ್ತಿಯನ್ನು ಕೊಡುಗೆಯನ್ನು ನೀಡಿದಹಾಗೆ ಆಗುತ್ತೆ ಎಂದು ಹೇಳುತ್ತಾ ನನ್ನ ಮಾತುಗಳನ್ನು ಮುಗಿಸುತ್ತಾ ಇದ್ದೇನೆ. ನನ್ನ ಅಭಿಪ್ರಾಯಗಳನ್ನು ನಾನು ಹೇಳಿದ್ದೇನೆ ನನ್ನ ಮಾತಿನಲ್ಲಿ ತಪ್ಪಿದ್ದರೆ ದಯಮಾಡಿ ನನ್ನನ್ನು ಕ್ಷಮಿಸಿ ಎಂದು ಹೇಳುತ್ತಾ ನನಗೆ ಮಾತನಾಡಲು ಅವಕಾಶ ಕೊಟ್ಟಂತಹ ಎಲ್ಲರಿಗೂ ಧನ್ಯವಾದಗಳು.