ವೀರ್ ಚಂದ್ ರಾಘವ ಗಾಂಧಿ ಸಾಹಿತಿ ಹಿಂದಿನ ಸಾಧಕನ ಪರಿಚಯದೊಂದಿಗೆ ಮತ್ತೊಮ್ಮೆ ಅವರ ನೆನಪು ಹಾಗೂ ಚಿಕಾಗೋ ಜಿನಮಂದಿರ ದರ್ಶನ .
ಇಂದಿನ ಜ್ನಾನದೀಪಿಕೆ ಕಾರ್ಯಕ್ರಮದಲ್ಲಿ ಇಂದಿನ ಸಾಧಕರು ಯಾರು ಅಂದರೆ ವೀರ್ ಚಂದ್ ರಾಘವ ಗಾಂಧಿ ಯವರು . ಇವರ ಬಗ್ಗೆ ಸಾಮಾನ್ಯವಾಗಿ ಇನ್ನೂ ಯಾರಿಗೂ ಸಹ ಗೊತ್ತಾಗಿಲ್ಲ. ಆದ್ದರಿಂದ ನಾವು ಅವರ ಬಗ್ಗೆ ತಿಳಿಸಿ ಪರಿಚಯ ಮಾಡಿಸಲೆಂದು ಬಂದಿದ್ದೇವೆ, ಇವರು 1864 ಆಗಸ್ಟ್ 25 ರಂದು ಗುಜರಾತಿನ ಭಾವನಗರದಲ್ಲಿ ಜನಸಿದರು. ಮುಂಬೈನಲ್ಲಿ ಬಿ.ಎ ಮಾಡಿ ಮತ್ತೆ ಅಲ್ಲೆ ಎಲ್. ಎಲ್. ಬಿ ಮಾಡಿ ಬ್ಯಾರಿಸ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಇವರು ಒಳ್ಳೆಯ ವಾಜ್ಮಿಯಾಗಿದ್ದರು. ಜೈನ ಧರ್ಮದ ಬಗ್ಗೆ ಅವರಿಗಿದ್ದ ಶ್ರದ್ಧಾ ಭಕ್ತಿ ಗೌರವ ಜ್ನಾನ ಸಂಪಾದಿಸಿದಂತಹವರು. 1893 ರಲ್ಲಿ ಚಿಕಾಗೋದಲ್ಲಿ ಅಂತರಾಷ್ಟ್ರೀಯ ಸರ್ವ ಧರ್ಮ ಸಮ್ಮೇಳನ ನಡೆಯಿತು. ಅದಕ್ಕೆ ವಿವೇಕಾನಂದರು ಬಂದಿದ್ದರು. ಅವರು ಹಿಂದೂ ಧರ್ಮದ ಬಗ್ಗೆ ಮಾತನಾಡಿದರು ಅದು ನಮ್ಮೆಲ್ಲರಿಗೂ ಗೊತ್ತಿರುವ ವಿಷಯ. ಹಾಗಂತೆಯೇ ಜೈನ ಧರ್ಮದ ಬಗ್ಗೆ ಮಾತನಾಡುವುದಕ್ಕೆ ಅಂತಲೇ ಜೈನ ಮುನಿಗಳಾಧ ಆಚಾರ್ಯ ವಿಜಯಾನಂದ ಸೂರಿಯವರಿಗೆ
ಆಹ್ವಾನ ಬಂದಿತ್ತು. ಆದರೆ ಅವರು ವಿಮಾನಯಾನದ ಮೂಲಕ ಪ್ರಯಾಣಮಾಡಬೇಕಿತ್ತು ಪಾದಾಯಾತ್ರೆಯ ಮೂಲಕ ಬರುವುದಕ್ಕೆ ಆಗಲಾರದ ಕಾರಣ ಅವರು ಶ್ರೀ ವೀರ್ ಚಂದ್ ರಾಘವ ಗಾಂಧಿಯವರನ್ನು ಆರಿಸಿದರು. ಅವರಿಗೆ 6 ತಿಂಗಳು ತರಭೇತಿ ಕೊಟ್ಟು , ತರಬೇತಿ ಮುಗಿದ ನಂತರ ಅವರನ್ನು ಸರ್ವಧರ್ಮ ಸಮ್ಮೇಳನಕ್ಕೆ ಅವರು ಬಂದು ವಿವೇಕಾನಂದರ ಜೊತೆಗೆ ಬಂದು ಸಮ್ಮೇಳನದಲ್ಲಿ ಮಾತನಾಡಿದ ರೀತಿಯನ್ನು ಕೇಳಿ ಎಲ್ಲರೂ ಅವರನ್ನು ಮೆಚ್ಚಿಕೊಂಡರು ಅವರನ್ನು 2 ವರ್ಷ ಅವರನ್ನು ಇಲ್ಲೆ ಉಳಿಸಿಕೊಂಡು ಬೇರೆ ಬೇರೆ ಜಾಗಗಳಿಗೆ ಪ್ರಚಾರ ಮಾಡಲು , ಹಾಗೂ ಉಪಾನ್ಯಾಸವನ್ನು ನೀಡಲು ಪ್ರಾರಂಭಿಸಿದರು .
ನಂತರ ಅವರಿಗೆ ಯು.ಕೆ ಯಲ್ಲಿ ಅವರಿಗೆ ಒಂದು ಆಹ್ವಾನ ಬಂದಿತು ಅಲ್ಲಿ ಒಂದು ವರ್ಷ ಇದ್ದರು ಇವರು ಅಲ್ಲೆ ಬೇರೆ ಬೇರೆ ಭಾಗಗಳಿಗೆ ಹೋಗಿ ಅಲ್ಲಿ ಉಪನ್ಯಾಸ ನೀಡಿದರು. ಅಂದರೆ 3 ವರ್ಷದಲ್ಲಿ 535 ಉಪಾನ್ಯಾಸಗಳನ್ನು ನೀಡಿ ಒಂದು ದೊಡ್ಡ ರೀತಿಯ ರೆಕಾರ್ಡನ್ನು ಮಾಡಿದರು. ಅವರು ಧರ್ಮದ ಬಗ್ಗೆ ಉಪಾನ್ಯಾಸವನ್ನು ನೀಡಿದ್ದನ್ನು ಜನರುಗಳು ತುಂಬಾ ಮೆಚ್ದಿಕೊಂಡರು. ಅವರು ಮಾಡನಾಡಿದ ರೀತಿಗೆ ಹಲವಾರು ಜನ ಅವರನ್ನು ಅವಲಂಬಿತರಾಗಿದ್ದರು ಅದರಲ್ಲಿ ಒಬ್ಬರು ಅಂದರೆ ಹಾರ್ಬಟ್ ವಾರನ್ ಎನ್ನುವವರು ಇವರಿಗೆ ತುಂಬಾ ಅನುಯಾಯಿಯಾಗಿ ಅವರ ಬಗ್ಗೆ ಪುಸ್ತಕವನ್ನು ಕೂಡ ಬರೆದಿದ್ದಾರೆ. ಆ ಪುಸ್ತಕದ ಹೆಸರು ಹರ್ಬಟ್ ವಾರನ್ ಜೈನಿಸಂ ಎಂದಾಗಿತ್ತು. ಹೀಗೆಯೇ ನಮ್ಮ ಜೈನ ಧರ್ಮವನ್ನು ಪ್ರಪಂಚಕ್ಕೆ ಪರಿಚಯಿಸುವಲ್ಲಿ ಅವರು ಬಹಳ ಪಾತ್ರ ವಹಿಸುವುದರಲ್ಲಿ ಅವರ ಪಾತ್ರ ಪ್ರಮುಖ ಕಾರಣಕರ್ತರಾಗಿದ್ದಾರೆ. ಅವರ ಉಪನ್ಯಾಸದಲ್ಲಿ ಮಾತನಾಡುತ್ತಿದ್ದ ವಿಷಯಗಳೆಂದರೆ, ಜೈನ ಆಹಾರ, ಜೈನ ಸಾಹಿತ್ಯ, ಜೈನ ತತ್ವ, ಅಹಿಂಸೆ ಇವುಗಳನ್ನೆಲ್ಲಾ ಅವರ ಉಪನ್ಯಾಸದಲ್ಲಿ ಹೇಳಿದ್ದಲ್ಲದೇ, ಅದನ್ನು ಪುಸ್ತಕ ರೂಪದಲ್ಲಿ ಕೂಡ ಬರೆದು ಈ ಎಲ್ಲಾ ಅಂಶಗಳನ್ನು ಪುಸ್ತಕಗಳಲ್ಲಿ ಬರೆದು, 10 ಪುಸ್ತಕಗಳನ್ನೂ ಸಹ ಬರೆದಿದ್ದಾರೆ. ಇದು ನಮಗೆಲ್ಲಾ ಹೆಮ್ಮೆ ತರುವಂತಹ ವಿಷಯ.
1964ರಲ್ಲಿ ಇವರ ಹೆಸರಿನಲ್ಲಿ ಮ್ಯೂಸಿಯಂ ನ್ನು ಸ್ಥಾಪಿಸಿದರು. 1990 ರಲ್ಲಿ ಇವರ ಮೂರ್ತಿಯನ್ನು ಚಿಕಾಗೋದಲ್ಲಿರುವ ಜೈನ ಬಸದಿಯಲ್ಲಿ ಸ್ಥಾಪನೆ ಮಾಡಲಾಗಿದೆ. ಇವರ ಜೀವನದ ರೂಪವನ್ನೆ ಒಂದು ನಾಟಕದ ರೂಪದಲ್ಲಿ ನಿರೂಪಿಸಿದ್ದಾರೆ. ಗಾಂಧಿ ಬಿಫೋರ್ ಗಾಂಧಿ ಎಂದು ಅದನ್ನು ಪ್ರಪಂಚದ ಬೇರೆ ಬೇರೆ ಸ್ಥಳಗಳಲ್ಲಿ ಪ್ರದರ್ಶನ ಗೊಂಡಿತು. ಸುಮಾರು 200 ಬಾರಿ ಪ್ರದರ್ಶನ ವಾಗಿರುವುದು ನಿಜಕ್ಕೂ ಇದು ಒಂದು ವರ್ಡ್ ರೆಕಾರ್ಡ್ ಆಗಿದೆ. ಅದಲ್ಲದೇ 2009 ನವೆಂಬರ್ ನಲ್ಲಿ ಇಂಡಿಯನ್ ಗವರ್ನಮೆಂಟ್ ವೀರ್ ಚಂದ್ ಗಾಂಧಿಯ ಬಗ್ಗೆ ಒಂದು ಸ್ಟಾಂಪ್ ಕೂಡ ರಿಲೀಸ್ ಮಾಡಿದೆ. ಸುಮಾರು 14 ಭಾಷೆಗಳ ಪಾಂಡಿತ್ಯ ಹೊಂದಿದ್ದ ಯೋಗ, ಮೆಡಿಟೇ಼ಷನ್ ಎಕನಾಮಿಕ್ಸ್ ಹೀಗೆ ಅನೇಕ ರೀತಿಯ ವಿಷಯಗಳ ಬಗ್ಗೆ ಜ್ನಾನ ಸಂಪಾದನೆ ಮಾಡಿದ್ದರು. ಪಾಶ್ಚಿಮಾತ್ಯರನ್ನು ತಮ್ಮ ಮಾತಿನಿಂದ ಮೈಮರೆಸುವಂತೆ ಮಾತನಾಡುತ್ತಿದ್ದರು. ಅದಲ್ಲದೇ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಅತೀವವಾದ ಕಾಳಜಿ ಇದ್ದು ಇವರ ಕಾರಣದಿಂದಾಗಿ ಅನೇಕ ಹೆಣ್ಣುಮಕ್ಕಳು ಉನ್ನತ ವ್ಯಾಸಂಗಕ್ಕಾಗಿ ಅಮೇರಿಕಕ್ಕೆ ಕೂಡ ಬಂದರು. ಇದು ಇವರೆಲ್ಲಾ ಮಾಡಿದ ದೊಡ್ಡ ಸಾಧನೆ . ಅವರಿಗೆ ಭೌದ್ದಧರ್ಮ ಮತ್ತು ವೇದಾಂತ ಕ್ರೈಸ್ತ ಧರ್ಮದ ಬಗ್ಗೆ ಆಳವಾದ ಜ್ನಾನ ಇತ್ತು. ಇಂತಹ ವಿಶೇಷ ವ್ಯಕ್ತಿ ನಮ್ಮ ಜೈನ ಸಮಾಜದವರು ಎಂದು ಹೇಳಿಕೊಳ್ಳುವುದಕ್ಕೆ ಬಹಳ ಹೆಮ್ಮೆಯಾಗುತ್ತದೆ.
ಅವರ ಬಗ್ಗೆ ಇನ್ನೂ ಹೆಚ್ಚಾಗಿ ತಿಳಿಸಿಕೊಡಲಿಸದ್ದಾರೆ ಅರ್ಚನಾ ಭರತೇಶ್ ರವರು . ಇವರು ಮೂಲತಃ ಮೂಡುಬಿದಿರೆಯವರು . ಇವರು 2002ರಲ್ಲಿ ಭರತೇಶ್ ರವರನ್ನು ಮುದುವೆಯಾಗಿ ಇಲ್ಲೇ ಚಿಕಾಗೋದಲ್ಲಿ ನೆಲೆಸಿದ್ದಾರೆ. ಇವರು ಇಲ್ಲಿ ಸಾಫ್ಟ್ ವೇರ್ ಇಂಜಿನೀಯರ್ ಆಗಿದ್ದು ಅವರ ಕೆಲಸಗಳ ಒತ್ತಡದ ನಡುವೆಯೂ ನಮ್ಮ ಜೈನ ಧರ್ಮದ ಬಗ್ಗೆ ಸಾಕಷ್ಟು ಅಭಿಮಾನವಿದೆ. ಇವರು ಎಲ್ಲಾ ಕಾರ್ಯಕ್ರಮಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಇವರು ಯುಎಸ್ಎ ಜೈನ್ ಮಿಲನ್ ನಲ್ಲಿ ಇವರು ಜಾಯಿಂಟ್ ಸೆಕ್ರೆಟರಿಯಾಗಿ ಕೆಲಸ ಮಾಡುತ್ತಿದ್ದಾರೆ. ಅದಲ್ಲದೇ ಸ್ಕೂಲ್ ಆಫ್ ಡ್ಯಾನ್ಸ್ ಅಂಡ್ ಮ್ಯುಸಿಕ್ ಅಕಾಡೆಮಿಯಲ್ಲಿ ವಾಲೆಂಟರಿಯಾಗಿ ಕೆಲಸ ಮಾಡುತ್ತಿದ್ದಾರೆ. ವಿದ್ಯಾರಣ್ಯ ಕನ್ನಡ ಕೂಟಕ್ಕೆ ಸದಸ್ಯರಾಗಿದ್ದಾರೆ. ಹಾಗೂ ಚಿಕಾಗೋದಲ್ಲಿರುವ ಜೈನ ಬಸದಿಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ . ಇಂದು ಇವರು ನಮ್ಮೊಡನೆ ಇದ್ದಾರೆ ಬನ್ನಿ ಅವರನ್ನು ಮಾಡನಾಡಿಸೋಣ.
ಅವರನ್ನು ನಾವು ಮಾಡನಾಡಿಸಿದಾಗ ಅವರು ಚಿಕಾಗೋ ದಲ್ಲಿರುವ ಜೈನ ಮಂದಿರವನ್ನು ಖುದ್ದಾಗಿ ಅಲ್ಲೆಲ್ಲ ಇರುವ ಹಲವಾರು ರೀತಿಯ ವೇದಿಕೆಗಳು, ವೀರ್ ಚಂದ್ ರಾಘವ ಗಾಂಧಿಯವರ ಪ್ರತಿಮೆ, ಜೈನಬಸದಿಯ ಪರಿಚಯ ಮಾಡಿ ಕೊಟ್ಟು ಅದರ ಬಗ್ಗೆ ಕೂಲಂಕುಷವಾಗಿ ಸವಿಸ್ತಾರವಾಗಿ ವಿವರಿಸಿ ತಿಳಿಸಿದರು. ನಮಗೆ ಅವರು ಮಾಡಿಕೊಟ್ಟ ಪರಿಚಯ ಮಾಡಿಕೊಟ್ಟ ಪ್ರತಿಯೊಂದು ವಿಷಯಗಳನ್ನು ಕೇಳಿ ತುಂಬಾ ಸಂತೋಷ ಮತ್ತು ಹೆಮ್ಮೆಯನ್ನಿಸಿತು. ಧನ್ಯವಾದಗಳು ಅರ್ಚನಾ ರವರಿಗೆ.
ಜೈ ಜಿನೇಂದ್ರ ವೀಕ್ಷಕರೆ.














