ಜ್ಞಾನದೀಪಿಕೆಗಳು- 19

ಇಂದು ಪರಿಚಯಿಸುತ್ತಿರುವ ಪುಸ್ತಕಗಳು ಶ್ರವಣ ಬೆಳ್ಗೊಳ ಮತ್ತು ಅನುಪ್ರೇಕ್ಷೆಗಳು.

ಡಾ.ಪದ್ಮಿನಿ ನಾಗರಾಜು.

ಲೇಖಕಿ, ಪ್ರಾದ್ಯಾಪಕಿ, ಸದಸ್ಯರು, ಕನ್ನಡ ಸಲಹಾ ಸಮಿತಿ, ಕೇಂದ್ರ ಸಾಹಿತ್ಯ ಆಕಾಡೆಮಿ, ನವದೆಹಲಿ.

ಆತ್ಮಿಯರೇ ನಮಸ್ಕಾರ, ಜ್ವಾಲಮಾಲ ಡಾಟ್ ನ್ಯೂಸ್ ವತಿಯಿಂದ ಪ್ರಸಾರವಾಗುತ್ತಿರುವಂತಹ ಸರಣಿಕಾರ್ಯಕ್ರಮ ಜ್ಞಾನ ದೀಪಿಕೆಗಳನ್ನು ನೀವು ವೀಕ್ಷಿಸುತ್ತಿದ್ದೀರಿ ಮತ್ತೊಂದು ಸರಣಿ ಕಾರ್ಯಕ್ರಮಕ್ಕೆ ಸ್ವಾಗತ.  

ಇಂದು ನಾವು ಪರಿಚಯ ಮಾಡಿಕೊಡುತ್ತಿರುವಂತಹ ಕೃತಿ ಶ್ರವಣ ಬೆಳಗೊಳದ ಬಗ್ಗೆ ಇರುವಂತಹ ಕೃತಿ. ಶಿರೂರು ಅವರು ಈ ಕೃತಿಯನ್ನ ಧಾರವಾಡ ಯೂನಿವರ್ಸಿಟಿಗೆ ಬರೆದಂತವರು. ಅ ಕೃತಿ ಅತ್ಯಂತ ಮಹತ್ವದ ಕೃತಿ, ಈ ಕೃತಿಯನ್ನು ಪರಿಚಯ ಮಾಡಿಕೊಡುತ್ತಾ ಇದ್ದೀವಿ.

ಮತ್ತೊಂದು ಕೃತಿಯನ್ನು ಬಹಳಷ್ಟು ಸಂಕೊಚದಿಂದ ಪರಿಚಯಮಾಡಿಕೊಡುತ್ತಾ ಇದ್ದೀವಿ. ಅದು ನನ್ನದೆ ಕೃತಿ ಅರಿವಿನ ಮಾರ್ಗಗಳ ಸೋಪಾನಗಳು ಅನುಪ್ರೇಕ್ಷೆಗಳು ಎನ್ನುವ ಕೃತಿ. ದ್ವಾದಶ ಅನುಪ್ರೇಕ್ಷೆಗಳಿಗೆ ಸಂಬಂಧ ಪಟ್ಟಂತಹ ಕೃತಿ ಅನುಪ್ರೇಕ್ಷೆಗಳು ಈ ಕೃತಿಯನ್ನು ಪರಿಚಯ ಮಾಡಿಕೊಡುತ್ತಾ ಇದ್ದೀವಿ.

ಶ್ರವಣ ಬೆಳಗೊಳದ ಬಗ್ಗೆ ಸಾಂಸ್ಕೃತಿಕ ರಾಜಕೀಯ ಸಾಹಿತ್ಯದ ನೋಟವನ್ನು ಬೀರುವಂತಹ ಈ ಶ್ರವಣ ಬೆಳಗೊಳದ ಕೃತಿಯನ್ನು ಡಾ|| ಬಿ ವಿ ಶಿರೂರವರು ಪ್ರಬಂಧವಾಗಿ ಬರೆದಿದ್ದಾರೆ. ಈ ಕೃತಿ 1976ರಲ್ಲಿ ಈ ಕೃತಿ ಪ್ರಕಟವಾಗಿದೆ, ಆ ಕಾಲಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಈ ಕೃತಿಯನ್ನು ಪ್ರಕಟಮಾಡಿದೆ. ಆ ಕಾಲಕ್ಕೆ 38 ರೂಪಾಯಿ ಬೆಲೆ ಇತ್ತು. ಆರ್ ಸಿ ಹಿರೇಮಟ್ ರವರು ಧಾರವಾಡ ಕುಲಪತಿಗಳು ಆಗಿದ್ದಾಗ ಅವರು ಮುನ್ನುಡಿಯನ್ನು ಬರೆಯುತ್ತಾರೆ. ಕನ್ನಡನಾಡಿನ ಇತಿಹಾಸವನ್ನು ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದ ಕೆಲವೇ ಸ್ಥಳಗಳಲ್ಲಿ ಶ್ರವಣ ಬೆಳಗೊಳ ಸುಪ್ರಸಿದ್ಧವಾದುದು ಭದ್ರ ಬಾಹು ಮುನಿಯ ಕಾಲದಿಂದಲು ಅಂದರೆ ಕ್ರಿ.ಪೂ 3ನೇ ಶತಮಾನದಿಂದಲು ಜೈನ ಸಂಸ್ಕೃತಿಯ ಕೇಂದ್ರವಾಗಿರುವ ಈ ಸ್ಥಳ ನಮ್ಮ ನಾಡಿನ ಪ್ರಮುಖ ಅರಸು ಮನೆತನಗಳಿಗೆ ಕವಿಗಳಿಗೆ ಸ್ಪೂರ್ತಿಯ ನೆಲೆ ಎನಿಸಿದೆ, ಹೀಗಾಗಿ ಮಹಾಪ್ರಬಂಧದ ವಿಷಯವಾಗಿ ನಿಲ್ಲುವ ಮಹತ್ವ ಪಡೆದಿದೆ ಎಂದು ಆರ್ ಸಿ ಹಿರೇಮಟ್ ರವರು ಮುನ್ನುಡಿಯನ್ನು ಬರೆಯುತ್ತಾರೆ.

ಡಾ|| ಬಿ ವಿ ಶಿರೂರವರು ಶ್ರವಣ ಬೆಳಗೊಳಕ್ಕೆ ಸಂಬಂಧಿಸಿದಂತೆ ಶಾಸನಗಳನ್ನ, ಸಾಹಿತ್ಯಗಳನ್ನ ಮುಂತಾದವುಗಳನ್ನ ಸಂಗ್ರಹಿಸಿ ಈ ಮಹಾಪ್ರಬಂಧವನ್ನು ಪರಿ ಪೂರ್ಣವಾಗಿಸಲು ಪ್ರಯತ್ನಿಸಿದ್ದಾರೆ ಅನ್ನುವಂತಹದನ್ನ ಮುನ್ನುಡಿಯನ್ನು ಬರೆಯುತ್ತಾರೆ. ಅತಿ ಹೆಚ್ಚು ಶಾಸನಗಳು ದೊರಕಿರುವುದು ಶ್ರವಣ ಬೆಳಗೊಳದಲೇ ಆಗಿರುತ್ತದೆ, ಅನೇಕರ ಕೊಡುಗೆಗಳನ್ನು ಗಮನಿಸುತ್ತೇವೆ. 

ಡಾ|| ಬಿ ವಿ ಶಿರೂರವರು ತನ್ನ ಓದು ಬರಹವನ್ನು ಮುಂದುವರೆಸ ಬೇಕು ಎಂದು ಅಧ್ಯಾಯನ ಮಾಡುವಾಗ ಡಾ|| ಆರ್ ಸಿ ಹಿರೇಮಟ್ ರವರು ಮಾರ್ಗದರ್ಶನ ಕೊಟ್ಟರು, ಅನಂತರ ಈ ಪ್ರಬಂಧವನ್ನು ಕೇಳಿ ಆಶೀರ್ವಾದವನ್ನು ಮಾಡಿದಂತವರು ಶ್ರವಣ ಬೆಳಗೊಳದ ಶ್ರೀಗಳು ಎಂದು ಉಲ್ಲೇಖನ ಮಾಡುತ್ತಾರೆ.

ಈ ಪ್ರಬಂಧದಲ್ಲಿ ಐತಿಹಾಸಿಕವಾಗಿ ಮೌರ್ಯರು ಗಂಗರ ಬಗ್ಗೆ ಇದೆ, ಸಾಂಸ್ಕೃತಿಕವಾಗಿ ಆ ಕಾಲದ ಭರತಶಾಸ್ತ್ರ, ಸಂಗೀತ, ಚಿತ್ರ ಕಲೆ, ವಾಸ್ತುಶಿಲ್ಪ, ಆಡಳಿತ ಪದ್ದತಿ, ಮುನಿಗಳ ಕಾರ್ಯಾಚರಣೆ, ಜೈನ ಧರ್ಮದ ಬಗ್ಗೆ ಕೂಡ ಅತ್ಯಂತ ವಿಸ್ತೃತವಾಗಿ ಬೆಳಕನ್ನು ಚೆಲ್ಲುತ್ತದೆ. ಇದೊಂದು ಶಿರೂರು ರವರ ಮಹತ್ವದ ಕೃತಿ.

ಮತ್ತೊಂದು ಕೃತಿ ಅರಿವಿನ ಮಾರ್ಗಗಳ ಸೋಪಾನಗಳು, ಸೋಪಾನಗಳು ಅಂದರೆ ಮೇಟ್ಟಿಲುಗಳು. ದ್ಯಾನ ಮತ್ತು ಅನುಪ್ರೇಕ್ಷೆಗೆ ಇರುವಂತಹ ಸಂಬಂಧ, ಜೈನೇತ್ತರ ಸಾಹಿತ್ಯ ಕೃತಿಗಳಲ್ಲಿ ಅನುಪ್ರೇಕ್ಷೆಗಳ ಚಿಂತನೆ ಇವೆಲ್ಲವು ಕೂಡ ಈ ಗ್ರಂಥದಲ್ಲಿ ಚರ್ಚೆಯಾಗಿದೆ. ಸಂಸ್ಕೃತ ಮತ್ತು ಮೂಲಚಾರ ಇರಬಹುದು, ಬಂಡುವರ್ಮನ ಜೀವಸಂಬೋಧನೆ ಇರಬಹುದು ಇವುಗಳನ್ನು ಗ್ರಹಿಸಿ ಬರೆದಿರುವಂತಹ ಕೃತಿ.

ನನ್ನ ಗುರುಗಳಾದಂತಹ ಪ್ರೋಫೆಸರ್ ಶಿರಚಂದ್ರ ಅವರು ನನಗೆ ಮಾರ್ಗದರ್ಶನ ಮಾಡಿದರು. ಈ ಕೃತಿ ಬರಲು ಕಾರಣವಾದಂತವರು ಪ್ರೋಫೆಸರ್ ಸುರೇಶ್ ಕುಮಾರ್‍ ರವರು, ಇದೆಲ್ಲದಕ್ಕೂ ಪ್ರೋತ್ಸಾಹ ಕೊಟ್ಟಂತವರು ಪದ್ಮಾ ಶೇಖರ್ ಮೆಡಂ ರವರು, ಇವರೆಲ್ಲರನ್ನು ಕೂಡ ಈ ಹೊತ್ತಿನಲ್ಲಿ ನೆನೆಯುತ್ತೇನೆ. ಈ ಪುಸ್ತಕ ನಿವೇದಿತ ಪಬ್ಲಿಕೇಶನ್ ನಿಂದ ಬಂದ್ದಿದೆ. ಹೊಂಬುಜದಲ್ಲಿ ಭಟ್ಟಾರಕರು ಈ ಕೃತಿಯನ್ನು ಎಲ್ಲರಿಗು ಒಂದೊಂದು ಕೊಡ ಬೇಕು ಎಂದು ಹೇಳಿ ನಮ್ಮ ಎಲ್ಲಾ ಶಿಕ್ಷಕರಿಗೂ ಕೂಡ ತಲುಪುವಂತೆ ಮಾಡಿದರು. ಈ ಕೃತಿ 2017ರಲ್ಲಿ ಮುದ್ರಣವಾಯಿತು.

ಹೊಂಬುಜದ ಸ್ವಾಮೀಜಿಯವರು ಆಶೀರ್ವಾದ ಮಾಡಿ ಮುನ್ನುಡಿಯನ್ನು ಬರೆದು ಕೊಟ್ಟಿದ್ದಾರೆ. ಇದೊಂದು ಶ್ಲಾಘನೀಯ ಕಾರ್ಯ ಎಂದು ಬರೆದಿದ್ದಾರೆ. ನಾಡಿನ ಬಹು ದೊಡ್ಡ ಸಾಂಸ್ಕೃತಿಕ ಚಿಂತಕರು ಮತ್ತು ಸಂಶೋಧಕರು ಹಾಗಿರುವಂತಹ ಡಾ|| ಬಸವರಾಜು ರವರು ಇದಕ್ಕೆ ಮುನ್ನುಡಿಯನ್ನು ಬರೆದು ಕೊಟ್ಟಿದ್ದಾರೆ.

ಹಾಗಾಗಿ ಈ ಎರಡು ಮಹತ್ವದ ಕೃತಿಗಳನ್ನು ನಿಮ್ಮ ಮುಂದೆ ಇಟ್ಟಿದೇವೆ, ಮುಂದಿನ ವಾರ ಮತ್ತೇರಡು ಕೃತಿಗಳ ಪರಿಚಯದೊಂದಿಗೆ ನಿಮ್ಮ ಮುಂದೆ ಹಾಜರಾಗುತ್ತೇನೆ.