ಗ್ರಾಮಗಳು ಮುಳುಗಿ ಕೆರೆಗಳಾಗಿ ಮಾರ್ಪಾಡಾಗಿವೆ ಅಂತವುದೇ ಒಂದು ಸ್ಥಳ ಒಂದೊಮ್ಮೆ ಸಾಂಸ್ಕೃತಿಕ ಮಹಾತ್ವವನ್ನು ಹೊಂದಿದ ಜೈನ ಸಂಸ್ಕೃತಿಯನ್ನು ಪ್ರತಿನಿಧಿಸಿದ ಮಾಣಿಕ್ಯದೊಡಲೂರು ಎಂದು ಕರೆಯಲ್ಪಡುತ್ತ ರಾಜ ಪೂಜಿತವಾದ ಎತ್ತರವಾದ ಸುಂದರ ಗೊಮ್ಮಟ ಮೂರ್ತಿ ಮನೋಜ್ಞ ಕೆತ್ತನೆವುಳ್ಳ ಶಿಲ್ಪಕೃತಿಗಳುಳ್ಳ ಪುಟ್ಟದೊಂದು ಬಸದಿ ಇದಂತಹ ಪೂಣ್ಯ ಕ್ಷೇತ್ರ ಇಂದು ಭಗ್ನಾವಶೇಷದ ರೀತಿಯಲ್ಲಿ ಪ್ರಾಪ್ತವಾಗುತ್ತಿರುವ ಬಸದಿ ಹೊಸಕೋಟೆ ಕಥೆ ಇದು. ಜಗದ್ವಿಖ್ಯಾತ ಕೃಷ್ಣ ರಾಜ ಸಾಗರದ ಹಣೆಕಟ್ಟಿನ ಇನ್ನಿರಿನ ಹಂಚಿನಲ್ಲಿ ಸರಳ ದಾರಿ ಕಾಣದೆ ಭಕ್ತರಿಂದ ದೂರವಾಗಿ ಬಾಹುಬಲಿ ಮೂರ್ತಿ ನಿಂತಿದೆ. ಆದರೆ ಜೈನರಲ್ಲದಿದ್ದರು ಹತ್ತಿರದ ಗ್ರಾಮಸ್ಥರು ಮೂರ್ತಿಯನ್ನು ಸಂರಕ್ಷಿಸುತ್ತಾ ತಮಗೆ ತೊಚಿದ ರೀತಿಯಲ್ಲಿ ಪೂಜ್ಯ ಭಾವ ತೊರುತ್ತಿರುವುದು ಸಮಧಾನಕರ ಹಾಗೂ ಶ್ಲಾಘನೀಯ. ಜಲಾಶಯ ನಿರ್ಮಾಣಕ್ಕಾಗಿ ಸ್ಥಳಾಂತರ ಕಾರಣದಿಂದಲೋ ಅಥವ ಮುಳುಗಡೆಯಿಂಲೊ ಅವಶೇಷವಾಗಿರುವ ಕಾವೇರಿ ಹೇಮಾವತಿ ಲಕ್ಷ್ಮಣ ತೀರ್ಥ ನದಿಗಳ ಸಂಗಮದ ಸುಂದರ ಸ್ಥಳದಲ್ಲಿರುವ 18 ಅಡಿ ಎತ್ತರದ ಈ ಮೂರ್ತಿಗೆ ಗ್ರಾಮಸ್ಥರು ಶ್ರವಣಪ್ಪನೆಂದು ಪೂಜಿಸುತ್ತಾರೆ. ಹೊಯ್ಸಳ ದೊರೆ ವಿಷ್ಣುವರ್ಧನನ ಮಹಾನ ಪ್ರಧಾನ ದಂಡನಾಯಕ ಹುಣಿಸನ್ಮಯನ್ನು ಬಾಹುಬಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿದನು ಎಂದು ಕ್ರಿಶ 1147ರ ಹೊಯ್ಸಳರ ಕಾಲದ ಶಿಲಾ ಶಾಸನ ತಿಳಿಸುತ್ತದೆ. ನದಿಯ ವಿಶಾಲವಾದ ದಿಣ್ಣೆಯ ಮೇಲೆ ಕಂಡುಬರುವ ದೇವಸ್ಥಾನದ ಜಿನೇಶ್ವರ ಯಕ್ಷ ಯಕ್ಷೆಯರ ಹಾಗೂ ದ್ವಾರ ಪಾಲಕರ ಅನೇಕ ಮೂರ್ತಿಗಳ ಭಗ್ನಾವಶೇಷಗಳು, ಅರೆಬರೆ ಮಂಟಪಗಳು, ಬಿರುಕು ಬಿಟ್ಟ ಅಲಂಕೃತ ಮೇಲ್ಚಾವಣಿಗಳು, ನಯವಾದ ದುಂಡುಕಂಬಗಳು, ಸ್ತಂಭ ಪೀಠ ಹಾಗೂ ಕಲ್ಲು ಚಪ್ಪಡಿಗಳೆಲ್ಲವು ಘತಕಾದ ವೈವಿದ್ಯಮಯ ಸಂಸ್ಕೃತಿಯನ್ನು ಸಾರಿ ಹೇಳಿ ಇದು ಪಂಚ ಬಸದಿಗಳೊಂದಿಗೆ ಜೈನರ ಪೂಣ್ಯಕ್ಷೇತ್ರವಾಗಿ ಬೆಳಗಿ ಬಾಳಿದ ಪ್ರಾಕ್ತನ ಇತಿಹಾಸವನ್ನು ಹೊಂದಿದ ಸ್ಥಳವಾಗಿದೆ. ಇಂತಹ ಐತಿಹಾಸಿಕ ನಿಸರ್ಗ ರಮಣೀಯ ಸ್ಥಳದ ಅಭಿವೃದ್ಧಿ ಕುರಿತು ಪ್ರಯತ್ನದಲ್ಲಿ ಪದ್ಮವಿಭೂಷಣ ನಾಡೋಜ ರಾಜಶ್ರೀ ಡಾ|| ಡಿ ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಅವರ ಸಹೋದರರಾದ ಸಂಘಟನಾ ಸಾರ್ವಭೌಮ ಭಾರತೀಯ ಜನ್ ಮಿಲನ್ ಕಾರ್ಯಾಧ್ಯಕ್ಷರಾದ ಶ್ರೀ ಡಿ ಸುರೇಂದ್ರ ಕುಮಾರ್ ಇವರುಗಳ ಸಹಕಾರ ಮತ್ತು ಶ್ರೀಕ್ಷೇತ್ರ ಕಂಬದ ಹಳ್ಳಿಯ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯರು ಹಾಗೂ ಶ್ರೀ ಅತಿಶಯ ಕ್ಷೇತ್ರ ಕನಕ ಗಿರಿಯ ಮಠಾಧಿಪತಿಗಳಾದ ಸ್ವಸ್ತಿಶ್ರೀ ಭುವನ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಯವರು ಸಹಕಾರ ನೀಡಿ ಆಶೀರ್ವದಿಸಿ ಪ್ರತಿಬಾರಿಯ ಮಹಾಮಸ್ತಕಾಭಿಷೇಕ ಪೂಜಾರಾಧನೆಗಳಲ್ಲಿ ಭಾಗಿಯಾಗುತ್ತಿದ್ದಾರೆ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














