ಸಾಪ್ತಾಹಿಕ ಜೈನ ಸುದ್ದಿ – 55

ರಾಜ್ಯದೆಲ್ಲೇಡೆಯ ಜೈನ ಸುದ್ದಿಗಳನ್ನು ಒಂದೇಡೆ ಸಂಕಲಿಸಿ ಸುದ್ದಿ ಸಂಚಯವನ್ನು ನಿಮ್ಮ ಮುಂದೆ ಪ್ರತಿವಾರ ಪ್ರಸ್ತುತ ಪಡಿಸುತ್ತಿದೆ ಜ್ವಾಲಮಾಲ ಡಾಟ್ ನ್ಯೂಸ್.

ಮುಖ್ಯಾಂಶಗಳು.

ಬಿದರೂರಿನಲ್ಲಿ ಶ್ರೀ 108 ಪುಣ್ಯಸಾಗರ ಮುನಿಮಹಾರಾಜರ 25ನೇ ರಜತ ಚಾತುರ್ಮಾಸ.

ಪ್ರಾಚೀನ ಜೈನ ತೀರ್ಥಂಕರ ವಿಗ್ರಹ ಪತ್ತೆ.

ಎಲ್ಲೆಡೆ ಅಷ್ಟಾನಿಕ ಪರ್ವದ ನಿಮಿತ್ತ ಆರಂಭವಾದ ಪೂಜಾ ವಿಧಾನಗಳು.

ಕಾರ್ಕಳದ ಜೈನ್ ಮಿಲನ್ ಗಳ ಮಾಸಿಕ ಸಭೆ.

ಸ್ವಾತಂತ್ರ್ಯ ಹೋರಾಟಗಾರ ಪಡಂಗಡಿ ಭೋಜರಾಜ ಹೆಗ್ಡೆ ಅಸ್ತಂಗತ.

ಮಂದರಗಿರಿ ಕ್ಷೇತ್ರದ ಬೆಟ್ಟಕ್ಕೆ ರಸ್ತೆ ನಿರ್ಮಾಣದ ಭೂಮಿ ಪೂಜಾ ಕಾರ್ಯಕ್ರಮ.

 

ಸುದ್ದಿಗಳ ವಿವರ:-

ಬಿದರೂರಿನಲ್ಲಿ ಶ್ರೀ 108 ಪುಣ್ಯಸಾಗರ ಮುನಿಮಹಾರಾಜರು ತಮ್ಮ 25ನೇ ರಜತ ಚಾತುರ್ಮಾಸವನ್ನು ಪೂರೈಸಿದ್ದಾರೆ.

ಶ್ರೀ ಕ್ಷೇತ್ರ ವೇಣುಪುರ ಬಿದರೂರಿನಲ್ಲಿ ಶ್ರೀ 108 ಪುಣ್ಯಸಾಗರ ಮುನಿಮಹಾರಾಜರ 25ನೇ ರಜತ ಚಾತುರ್ಮಾಸದ ಶುಭಸಂದರ್ಭದಲ್ಲಿ ಸ್ವಸ್ತಿಶ್ರೀ ಧವಲಕೀರ್ತಿ ಭಟ್ಟಾರಕ ಸ್ವಾಮೀಜಿ, ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಹಾಗೂ ಸ್ವಸ್ತಿಶ್ರೀ ವೃಷಭ ಸೇನಾ ಭಟ್ಟಾರಕ ಸ್ವಾಮೀಜಿ. ಈ ಎಲ್ಲಾ ಭಟ್ಟಾರಕ ಸ್ವಾಮೀಜಿಯವರ ಸಾನಿಧ್ಯದಲ್ಲಿ ಬೆಳಗ್ಗೆ 8:30ಕ್ಕೆ ಶ್ರೀ ಜಿನಾಭಿಷೇಕ ಹಾಗೂ ಕನ್ನಡದಲ್ಲಿ ರಚನೆಮಾಡಿದ್ದಾ ಪಂಚಪರಮೇಷ್ಠಿ ಆರಾಧನೆ ವಿಧಿ ವಿಧಾನಗಳು ನೆರವೇರಿದವು. ತದನಂತರ ಮದ್ಯಾಹ್ನ 3:00 ಗಂಟೆ ಯಿಂದ ಸಭಾ ಕಾರ್ಯಕ್ರಮವು  ನಡೆಯಲ್ಪಟ್ಟು ಕನ್ನಡದಲ್ಲಿ ಪ್ರಪ್ರಥಮವಾಗಿ ರಚನೆ ಮಾಡಲ್ಪಟ್ಟ ಶ್ರೀ ಪಂಚಪರಮೇಷ್ಠಿ ವಿಧಾನದ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಮುನಿಶ್ರೀಗಳಿಗೆ ಶಾಸ್ತ್ರ ಸಮರ್ಪಣೆ, ಪಿಂಚಿ ಸಮರ್ಪಣೆ ಹಾಗೂ ಜಗದ್ಗುರು ಅಕಲಂಕ ಕೇಸರಿ ಸ್ವಸ್ತಿಶ್ರೀ ಭಟ್ಟಾಕಲಂಕ ಸ್ವಾಮೀಜಿಯವರಿಂದ ಹಾಗೂ ಸಮಸ್ತ ಭಟ್ಟಾರಕ ಸ್ವಾಮೀಜಿಯವರಿಂದ ಹಾಗೂ ಸಮಸ್ತ ಶ್ರಾವಕ ಶಾವಕಿಯರ ಪರವಾಗಿ ಮುನಿಶ್ರೀಗಳವರಿಗೆ ಸಿದ್ದಾಂತ ಯೋಗಿ ಎಂಬ ಉಪಾದಿಯೊಂದಿಗೆ ಗೌರವಿಸಿ ವಿನಯಾಂಜಲಿ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಶಿಕಾರಿ ಪುರದ ಬಳಿ ಪ್ರಾಚೀನ ಜೈನ ವಿಗ್ರಹ ಒಂದು ಪತ್ತೆಯಾಗಿದೆ.

ಶಿಕಾರಿ ಪುರ ತಾಲ್ಲೂಕಿನ ಶೀರಾಳ ಕೊಪ್ಪ ಸಮೀಪದ ಮಾಳುರು ಗ್ರಾಮದ ಗದ್ದೆಯೊಂದರಲ್ಲಿ ಪ್ರಾಚೀನ ಕಾಲದ ಜೈನ ತೀರ್ಥಂಕರರ ವಿಗ್ರಹ ಪತ್ತೆಯಾಗಿದೆ. ಗ್ರಾಮದ ಮಡಿವಾಳರ ಮಂಜಪ್ಪ ಅವರಿಗೆ ಸೇರಿದ ಜಮೀನಿನಲ್ಲಿ ಕಳೆದ ವಿಜಯ ದಶಮಿದಿನ ಬಣ್ಣಗಳಿಂದ ಕೂಡಿದ ದಿಬ್ಬವನ್ನು ಹೂಳುಮೆಗಾಗಿ ಸಮಮಾಡುತ್ತಿದ್ದಾಗ ವಿಶೇಷ ಶಿಲೆಯೊಂದು ಕಂಡು ಬಂದಿದೇ. ಕುತುಹಲಗೊಂಡ ಅವರು ದಕ್ಕೆಯಾಗದ ರೀತಿಯಲ್ಲಿ ಅದನ್ನು ಅವರು ಮಣ್ಣಿನಿಂದ ಬೇರ್ಪಡಿಸಿದ್ದು ಸುಮಾರು ನಾಲ್ಕು ಅಡಿ ಉದ್ದ ನಾಲ್ಕು ಅಡಿ ಎತ್ತರದ ಏಕ ಶಿಲಾ ವಿಗ್ರಹ ಗೊಚರಿಸಿದೆ. ಅಲ್ಲದೇ ಆ ಸ್ಥಳದಲ್ಲಿ ದೊಡ್ಡ ಗಾತ್ರದ ಸುಟ್ಟ ಇಟ್ಟಿಗೆಗಳು ಕೂಡ  ದೊರೆತಿವೆ. ತೀರ್ಥಂಕರರ ವಿಗ್ರಹವು ಮದ್ಯದಲ್ಲಿ ದ್ಯಾನ ಭಂಗಿಯ ಪೈಯಂಕಾಸನದಲ್ಲಿ ಕುಳಿತ್ತಿದ್ದು, ಅತ್ಯಂತ ನಯವಾದ ಕೆತ್ತನೆಯಿಂದ ಕೂಡಿದೆ. ವಿಗ್ರಹದ ಮೇಲಿನ ಫ್ರಭಾವಳಿಯಲ್ಲಿ ಲತೆಗಳ ಚಿತ್ರವಿದ್ದು ಹಣ್ಣಿನ ಗೊಂಚಲು, ಹಣ್ಣು ತಿನ್ನುತ್ತಿರುವ ಗಿಳಿಗಳು, ಮಂಗನ ಕೆತ್ತನೆಗಳು, ತೀರ್ಥಂಕರರು ಇರುವ ನಿಸರ್ಗದ ಸಂಬಂಧವನ್ನು ಸೂಚಿಸುತ್ತವೆ. ವಿಗ್ರಹದ ಎರಡು ಮೇಲ್ಬಾಗದಲ್ಲಿ ಚಾಮರ ದಾರಿಗಳ ಕೆತ್ತನೆಗಳು ಕಂಡು ಬರುತ್ತವೆ.

ಅಷ್ಟಾನಿಕ ಪರ್ವದ ನಿಮಿತ್ತ ಎಲ್ಲೆಡೆ ಪೂಜಾರಾಧನೆಗಳು ವೈಭವದಿಂದ ನಡೆಯುತ್ತಿದ್ದು ಗೋವ ರಾಜ್ಯದ ಹಾಗೂ ಆರತಿ ಪುರ ಜೈನ ಮಠದ ಸುದ್ದಿಗಳು ಜ್ವಾಲಮಾಲಗೆ ತಲುಪಿದೆ.

ಗೋವ ರಾಜ್ಯದ ಪೋಂಡ ನಗರದ ಶ್ರೀ ಶಾಂತಿನಾಥ ದಿಗಂಬರ ಜೈನ ಬಸದಿಯಲ್ಲಿ ಭವ್ಯ ಮೆರವಣಿಗೆ ಹಾಗೂ ದ್ವಜರೋಹಣದೊಂದಿಗೆ ಪ್ರಾರಂಭವಾಗಿರುವ ಅಷ್ಟಾನಿಕ ಪರ್ವದ ಶ್ರೀ ಸಿದ್ದ ಚಕ್ರ ಮಹಾ ಮಂಡಲ ವಿಧಾನದ ಮೊದಲ ವಿಧಾನದ  ಪೂಜಾ ವಿಧಿ ವಿಧಾನಗಳು ಜಗದ್ಗುರು ಅಕಲಂಕ ಕೇಸರಿ ಸ್ವಸ್ತೀ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿಯವರ ಸಾನಿಧ್ಯ ಮತ್ತು ಮಾರ್ಗ ದರ್ಶನದಲ್ಲಿ ಹಾಗೂ ಪೋಂಡದ ಸಮಸ್ತ ಶ್ರಾವಕ ಶ್ರಾವಕಿಯರ ಉಪಸ್ಥತಿಯಲ್ಲಿ ಸಾಂಗವಾಗಿ ನೆರವೇರಿತು.

ಭಾರತೀಯ ಜೈನ್ ಮಿಲನ್ ಕಾರ್ಕಳ ಹಾಗೂ ಯುವ ಜೈನ್ ಮಿಲನ್ ಕಾರ್ಕಳ ನವೆಂಬರ್ ತಿಂಗಳ ಮಾಸಿಕ ಸಭೆಯನ್ನು ವಿಶೇಷವಾಗಿ ನಡೆಸಿದ್ದಾರೆ.

ಭಾರತೀಯ ಜೈನ್ ಮಿಲನ್ ಕಾರ್ಕಳ ಮತ್ತು ಯುವ ಜೈನ್ ಮಿಲನ್ ಕಾರ್ಕಳ ಇದರ ನವೆಂಬರ್ ತಿಂಗಳ ಮಾಸಿಕ ಸಭೆಯು ದಿನಾಂಕ 07-11-2021ನೇ ಭಾನುವಾರದಂದು ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯಯ ಅತಿಥಿಗಳಾಗಿ ಆಗಮಿಸಿದ ಎಸ್ ಡಿ ಎಂ ಆಯುರ್ವೇಧ ಕಾಲೇಜು ಮತ್ತು ಆಸ್ಪತ್ರೆ ಉಡುಪಿ ಇಲ್ಲಿನ ಪ್ರಾಂಶುಪಾಲರಾದ ಡಾ|| ಮಮತ ಕೆ ವಿ ಇವರು ಇತ್ತೀಚಿನ ದಿನಗಳಲ್ಲಿ ಮಾನವನ ಆರೋಗ್ಯದಲ್ಲಿ ಉಂಟಾಗುತ್ತಿರುವ ಸಮಸ್ಯೆಗಳು ಮತ್ತು ಅದರ ಪರಿಹಾರೋಪಾಯಗಳ ಕುರಿತು ಸವಿಸ್ತಾರವಾಗಿ ತಿಳಿಸಿ ಕೊಟ್ಟರು. ಸಭೆಯಲ್ಲಿ ಪ್ರಸ್ತುತ ಅನ್ ಲೈನ್ ಮಾದ್ಯಮದಲ್ಲಿ ಧಾರ್ಮಿಕ ತರಗತಿಗಳನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬರುತ್ತಿರುವ ಶ್ರೀಮತಿ ಮಾಲತಿ ವಸಂತ ರಾಜ್ ಮತ್ತು ಇನ್ಫರ್ಮೇಷನ್ ಸೈನ್ಸ್ ಪದವಿಯಲ್ಲಿ ಚಿನ್ನದ ಪದಕಗಳಿಸಿರುವ ಕುಮಾರಿ ನಿಶಾ ಪ್ರಸಾದ್ ಇವರನ್ನು ಸನ್ಮಾನಿಸಲಾಯಿತು. ಅದೇ ರೀತಿ ಪ್ರಸ್ತುತ ವರ್ಷದ ಹತ್ತನರ ತರಗತಿ ಮತ್ತು ದ್ವೀತಿಯ ಪಿ ಯು ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳೊಂದಿಗೆ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ವೀರ್ ಅಮರ್ ನಾಥ್ ಹೆಗ್ಗಡೆಯವರು ವಯಿಸಿದ್ದು ಕಾರ್ಯಕ್ರಮದಲ್ಲಿ ಭಾರತೀಯ ಜೈನ್ ಮಿಲನ್ ವಲಯ 8ರ ಎಲ್ಲಾ ಸದಸ್ಯರು ಭಾಗವಹಿಸಿದ್ದರು.

ಇದ್ದೀಗ ಅಭಿನಂದನ ಸುದ್ದಿಗಳು ನಿಮ್ಮ ಮುಂದೆ.

ಶ್ರೀಮತಿ ಶಿಲ್ಪಾ ವಿಜಯ್ ಕುಮಾರ್ ಕಾಶಿನ್ ಅವರ ಸೊಸೆಯಾದ ಮತ್ತು ಮಹಿಳಾ ವಿದ್ಯಾಪೀಠ ಕಾಲೇಜು ವಿದ್ಯಾರ್ಥಿನಿಯಾದ ಶ್ರೀಮತಿ ಭಾಗ್ಯ ಶ್ರೀ ಜೀವಂದರ್ ಕಾಶಿನ್ ರವರು ಎಂ ಎ ಪದವಿಯಲ್ಲಿ ಮಹಿಳಾ ಸಾಹಿತ್ಯ ಎಂಬ ವಿಷಯಕ್ಕೆ  ವಿಜಯಾ ದೇವಿ ಚಿನ್ನದ ಪದಕವನ್ನು ವಿಜಯಪುರದಲ್ಲಿರುವ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರದಲ್ಲಿ ದಿನಾಂಕ 09 ನವೆಂಬರ್ 2021ರಂದು 12ನೇ ಘಟಿಕೊತ್ಸವದ ಸಮಾರಂಭದಲ್ಲಿ ಚಿನ್ನದ ಪದಕವನ್ನು ಪಡೆದರು. ಇವರಿಗೆ ಸಮಸ್ತ ಜೈನ ಭಾಂದವರ ಪರವಾಗಿ ಮತ್ತು ಜ್ವಾಲಮಾಲ ನ್ಯೂಸ್ ತಂಡದ ಪರವಾಗಿ ತುಂಬುಹೃದಯದ ಅಭಿನಂದನೆಗಳು.

ಬೆಳಗಾವಿ ಇಂದ ಪ್ರಕಟಗೊಂಡು ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗ, ಕೊಪ್ಪಳ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಸಾರ ಹೊಂದಿದ ಕಳೆದ 42 ವರ್ಷಗಳಿಂದ ಕನ್ನಡ ಮಾಧ್ಯಮದ ಮೂಲಕ ಕನ್ನಡದ ಸೇವೆಗೈದ ಕರ್ನಾಟಕದಲ್ಲಿನ ಜೈನ ಒಡೆತನದ ಏಕೈಕ ಪತ್ರಿಕೆಯ ಸಂಪಾದಕರಾದ ಹಾಗೂ ಜೈನ ಯುವ ಸಂಘಟನೆಯ ಪ್ರಮುಖ ಪದಾಧಿಕಾರಿ ವೃಷಭ ಶ್ರೀ ಸೇರಿದಂತೆ ಅನೇಕ ಪ್ರಶಸ್ಥಿಗಳಿಗೆ ಭಾಜನರಾದ ಬೆಳಗಾವಿ ಜೈನ ಸಮಾಜದ ಗೌರವ ಹಿರಿಯ ಪತ್ರಕರ್ತ ಕುಂತಿ ನಾಥ ಕಲಮನಿಯವರ ಸಾಧನೆಯನ್ನು ಗುರುತಿಸಿ ಬೆಳಗಾವಿ ಜಿಲ್ಲಾಡಳಿತ ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ 1 ರಂದು ಬೆಳಗಾವಿ ನಗರದ  ಸಿ ಪಿ ಎಡ್ ಮೈದಾನದಲ್ಲಿ ಸನ್ಮಾನಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ಥಿಯನ್ನು ನೀಡಿ ಸನ್ಮಾನಿಸಿದರು. ಜಿಲ್ಲಾಡಳಿತವತಿ ಯಿಂದ ಸನ್ಮಾನ ಸ್ವೀಕರಿಸುವ ನಾಥ ಕಲಮನಿಯವರಿಗೆ ಜ್ವಾಲಮಾಲ ನ್ಯೂಸ್ ಕಡೆಯಿಂದ ತುಂಬುಹೃದಯದ ಅಭಿನಂದನೆಗಳು.

ಸ್ವಾತಂತ್ರ್ಯ ಹೋರಾಟಗಾರ ಪಡಂಗಡಿ ಅವರನ್ನು ಜ್ವಾಲಮಾಲ ಸ್ಮರಿಸಿಕೊಳ್ಳಲು ಇಚ್ಚಿಸುತ್ತದೆ.

1937 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಪಡಂಗಡಿ ಎಂಬ ಕುಗ್ರಾಮದಲ್ಲಿ ಚಿಗುರು ಮಿಸೇಯ ಯುವಕ ಭೋಜರಾಜರು ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರಿಗೆ ರಣ ವಿಳ್ಯೆಯನ್ನು ನೀಡಿದನು. ಮನೆ ಕುಟುಂಬದ ಪರಿವೇ ಇಲ್ಲದೆ ಬ್ರಿಟಿಷರ ವಿರುದ್ಧ ಸಂಖ್ಯಾತ ದೇಶ ಭಕ್ತರ ಜೋತೆ ಹೆಜ್ಜೆಗೆ ಹೆಜ್ಜೆ ಇಟ್ಟು ಭುಜಕ್ಕೆ ಭುಜ ಕೊಟ್ಟು ಮುನ್ನಡೆದವರು ಪಡಂಗಡಿ ಭೋಜರಾಜರು. ಜೀವದ ಭಯವಿಲ್ಲದೆ ಸಮರದ ದಾರಿಯಲ್ಲಿ ಮುನ್ನಡೆದು 1942ರ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಪ್ರತ್ಯಕ್ಷವಾಗಿ ಭಾಗವಹಿಸಿದರು. ಇದರ ಪರಿಣಾಮವಾಗಿ ಘಟಾನುಘಟಿ ನಾಯಕರೊಡನೆ ಜೈಲು ಪಾಲದರು. ದೇಶ ಭಕ್ತರ ಸತ್ಸಂಘದಿಂದ ದೇಶಭಕ್ತಿ ಮತ್ತಷ್ಟು ಮೊಗದಷ್ಟು ಹೆಚ್ಚಿತು. ಜೈಲಿನಲ್ಲಿದ್ದರು ಜೈನ ಧರ್ಮದ ಆಚಾರ ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳದೆ ಶ್ರವಕ ಧರ್ಮವನ್ನು ಪಾಲಿಸಿದ ಹೆಗ್ಗಳಿಕೆ ಭೋಜರಾಜ ಹೆಗ್ಡೆಯವರ ಹಿರಿಮೆಯಾಗಿದೆ. ಅಷ್ಟ ಮೂಲ ಗುಣಗಳಲ್ಲಿ ಅನುರಾಗ ಹೊಂದಿ ಶ್ರಾವಕ ಕರ್ತವ್ಯವನ್ನು ಪಾಲಿಸಿದವರು. 1947ರಲ್ಲಿ ಸ್ವಾತಂತ್ರ್ಯ ದೊರೆತಾಗ ಪಡಂಗಡಿ ಗ್ರಾಮದಲ್ಲಿ ಬಾನೆತ್ತರದಲ್ಲಿ ಭಾರತದ ತ್ರಿವರ್ಣ ದ್ವಜವನ್ನು ಹಾರಿಸಿ ಸಂಭ್ರಮ ಪಟ್ಟರು. ತನಗೆ ಎಷ್ಟೆ ಕಷ್ಟಗಳಿದರು ಪರರ ದುಖಃಕ್ಕೆ ಮನ ಮಿಡಿವ ಭೋಜರಾಜ ಹೆಗ್ಡೆಯವರು ನಾಡು ಕಂಡ ಅತ್ಯಂತ ಸಾತ್ವಿಕ ವ್ಯಕ್ತಿಯಾಗಿದ್ದರು. ಪುಟ್ಟ ಪುಟ್ಟ ಶಾಸ್ತ್ರಗಳನ್ನು ಬ್ಯಾಗಿನಲ್ಲಿ ಇರಿಸಿಕೊಂಡು ಸಿಕ್ಕ ಪ್ರಿಯರಿಗೆ ಸಾತ್ವಿಕ ಬದುಕಿನ ಸೂತ್ರಗಳನ್ನು ಹೇಳಿ ಶಾಸ್ತ್ರ ಗ್ರಂಥವನ್ನು ಕೊಡುಗೆಯಾಗಿ ನೀಡುತ್ತಿದ್ದರು. ಜ್ವಾಲಮಾಲಗೂ ಕೂಡ ಈ ಕೊಡುಗೆ ಸಿಕ್ಕಿದೆ. ಜೀವನದ ಉದ್ದಕ್ಕೂ ಶ್ರಾವಕ ಧರ್ಮದ ನೆರಳಿನಲ್ಲಿ ಜೀವಿಸುತ್ತ ಲೋಕ ಕಲ್ಯಾಣವನ್ನು ಬಯಸುತ್ತ ಉಪಕಾರಿಯಾಗಿ ಕೊನೆಯ ಉಸಿರಲು ಉಪಕಾರ ಮಂತ್ರದ ಸ್ಮರಣೆಯೊಂದಿಗೆ ಅವರ ಆತ್ಮ ಪುತ್ಕಲ ಶರೀರವನ್ನು ತೊರೆದು ಮಗದೊಂದು ಭವಕ್ಕೆ ಪಾದಾರ್ಪಣೆ ಮಾಡಿತು. ಮೂಡುಬಿದ್ರೆಯ ಪೂಜ್ಯ ಸ್ವಾಮೀಜಿಗಳು, ಧರ್ಮಸ್ಥಳದ ಧರ್ಮಾಧಿಕಾರಿಗಳು, ರಾಜಕೀಯ ಗಣ್ಯರು, ಧಾರ್ಮಿಕ ಮುಖಂಡರು, ಅಭಿಮಾನಿಗಳು ಕುಟುಂಬವರ್ಗದವರ ಅರ್ಶುದರ್ಪದೊಂದಿಗೆ ಹಾಗೂ ಸರಕಾರದ ಸಕಲ ಗೌರವದೊಂದಿಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸಾತ್ವಿಕ ಶಿರೋಮಣಿ ಭೋಜರಾಜ ಹೆಗ್ಡೆ ಪಡಂಗಡಿ ದಿನಾಂಕ 9-11-2021ರಂದು ಅನಂತಾಕಶದಲ್ಲಿ ಲೀನರಾದರು. ಇವರ ಸದ್ಗತಿಗೆ ಜ್ವಾಲಮಾಲ ಪ್ರಾರ್ಥಿಸುತ್ತದೆ.

ಮಂದರಗಿರಿ ಕ್ಷೇತ್ರಕ್ಕೆ ರಸ್ತೆ ನಿರ್ಮಾಣದ, ಯುಗಳ ಮುನಿಗಳ ಸಾನಿಧ್ಯದಲ್ಲಿ ಉತ್ತಮ ಕಾರ್ಯಕ್ಕೆ ಚಾಲನೆ ದೊರೆತಿದೆ.

ದಿಗಂಬರ ಜೈನ ಸಮಾಜದ ವತಿಯಿಂದ ತುಮಕೂರು ತಾಲ್ಲೂಕಿನ ಮಂದರಗಿರಿ ಕ್ಷೇತ್ರದ ಬೆಟ್ಟಕ್ಕೆ ರಸ್ತೆ ನಿರ್ಮಾಣದ ಭೂಮಿ ಪೂಜಾ ಕಾರ್ಯಕ್ರಮವು ಬಾಲಾಚಾರ್ಯ ಮುನಿಶ್ರೀ 108 ಪಾವನ ಕೀರ್ತಿ ಮಹರಾಜರು, ಮುನಿಶ್ರೀ 108 ಅಮೋಘ ಕೀರ್ತಿ ಮಹಾರಾಜರು ಮತ್ತು ಮುನಿಶ್ರೀ 108 ಅಮರ ಕೀರ್ತಿ ಮಹಾರಾಜರ ಸಾನಿಧ್ಯದಲ್ಲಿ ನಡೆಯಿತು. ಸಮಾಜದ ಅಧ್ಯಕ್ಷ ಎಸ್ ಜೆ ನಾಗರಾಜ್ ಧರ್ಮಸ್ಥಳದ ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ವಿನೋದ್ ಭಾಕ್ಲಿವಾಲ್ ಮತ್ತಿತರರು ಉಪಸ್ಥಿತರಿದ್ದರು.

ಮೂಡುಬಿದ್ರೆ ಜೈನ ಪೇಟೆಯಲ್ಲಿ ಹಸಿ ಕಸಿ ವಿಲೆವಾರಿ ಘಟಕವನ್ನ ಮುಡುಬಿದ್ರೆ ಶ್ರೀಗಳವರು ಲೋಕಾರ್ಪಣೆಮಾಡಿದ್ದಾರೆ.

ಜೈನ ಪೇಟೆ 9ನೇ ವಾರ್ಡ್ ನ ಶ್ರೀ ಜೈನ ಮಠದ ಶಾಂತಿ ಭವನ ಧರ್ಮ ಶಾಲೆಗಳು ಹಸಿ ಕಸ ವಿಲೆವಾರಿಯನ್ನು ಶ್ರೀ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರು ಕೀರ್ತಿ ಸ್ವಾಮೀಜಿ ಯವರು ಲೋಕಾರ್ಪಣೆ ಮಾಡಿದರು. ಬಸದಿಗಳ ಮುಖ್ಯಸ್ಥರಾದ ದಿನೇಶ್ ಆನಡ್ಕ, ಪುರಸಭೆ ಸದಸ್ಯೆ ಶ್ವೇತ ಪ್ರವೀಣ್, ಸ್ವಸ್ತಿಶ್ರೀ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಸೌಮ್ಯ, ಉಪನ್ಯಾಸಕಿ ಸುಜಾತ ಮತ್ತು ಮಠದ ಸಿಬ್ಬಂಧಿಗಳು ಉಪಸ್ಥಿತರಿದ್ದರು.

ಇಲ್ಲಿಯವರೆಗೆ ವಾರದ ಜೈನ ಸುದ್ದಿಗಳನ್ನು ವೀಕ್ಷಿಸಿದ್ದ ತಮ್ಮೆಲ್ಲರೀಗೂ ಧನ್ಯವಾದಗಳನ್ನು ತಿಳಿಸುತ್ತ ಹೀಗೆ ಪ್ರತಿವಾರವು ವೀಕ್ಷಿಸುತ್ತಿರಿ ವಾರದ ಜೈನ ಸುದ್ದಿಗಳು ನಿಮ್ಮ ಜ್ವಾಲಮಾಲ ಡಾಟ್ ನ್ಯೂಸ್ ನಲ್ಲಿ.