ಜೈ ಜಿನೇಂದ್ರ ವೀಕ್ಷಕರೆ, ಯುಗಳ ಮುನಿ ಮಹಾರಾಜರ ಚಾತುರ್ಮಾಸ ವರ್ಷಾಯೋಗ ಈ ಬಾರಿ ಉಧ್ಯಾನ ನಗರಿ ಬೆಂಗಳೂರಿನಲ್ಲಿ ನಡೆಯುತ್ತಿದೆ. ಉಧ್ಯಾನ ನಗರಿ ಬೆಂಗಳೂರಿಗೆ ಚಾತುರ್ಮಾಸದ ನಿಮಿತ್ತ ಪರಮ ಪೂಜ್ಯ ಮುನಿಶ್ರೀ 108 ಅಮೋಘ ಕೀರ್ತಿ ಮುನಿ ಮಹಾರಾಜರು ಮತ್ತು ಪರಮ ಪೂಜ್ಯ ಮುನಿ ಶ್ರೀ 108 ಅಮರ ಕೀರ್ತಿ ಮುನಿಮಹಾರಾಜರ ಮಂಗಲ ಪುರ ಪ್ರವೇಶ ದಿನಾಂಕ 19-06-2022 ರಂದು ಬೆಳಿಗ್ಗೆ 8 ಗಂಟೆಗೆ ಬೆಂಗಳೂರಿನ ಅಶೋಕ ಪಿಲ್ಲರ್ ನಿಂದ ಚಕ್ರೇಶ್ವರಿ ಮಹಿಳಾ ಸಮಾಜದ ವರೆಗೆ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜೈನ ಬಂಧುಗಳು, ಹೆಚ್ಚಿನ ಸಂಖ್ಯೆಯಲ್ಲಿ ಜೈನ ಯುವಕ ಯುವತಿಯರು ಕೂಡ ಅಂದಿನ ಪುರ ಪ್ರವೇಶದಲ್ಲಿ ಭಾಗಿಯಾಗಿ, ಹಾಗೂ ದಿನಾಂಕ 10-07-2022ರಂದು ಕರ್ನಾಟಕ ಜೈನ ಭವನದಲ್ಲಿ ಯುಗಳ ಮುನಿಗಳ ಚಾತುರ್ಮಾಸ ಕಾರ್ಯಕ್ರಮ, ದಿನಾಂಕ 13-07-2022 ರಂದು ಚಾತುರ್ಮಾಸ ಕಳಸ ಸ್ಥಾಪನೆ.
ಈ ಎಲ್ಲಾ ಕಾರ್ಯಕ್ರಮಗಳು ತ್ಯಾಗಿ ಸೇವಾ ಸಮಿತಿ ಆಯೋಜನೆಯಲ್ಲಿ ಹಮ್ಮಿಕೊಳ್ಳಲಾಗಿತ್ತು, ಚಕ್ರೇಶ್ವರಿ ಮಹಿಳಾ ಸಮಾಜ, ಕರ್ನಾಟಕ ಜೈನ್ ಅಸೋಶಿಯೇಶನ್, ಸಮಸ್ತ ಜೈನ ಸಮಾಜ ಬೆಂಗಳೂರು ಇವರ ಸಹಕಾರದೊಂದಿಗೆ ನಡೆಯಲ್ಲಿದೆ.
ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜೈನ ಬಂಧುಗಳು ವಿಶೇಷವಾಗಿ ಯುವಕ ಯುವತಿಯರು ಕೂಡ ಪಾಲ್ಗೊಳ್ಳ ಬೇಕಾಗಿ ವಿನಂತಿ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














