ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಬಸದಿ ಗುಮ್ಮೆಗುತ್ತು
ಕಾರ್ಕಳ ತಾಲ್ಲೂಕು ಗುಮ್ಮೆಗುತ್ತು ಶ್ರೀ 1008 ಚಂದ್ರನಾಥ ಸ್ವಾಮಿ ಬಸದಿಯ ದಾಮ ಸಂಪ್ರೋಕ್ಷಣ ಪೂರ್ವಕ ಶ್ರೀ ಚಂದ್ರನಾಥ ಸ್ವಾಮಿಯ ಪುನರ್ ಪ್ರತಿಷ್ಟಾಪನ ಮಹೋತ್ಸವವನ್ನು ನೀವು ವೀಕ್ಷಿಸಲ್ಲಿದ್ದೀರಿ ವೀಕ್ಷಕರೆ. ಅದಕ್ಕು ಮುನ್ನ ಈ ಬಸದಿ ಹೇಗೆ ಇತ್ತು ಈಗ ಹೇಗೆ ಜೀರ್ಣೋದ್ಧಾರಗೊಂಡಿದೆ ಎಂಬುವುದನ್ನು ತಿಳಿಯೋಣ ಬನ್ನಿ.
ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಬಸದಿ ಗುಮ್ಮೆಗುತ್ತು. ನಾನು ಈ ಬಸದಿಯ ಬಗ್ಗೆ ಹೇಳುವುದಕ್ಕು ಮುಂಚೆ ಸುತ್ತಲಿನ ಪ್ರಾಕೃತಿಕ ಸೌಂದರ್ಯದ ಬಗ್ಗೆ ಒಮ್ಮೆ ಹೇಳಲೆ ಬೇಕು. ಕರಾವಳಿ ತೀರ ಪಶ್ಚಿಮ ಘಟ್ಟದ ಸಾಲುಗಳು ಹಾಗೂ ಸುಂದರ ತಾಣಗಳ ನಡುವಿನಲ್ಲಿ ಕಂಗೋಳಿಸುತ್ತಿದೆ. ಕಾರ್ಕಳದಿಂದ 25 ಕಿ.ಮೀ ದೂರದಲ್ಲಿರುವ ಈ ಗುಮ್ಮೆಗುತ್ತು ಬಸದಿ.
ಇನ್ನು ಇದರ ಇತಿಹಾಸದ ಬಗ್ಗೆ ಹೇಳುತ್ತಾ ಹೋದರೆ ಶಾಸನಗಳ ಪ್ರಕಾರ ಗುಮ್ಮೆಗುತ್ತು ಬಸದಿ ಇತಿಹಾಸವನ್ನು ನೋಡಿದಾಗ ಈ ಬಸದಿಯು ಸುಮಾರು 700 ವರ್ಷಗಳಷ್ಟು ಪುರಾತನವಾಗಿದೆ. ಪ್ರಸ್ತುತ ಇರುವ ತೀರ್ಥಂಕರರ ಪೀಠವು 14ನೇ ಶತಮಾನಕ್ಕೆ ಸೇರಿದ್ದಾಗಿದೆ. ವಿಕ್ರಾಂತ ಶೆಟ್ಟಿ ಎಂಬವವರು ಈ ಪೀಠ ಮಾಡಿಸಿದ್ದಾಗಿ ಶಾಸನ ತಿಳಿಸುತ್ತದೆ. ಪಂಚ ಪರಿಮೇಷ್ಠಿಗಳ ಬಿಂಬವನ್ನು 13ನೇ ಶತಮಾನದಲ್ಲಿ ಅಮ್ಮಣ್ಣ ಶೆಟ್ಟಿಯ ಧರ್ಮಪತ್ನಿ ಮಾಡಿಸಿದ್ದಾಗಿಯೂ ಹಾಗೂ ಗಣದರ ಪಾದ ಪ್ರತಿಮೆಯು ಅತಿ ಪೂರಾತನವಾಗಿದ್ದು ಉಳಿಯ ಹುಸಬು ಶೆಟ್ಟಿಯ ಮಗನಾದ ಪುಲಿ ಶೆಟ್ಟಿ ಮತ್ತು ವರ್ದಮಾನ ಶೆಟ್ಟಿ ಮಾಡಿಸಿದ್ದಾಗಿ ಶಾಸನವು ತಿಳಿಸುತ್ತದೆ. ಒಟ್ಟಾರೆಯಾಗಿ ಈ ಬಸದಿಯು 13ನೇ ಶತಮಾನಕ್ಕೆ ಸೇರಿದ್ದಾಗಿದೆ. ಪ್ರಸ್ತುತ ಇರುವ ಬಸದಿಯು 350 ವರ್ಷಗಳ ಹಿಂದೆಯೆ ಪುನರ್ ನಿರ್ಮಾಣವಾಗಿದ್ದಾಗಿದೆ. ಆದರೆ ಸುಂದರವಾದ ವಾಸ್ತು ವೈಭವದಿಂದ ಕಂಗೋಳಿಸುತ್ತಿದ್ದಾ ಈ ಬಸದಿಯು ಜೀರ್ಣಾವಸ್ಥೆ ಸ್ಥಿತಿಗೆ ತಲುಪಿದಾಗ ಮುನಿ ಶ್ರೀ 108 ಪ್ರಸಂಗ ಸಾಗರ ಮುನಿ ಮಹಾರಾಜರ ಪ್ರೇರಣೆ, ಕಾರ್ಕಳ ಶ್ರೀ ಜೈನ ಮಠದ ಪರಮ ಪೂಜ್ಯ ರಾಜಗುರು ದ್ಯಾನಿಯೋಗಿ ಸ್ವಸ್ತಿಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಶುಭ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ಗ್ರಾಮಸ್ಥರೆಲ್ಲಾ ಒಟ್ಟು ಸೇರಿ ಬಸದಿ ಜೀರ್ಣೋದ್ಧಾರಕ್ಕೆ ಸಂಕಲ್ಪಿಸುತ್ತಾರೆ, ಆಗ ನಡೆದದ್ದೆ ವಿಸ್ಮಯ. ಹಿರಿಯರು ಕಿರಿಯರು ಎನ್ನದೆ ಎಲ್ಲರು ಕಾರ್ಯ ಪ್ರೌವೃತ್ತರಾಗಿ ಶ್ರದ್ದೆ ಉತ್ಸಾಹದಿಂದ ದುಡಿದು ಸಕಲ ದಾನಿಗಳಿಂದ ಸಂಪೂರ್ಣ ಜೀರ್ಣೋದ್ಧಾರಗೊಂಡ ಪರಿಯನ್ನು ಒಮ್ಮೆ ನೋಡಿ.
ಇಲ್ಲಿನ ಅಧ್ಯಕ್ಷರಾದ ಶ್ರೀ ಕೆ ಬಿ ಹರಿಶ್ಚಂದ್ರ ಬಲ್ಲಾಳ್, ಶ್ರೀ ಕೆ ಬಿ ಮಹಾವೀರ ಬಲ್ಲಾಳ್ ಹಾಗೂ ಗುಮ್ಮೆಗುತ್ತು ಕುಟುಂಬಸ್ಥರು ಶ್ರೀ ಎನ್ ಪ್ರೇಮ್ ಕುಮಾರ್ ಮತ್ತು ನೂರಾರು ಸಮಸ್ತ ಶ್ರಾವಕ ಶ್ರಾವಕಿಯರ ಪರಿಶ್ರಮದಿಂದ ಅದರಲ್ಲೂ ದಿವಂಗತ ಕೆ ಬಿ ಶ್ರೇಯಾಂಸ್ ಬಲ್ಲಾಳ್ ರವರ ಸ್ಮರಣಾರ್ತವಾಗಿ ಅವರ ಧರ್ಮಪತ್ನಿಯಾದ ಸುಮತಿ ಎಸ್ ಬಲ್ಲಾಳ್ ಬಹು ಮುಖ್ಯವಾಗಿ ರುವಾರಿಗಳಾಗಿ ಇದ್ದರು. ಶ್ರೀಮತಿ ದಿಶ ಬಲ್ಲಾಳ್ ಇವರುಗಳ ಮುಂದಾಳತ್ವದಲ್ಲಿ ಬಸದಿ ಜೀರ್ಣೋದ್ಧಾರ ಕಾರ್ಯ ಸಂಪನ್ನಗೊಂಡು ದಾಮ ಸಂಪ್ರೋಕ್ಷಣ ಪೂರ್ವಕ ಜಿನ ಬಿಂಬ ಪ್ರತಿಷ್ಠಾಪನ ಕಾರ್ಯಕ್ರಮ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರ ಶುಭ ಆಶೀರ್ವಾದದೊಂದಿಗೆ ದಿನಾಂಕ 22-12-2021ರಿಂದ 26-12-2021ರ ವರೆಗೆ ನಡೆಯುತ್ತಿದೆ.
ತೋರಣ ಮುಹೂರ್ತ, ಅಭಿಷೇಕಾದಿ ಮಹಾ ಪೂಜೆ, ಜಿನ ಭಜನಾ ಕಾರ್ಯಕ್ರಮ, ವಾಸ್ತು ಪೂಜೆ, ನವಗ್ರಹ ಶಾಂತಿ, ದ್ವಜರೋಹಣ, ದ್ವಜ ಪೂಜೆ, ಶ್ರೀ ಬಲಿ ವಿಧಾನ, ಶ್ರೀ ಪೀಠ ಯಂತ್ರಾರಾಧನೆ ಸಹಿತ ಸಾಮೂಹಿಕ ರಥೋಪದೇಶ ಹೀಗೆ ಅನೇಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರುತ್ತಿದೆ.
ದಿನಾಂಕ 23-12-2021ರಂದು ಸಂಜೆ ಪ್ರಸಂಗ ಸಾಗರ ಮುನಿ ಮಹಾರಾಜರ ಪಾವನ ಸಾನಿಧ್ಯದೊಂದಿಗೆ ಕಾರ್ಕಳ ಶ್ರೀಗಳವರು ಹಾಗೂ ಹೊಂಬುಜ ಶ್ರೀ ಕ್ಷೇತ್ರ ಮಠಾಧಿಪತಿಗಳಾದ ಪರಮ ಪೂಜ್ಯ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ದಿವ್ಯ ಉಪಸ್ಥಿತಿಯಲ್ಲಿ ತಿಮ್ಮಣ್ಣ ಅರಸರಾದ ಡಾ|| ಪದ್ಮಪ್ರಸಾದ್ ಅಜಲರು ಇವರ ಅಧ್ಯಕ್ಷತೆಯಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಎಂ ಕೆ ವಿಜಯ್ ಕುಮಾರ್, ಶ್ರೀ ಪಾರ್ಶ್ವನಾಥ ಹೆಗ್ಗಡೆ ರಂಜಾಳ ಹಾಗೂ ಬಸದಿಯ ಮುಖ್ಯಸ್ಥರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಕಳ ಶ್ರೀಗಳವರಿಗೆ ಗುರು ವಂದನಾ ಕಾರ್ಯಕ್ರಮ ವೈಭವದಿಂದ ನಡೆಯಿತು.
ಗಣ್ಯರು ವೇದಿಕೆ ಭಾಷಣ ಮಾಡಿದರು, ಮತ್ತು ಪರಮ ಪೂಜ್ಯ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ಮಾತನಾಡಿ ನಮ್ಮ ಹಿಂದಿನ ಪೂರ್ವಿಕರು ದೇವಸ್ಥಾನ ನಿರ್ಮಾಣ ಮಾಡಿದರ ಉದ್ದೇಶಗಳ ಬಗ್ಗೆ ಮತ್ತು ಮೋಕ್ಷ ಪ್ರಾಪ್ತಿಗಾಗಿ ಜೈನ ಧರ್ಮದಲ್ಲಿ ಮಾಡಬೇಕಾದ ಕಾರ್ಯವನ್ನು ತಿಳಿಸಿದರು.
ಮುನಿ ಶ್ರೀ 108 ಪ್ರಸಂಗ ಸಾಗರ ಮುನಿ ಮಹಾರಾಜರು ಮಾತನಾಡಿ ಕಾರ್ಕಳ ತಾಲ್ಲೂಕು ಗುಮ್ಮೆಗುತ್ತು ಕ್ಷೇತ್ರದಲ್ಲಿ ಬಲ್ಲಾಳ್ ಕುಟುಂಬ ದವರು ಮತ್ತು ಗ್ರಾಮಸ್ಥರು ಬಸದಿ ಜೀರ್ಣೋದ್ಧಾರ ಕಾರ್ಯದಲ್ಲಿ ಅವರು ವಹಿಸದ ಶ್ರಮವನ್ನು ಶ್ಲಾಘಿಸಿದರು. ಮತ್ತು ಬಸದಿ ಜೀರ್ಣೋದ್ಧಾರ ಬಗ್ಗೆ ವಿವರಿಸಿದರು. ಕಾರ್ಕಳ ತಾಲ್ಲೂಕು ಗುಮ್ಮೆಗುತ್ತು ಕ್ಷೇತ್ರದಲ್ಲಿ ನಡೆಯಿತ್ತಿರುವ ಶ್ರೀ 1008 ಚಂದ್ರನಾಥ ಸ್ವಾಮಿ ಬಸದಿಯ ದಾಮ ಸಂಪ್ರೋಕ್ಷಣ ಪೂರ್ವಕ ಶ್ರೀ ಚಂದ್ರನಾಥ ಸ್ವಾಮಿಯ ಪುನರ್ ಪ್ರತಿಷ್ಟಾಪನ ಮಹೋತ್ಸವವನ್ನು ಕುರಿತು ಮಾತನಾಡಿದರು. ಅಂತಿಮವಾಗಿ ಜ್ವಾಲಮಾಲ ಡಾಟ್ ನ್ಯೂಸ್ ಚಾನಲ್ ಕಾರ್ಯವೈಕರಿಯನ್ನು ಪ್ರಶಂಸಿಸಿ ಆಶೀರ್ವದಿಸಿದರು.
ಕಾರ್ಕಳ, ಮೂಡುಬಿದ್ರೆ ಹಾಗೂ ಧರ್ಮಸ್ಥಳಕ್ಕೆ ಬಂದ ಭಕ್ತಾಧಿಗಳೆಲ್ಲಾ ನಮ್ಮ ಗುಮ್ಮೆಗುತ್ತು ಬಸದಿಗೆ ಬಂದು ದರ್ಶನ ಭಾಗ್ಯವನ್ನು ಪಡೆಯ ಬೇಕಾಗಿ ವಿನಂತಿಸಿಕೋಳ್ಳುತ್ತೇವೆ.
ಈ ಸುಂದರ ಪ್ರಕೃತಿ ನಿರ್ಮಿತ ಸ್ಥಳದಲ್ಲಿ ಇರುವ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯನ್ನು ನೀವು ತಪ್ಪದೆ ಒಮ್ಮೆ ಭೇಟಿನೀಡಿ ದರ್ಶನ ಭಾಗ್ಯ ಪಡೆದರೆ ಜನ್ಮಪಾವನ ಎನಿಸುತ್ತದೆ.














