ಧರ್ಮ ಪ್ರಭಾವನೆಯೊಂದಿಗೆ ಸಮುದಾಯದ ಸಮಾಜದ ಬಗ್ಗೆ ಕಳಕಳಿಯಿಂದ ಕಾರ್ಯ ನಿರ್ವಹಿಸುತ್ತಿರುವ ಸಂಘಟನೆಗಳೆಂದರೆ ಜೈನ ಮಿಲನ್ ಸಂಘಟನೆಗಳು. ಇತ್ತೀಚಿನ ದಿನಗಳಲ್ಲಿ
ಹೆಚ್ಚಿನಧರ್ಮಪರ ಸಂಘಟನೆ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬರುತ್ತಿದ್ದು ಇಂತಹ ಒಂದು ಸಂಘಟನೆ ಮಾಸಿಕ 400ಕ್ಕೂ ದಾಟಿ ಸಭೆಗಳನ್ನು ನಡೆಸಿ ಈ ರೀತಿಯ ಚಿಂತನೆಗಳಲ್ಲಿ ಭಾಗವಹಿಸಿರುವುದು ಅನುಕರಣೀಯ ಸಂಗತಿ. ಭಾರತೀಯ ಜೈನ್ ಮಿಲನ್ ಬೆಂಗಳೂರು ವೆಸ್ಟ್ 400ನೇ ಮಾಸಿಕ ಸಭೆಯ ಸಂಭ‍್ರಮಾಚರಣೆಯ ವರದಿ ಇಲ್ಲಿದೆ.
ದಿನಾಂಕ 20/02/2022 ರಂದು ಕರ್ನಾಟಕ ಭವನದಲ್ಲಿ ಸುಂದರವಾದ ಆಯೋಜನೆಯೊಂದಿಗೆ ಆರಂಭವಾದ ಕಾರ್ಯಕ್ರಮವು ಪರಮಪೂಜ್ಯ ಸ್ವಸ್ತಿಶ್ರೀ ಧವಳಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ನಡೆದ ಉದ್ಘಾಟನೆ .














