ಶ್ರೀ ಕ್ಷೇತ್ರ ಕನಕಗಿರಿ ಜೈನಮಠದ ವ್ಯಾಪ್ತಿಗೆ ಸೇರುವ ಏಚಿಗನಹಳ್ಳಿ ವಾರ್ಷಿಕ ಪೂಜಾ ಮಹೋತ್ಸವ ದೃಶ್ಯ ಮಾಲಿಕೆ
ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಏಚಿಗನಹಳ್ಳಿ ಗ್ರಾಮದಲ್ಲಿರುವ ಪ್ರಾಚೀನ ಶ್ರೀ ನ್ಯೇಮಿನಾಥ ಸ್ವಾಮಿ ಜಿನ ಚೈತ್ಯಾಲಯದಲ್ಲಿ ವಾರ್ಷಿಕ ಪೂಜಾ ಮಹೋತ್ಸವದ ನಿಮಿತ್ತ ಶ್ರೀ ಕ್ಷೇತ್ರ ಕನಕಗಿರಿಯ ಪೀಠಾಧ್ಯಕ್ಷರಾದ ಪರಮಪೂಜ್ಯ ಸ್ವಸ್ಥಿಶ್ರೀ ಭುವನಕೀರ್ತಿ ಮಹಾಸ್ವಾಮಿಜಿಯವರ ಪಾವನ ಸಾನಿಧ್ಯದಲ್ಲಿ ಭಗವಾನ್ 1008 ಶ್ರೀ ನ್ಯೇಮಿನಾಥ ಸ್ವಾಮಿಗೆ 108 ಕಳಸಾಭಿಷೇಕ ಶ್ರೀ ಕುದುರೆ ಬ್ರಹ್ಮದೇವರಿಗೆ ಹಾಗೂ ಮಾತೆ ಕೂಷ್ಮಾಂಡಿನಿ ದೇವಿಯವರಿಗೆ ಶೋಡೋಷಪಚಾರ ಪೂಜೆಯನ್ನು ವಿಧಿವತ್ತಾಗಿ ನೆರವೇರಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೆ ಆದಿರಾಜಯ್ಯನವರು ವಹಿಸಿದ್ದು, ಕಾರ್ಯಕ್ರಮದಲ್ಲಿ ಶೀಲಾ ಅನಂತರಾಜುರವರು ಪ್ರೇಮ ಮಹಾವೀರ್, ಮಿರ್ಮಲ್ ಚಂದ್ ಜೈನ್, ಕೆ ಪದ್ಮರಾಜಯ್ಯ, ಕೆ.ಎಸ್ ನಂಜುಂಡಸ್ವಾಮಿ ಇವರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಆಯೋಜನೆ ಕಮಿಟಿಯವರ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ನಡೆಯಿತು.














