ಜ್ವಲಮಾಲಾ ನ್ಯೂಸ್

ಜಿನಭಜನೆ ಕಾರ್ಯಕ್ರಮದಲ್ಲಿ ಅನಿತಾ ಸುರೇಂದ್ರ ಕುಮಾರ್ ರವರು ಸಭೆಯನ್ನು ಕುರಿತು ಭಜನೆಯನ್ನು ಹಾಡಿ  ಅದರ ಸಾರಾಂಶ ಹಾಗೂ ಅರ್ಥವನ್ನು ತಿಳಿಸಿ ಮಾತನಾಡಿದರು. ಜೈನರ ಸರ್ವಾಧಿಕ ಪರಿಚಲನೆ ಜೈನರ ಮನೆಗಳಲ್ಲಿ ಜೈನ ಮಂದಿರಗಳಲ್ಲಿ ನಡೆಯುತ್ತಿತ್ತು.

ಹಾಗೆಂದು ಭಜನೆ ಮಾಡಬೇಕಾದರೆ ಮಂದಿರ ಬೇಕು ಎಂತೆನಿಲ್ಲ ಭಗವಂತನಪ್ರತಿಮೆಯೂ ಬೇಕೆನಂತೆನಿಲ್ಲ ನಾವು ಏಕಾಂತದಲ್ಲಿ ಭಜನೆಯನ್ನು ಗುನುಗುನಿಸುತ್ತಿದ್ದರೆ ಆಗ ನಮಗೆ ಏಕಾಗ್ರತೆ ಉಂಟಾಗುತ್ತದೆ. ಕರ್ಮ ನಿರ್ಜನವಾಗುತ್ತದೆ. ಜೈನಾಚಾರ್ಯಗಳು ಭಜನೆಯ ಬಗ್ಗೆ ಅವರ ಗ್ರಂಥಗಳಲ್ಲಿ ಬಹಳ ಸುಂದರವಾಗಿ ವರ್ಣನೆ ಮಾಡಿದ್ದಾರೆ. ರತ್ನಾಕರ ವರ್ಣಿ  ತನ್ನ ಸಾಂಗತ್ಯದಲ್ಲಿ ಭಜನೆಯೊಂದೇ ಸಾಲದೆ ಜಿನೇಂದ್ರನ ಮಹತ್ವವನ್ನು ತಿಳಿಯಲು ಎಂದು ವರ್ಣಿಸಿದ್ದಾರೆ.

ಹಾಗೆಯೇ ನಮ್ಮ ಈ ಮೈಸೂರು  ಅರಮನೆ ಮತ್ತು ದಸರಾ ಮೆರವಣಿಗೆ ದೇಶವಿದೇಶಗಳ ಯಾತ್ತಿಕರನ್ನು ಇದು ಆಕರ್ಷಿಸುತ್ತಿದೆ. ಎಲ್ಲಾ ಧರ್ಮಗಳಿಗೂ ಆಶ್ರಯ ತಾಣವಾಗಿರುವ ಮೈಸೂರು ನಿಜವಾಗಿಯೂ ಒಂದು ಸಾಂಸ್ಕೃತಿಕ ನಗರವಾಗಿದೆ. ಇಂತಹ ಉನ್ನತ ಹಿನ್ನೆಲೆಯಿರುವ ಮೈಸೂರಿನಲ್ಲಿ ನಮ್ಮಈ ವರ್ಷದ ಅಂತಿಮ ಜಿನಭಜನಾ ಕಾರ್ಯಕ್ರಮ ನಡೆಯುತ್ತಿರುವುದು  ಸಂತೋಷದ ಮತ್ತು ಹೆಮ್ಮೆಯ ಸಂಗತಿಯಾಗಿದೆ.

ಮೈಸೂರು ಅರಸರ ಕಾಲದಿಂದಲೂ ಸುಭೀಕ್ಷವಾಗಿ ಶಾಂತಿಯ ತೋಟವಾಗಿ ಬೆಳೆದು ಬಂದ ಪುಣ್ಯ   ಪ್ರದೇಶ ಇಲ್ಲಿ ನಮ್ಮ ಸಮಾಜದ ಅಂದರೆ ಜೈನ ಪ್ರಮುಖರುಗಳು ಸಮಾಜಕ್ಕಾಗಿ ಸಮಾಜದ ಅಭಿವೃದ್ದಿಗಾಗಿ ಕೆಲಸ ಮಾಡಿದ್ದಾರೆ. ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷ, ಕನ್ನಡಕ್ಕಾಗಿ ಕೊರಳೆತ್ತು ನಿನ್ನ ಕೊರಳ್ ಪಾಂಚಜನ್ಯವಾಗುವುದು ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದು ಕನ್ನಡ ಅಭಿಮಾನವನ್ನು ಸುರಿದ ನಮ್ಮ ರಾಷ್ಟ್ರಕವಿ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ರಸ ಋಷಿ ಕುವೆಂಪು ರವರ  ಕಾರ್ಯಕ್ಷೇತ್ರ ಮೈಸೂರು ಆಗಿದೆ. ಹಾಗೆಯೇ ತಿ.ನಂ.ಶ್ರೀ, ಬಿ.ಎಂ.ಶ್ರೀ, ಬಿ.ಎಲ್ ನರಸಿಂಹಾಚಾರ್ , ಎ.ಆರ್ ಕೃಷ್ಣಶಾಸ್ತ್ರಿ , ತ.ರಾ.ಸು , ಮೈಸೂರು ಮಲ್ಲಿಗೆಯ ಕೆ. ಎಸ್ ನರಸಿಂಹಸ್ವಾಮಿ , ವೀಣೆ ಶೇಷಣ್ಣ ನವರು  ಇವರುಗಳು ಈ ನಗರದ ಸಾಹಿತ್ಯ ಹಾಗೂ ಸಂಗೀತದ  ರಾಯಭಾರಿಗಳು ಮೈಸೂರಿನ ಇವರೆಲ್ಲಾ ಎಷ್ಟು ಪುಣ್ಯವಂತರು. ಕರ್ನಾಟಕದ ಏಳು ವಿಭಾಗಗಳಿಂದಲೂ  ಬಂದಂತಹ ಎಲ್ಲಾ ಸ್ಪರ್ಧಿಗಳಿಗೆ ಶ್ರಾವಕ ಶ್ರಾವಕಿಯರಿಗೆ ಜೈನ ಮಿಲನ್ ನ ಎಲ್ಲಾ ಸದಸ್ಯರು ಹಾಗೂ ಪದಾದಿಕಾರಿಗಳಿಗೆ ಈ ಭಜನೆಯ ಕಾರ್ಯಕ್ರಮವನ್ನು ಇಷ್ಟು ಸುಂದರವಾಗಿ ಮಾಡಿಕೊಟ್ಟ ಮೈಸೂರಿನ ಎಲ್ಲಾ ಹಿರಿಯರಿಗೆ ಕಿರಿಯರಿಗೆ ಹಾಗೂ ಮೈಸೂರು ವಿಭಾಗದ ಎಲ್ಲಾ ಜೈನ್ ಮಿಲನ್ ಗಳಿಗೂ ಪರೋಕ್ಷವಾಗಿ ಸಹಾಯ ಮಾಡಿದ ಎಲ್ಲರಿಗೂ ನನ್ನ ಕೃತಜ್ಞತೆ ಮತ್ತು ವಂದನೆಗಳನ್ನು ಮೊದಲು ತಿಳಿಸುತ್ತಿದ್ದೇನೆ. ಎಲ್ಲಾ ಸ್ಪರ್ಧಿಗಳಿಗೆ ಕೂಡ ಶುಭಾಶಯಗಳು. ಇವರೆಲ್ಲಾ ಜೈನ ಧರ್ಮದ ಪ್ರಭಾವವನ್ನು ಇನ್ನೂ ಹೆಚ್ಚಿಸಿ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಒಳಿತಿಗಾಗಿ ಸಹಕರಿಸಿದ ಜೈನ ಧರ್ಮದ ಧ್ವಜವನ್ನು ಎತತರಕ್ಕೆ ಕೊಂಡೊಯ್ದವರು ಭಜನಾರ್ಥಿಗಳು ಆದ್ದರಿಂದ ನೀವುಗಳು ಸ್ಪರ್ಧಿಗಳು ಅಲ್ಲ. ಸಂಗೀತದಲ್ಲಿ ಬಹಳ ಶಕ್ತಿ ಇದೆ. ಇದರ ಮೂಲ ಶಬ್ಧ ಗೀತೆಯಾಗಿದೆ. ಜೈನ ಮುನಿಗಳು ಆಚಾರ್ಯರು ಮೊದಲಾದ ಅನೇಕ ಹಿರಿಯರು ಸೇರಿ ಈ ಭಜನೆಗಳ ರಚನೆಗಳನ್ನು ಮಾಡಿದ್ದಾರೆ. ಪೂಜಾಕಾಲದಲ್ಲಿ ವಾದ್ಯ ಮಂತ್ರಗಳನ್ನು ಬಾರಿಸುತ್ತಿದ್ದಾರೆ ಎಂದು ಗ್ರಂಥಗಳಲ್ಲಿ ಹೇಳುತ್ತಾರೆ. ಭಜನೆ ದೇವರಿಗೆ ಪ್ರಿಯವಾದ ವಿಷಯ . ಈಗಿನ ಕಾಲಕ್ಕೆ ನೋಡುತ್ತಿದ್ದರೆ ಬರಬರುತ್ತಾ ಈಗಿನ ಪೀಳಿಗೆಯವರು ನಮ್ಮ ಇವುಗಳನ್ನೆಲ್ಲಾ ಮರೆತು ಪಾಶ್ಚಾತ್ಯದ ಕಡೆಗೆ ಗಮನವನ್ನು ಕೊಡುತ್ತಿದ್ದಾರೆ. ಇವನ್ನೆಲ್ಲಾ ಸಂಪ್ರದಾಯ ಮರೆಯಬಾರದೆಂದು ಈ ರೀತಿ ಭಜನೆಯ ಸ್ಪರ್ಧೆಯ ಮೂಲಕ  ತರಬೇಕಾಯಿತು. ಸಂಗೀತಗಳನ್ನು ಹಾಡುವುದರಲ್ಲಿಯೂ ಹಲವಾರು ರಾಗಗಳಿವೆ. ಬೆಳಗ್ಗಿನ ಸಮಯದಲ್ಲಿ ಯಾವ ರಾಗ ಸಂಧ್ಯಾ ಕಾಲದಲ್ಲಿ ಯಾವ ರಾಗ ಎಂದು ಸಂಗೀತಗಾರರಿಗೆ ಅದರ ಪರಿಚಯವಿರುತ್ತದೆ. ನೀವುಗಳಲ್ಲರೂ ಬಹುಮಾನ ಮುಖ್ಯ ಎನ್ನುವುದಕ್ಕಿಂತ ಮಿಗಿಲಾಗಿ ಭಾಗವಹಿಸುವುದು ಮುಖ್ಯವೆಂದು ತಿಳಿದು ಕಳೆದ 6 ತಿಂಗಳುಗಳಿಂದಲೂ ಸತತ ಅಭ್ಯಾಸ ಮಾಡಿನೀವುಗಳು ಭಾಗವಹಿಸುತ್ತಿರುವುದು ತುಂಬಾ ಹೆಮ್ಮೆಯ ವಿಷಯ. ಆದುದರಿಂದ ತಾವುಗಳೆಲ್ಲರೂ  ಭಾಗವಹಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿ ದರೆ ನಾವು ಪಟ್ಟಂತಹ ಶ್ರಮಕ್ಕೆ ಸಾರ್ಥಕವಾಗುತ್ತದೆ ಎಂದು ಭಾವಿಸುತ್ತೇವೆ. ನಿಮಗೆಲ್ಲರಿಗೂ ಆ ಭಗವಂತನ ಕೃಪೆ ಸಿಗಲಿ ಹಾಗೂ ಮುಂದೆ ಇನ್ನೂ ಹಲವು ರೀತಿಯ ಕಾರ್ಯಕ್ರಮಗಳನ್ನು ನಾವು ಮಾಡಲಿದ್ದೇವೆ ಅವುಗಳಿಗೂ ಹೀಗೆಯೇ ನಿಮ್ಮ ಸಹಕಾರ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಜೈ ಜಿನೇಂದ್ರ.