ಜೈ ಜೀನೇಂದ್ರ ವೀಕ್ಷಕರೇ ಉತ್ತರ ಕನ್ನಡಜಿಲ್ಲೆಯ ಶಿರಸಿ ಭಗವಾನ್ 1008 ಪಾರ್ಶ್ವನಾಥ ತೀರ್ಥಂಕರ ಪಂಚಕಲ್ಯಾಣ ಪ್ರತಿಷ್ಠಾಪನ ಮಹೋತ್ಸವ ಪರಮಪೂಜ್ಯ ಸಿಧ್ಧಾಂತಯೋಗಿ ಶ್ರೀ 108 ಪುಣ್ಯಸಾಗರ ಮಹಾರಾಜರ ಪಾವನ ಸಾನಿಧ್ಯದೊಂದಿಗೆ ಜಗದ್ಗುರು ಅಕಲಂಕ ಕೇಸರಿ ಪರಮಪೂಜ್ಯಸ್ವಸ್ಥಶ್ರೀ ಭಟ್ಟಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ನೇತೃತ್ವ ಹಾಗು ಮಾರ್ಗದರ್ಶನದಲ್ಲಿ ಸರ್ವ ಭಟ್ಟಾರಕ ಮಹಾಸ್ವಾಮೀಜಿಯವರ ಪಾವನ ಉಪಸ್ಥಿತಿಯಲ್ಲಿ ದಿನಾಂಕ 11-05 2022 ರಿಂದ13-05-2022ರವರೆಗೆ ವಿವಿಧ ಆರಾಧನೆಗಳು ಪಂಚಕಲ್ಯಾಣ ವಿಧಿಪೂರ್ವಕ ಮೂರ್ತಿಪ್ರತಿಷ್ಠಾಪನೆ ಮಂಗಳಕಳಸ ಸ್ಥಾಪನೆ ಹಾಗೂ ಮಹಾಅಭಿಷೇಕದವರೆಗೂ ಕೂಡ ವಿಧಿವತ್ತಾಗಿ ವಿಜೃಂಭಣೆಯಿಂದ ಪ್ರತಿಷ್ಠಾಚಾರ್ಯರಾದ ಶ್ರೀಮಂದರ ಉಪಾಧ್ಯೆ ಮತ್ತು ಶ್ರೀ ಮೋಹನ್ ಇಂದ್ರ ಬಿದರೂರು ಇವರೊಂದಿಗೆ ಉತ್ತಮ ಪುರೋಹಿತ ವರ್ಗದವರಿಂದ ಅನೇಕ ದಾನಿಗಳ ಸಹಕಾರದಿಂದ ಶ್ರೀ ಕ್ಷೇತ್ರ ಸ್ವಾಮಿ ದಿಗಂಬರಜೈನಮಠ ಶಿರಸಿ ಶ್ರೀ ಪಾರ್ಶ್ವನಾಥ ಸ್ವಾಮಿ ದಿಗಂಬರ ಜೈನಬಸದಿ ಸೇವಾ ಸಮಿತಿ ಶಿರಸಿ ಇವರ ಆಯೋಜನೆಯಲ್ಲಿ ಅಚ್ಚುಕಟ್ಟಾಗಿ ನೆರವೇರಿತು.ವೀಕ್ಷಕ ಬಂಧುಗಳೇ ಈ ದಿವದ ಸಂಕ್ಷಿಪ್ತದೃಶ್ಯಾವಳಿಗಳನ್ನು ನಿಮಗಾಗಿ ಒಟ್ಟಾಗಿಸಿ ಸುಂದರ ಸಂಕಲನದಲ್ಲಿ ತಂದಿದ್ದೇವೆ.ವೀಸಿ ಆನಂದಿಸಿ.














