ಹೆಮ್ಮೆಯ ಶ್ರಾವಣಕ-ಶ್ರಾವಣಕಿ- 04

ಜ್ವಾಲಾ ಮಾಲಾ ನ್ಯೂಸ್ ಅರ್ಪಿಸುತ್ತಿರುವ ನೂತನ ಕಾರ್ಯಕ್ರಮ ಸಮುದಾಯದ ಸೇವೆಯಲ್ಲಿ ನಿರತ ಶ್ರಾವಕ/ಶ್ರಾವಕಿಯರ ಜೀವನಗಾಥೆ ಹೆಮ್ಮೆಯ ಶ್ರಾವಕ ಅಥವಾ ಶ್ರಾವಕಿ

ಸಮಾಜಕ್ಕಾಗಿ ಮುಡುಪಾದ ಕಥೆಯನ್ನು ಸಮಾಜದವರೇ ನೋಡಿ ಅವರನ್ನು ಇನ್ನು ಹೆಚ್ಚಿನ ಸೇವೆಗಾಗಿ ಹುರಿದುಂಬಿಸುವ ಕಾರ್ಯ ನಿಮ್ಮಿಂದ ಆಗಲಿ, ನಿಮ್ಮ ಜೀವನಗಾಥೆಯ ದೃಶ್ಯೀಕರಣಕ್ಕಾಗಿ ಸಂಪರ್ಕಿಸಿ ನಮ್ಮ ಈ ಬಾರಿಯ ಹೆಮ್ಮೆಯ ಶ್ರಾವಕ ಶ್ರೀ ವಿಮಲ್‌ ತಾಳಿಕೋಟೆ, ಹುಬ್ಬಳಿ.

ವೀಕ್ಷಕರೇ ಈ ಬಾರಿಯ ಹೆಮ್ಮೆಯ ಶ್ರಾವಕ ಸಂಚಿಕೆಯಲ್ಲಿ ಸಾರ್ವಜನಿಕ , ಸಾಮಾಜಿಕ , ಧಾರ್ಮಿಕ ಶೈಕ್ಷಣಿಕ  ಈ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತಾವುತೊಡಗಿಸಿಕೊಂಡು ಸಾಮಾಜಿಕ ಕಳಕಳಿ ಪರೋಪಕಾರ ಸೇವಾ ಮನೋಭಾವನೆಯನ್ನು ಹೊಂದಿರುವಂತಹ ಸರಳ ಸಜ್ಜನಿಕೆಯ  ಸ್ನೇಹಜೀವಿ ಸಮಾಜದ ಬಗ್ಗೆ ಅತ್ಯಂತ ಕಳಕಳಿಯ ಚಿಂತಕ  ಜಿನಧರ್ಮ ಪ್ರಭಾವಕ ಹಳೆ ಕುಪ್ಪಳ್ಳಿಯ  ಗಣ್ಯ ವ್ಯಾಪಾರಸ್ಥ ಮತತು ನಮ್ಮ ನಿಮ್ಮೆಲ್ಲರ ಆತ್ಮೀಯರಾದ ವಿಮಲ್‌ ತಾಳಿಕೋಟೆಯನ್ನು ಪರಿಚಯಿಸುತ್ತಿದ್ದೇವೆ.

 

ಇವರು ದಿನಾಂಕ 29/12/1969 ರಲ್ಲಿ ಜನಿಸಿದರು. ಇವರ ತಂದೆ ದಿವಂಗತ  ನಾಭಿ ಕಮಲ ವೃತ್ತಿಯಿಂದ ವ್ಯಾಪಾರಸ್ಥರಾದರೂ ಪ್ರವೃತ್ತಿಯಿಂದ ಕವಿ ಸಾಹಿತಿ  ಬರಹಗಾರರಾಗಿದ್ದರು. ತಾಯಿ  ಸುಶೀಲಮ್ಮ ನವರು  ಉತ್ತಮ ಶ್ರಾವಕಿಯಾಗಿದ್ದರು. ನಾವು ಅವರನ್ನು ಸಂದರ್ಶಿಸಿದಾಗ ಅವರು ಅವರ ತಾಯಿ ಮತ್ತು ಅವರ ತಂದೆಯ ಕುಟುಂಬದ ಬಗ್ಗೆ ತಿಳಿಸಿಕೊಟ್ಟರು. ನಂತರ ಅವರು ವಿದ್ಯಾಭ್ಯಾಸ ಮಾಡಿದ ಶಾಲೆಗಳು ಹಾಗೂ ಕಾಲೇಜುಗಳ ಬಗ್ಗೆ ಮಾಹಿತಿಯನ್ನು ತಿಳಿಸಿದರು. ಹಾಗೂ ಅವರ ಧರ್ಮಪತ್ನಿಯವರಾದ ಹೊರನಾಡಿನ ಹೆಚ್.ಡಿ ಜ್ವಾಲನಯ್ಯ ಮಳಲಗದ್ದೆ ಅವರ ಮಗಳು ಜೇಷ್ಠ ಪುತ್ರಿ  ನಯನರವರು ನಮ್ಮ ಪತ್ನಿಯಾಗಿದ್ದು, ನಮಗೆ ಇಬ್ಬರು ಪುತ್ರರಿದ್ದು  ಅವರು ಸಹ ಹೆಚ್ಚಿನ ವಿದ್ಯಾಭ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಮ್ಮ ಧರ್ಮಪತ್ನಿಯವರು ನಾವು ಮಾಡುವ ಯಾವುದೇ ಸಮಾಜಮುಖಿ ಕೆಲಸದಲ್ಲಿ ನನಗೆ ಎಲ್ಲಾ ರೀತಿಯ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ.

 

ಇವರ ಸಾಮಾಜಿಕ ಕಾರ್ಯದ ಬಗ್ಗೆ ಹೇಳುವುದಾದರೆ  ಇವರೊಬ್ಬ ಶಿಕ್ಷಣ ಪ್ರೇಮಿ. 2006 ರಲ್ಲಿ ತಮ್ಮ ಪೂರ್ವ ಶಾಲಾ ಮಿತ್ರರೊಡಗೂಡಿ  ಏಕತಾ ಶಿಕ್ಷಣ ಸಂಸ್ಥೆಯನ್ನುಹುಟ್ಟು ಹಾಕಿ ಅದನ್ನು ಬೆಳೆಸಲು ಶ್ರಮಿಸಿದರು. ಪ್ರಸ್ತುತ ಈ ಸಂಸ್ಥೆಯಲ್ಲಿ 620 ಮಕ್ಕಳು ಓದುತ್ತಿದ್ದಾರೆ. ಕರೋನ ಕಾಲದಲ್ಲಿ ಸಮಾಜದ ಉತ್ಸಾಹಿ ಸ್ನೇಹಿತ ಸಂತೋಷ ಮುಲ್ಕಿ ಪಾಟೀಲ್ ಇವರ ಜೊತೆಗೂಡಿ ಸೋಂಕಿತರಿಗೆ  ತಿಂಡಿ ಊಟದ ವ್ಯವಸ್ಥೆ ಮೂರು ದಿನಗಳ ಕಾಲ ಅವರ ಮನೆಗಳಿಗೆ  ಹಣ್ಣು ತರಕಾರಿ ಪೂರೈಕೆ, ವೈದ್ಯಕೀಯ ಸೇವೆ ಏರ್ಪಾಡು   ಮಾತ್ರೆ ಸ್ಯಾನಿಟೈಸರ್ ವ್ಯವಸ್ಥೆ ಪರಮ ಪೂಜ್ಯಅಮೋಘ ಕೀರ್ತಿ ಅಮರ ಕೀರ್ತಿ ಮುನಿಪ್ರಯರ ಪ್ರೇರಣೆಯಿಂದ ಪೂರೈಸ್ಪಟ್ಟ  ಆಕ್ಸಿಜನ್  ಕಾನ್ಸಂಟ್ರೇಟರ್ ಗಳ ಬಳಕೆ ಹಂಚಿಕೆ ಇವು ಇವರ ಜನಪರ  ಕಾರ್ಯಕ್ಕೆ ಹಿಡಿದ ಕನ್ನಡಿ. 2017 ರಲ್ಲಿ ಕೇಂದ್ರ ಅಲಪಸಂಖ್ಯಾತ ಆಯೋಗದಲ್ಲಿ  ಶೈಕ್ಷಣಿಕ ಆಯೋಜಕರಾಗಿ ನೈರುತ್ಯ ರೈಲ್ವೆಯ  ಡಿ. ಆರ್ ಎಂ. ಸಿ ಸಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು.

ಬಿಜಿಎಸ್ ನ ರಾಜ್ಯ ಅಲ್ಪಸಂಖ್ಯಾತ ಸಂಘದ ಸದಸ್ಯರಾಗಿ ರಾಷ್ಟ್ರೀಯ ಜೈನ್ ಮಿಲನ್ ನ ಸಹಕಾರದೊಂದಿಗೆ ಕಾರ್ಯದರ್ಶಿಯಾಗಿ ಜೈನ್ ಮಿಲನ್  ವಲಯ 8 ರ ನಿರ್ದೇಶಕರಾಗಿ , ಹುಬ್ಬಳ್ಳಿ ನಗರದ ಶಾಂತಿಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. 2000 ರಲ್ಲಿ ಜಿಲ್ಲಾ ಕಾಂಗ್ರೆಸ್ ಆಡಳಿತ ಸಮಿತಿಯ ಸದಸ್ಯರಾಗಿ 2016 ರಿಂದ  2ಬಾರಿ ರಾಷ್ಟ್ರೀಯ ಕಾಂಗ್ರೆಸ್ ನ ಜಿಲ್ಲಾ ಉಪ‍್ಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ರಾಜಕೀಯದಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅನೇಕ ರಾಜಕೀಯ ಗಣ್ಯರು ಇವರ ನಾಯಕತ್ವವನ್ನು ಪ್ರಶಂಸಿಸಿದ್ದಾರೆ.

ಉತ್ತರ ಕರ್ನಾಟಕದ ಪ್ರತಿಷ್ಠಿತ  ಕರ್ನಾಟಕ ವಾಣಿಜ್ಯ ಮಂಡಳಿಗೆ  ಮೂರು ಬಾರಿ ಆಮಂತ್ರಿತ  ಸದಸ್ಯರಾಗಿ ಪತ್ರಿಕಾ ಮಾಧ್ಯಮಸಮಿತಿಯಲ್ಲಿ ಪತ್ರಿಕೆಯಲ್ಲಿ ಎರಡು ಬಾರಿ ಸದಸ್ಯರಾಗಿ ಕಾರ್ಯ ಮಾಡಿದ ಹೆಗ್ಗಳಿಕೆ  ಇವರದ್ದು. ಇವರ ಮತ್ತೊಂದು ಗುಣವೇನೆಂದರೆ  ತಮ್ಮ ಮತ್ತು ಮಕ್ಕಳ ಹುಟ್ಟುಹಬ್ಬವನ್ನು ವೈಭವೀಕರಿಸದೇ ಆಂಧ್ರ ಮಕ್ಕಳ ಶಾಲೆ ಹಾಗೂ ವೃದ್ದಾಶ್ರಮಗಳಲ್ಲಿ ಮಕ್ಕಳು ಮತ್ತು ವೃದ್ದರೊಂದಿಗೆ  ವೈಶಿಷ್ಟ್ಯ ಪೂರ್ಣವಾಗಿ ಆಚರಿಸಿಕೊಂಡು ಸಂತೋಷ ಪಡುವ ಮನಸ್ಸು ಇವರದ್ದು . ಇದು ಇವರ ಸರಳ ಗುಣವನ್ನು ತೋರಿಸುತ್ತದೆ. ಸಮಾಜದ ಸಾಕಷ್ಟು ಜನರಿಗೆ ಅಲ್ಪಸಂಖ್ಯಾತ ಪ್ರಮಾಣಪತ್ರಗಳನ್ನು  ಕೊಡಿಸಲು ನೆರವಾಗಿದ್ದಲ್ಲದೇ ಅಲ್ಪಸಂಖ್ಯಾತ ಸೌಲಭ್ಯಗಳನ್ನು ದೊರಕಿಸಿಕೊಟ್ಟಿದ್ದಾರೆ. ಜೊತೆಗೆ ಅಲ್ಪಸಂಖ್ಯಾತ ಸ್ವಸಹಾಯಗಳಿಗೆ ಸಹಕಾರಿ ಸಾಲ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದಾರೆ. ಶಾಸ್ತ್ರದಾನಕ್ಕಾಗಿ ಹಲವಾರು ಗ್ರಂಥಗಳ ಪ್ರಕಟಣೆಗೆ ಆರ್ಥಿಕ ನೆರವನ್ನು ನೀಡಿದ್ದಾರೆ. 1987 ರಲ್ಲಿ ಜಿನಜನರನ್ನು ಸಂಘಟಿಸಿ  ಜಿನಸೇವಾದಳವನ್ನು ಹುಟ್ಟುಹಾಕಿ  ಅದರ ಸ್ಥಾಪಕ ಅಧ್ಯಕ್ಷರಾಗಿ  ಯಶಸ್ವಿಯಾಗಿ ಮುನ್ನೆಡಿಸಿದವರು. ತನ್ನ ಮೂಲಕ ತನ್ನ ಸಣ್ಣ ವಯಸ್ಸಿನಲ್ಲಿಯೇ  ಸಮಾಜಸೇವೆಗೆ ಮುಂದಾದವರು.

1993 ರ ಭಗವಾನ್ ಶ್ರೀ ಬಾಹುಬಲಿ ಮಸ್ತಕಾಭಿಷೇಕ ಮಹೋತ್ಸವದಲ್ಲಿ ನೇತೃತ್ವವನ್ನು ವಹಿಸಿ  ಸೇವಾಕಾರ್ಯಕ್ಕೂ ಪ್ರಶಸ್ತಿಗೂ ಭಾಜನರಾಗಿದ್ದಾರೆ. 1981 1993 2006 2018 ರಂದು ಮಹಾಮಸ್ತಕಾಭಿಷೇಕಗಳಿಗೆ ಪ್ರಥಮ  ದಿನದಲ್ಲಿ ಅಭಿಷೇಕ ಮಾಡುವ ಪುಣ್ಯಶಾಲಿ ಇವರು. 1989 ರಿಂದ ಇಲ್ಲಿಯವರೆಗೆ  ನಿರಂತರ ಪ್ರತಿವರ್ಷ ಶ್ರೀ ಮಹಾವೀರ ಜಯಂತಿ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳ  ರೋಗಿಗಳಿಗೆ ಹಣ್ಣು  ಬಿಸ್ಕತ್ತು ಸಿಹಿ ವಿತರಣೆ ಮಾಡಿ ಅವರ  ಆರೋಗ್ಯವನ್ನು  ವಿಚಾರಿಸಿ ಅವರಿಗೆ ಶುಭ ಹಾರೈಸುತ್ತಾ ಬಂದಿರುತ್ತಾರೆ. ನಾಡಿನ ನಾನಾ ಭಾಗಗಳಲ್ಲಿ ಪಂಚಕಲ್ಯಾಣ ಸೇವಾ ಸಮಿತಿಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.  ಜೈನ ಸಂಘದಲ್ಲಿ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಈಗ ಆಜೀವಿ ಸೇವಾ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ. ಹುಬ್ಬಳ್ಳಿಯ  ಶ್ರೀ ಅನಂತನಾಥ ಬಸದಿ ಶ್ರೀ ಪಾರ್ಶ್ವನಾಥ ಬಸದಿಯ ಧರ್ಮದರ್ಶಿಯಾಗಿ  ಕ್ರಮವಾಗಿ ಖಜಾಂಚಿಯಾಗಿ ಉಪಾಧ್ಯಕ್ಷರಾಗಿ ಶಾಂತಿನಾಥ ಬಸದಿಯ ಸಲಹಾ ಸಮಿತಿಯ ಸದಸ್ಯರಾಗಿ ಇವರ  ಗಮನಾರ್ಹ ಸೇವೆ ಶ್ಲಾಘನೀಯ ವಾದದ್ದು.  ಹಾಗೇಯೇ ಧರ್ಮಸ್ಥಳ ಸ್ವಸಹಾಯ ಸಂಘದ ಡಾ|| ವೀರೇಂದ್ರ ಹೆಗ್ಗಡೆಯವರ ಜೈನ ಸ್ವಸಹಾಯ ಸಂಘಗಳ ರಾಷ್ಟ್ರೀಯ ಸಹ ಸಂಚಾಲಕರಾಗಿ  ಕಾರ್ಯ ನಿರ್ವಹಿಸಿದ್ದಾರೆ.  ಇವರ ಗುರುತಿಸುವ  ಗುಣವೆಂದರೆ  ಸಹಾಯಕೋರಿ  ಯಾರು ಯಾವುದೇ ಕೆಲಸವನ್ನು ಕೋರಿ ಮತ್ತು ಸಹಾಯವನ್ನು ಕೋರಿ ಬಂದವರಿಗೆ  ಸಂತೋಷವಾಗಿ   ಪ್ರತ್ಯಕ್ಷವಾಗಿ ನೆರವಾಗುವ  ಗುಣ ಹೊಂದಿರುವ ಇವರು  ಹಾಗೂ ಇಂತಹ ವ್ಯಕ್ತಿಗಳ ನಡತೆಯು ಈಗಿನ ಯುವ ಪೀಳಿಗೆಯವರಿಗೆ ಮಾದರಿಯಾಗಲಿ ಎಂದು  ಸಮಾಜದ  ಉನ್ನತಿಗೆ ಸಾಕ್ಷಿಯಾಗಲಿದೆಯೆಂದು ನಮ್ಮ ಜ್ವಾಲಾಮಾಲಾ ನ್ಯೂಸ್ ಚಾನಲ್ ನ ಪರವಾಗಿ ಹಾರೈಸುತ್ತೇವೆ.