ಸಾಪ್ತಾಹಿಕ ಜೈನ ಸುದ್ದಿ- 59

ವಾರದ ಜೈನ ಸುದ್ದಿಗಳು ಹಲವೆಡೆಯ ಹಲವಾರು ಜೈನ ಸ್ವಾರಸ್ಯಕರ ಸುದ್ದಿಗಳಿಗಾಗಿ ವೀಕ್ಷಿಸಿ ವಾರದ ಜೈನ ಸುದ್ದಿಗಳು ನಿಮ್ಮ ಜ್ವಾಲಾಮಾಲಾ. ನ್ಯೂಸ್ ನಲ್ಲಿ ಪ್ರತಿ ಶನಿವಾರ 7.30ಕ್ಕೇ ಸರಿಯಾಗಿ ವೀಕ್ಷಿಸಿ ಜ್ವಾಲಾಮಾಲಾ ನ್ಯೂಸ್.

ಮುಖ್ಯಾಂಶಗಳು:

ಮೊಟ್ಟೆ ವಿತರಣೆ : ಆದೇಶ ಹಿಂಪಡೆಯಲು ಆಗ್ರಹಿಸಿ ರಾಜ್ಯದ ಎಲ್ಲಾ ಜೈನ ಸಮಾಜಗಳು, ಯುವ ಸಂಘಟನೆಗಳ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ.

ಶ್ರೀ ಕ್ಷೇತ್ರ ಶ್ರವಣಬೆಳಗೊಳಕ್ಕೆ ಮಧುರೈನ ಶ್ರೀ ಶಂಕರಾಚಾರ್ಯ ಮಠದ ಸ್ವಾಮೀಜಿಯ ಭೇಟಿ

ಶ್ರೀ ಪಂಚ ಕಲ್ಯಾಣ ಪ್ರತಿಷ್ಠಾ ಮಹಾ ಮಹೋತ್ಸವ ಶುಭಸ್ಥಾನ ಕೋಥಳಿ

ಧರ್ಮ ಬಂಧು  ಮಹಾದೇವ ಶೆಟ್ಟಿ ಬಸದಿ ಮೂರು ದಿನಗಳ ಬಿಂಬ ಶುದ್ದಿ ಧಾಮ ಸಂಪ್ರೋಕ್ಷಣೆ

ಜೈನ ಸಂಸ್ಕೃತಿಯಿಂದ ಶಾಂತಿನೆಲೆ ಲಲಿತಕೀರ್ತಿ ಭಟ್ಟಾರಕ ಶ್ರೀ ಆಶೀರ್ವಚನ ಆನೆಕೆರೆ ಬಸದಿ ಪುನಃ ನಿರ್ಮಾಣಕ್ಕೆ ಶಿಲಾನ್ಯಾಸ.

ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಪಟ್ಟಕ್ಕೆ ಬಂದು ಇದೀಗ 12/12/2021 ಕ್ಕೆ 52 ವರ್ಷ.

ಬೆಳಗಾವಿಯ ಜೈನ ಬಸದಿಯಲ್ಲಿ ಕಳ್ಳತನ ಮೂರು ದಿನಗಳ ನಂತರ ಕಳ್ಳತನವಾಗಿದ್ದ ಜೈನ ಮೂರ್ತಿಗಳು ಪತ್ತೆ.

ಬೇತೂರಿನಲ್ಲಿ 12ನೇ ಶತಮಾನಕ್ಕೆ ಸೇರಿದ ಜೈನ ಶಾಸನ ಪತ್ತೆ

ಸುದ್ದಿಗಳ ವಿವರ:

ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆಯ ವಿತರಣೆಯ ಬಗ್ಗೆ ರಾಜ್ಯದ ಹಲವು ಜೈನ ಸಂಘಟನೆಗಳು ಯುವ ಜೈನ ಸಂಘಟನೆಗಳು ಹಾಗೂ  ಸಮಾಜದ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಗಿದೆ. ಕರ್ನಾಟಕ ರಾಜ್ಯ  ಜೈನ ಸಂಘದ ವತಿಯಿಂದ  ರಾಜ್ಯದಲ್ಲಿ ಸರ್ಕಾರಿ ಶಾಲೆಗಲು ಮತ್ತು ಸರ್ಕಾರದ ಅನುದಾನ ಸಿಗುತ್ತಿರುವ ಶಾಲೆಗಳಲ್ಲಿ ಮದ್ಯಾಹ್ನದ ಊಟದಲ್ಲಿ ಮೊಟ್ಟೆಗಳನ್ನು  ಕೊಡುವ ನಿರ್ಧಾರದಿಂದ ಅಲ್ಪಸಂಖ್ಯಾತ ಸಮುದಾಯದ ಸಮಸ್ತ ಜೈನ ಸಮುದಾಯದಲ್ಲಿ ಹಾಗೂ ನಾಡಿನ ಎಲ್ಲಾ ಮತ ಧರ್ಮದ ಸಸ್ಯಾಹಾರಿಗಳಿಗೆ ಬೇಸರ ಮತ್ತು ಆತಂಕವುಂಟು ಮಾಡಿದ್ದು ಎಲ್ಲಾ ಧರ್ಮದ ಎಲ್ಲಾ ನಂಬಿಕೆಗಳನ್ನು ಗೌರವಿಸುತ್ತಾ ಅಹಿಂಸಾಮಯ ವಾತಾವರಣ ಶಾಂತಿ ಸುವ್ಯವಸ್ಥೆಗೆ ಕಾರಣವಾಗುವ  ಉತ್ತಮ ನಿರ್ಣಯ ತಾವು ಅತಿ ಶೀಘ್ರದಲ್ಲಿ ತಿಳಿಸಬೇಕೆಂದು ನಾವು ಅಪೇಕ್ಷಿಸುತ್ತೇವೆಂದು ರಾಜ್ಯದ ಎಲ್ಲಾ ಜೈನ ಸಮಾಜಗಳು  ಯುವ ಸಂಘಟನೆಗಳಿಂದ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಆಹಾರ ರೂಪದಲ್ಲಿ ಮೊಟ್ಟೆಗಳನ್ನು ಕೊಡುವ ನಿರ್ಣಯದಲ್ಲಿ ಕೂಡಲೇ ಹಿಂಪಡೆಯುವಂತೆ ಜಗದ್ಗುರು ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜೀಯವರು ಮನವಿ ಮಾಡಿದ್ದಾರೆ. ಮೂಡುಬಿದಿರೆ ತಾಲ್ಲೂಕಿನಲ್ಲಿ ತಹಸೀಲ್ದಾರ್ ಪುಟ್ಟಗೌಡರ ಮೂಲಕ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ  ಜೈನ ಸಮಾಜದ ಪರವಾಗಿ ಮನವಿ ಪತ್ರವನ್ನು ನೀಡಲಾಯಿತು. ಕಾರ್ಕಳದ ಸರ್ವ ಜೈನ ಬಾಂಧವರ ಪರವಾಗಿ  ಆ ಊರಿನ ಎಲ್ಲಾ ಸಂಘ ಸಂಸ್ಥೆಗಳ ಪರವಾಗಿ  ಕರ್ನಾಟಕ ಸರ್ಕಾರ ನೂತನವಾಗಿ  ಯೋಜಿಸಿರುವ ಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವ ಅಸಂಬದ್ದ ಯೋಜನೆಯನ್ನು ಕೈ ಬಿಡುವಂತೆ  ಕಾರ್ಕಳದ ಮಾನ್ಯ ತಹಸೀಲ್ದಾರ್ ರವರಿಗೆ ಮನವಿ ಪತ್ರವನ್ನು ನೀಡಲಾಯಿತು. ಹೀಗೆ ಬೆಳ್ತಂಗಡಿ ಜೈನ ಸಂಘದ ಪರವಾಗಿ ಹಾಗೂ , ಭಾರತೀಯ ಜೈನ್ ಮಿಲನ್ ಕಲಬುರ್ಗಿ  ವತಿಯಿಂದ  ಅವರವರ ಕ್ಷೇತ್ರಕ್ಕೆ ಸಂಬಂಧಪಟ್ಟ ತಹಸೀಲ್ಚಾರ್ ರವರಿಗೆ ಮನವಿ ಪತ್ರವನ್ನು ಕೊಡಲಾಯಿತು.

ಶ್ರೀ ಕ್ಷೇತ್ರ ಶ್ರವಣಬೆಳಗೊಳಕ್ಕೆ ಮಧುರೈನ ಶ್ರೀ ಶಂಕರಾಚಾರ್ಯ ಮಥದ ಸ್ವಾಮೀಜಿಯವರು ಭೇಟಿ ನೀಡಿ ವಿಂಧ್ಯಗಿರಿ ಬೆಟ್ಟದ ಮೇಲೆ  ವಿರಾಜಮಾನರಾದ ತ್ಯಾಗ‍ದ ಅಧಿಪತಿ ಪ್ರಥಮ  ಮೋಕ್ಷಗಾಮಿ ಭಗವಾನ್ ಬಾಹುಬಲಿ  ಮೂರ್ತಿ ಯ ದರ್ಶನ ಪಡೆದು  ಪಾದಪೂಜೆಯನ್ನು ಸ್ವಸ್ಥಿಶ್ರೀ ಧವಳ ಕೀರ್ತಿ ಸ್ವಾಮೀಜಿ ಶ್ರೀ ಕ್ಷೇತ್ರ ಸ್ವಾಮೀಜಿ  ಯವರು ಹಾಗೇ ಇನ್ನು ಹಲವು ಸ್ವಾಮೀಜಿಗಳು ಅವರ ಜೊತೆಯಾದರು. ತದನಂತರ ಜಗದ್ಗುರು ಸ್ವಸ್ಥಿಶ್ರೀ ಭಟ್ಟಾರಕ ಮಹಾಸ್ವಾಮೀಜಿಗಳು ಮಧುರೈನ ಸ್ವಾಮೀಜಿಯವರನ್ನು ಸನ್ಮಾನಿಸಿದರು.

ಶ್ರೀ ದೇಶ ಭೂಷಣ ಆಶ್ರಮ ಕೋಥಳಿ ಗ್ರಾಮದಲ್ಲಿ ದಿನಾಂಕ 9/12/2021 ರಿಂದ 13/12/2021 ರವರೆಗೆ ನಡೆದ ಭವ್ಯ ಕಾರ್ಯಕ್ರಮದಲ್ಲಿ  ಸ್ವಾಮೀಜಿಗಳವರನ್ನು ಮಂಗಳವಾದ್ಯದೊಂದಿಗೆ ಕಾರ್ಯಕ್ರಮಕ್ಕೆ ಬರಮಾಡಿಕೊಂಡರು. ಹಾಗೂ ವಿಧಿವಿಧಾನಗಳೊಂದಿಗೆ ಪಂಚಕಲ್ಯಾಣ ಮಹೋತ್ಸವ  ವಿಜೃಂಭಣೆಯಿಂದ ನಡೆಯಿತು.

ಮಹಾದೇವ ಶೆಟ್ಟಿ ಬಸದಿಯ ಮೂರು ದಿನಗಳ ಬಿಂಬ ಶುದ್ದಿ ದಾನ ಸಂರಕ್ಷಣೆ ದಿನಾಂಕ 10/12/2021ರಂದು 108 ದಿವ್ಯಸಾಗರ ಮುನಿ ಮಹಾರಾಜರ ಪಾವನ ಸಾನಿಧ್ಯ ಜಗದ್ಗುರು ಸ್ವಸ್ಥಿ ಶ್ರೀ ಚಾರುಕೀರ್ತಿ ಭಟ್ಟಾರಕ ರವರ ಮಾರ್ಗದರ್ಶನದಲ್ಲಿ ಪಿಂಚಿ ಕಾರ್ಯಕ್ರಮವು  ಶ್ರೀ ಜೈನ ಮಠದಲ್ಲಿ ಕಳಸ ಸಹಿತ ಗುರುಗಳ ಸ್ವಾಗತ  ಮನೋಜ್ಞವಾಗಿ  ನೆರವೇರಿಸಿದರು.

ಎಲ್ಲರನ್ನು ಒಂದೆಡೆ ಸೆಳೆಯುವ ಶಕ್ತಿಯು ಒಂದು ಧಾರ್ಮಿಕ ಕೇಂದ್ರಗಳಲ್ಲಿ ಸೆಳೆಯುವ ಶಕ್ತಿಯು ಧಾರ್ಮಿಕ  ಕೇಂದ್ರಗಳಲ್ಲಿ ಮಾತ್ರ ಕಾಣಲು ಸಾಧ್ಯ. ಮುನಿಗಳು ಸಾಧುಗಳು ಸಂತರು  ಆಚರಿಸಿಕೊಂಡು ಬಂದ  ಧರ್ಮಸಂಹಿತೆ ತಪೋಭೂಮಿ  ಇದಕ್ಕೆ ಕಾರಣವಾಗಿದೆ. ಜೈನ ಪರಂಪರೆಯಿಂದ ಶಾಂತಿ ಸುವ್ಯವಸ್ಥೆ  ನೆಲೆಗೊಳ್ಳಲು ಸಾಧ್ಯವಿದೆ ಎಂದು  ಕಾರ್ಕಳ ಜೈನ ಮಠದ ಸ್ವಸ್ಥಿ ಶ್ರೀ  ಲಲಿತಕೀರ್ತಿ ಭಟ್ಟಾಚರ್ಯವರ್ಯ ಮಹಾಸ್ವಾಮಿಜೀಗಳು  ಹೇಳಿದರು.

ಆನೆಕೆರೆ ಬಸದಿಪ ಪುನಃ ನಿರ್ಮಾಣಕ್ಕೆ ಶಿಲಾನ್ಯಾಸವನ್ನು ಸ್ವಸ್ಥಿ ಶ್ರೀ  ಲಲಿತಕೀರ್ತಿ ಭಟ್ಟಾಚರ್ಯವರ್ಯ ಮಹಾಸ್ವಾಮಿಜೀಗಳು   ನೆರವೇರಿಸಿದರು.  ಹಾಗೂ ಇನ್ನು ಹಲವಾರು ಗಣ್ಯರುಗಳು ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಮಹಾಸ್ವಾಮಿಗಳಾದ ಭಟ್ಟಾರಕ ಸ್ವಾಮೀಜಿಗಳು ಪಟ್ಟಾಭಿಷಿಕ್ತರಾಗಿ  ಈಗ 52 ವರ್ಷ ಸಂದಿದೆ. ಅಲ್ಲಿನ ಸರಳ ಸಂಭ್ರಮಾಚರಣೆಯ  ಕ್ಷಣಗಳು ನಿಮಗಾಗಿ. ಹಾಗೇ ಭದ್ರಬಾಹುವಿನ ಪಾದಪಾದಪೂಜೆಯನ್ನು ನೆರವೇರಿಸಿದರು.

ಅಬಿನಂದನಾ ಸುದ್ದಿಗಳು:

ಲೇಖಕ ಕವಿ ಶ್ರೀ ಜಿ. ಎಸ್ ಚಂದ್ರನಾಥ ಇವರು ವೇಲನಹಳ್ಳಿ ಜೈನ ಸಮಾಜದ  ವತಿಯಿಂದ ಸನ್ಮಾನಿಸಲಾಯಿತು. ಚಂದ್ರನಾಥ ರವರಿಗೆ ಸಮಸ್ತ ಜೈನ ಬಾಂಧವರ ವತಿಯಿಂದ  ಆಭಿನಂದನೆಗಳು.

ದಾವಣಗೆರೆ ತಾಲ್ಲೂಕು ಬೇತೂರು ಗ್ರಾಮದಲ್ಲಿ 12ನೇ ಶತಮಾನಕ್ಕೆ ಸೇರಿದ ಜೈನ ಶಾಸನ ಪತ್ತೆ ಯಾಗಿದೆ. ಡಾ||  ಆರ್. ಶೈಲೇಶ್ ಸ್ವಸಹಾಯಕ ನಿರ್ದೇಶಕರು  ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಶಿವಪ್ಪನಾಯಕ ಅರಮನೆ ಶಿವಮೊಗ್ಗ ಹಾಗೂ ಉಪನಿರ್ದೇಶಕರು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಧಾರವಾಡ ಇವರು ಮತ್ತು ಕೆ. ರವಿಕುಮಾರ್ ನವಲಗುಂದ ಶಾಸನ ಸಂಶೋಧಕ ಕನ್ನಡ ಉಪನ್ಯಾಸಕ ಪದವಿಪೂರ್ವ ಕಾಲೇಜು ಬನ್ನಿಕೋಡು ಇವರುಗಳು ಜಂಟಿಯಾಗಿ ಕ್ಷೇತ್ರ ಕಾರ್ಯಕ್ಕೆ ಹೋಗಿದ್ದಾಗ ಕಲ್ಲುಶಿವ ದೇವಾಲಯದಲ್ಲಿ ಇತ್ತೀಚೆಗೆ ತಂದಿಟ್ಟಿರುವ ಜಿನಬಿಂಬದಲ್ಲಿ ಶಾಸನ ಇರುವುದನ್ನು ಶೋಧಿಸಿದ್ದಾರೆ.