ಜೈ ಜಿನೇಂದ್ರ ವೀಕ್ಷಕರೆ ಐತಿಹಾಸಿಕ ಕ್ಷೇತ್ರವಾದ ಶ್ರೀ ಕ್ಷೇತ್ರ ಕಂಬದಳ್ಳಿ ಇತಿಹಾಸ ಪುಟದಲ್ಲಿ ಮತ್ತೊಂದು ಗರಿಮೆ ಚಂದ್ರಗಿರಿ ಚತುರ್ಮುಖ ಜಿನಬಿಂಬ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವದೊಂದಿಗೆ ಜಿನ ಮಂದಿರದ ನಾಲ್ಕು ದಿಕ್ಕಿನಿಂದಲು ಮುದ್ದಾದ ಜಿನ ಬಿಂಬಗಳ ದರ್ಶನ ಪಡೆಯುವ ಭಾಗ್ಯ ಜೈನ ಬಾಂಧವರಿಗೆ ಇಂತಹ ಅಮೋಘ ಘಳಿಗೆಯನ್ನು ಕಣ್ಣತುಂಬಿಕೊಳ್ಳಲ್ಲು ಬನ್ನಿ ತಾವು ಭಾಗಿಗಳಾಗಿ ಎಂದು ಸ್ವಾಗತಿಸುತ್ತ ಪರಮ ಪೂಜ್ಯ ಸ್ವಸ್ತಿ ಶ್ರೀ ಭಾನು ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ಪಾವನ ನೇತೃತ್ವದಲ್ಲಿ, ಪರಮ ಪೂಜ್ಯ ಮುನಿ ಮಹಾರಾಜರು ಮಾತಾಜಿಗಳ ಹಾಗೂ ಸಮಸ್ಥ ಭಟ್ಟಾರಕ ಸ್ವಾಮೀಜಿಗಳವರ ಪಾವನ ಸಾನಿದ್ಯದಲ್ಲಿ 22-05-2022 ರಿಂದ 26ರರ ವರೆಗೆ ನಡೆಯುವ ಕಾರ್ಯಕ್ರಮಗಳ ವಿವರ ನಿಮ್ಮ ಮುಂದೆ.
ದಿನಾಂಕ 22 ರಂದು ಬೆಳಗ್ಗಿನ ಪೂಜಾ ವಿಧಿವಿಧಾನಗಳೊಂದಿಗೆ ಬೆಳಗ್ಗೆ 9:30ಕ್ಕೆ ಸನ್ಮಾನ್ಯ ನಾಗಮಂಗಲ ಶಾಸಕರಾದ ಶ್ರೀ ಸುರೇಶ್ ಗೌಡರು ಇವರಿಂದ ಸಭಾ ಮಂಟಪದ ಉದ್ಘಾಟನೆಯಾಗಲ್ಲಿದು, ಶ್ರೀ ಧರ್ಮಸ್ಥಳ ಸುರೇಂದ್ರ ಕುಮಾರ್ ರವರೊಂದಿಗೆ ಅನೇಕ ಗಣ್ಯರು ಭಾಗಿಯಾಗಲ್ಲಿದ್ದಾರೆ, ಅಂದು ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಉದ್ಘಾಟನೆ ಕೂಡ ನಡೆಯಲಿದೆ.
23ರಂದು ಆರಾಧನೆಗಳು ಪೂಜಾ ವಿಧಿ ವಿಧಾನಗಳೊಂದಿಗೆ ಬೆಳ್ಳಗ್ಗೆ 10 ಗಂಟೆಗೆ ಬೆಂಗಳೂರಿನ ಶ್ರೀ ರಾಮಕೃಷ್ಣ ಮಠದ ಪರಮ ಪೂಜ್ಯಶ್ರೀ ತದ್ಯುಕ್ತಾನಂದ ಸ್ವಾಮೀಜಿಯವರಿಂದ ಕಂಬದಹಳ್ಳಿ ಹಾಗೂ ಸುತ್ತಮುತ್ತಲಿನ ಬಡ ಕುಟುಂಬಸ್ಥರಿಗೆ ದವಸ ದಾನ್ಯಗಳ ಕಿಟ್ ವಿತರಣೆ ನಡೆಯಲ್ಲಿದೆ. ಹಾಗೂ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಂಸದರಾದ ಶ್ರೀ ಎಲ್ ಆರ್ ಶಿವರಾಮೇಗೌಡರು ವಹಿಸಲ್ಲಿದ್ದಾರೆ. ಗಣ್ಯಾತಿ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.
24 ನೇ ತಾರೀಖಿನಂದು ಪರಮ ಪೂಜ್ಯ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಪೀಠಾರೋಹಣ ರಜತ ಜಯಂತಿ ಮಹೋತ್ಸವ ಮತ್ತು ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪರಮ ಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಹಾಗೂ ಸಮಸ್ತ ಭಟ್ಟಾರಕರುಗಳ ಪಾವನ ಸಾನಿಧ್ಯದೊಂದಿಗೆ ಹಾಗೂ ಶ್ರೀ ಧರ್ಮಸ್ಥಳ ಹರ್ಷೇಂದ್ರ ಕುಮಾರ್ ರವರೊಂದಿಗೆ ಗಣ್ಯರ ಉಪಸ್ಥಿತಿಯೊಂದಿಗೆ ಕಾರ್ಯಕ್ರಮ ಜರುಗಲ್ಲಿದೆ.
25 ರಂದು ಪ್ರಮುಖವಾಗಿ ಚತುರ್ಮುಖ ಜಿನ ಬಿಂಬ ಪ್ರತಿಷ್ಠಾಪನೆ ನಡೆಯಲ್ಲಿದ್ದು ಅಂದು ಮಧ್ಯಾಹ್ನ 2 ಗಂಟೆಗೆ ಪದ್ಮವಿಭೂಷಣ ರಾಜರ್ಷಿ ಡಾ|| ಡಿ ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ಗಣ್ಯರುಗಳ ಉಪಸ್ಥಿತಿಯಲ್ಲಿ ಸಂಪನ್ನಗೊಳ್ಳಲಿದೆ. ಅಂದಿನ ವಿಶೇಷ ಕಾರ್ಯಕ್ರಮವಾಗಿ ಸಂವತ್ಸರಣ ರಚನೆ ಹಾಗೂ ಸರ್ವಾಣ ಯಕ್ಷರ ನೃತ್ಯ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ಶ್ರಾವಕ-ಶ್ರಾವಿಕೆಯರಿಂದ.
26 ರಂದು ಚತುರ್ಮುಖ ಜಿನ ಬಿಂಬಗಳಿಗೆ ಮಹಾಭಿಷೇಕ ಅಮೋಘವಾಗಿ ನಡೆಯಲ್ಲಿದ್ದು ಅಂದು ಮಧ್ಯಾಹ್ನ ರಾಜ್ಯ ಮಟ್ಟದ ಜೈನ ಮಹಿಳಾ ಸಮ್ಮೇಳನ, ಪದ್ಮಶ್ರೀ ಜೈನ ಮಹಿಳಾ ಸಮಾಜದ ವತಿಯಿಂದ ನಡೆಯಲ್ಲಿದ್ದು ಪ್ರೋಫೆಸರ್ ಪ್ರೀತಿ ಶುಭಚಂದ್ರ ರವರು ಸಮ್ಮೇಳಾನ ಅಧ್ಯಕ್ಷರಾಗಿ ಅನೇಕ ಗಣ್ಯರ ಉಪಸ್ಥಿತಿಯೊಂದಿಗೆ ಕಾರ್ಯಕ್ರಮ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಳೊಂದಿಗೆ ಪುಣ್ಯ ಭಾಗಿಗಳಾಗಲು ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವದ ಸಮಿತಿಯವರಿಂದ ತಮ್ಮೆಲ್ಲರೀಗೂ ಆತ್ಮೀಯ ಸುಸ್ವಾಗತ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














