ಪ್ರತಿವರ್ಷವೂ ನಡೆದುಕೊಂಡು ಬರುತ್ತಿರುವ ಎಲ್ಲಾ ಯಶಸ್ವಿ ಕಾರ್ಯಕ್ರಮ ನಮ್ಮ ಜಿನಭಜನಾ ಸ್ಪರ್ಧೆ 5ನೇ ಸೀಸನ್ ನ ಧಾರವಾಡ ವಿಭಾಗದ ಸ್ಪರ್ಧೆ ಈ ಬಾರಿಯೂ ಕೂಡ ಸುಂದರವಾಗಿ ಹಮ್ಮಿಕೊಳ್ಳಲಾಗಿದೆ. ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಶ್ರೀ ಡಿ. ಸುರೇಂದ್ರ ಕುಮಾರ್ ರವರ ಉಪಸ್ಥಿತಿಯಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀಮತಿ ‘ಅನಿತಾ ಸುರೇಂದ್ರ ಕುಮಾರ್ ರವರ ಪರಿಕಲ್ಪನೆಯ ಜಿನಭಜನಾ ಸ್ಪರ್ಧೆ. ದಿನಾಂಕ 13/01/2022 ರಂದು ಬೆಳಗಾವಿಯ ಶ್ರೀ ಧರ್ಮನಾಥ ಭವನದಲ್ಲಿ ನಡೆಯಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿನೋದ್ ದೊಡ್ಡಣ್ಣ ನವರು, ಉದ್ಘಾಟನೆಯನ್ನು ಶ್ರೀ ಸಂಜಯ್ ಪಾಟೀಲ್ ರವರು ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಧನ್ಯ ಕುಮಾರ್ ಗುಂಡೆ ಹಾಗೂ ಇನ್ನಿತರ ಗಣ್ಯರುಗಳಲ್ಲದೆ ವಿಶೇಷ ಅತಿಥಿಗಳಾಗಿ ಶ್ರೀ ಅಶೋಕ್ ಜೈನ್ , ಶ್ರೀ ಪುಷ್ಪಕ್ ಹನುಮಣ್ಣ ನವರ್ , ಶ್ರೀ ಸನ್ಮತಿ ಕಸ್ತೂರಿ , ಶ್ರೀ ಅಜಿ್ತ ಕುಮಾತ್ ಜೈನ್, ಡಾ|| ನಾಗರಾಜ್ ರವರು ಹೀಗೆ ಇನ್ನೂ ಹಲವಾರು ಗಣ್ಯರುಗಳು ಉಪಸ್ಥಿತರಿರಲಿದ್ದಾರೆ. ನಡೆಯಲಿರುವ ಕಾರ್ಯಕ್ರಮ ಕೋವಿಡ್ 19 ನಂತೆ ಇರುವ ನಿಬಂಧನೆಗಳನ್ನು ಒಳಪಟ್ಟು ಕೇವಲ ಸ್ಪರ್ಧಾಳುಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪೋಷಕರು ಹಾಗೂ ವೀಕ್ಷಕರು ಜ್ವಾಲಾಮಾಲಾ ನ್ಯೂಸ್ ಚಾನಲನ್ನು ನಮ್ಮ ಯೂಟ್ಯೂಬ್ ಚಾನಲ್ ನಲ್ಲಿ ನೇರಪ್ರಸಾರದ ಮೂಲಕ ವೀಕ್ಷಿಸಬಹುದಾಗಿದೆ. ಎಲ್ಲರೂ ಅತಿ ಹೆಚ್ಚು ಸಂಖ್ಯೆಯಲ್ಲಿ ವೀಕ್ಷಿಸಿ ಪ್ರೋತ್ಸಾಹಿಸಬೇಕೆಂದು ವಿನಂತಿಸುತ್ತೇವೆ.














