ಜಿನ ಭಜನ ಸ್ಪರ್ಧೆ ಎಸ್-5

ವೀಕ್ಷಕರೆ ಮತ್ತೆ ಬಂದಿದೆ ಮಗದೊಮ್ಮೆ ಬಂದಿದೆ ರಾಜ್ಯದ ಸುಪ್ರಸಿದ್ದ ಜಿನ ಭಜನಾ ಸ್ಪರ್ಧೆಯ ಸಂಭ್ರಮ. ರಾಜ್ಯದಲ್ಲಿ ಅಷ್ಟೇ ಅಲ್ಲಾ ನೆರೆ ರಾಜ್ಯ ಅಂತರಾಷ್ಟ್ರೀಯ ಜೈನ ಬಂಧುಗಳ ಮನೆ ಮನೆಗಳಿಂದ ಒಮ್ಮೆ ವೇದಿಕೆಯಲ್ಲಿ ಜಿನ ಭಜನಾ ಸ್ಪರ್ಧೆಯಾಗಿ ಮೂಡಿ ಬರಲ್ಲಿದೆ. ನಾವೀಗ ನಿಮಗೆ ಜಮಖಂಡಿ ವಿಭಾಗದ ಜಿನ ಭಜನಾ ಸ್ಪರ್ಧೆಗೆ ತಮ್ಮೆಲ್ಲರನ್ನು ಆಹ್ವಾನಿಸಲು ಮಾಹಿತಿಯನ್ನು ತಂದಿದ್ದೇನೆ.

ಭಾರತೀಯ ಜೈನ್ ಮಿಲನ್ ವಲಯ 8 ವತಿಯಿಂದ ಅಖಿಲ ಕರ್ನಾಟಕ ಜಿನ ಭಜನಾ ಸ್ಪರ್ಧೆ ಸೀಜ಼ನ್  5ರ ಜಮಖಂಡಿ ವಿಭಾಗಿಯ ಸ್ಪರ್ಧೆ ದಿನಾಂಕ 26-12-2021ರಂದು 1008 ಭಗವಾನ್ ಶ್ರೀ ಪಾರ್ಶ್ವನಾಥ ದಿಗಂಬರ ಜೈನ್ ಮಂದಿರ ಸಭಾ ಭವನ ಜಮಖಂಡಿ ಇಲ್ಲಿ ಅಮೋಘವಾಗಿ ಅಯೋಜನೆಗೊಂಡಿದ್ದು ನಿಮ್ಮೆಲ್ಲರನ್ನು ಆತ್ಮಿಯರಾಗಿ ಸ್ವಾಗತಿಸುತ್ತಿದ್ದಾರೆ ರಾಷ್ಟ್ರೀಯ ಕಾರ್ಯಧ್ಯಕ್ಷರಾದ ಧರ್ಮಸ್ಥಳ ಸುರೇಂದ್ರ ಕುಮಾರ್ ರವರು, ರಾಷ್ಟ್ರೀಯ ಉಪಾಧ್ಯಕ್ಷರಾದ ಅನಿತಾ ಸುರೇಂದ್ರ ಕುಮಾರ್ ರವರು, ವಲಯ ಅಧ್ಯಕ್ಷರಾದ ಪುಷ್ಪರಾಜ್ ಜೈನ್, ಕಾರ್ಯಧ್ಯಕ್ಷರಾದ ಪ್ರಸನ್ನ ಕುಮಾರ್ ಪ್ರಧಾನ ಕಾರ್ಯದರ್ಶಿಗಳಾದ ರಾಜೇಶ್ ಎನ್ ಇವರು ಹಾಗೂ ವಿಭಾಗದ ಸಂಚಾಲಕರಾದ ಶ್ರೀ ಮಹಾವೀರ್ ಶಾ ಇವರ ಸಹ ಸಂಚಾಲಕರಾಗಿ ಶ್ರೀ ಬಾಹುಬಲಿ ಬಿರ್ದಾರ್ ಇವರಿಂದ ನಿಮಗೆ ಹೃತ್ಪೂರ್ವಕ ಆಹ್ವಾನ.

ಬನ್ನಿ ಜೊತೆಗೂಡಿ ಜೈನ ಬಾಂಧವರೆಲ್ಲರೂ ಈ ಸಂಭ್ರಮಾಚರಣೆಯಲ್ಲಿ ಭಾಗಿಯಾಗಲು ಮುಂದಾಗಿ.