ಶ್ರೀ ಅರುಣ್ ಪಂಡಿತ್, ಮೈಸೂರು.
ಜೈ ಜಿನೇಂದ್ರ, ನಾವು ಇಂದು ಚಾಮರಾಜನಗರ ಜಿಲ್ಲೆ ಕುದೇರು ಗ್ರಾಮದಲ್ಲಿ ಇರುವಂತಹ 1008 ಭಗವಾನ್ ಶ್ರೀ ಆದಿನಾಥ ತೀರ್ಥಂಕರರ ಜೈನ ದಿಗಂಬರ ಬಸದಿಯ ವಾರ್ಷಿಕ ಪೂಜಾ ಮಹೋತ್ಸವ ಮತ್ತು 108 ಕಳಶಾಭಿಷೇಕ ಮಹೋತ್ಸವ ಪೂಜೆಗೆ ಎಲ್ಲರೂ ಕೂಡ ಸೇರಿದ್ದೇವೆ.
ಚಾಮರಾಜ ನಗರ ಜಿಲ್ಲೆ ಮತ್ತು ಮೈಸೂರು ಜಿಲ್ಲೆಗಳ ಹಲವಾರು ಕಡೆ ದಿಗಂಬರ ಜೈನ ಬಸದಿಗಳು ಇರುವುದಕ್ಕೆ ಕುರುಹುಗಳು ಇವೆ. ಕೆಲವು ಜಿನ ಮಂದಿರಗಳು ಸುಸ್ಥಿತಿಯಲ್ಲಿ ಇವೆ, ಈ ಜಿನ ಮಂದಿರಗಳು ಸುಸ್ಥಿತಿಯಲ್ಲಿ ಇರುವುದಕ್ಕೆ ಶ್ರಾವಕ ಶ್ರಾವಕಿಯರು ಕಾರಣವಾದರೆ, ಇದಕ್ಕೆ ಪ್ರೇರಣೆ ನೀಡಿದಂತಹ ಮಠಾಧೀಶರು ಮುಖ್ಯ ಪಾತ್ರವನ್ನು ವಹಿಸುತ್ತಾರೆ.
ಕುದೇರು ಗ್ರಾಮದಲ್ಲಿ ಇರುವಂತಹ ಜಿನ ಬಸದಿಗೆ ಸುಮಾರು 650 ವರ್ಷಗಳ ಇತಿಹಾಸ ಇದ್ದು, ಇಲ್ಲಿ ಮುನಿಗಳು ತಮಿಳುನಾಡಿನಿಂದ ಆಗಮಿಸಿದಂತಹ ಸಂದರ್ಭದಲ್ಲಿ ತಂದಂತಹ ಕುದುರೆ ಮೇಲೆ ಕುಳಿತಿರುವ ಬ್ರಹ್ಮ ದೇವರನ್ನು ಇಲ್ಲಿ ಪ್ರತಿಷ್ಠಾಪಿಸಿ ಇಲ್ಲಿ ಶ್ರಾವಕರ ಜೀವನ ಚರ್ಯ ಪ್ರಾರಂಭವಾಗಿರುವುದಕ್ಕೆ ಇತಿಹಾಸವಿದೆ.
ನಂತರ ಹಲವಾರು ಬಾರಿ ಜಿನ ಮಂದಿರ ಜೀರ್ಣೋದ್ಧಾರವಾಗಿದೆ. 1986ನೇ ಇಸವಿಯಲ್ಲಿ ಪರಮ ಪೂಜ್ಯ ದೇವೆಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮಿಜಿಯವರು ಹೊಂಬುಜ ಇವರ ಆಶೀರ್ವಾದದಲ್ಲಿ ಅಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮೋತ್ತಾನ ಟ್ರಸ್ಟ್ ವತಿಯಿಂದ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಳ್ಳಲಾಯಿತು. ಆ ಸಂದರ್ಭದಲ್ಲಿ ಸರ್ಕಾರ ನೆರವನ್ನು ನೀಡಿ, ಮುಖ್ಯವಾಗಿ ಮುಜುರಾಯಿ ಇಲಾಖೆಯಿಂದ ನೆರವು ಬಂದು ಆ ಸಂದರ್ಭದಲ್ಲಿ 1986ರಲ್ಲಿ ಒಮ್ಮೆ ಜೀರ್ಣೋದ್ಧಾರ ಕೈಗೊಳ್ಳಲಾಯಿತು.
ಕ್ಷೇತ್ರ ಧರ್ಮಸ್ಥಳ ಧರ್ಮೋತ್ತಾನ ಟ್ರಸ್ಟ್ ವತಿಯಿಂದ 2017ರಲ್ಲಿ 40ಲಕ್ಷಗಳ ಅಂದಾಜಿನಲ್ಲಿ ಜಿನ ಮಂದಿರದ ಸಂಪೂರ್ಣ ಜೀರ್ಣೋದ್ಧಾರ ಕೈಗೊಳ್ಳಲಾಯಿತು. ಈ ಜಿನ ಮಂದಿರಕ್ಕೆ ಶೇಕಡ 50ರಷ್ಟು ಭಾಗ ಧರ್ಮೋತ್ತಾನ ಟ್ರಸ್ಟ್ ಮತ್ತು ಉಳಿದ ಶೇಕಡ 50ರಷ್ಟು ಭಾಗ ಶ್ರಾವಕ ಶ್ರಾವಕಿಯರು ಧನ ಸಹಾಯವನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಪರಮ ಪೂಜ್ಯ ಭುವನ ಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಮೈಸೂರು ಮತ್ತು ಚಾಮರಾಜ ನಗರ ಜಿಲ್ಲೆಯ ಎಲ್ಲ ದೇಗುಲಗಳ ಅಭಿವೃದ್ಧಿಗೆ ಕಂಕಣವನ್ನು ತೊಟ್ಟಿದ್ದಾರೆ. ಅವರ ಆಶೀರ್ವಾದದೊಂದಿಗೆ ಮತ್ತು ಧರ್ಮೋತ್ತಾನ ಟ್ರಸ್ಟ್ ಸಹಕಾರದೊಂದಿಗೆ ಈ ಜಿನ ಮಂದಿರ ಇಲ್ಲಿ ಜೀರ್ಣೋದ್ಧಾರ ಕೈಗೊಂಡು 2017ರಲ್ಲಿ ದಾಮ ಸಂಪ್ರೋಕ್ಷಣ ಮಹೋತ್ಸವ ನೆರವೇರಿತು. ನಂತರ ಪ್ರತಿ ವರ್ಷವು ಕೂಡ ನಾವು ಇಲ್ಲಿ ವಾರ್ಷಿಕ ಪೂಜೆಯನ್ನು ನೆರವೇರಿಸುತ್ತ ಇದ್ದೀವಿ. 108 ಕಳಶಾಭಿಷೇಕದ ಜೊತೆಗೆ ಧಾರ್ಮಿಕ ಸಭೆಯನ್ನು ಇಲ್ಲಿ ನೆರವೇರಿಸುತ್ತಾ ಇದ್ದೀವಿ. ಇಂದು ಸಭೆಯಲ್ಲಿ ಪರಮ ಪೂಜ್ಯ ಭುವನ ಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಆಗಮಿಸಿ ಆಶೀರ್ವಚನವನ್ನು ನೀಡುತ್ತಾ ಇದ್ದಾರೆ. 200ಕ್ಕು ಹೆಚ್ಚು ಭಕ್ತಾದಿಗಳು ಪಾಲ್ಗೊಂಡಿದ್ದಾರೆ.
ಪರಮ ಪೂಜ್ಯ ಭುವನ ಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಆಶೀರ್ವಚನವನ್ನು ನೀಡಿದರು. ಮಹಿಳೆಯರಿಂದ ಧರ್ಮ ಸಂರಕ್ಷಣೆಗೆ ಸಹಕಾರ ದೊರೆತಿರುವ ಬಗ್ಗೆ ಪ್ರಶಂಸಿಸಿದರು. ಹಾಗೂ ಹಿರಿಯವರಿಂದ ಕಿರಿಯವರಿಗೆ ಸಹಕಾರ ನೀಡಬೇಕು ಎಂದು ಹೇಳಿದರು. ಹಿರಿಯರು ಸಮಾಜವನ್ನು ಒಂದು ಒಳ್ಳೆಯ ರೀತಿಯಿಂದ ಬೆಳೆಸಿಕೊಂಡು ಬಂದಿದ್ದರು. ಅಂತಹ ಹಿರಿಯರಿಗೆ ಬಿರುದುಗಳನ್ನು ಕೊಟ್ಟಿ ಗೌರವಿಸ ಬೇಕು ಎಂದು ಅವರು ಅವರ ಆಶೀರ್ವಚನ ನೀಡಿದರು.
ಇದೇ ರೀತಿ ಜಿನ ದೇಗುಲಗಳಲ್ಲಿ ವಾರ್ಷಿಕ ಪೂಜಾ ಮಹೋತ್ಸವ ಮತ್ತು ವಿಶೇಷ ಪೂಜಾ ಮಹೋತ್ಸವಗಳು ನೆರವೇರ ಬೇಕು. ಎಲ್ಲಾ ಭಕ್ತಾಧಿಗಳು ಪಾಲ್ಗೊಂಡು ನಡೆಸಿಕೊಂಡು ಹೋಗುತ್ತಿರುವ ಭಕ್ತಾದಿಗಳಿಗೆ ವಂಧಿಸುತ್ತ ಜೈ ಜಿನೇಂದ್ರ














