ವಾಲಗೆರೆ

ಜೈ ಜೀನೇಂದ್ರ ವೀಕ್ಷಕರೇ ಮಲೆನಾಡ ತವರೂರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕರೂರು ಹೋಬಳಿಯು ಇಂದು ಕೂಡ ಪ್ರಸಿದ್ದಿಹೊಂದಿದ್ದು, ಅಂತೆಯೇ ಇಂದು ಕೂಡ ಪ್ರಸಿದ್ದಿ ಹೊಂದಿದೆ. ಸುಮಾರು 3 ಮತ್ತು 4ನೇ ಶತಮಾನದಲ್ಲಿ ಬನವಾಸಿಯ ಕದಂಬರು ಈ ಭಾಗದಲ್ಲಿ ಅವರ ಆಳ್ವಿಕೆಯನ್ನು ಪಸರಿಸಿದರು ಕರೂರಿನ ಪ್ರಾಂತ್ಯ ಅವರಿಗೆ ತುಂಬಾ ಪ್ರಿಯವಾದಕಾರಣ ಇಲ್ಲಿ  ಅವರು ತುಂಬಾ ಹೆಚ್ಚಿನ ಸೇವೆ ಸಲ್ಲಿಸಿರುತ್ತಾರೆ ಅವುಗಳಲ್ಲಿ ಒಂದಾದ ಕರೂರಿನ ತ್ರಿಕೂಟ ಬಸದಿಗಳ ನಿರ್ಮಾಣ ಅವರ ಪ್ರೀತಿಯ ಕುರುಹುವಾಗಿ ಇಂದಿಗೂ ಮೆರೆದಿದೆ ಸೀಮಕೇಂದ್ರವಾದ ಕರೂರಿನಲ್ಲಿ ಗಿರಿವನಗಳ ಮಧ್ಯೆ ತ್ರಿಕೂಟ ಬಸದಿಗಳನ್ನು ನಿರ್ಮಾಣ ಮಾಡಿ ಸುಂದರ ಶಿಲ್ಪಕಲೆಯುಳ್ಳ ಮೂರ್ತಿಗಳನ್ನು ನಿರ್ಮಿಸಿ ಪಂಚಕಲ್ಯಾಣದ ಮೂಲಕ ಪ್ರತಿಷ್ಠಾಪಿಸಿ ನಮಗೆಲ್ಲಾ ಆದರ್ಶ ಮೆರೆದಿದ್ದಾರೆ ವಳಗೆರೆ ಪಂಚಕೂಟ ಬಸದಿ ಎಂದು ಹೇಳಿ ಕರೂರಿನ ತ್ರಿಕೂಟ ಜಿನಾಲಯದ ಬಗ್ಗೆ ಹೇಳುತ್ತಿರುವೆ ಎಂದು ತಿಳಿಯಬೇಡಿ ಇಲ್ಲಿದೆ ಮುಖ್ಯ ವಿಷಯ ಮುಂದೆ ನಿಮಗೆ ತಿಳಿಯಲಿದೆ ನಾಡಿಗೆ ಬೆಳಕು ನೀಡುವ ಉದ್ದೇಶವೆಂದು ಮೈಸೂರಿನ ಅರಸರು ನದಿ ಮಡೆನೂರು ಎಂಬಲ್ಲಿ ಅಣೆಕಟ್ಟನ್ನು ಕಟ್ಟಿ ಹರಿಯುವ ನೀರು ತಡೆದಾಗ ನೀರು ಹಿಮ್ಮುಖವಾಗಿ ಮೇಲೇರಿ ವಿಸ್ತಾರವಾದ ಪಶ್ಚಿಮಘಟ್ಟದ ಅರಣ್ಯಗಳು ಸಮೃಧ್ದಭೂಮಿ ಮನೆ ಮಠ ಮಂದಿರಗಳು ನೀರಿನಲ್ಲಿ ಮುಳುಗಿದವು. ಹಿನ್ನಿರಿಗೆ ತುಂಬಿ ಆಸ್ತಿ ಪಾಸ್ತಿಗಳೆಲ್ಲಾ ಕಳೆದುಕೊಂಡರು,ಈ ಬಸದಿಗಳ ಜಮೀನುಗಳು ಹಾಗು ಭಕ್ತರ ಜಮೀನುಗಳು ಸಹಾ ಹಿನ್ನೀರಿನ ಪಾಲಾದವು ಸೇತುವೆಯಲ್ಲಿದ್ದ ಆದಿನಾಥರ ಬಸದಿಯನ್ನು ಸಾಗರನಗರಕ್ಕೆ ತೆಗೆದುಕೊಂಡು ಹೊಗಲಾಯಿತು. ಇಂತಹ ಕಷ್ಟಕರ ಸನ್ನಿವೇ಼ಷದಲ್ಲಿ ಕರೂರಿನಲ್ಲಿದ್ದ ತ್ರಿಕೂಟಬಸದಿಗಳನ್ನು ವಳಗೆರೆಗೆ ತಂದು ಕಟ್ಟುವ ತೀರ್ಮಾನಮಾಡಲಾಯಿತು.ಈ ಸಂದರ್ಭದಲ್ಲಿ ವಳಗೆರೆ ಗ್ರಾಮದಲ್ಲಿಯು ಸಹಾ ಈ ಗ್ರಾಮದ ಆರಾಧ್ಯ ದೇವರಾದ ವರ್ಧಮಾನ ಸ್ವಾಮಿ ಬಸಿದಿ ಇದೇ ಗ್ರಾಮದ ಗೊಮ್ಮಟಪುರದಲ್ಲಿ ಶರಾವತಿ ಹಿನ್ನಿರಿನಲ್ಲಿ ಮುಳುಗಡೆಯಾದ ಪ್ರಯುಕ್ತ ಇದನ್ನು ಸಹಾ ಪುನರ್ ನಿರ್ಮಿಸಲು ತೀರ್ಮಾನ ಮಾಡಲಾಯಿತು ಇಲ್ಲಿನ ಶ್ರಾವಕರ ಇಚ‍್ಛೆಯಂತೆ ಹಾಗು ಹೊಂಬುಜ ಶ್ರೀಗಳವರ ಅಳತೆಯಂತೆ ಈ ಬಸದಿಗಳನ್ನು ಜೊತೆಯಲ್ಲಿಯೆ ನಿರ್ಮಿಸುವ ಸಂಕಲ್ಪಮಾಡಿದ್ದರು.ಇದನ್ನು ಸೇರಿಸಿ 4 ದೇವರುಗಳಾಯಿತು,ಇದರ ಜೊತೆಯಲ್ಲಿ ಕರೂರಿನ ಅತಿಶಯ ಪದ್ಮಾವತಿದೇವಿಗಾಗಿ ಇನ್ನೊಂದು ಗರ್ಭಗೃಹವನ್ನು ಕಟ್ಟುವ ಉದ್ದೇಶಹೊಂದಿ 5 ಗರ್ಭಗೃಹಗಳುಳ್ಳ ಅಂತೇಯೆ 5ಶಿಖರಗಳುಳ್ಳ ಪಂಚಬಸಿದಿಗಳನ್ನು ನಿರ್ಮಿಸಲು ತೀರ್ಮಾನಿಸಿ ಕಾರ್ಯೋನ್ಮುಖರಾದರು 10 ವರ್ಷಗಳ ಕಠಿಣಪರಿಶ್ರಮದಫಲವಾಗಿ ಪಂಚಕೂಟ ಬಸದಿಗಳ ಕಟ್ಟಡ ಸಂಪೂರ್ಣಗೊಂಢಾಗ ಮೂರ್ತಿಗಳನ್ನು ತಂದು ಒಂದು ವರ್ಷದಲ್ಲಿ ವೈಭವದಲ್ಲಿ ಪಂಚಕಲ್ಯಾಣಸಹಿತ ಪ್ರತಿಷ್ಟಾನಿದಿಗಳನ್ನು ನೆರವೇರಿಸುವ ಸಂಕಲ್ಪ ಕೈಗೊಂಡು ಮಾತೆ ಪದ್ಮಾವತಿಯ ಹಾಗೂ ಶ್ರೀಮಾನ್ ದೇವೇಂದ್ರ ಕೀರ್ತಿ ಮಹಾಸ್ವಾಮಿಜಿಗಳ ಕೃಪಾರ್ಶಿರ್ವಾದಗಳಿಂದ ಪಂಚಕಲ್ಯಾಣ ಮಹೋತ್ಸವ ವಿಜೃಂಭಣೆಯಿಂದ ನೆಡೆಯಿತು. ಅಂತೆಯೇ ದೇವೇಂದ್ರ ಕೀರ್ತಿಗಳು ಈ ಬಸದಿಗೆ ಪಂಚಕೂಟ ಬಸದಿಗಳು ಎಂದು ನಾಮಕರಣ ಮಾಡಿದರು ಹೊಂಬುಜದ ಸ್ವವರ್ಗೀಯ ಹೇಮರತ್ನಸಾಗರ ದೇವೇಂದ್ರ ಕೀರ್ತಿಗಳವರ ಆಶಯದಂತೆ ಮಾನಸ್ತಂಭವನ್ನು ನಿರ್ಮಾಣಮಾಡಿ 2015ರಲ್ಲಿ ಪಂಚಕಲ್ಯಾಣ ಮಹೋತ್ಸವನ್ನು ವಿಜೃಂಭಣೆಯಿಂದ ನೆರೆವೇರಿಸಲಾರಿತು.

ಆದಿ ಕದಂಬರರ ಕಾಲದ ಕರೂರಿನ ತ್ರಿಕೂಟ ಜಿನಾಲಯ ಗೊಮ್ಮಟಪುರದ ವರ್ಧಮಾನ ಜಿನಾಲಯ ಸೇರಿ ಇಲ್ಲಿ ಪಂಚಕೂಟಬಸದಿಯಾಗಿದೆ.ಇಂದಿನ ಕರೂರಿನ ಬಸದಿಕೂಡ ಹೊಂಬುಜ ಮಠದ ಬಸದಿ ಆಡಳಿತಕ್ಕೆ ಒಳಪಟ್ಟಿತಲ್ಲದೆ ಈಗಿನ ವಳಗೆರೆಯ ಸುಂದರ ಪರಿಸರದಲ್ಲಿರುವ ಪಂಚಕೂಟಬಸದಿಕೂಡ ಹೊಂಬುಜಮಠದ ವ್ಯಾಪ್ತಿಗೆ ಸೇರಿದ್ದಾಗಿದೆ.ಮಠದಲ್ಲಿರುವ ಸಿಡಿಲು ಪಾರ್ಶ್ವನಾಥಸ್ವಾಮಿ  ಆದಿಪಾರ್ಶ್ವನಾಥಸ್ವಾಮಿ ಎಂದು ಕರೆಯಲಾಗುವ ಇಲ್ಲಿನ ಮೂಲ ಪಾರ್ಶ್ವನಾಥ ಸ್ವಾಮಿಯ ಮೂರ್ತಿಯೂ ಪದ್ಮಾಸನದಲ್ಲಿ ಸಿಂಹಾಸನಪೀಠದಮೇಲೆ  ಅರಳಿದ ಕಮಲದಮೇಲೆ ಪ್ರಭಾವಳಿಸುತ್ತಾ 9 ಅಡಿ ಎತ್ತರವಾಗಿದ್ದು ಪ್ರಭಾವಳಿಸುತ್ತಾ ಏಕಶಿಲಾಬಿಂಬವಾಗಿದೆ ಈ ಮೂರ್ತಿಯ ಧ್ಯಾನ ಭಾವನೆಯು ಭಕ್ತರನ್ನು ಮೂರ್ತಿಯ ಎದುರು ಒಂದೆರಡು ಕ್ಷಣವನ್ನಾದರು ಕಣ್ಮುಚ್ಚಿ ಆತ್ಮಜ್ಞಾನ ಗೈಯ್ಯುವಂತೆ ಮಾಡುತ್ತದೆ.ಈ ಬಿಂಬಕ್ಕೆ ಪ್ರಭಾವಳಿ ಮತ್ತು ಮುಕ್ಕೊಡೆಯ ಕೆತ್ತನೆಗಳು ವಿವಿಧ ವಾದ್ಯ ವೃಂದದವರೆಗು ಕೀರ್ತಿಮುಖ ಯಜ್ಞೋಪವಿತ ದಾರಿಯು ವಿವಿಧಾಲಂಕಾರ ಭೂಷಿತರು ಆದ ಚಾಮರ ಸೇಕರು ಎರಡು ಬದಿಯಿಂದಲು ಸೇವೆ ಗೈದಿದ್ದಾರೆ ಪುಷ್ಪಮಾಲೆಗಳು ತರುಲತೆಗಳ ಅತೀ ಸೂಕ್ಷ್ಮಕೆತ್ತನೆಯ ಕಲೆಗಳನ್ನು ಸೂಕ್ಮವಾಗಿ ನೋಡಿದರೆ ಅದ್ಯಾವ ಶಿಲ್ಪಿ ಕೆತ್ತಿದನೊ ಎಂದು ಹೇಳಲಾಗುತ್ತದೆ. ಮಠದಲ್ಲಿರುವ ಸಿಡಿಲು ಪಾರ್ಶ್ವನಾಥಸ್ವಾಮಿ ಆದಿಪಾರ್ಶ್ವನಾಥಸ್ವಾಮಿ ಎಂದು ಕರೆಲಾಗುವ ಪಾರ್ಶ್ವನಾಥ ಪ್ರತಿಮೆ ಪೀಠ ಪ್ರಭಾವಳಿ ಕುರಿತ 10 ಅಡಿ ಉಳ್ಳದಾಗಿದೆ ಗಜಶಿಖರದ ಮೇಲೆ ನಿಂತ ಚಾಮರ ಸೇವಕರು ಈ ಮೂರ್ತಿಯ ಸೇವೆಗೈಯುತ್ತಿರುವುದು ಮನೋಜ್ಞವಾಗಿದೆ.ಹಿಂದೆ ಸಿಡಲೆರಗಿದ ಸಂಧರ್ಭದಲ್ಲಿ ಮೂರ್ತಿ ಪ್ರಭಾವದಿಂದ ಚಿದ್ದು ಚಿದ್ದುಯಾಗಿದ್ದರು ಅಂಗಹೀನವಾಗಿರುವುದಿಲ್ಲ ಈ ಬಿಂಬಕ್ಕೆಇಲ್ಲಿನ ಶ್ರಧ್ದಾವಂತ ಶ್ರಾವಕರು ನಿತ್ಯ ಶುಧ್ದ ಬೆಣ್ಣೆಯ ಸೇವೆಯಿಂದ ಬಿಂಬಕ್ಕಾದ ಕೊರತೆಯನ್ನು ನೀಗಿಸಬಹುದೆಂದು ನಂಬಿಕೆಯುಳ್ಳವರಾಗಿದ್ದಾರೆ ಇಲ್ಲಿನ ಭಗವಾನ್ ಶಾಂತಿನಾಥರ ಪ್ರತಿಮೆ ಪೀಠಸುತ್ತ 4 ಅಡಿ ಎತ್ತರವುಳ್ಳ ಖಡ್ಗಾಸನದ ಕೃಷ್ಣ ಶಿಲೆಯ  ಸುಲಕ್ಷಣಮೂರ್ತಿ ಇದಾಗಿದೆ.4ನೇ ಗರ್ಭಗೃಹದಲ್ಲಿ ನಮ್ಮೆಲ್ಲರ ಸಮೀಪ ವರ್ತಿ ತೀರ್ಥಂಕರರಾದ ಮಹಾದೀನ ವರ್ಧಮಾನರು ಇಲ್ಲಿ ಪೂರ್ವಭಿಮುಖವಾಗಿ ನಿಂತು ಭಕ್ತರ ಸರ್ವಅಭಿಷ್ಟಗಳನ್ನು ಸದಾಕಾಲ ವರ್ದಿಸುತ್ತಿರಲಿ ಧರ್ಮವರ್ಧನೆಯಾಗಲಿ ಎಂದು ಹರಸುತ್ತಿದ್ದಾರೆ ಎಂಬ ಭಾವ ಎನ್ನಲಾಗಿದೆ.5ನೇ ಗರ್ಭಗೃಹದಲ್ಲಿ ಭೈರವಪದ್ಮಾವತಿ ದೇವಿಯೆಂದೆ ಖ್ಯಾತಿ ಪಡೆದ ಮಾತೆ ಪದ್ಮಾವತಿಯಲ್ಲಿ ಏಕಪಣಾಯುಕ್ತೆಯಾಗಿ ಚಕ್ರ ಪರಶು ಪದ್ಮ ಫಲ ಸಹಿತಕರ ಹೊಂದಿ ಪೂರ್ವಾಭಿಮುಖಿಯಾಗಿ ನೃತ್ಯಭಂಗಿಯಲ್ಲಿ ನಿಂತು ಭಕ್ತರ ಅಭಿಷ್ಟವರಪ್ರದಾಯಕಿಯಾಗಿ ಒಂದೊಂದು ದಿಕ್ಕಿನಿಂದಲೂ ಒಂದೊಂದು ಶೈಲಿಯಲ್ಲಿ ಗೋಚರಿಸುತ್ತಾಳೆ ಈ ಬಸದಿಯ ಕಲಿಕೊಂಡ ಪಾರ್ಶ್ವನಾಥರ ಪ್ರಭಾವ ಅತೀಹೆಚ್ಚಾಗಿದ್ದು ಉಪಸರ್ಗ ವಿಜಯರಾದ ಪಾರ್ಶ್ವನಾಥರ ಸೇವೆ ಮಾಡುವುದರಿಂದ ನಮ್ಮ ಬಹುಉಪಸರ್ಗಗಳು ದೂರವಾಗುವವು ಎಂಬ ನಂಬಿಕೆ ಭಕ್ತರಲ್ಲಿ ಇದೆ.

 ನಿಮಗೆ ಇಲ್ಲಿ ತೊರಿಸಿರುವ ಮಾರ್ಗಸೂಚಿಯನ್ನು ಅನುಸರಿಸಿ ಒಮ್ಮೆಯಾದರು ಈ ಬಸದಿಗೆ ಭೇಟಿ ನೀಡಿ ನಿಮ್ಮಕಣ್ಮನಗಳನ್ನು ಧನ್ಯರಾಗಿಸಿಕೊಳ್ಳಿ ನಮ್ಮ ಬಸೀದಿಯ ಕಮಿಟಿ ಪರವಾಗಿ ನಾವು ಸಮಸ್ತ ಸ್ಥಾವಕ ಸ್ಥಾವಕಿಯರಿಗೆ ನಮ್ಮ ಪಂಚಕೂಟ ಬಸೀದಿಯ ಪಾರ್ಶ್ವನಾಥ ಸ್ವಾಮಿ ಶಾಂತಿನಾಥಸ್ವಾಮಿ ಆದಿನಾಥಸ್ವಾಮಿ ಮತ್ತು ಗುಂಟಾಪುರದ ವರ್ಧಮಾನ ಸ್ವಾಮಿಯ ಮತ್ತು ಬೈರವ ಪದ್ಮಾವತಿ ದೇವಿಯ ದರ್ಶನವನ್ನು ನಮ್ಮ ರಾಜ್ಯ ಎಲ್ಲಾರಾಜ್ಯದ ಭಕ್ತಾಧಿಗಳು ದರ್ಶನ ಪಡೆಯಬೇಂಕೆಂದು ವಿನಂತಿಸಿಕೊಳ್ಳುತ್ತೇನೆ.ಈ ಇತಿಹಾಸ ಪೂರ್ವಕ ಆದಿಕದಂಬರಕಾಲದ ಕರೂರು ಮತ್ತು ಗುಂಟಾಪುರದ ಪಂಚಕೂಟ ಬಸೀದಿ ಎಂದು ನಾಮಕರಣವನ್ನು2003ರಲ್ಲಿ ಪರಮ ಪೂಜ್ಯ ದೇವೇಂದ್ರ ಕೀರ್ತೀ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ನೆರೆವೇರಿಸಿಕೊಡ್ಡದ್ದಾರೆ ಹಾಗಾಗಿ ಈ ಪಂಚಕೂಟ ಬಸೀದಿ ದರ್ಶನಪಡೆದು ಪುಣ್ಯಭಾಗಿಗಳಾಗ ಬೇಕೆಂದು ಕೇಳಿಕೊಳ್ಳುತ್ತೇನೆ.